ಬೆಂಗಳೂರು: ಬಿಟ್ ಕಾಯಿನ್ ಹಗರಣದ ಬಗ್ಗೆ ಸದ್ದಿಲ್ಲದೇ ಡಂಗುರ ಸಾರಿದವರ ಬಗ್ಗೆ ಅಮಿತ್ ಶಾ ಬಳಿ ಸಿಎಂ ನೇರವಾಗಿ ದೂರಿನ ಸುರಿಮಳೆ ಗರೆದಿದ್ದಾರೆ. ಉಂಡ ಮನೆಗೆ ದ್ರೋಹ ಬಗೆಯುತ್ತಿರುವ ಸಚಿವರ ಬಗ್ಗೆ ಇಂಚಿಂಚು ಮಾಹಿತಿ ನೀಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಸಂಚಲನ ಸೃಷ್ಟಿಸ್ತಿರುವ ಕ್ರಿಪ್ಟೋ ಕರೆನ್ಸಿ ಹಗರಣ ವಿಚಾರದಲ್ಲಿ ಸಿಎಂಗೆ ಮಹತ್ವದ ಸುಳಿವು ಸಿಕ್ಕಿದೆ. ಬಿಜೆಪಿಯ ಇಬ್ಬರು ಸಚಿವರಿಂದಲೇ ಕಾಂಗ್ರೆಸ್‌ಗೆ ಬಿಟ್ ಕಾಯಿನ್ ಮಾಹಿತಿ ಸೋರಿಕೆಯಾಗಿದೆಯಂತೆ. ಇದ್ರಿಂದ ಸರ್ಕಾರಕ್ಕೆ ಮುಜುಗರಕ್ಕೀಡಾಗಿರೋದ್ರ ಜೊತೆಗೆ, ಸಂಕಷ್ಟವನ್ನೂ ತಂದಿಟ್ಟಿದೆ. ಇದಕ್ಕೆ ಕಾರಣವಾದ ಉಂಡ ಮನೆಗೆ ದ್ರೋಹ ಬಗೆಯುತ್ತಿರುವವರ ಬಗ್ಗೆ ಸಿಎಂ ಅಸಮಧಾನ ಹೊರಹಾಕಿದ್ದಾರಂತೆ.
‘ಬಿಟ್’ ಮಾಹಿತಿ ಸೋರಿಕೆ ಬಗ್ಗೆ ಅಮಿತ್ ಶಾಗೆ ಸಿಎಂ ದೂರು
ಇಬ್ಬರು ಸಚಿವರ ಬಗ್ಗೆ ನಿಗಾ ಇಡಲು ‘ಅಮಿತ್ ಶಾ’ ಸೂಚನೆ
ಬಿಟ್ ಹಗರಣದ ಬಗ್ಗೆ ಸದ್ದಿಲ್ಲದೇ ಡಂಗುರ ಸಾರಿದವರ ಬಗ್ಗೆ ಅಮಿತ್ ಶಾ ಬಳಿ ಸಿಎಂ ನೇರವಾಗಿ ದೂರಿನ ಸುರಿಮಳೆ ಗರೆದಿದ್ದಾರೆ. ಉಂಡ ಮನೆಗೆ ದೋಖಾ ಬಗೆಯುತ್ತಿರುವ ಆ ಇಬ್ಬರು ಸಚಿವರ ಬಗ್ಗೆ ಇಂಚಿಂಚು ವರದಿ ಒಪ್ಪಿಸಿದ್ದಾರೆ.
ಅಮಿತ್ ಶಾಗೆ ಸಿಎಂ ಕಂಪ್ಲೇಂಟ್
ದೂರು 1: ಬಿಟ್ ಪ್ರಕರಣದಲ್ಲಿ ನಮ್ಮ ನಾಯಕರಿಂದ ಕಾಂಗ್ರೆಸ್‌ಗೆ ಮಾಹಿತಿ
ದೂರು 2: ಪಕ್ಷ ಹಾಗೂ ಸರ್ಕಾರದ ಬೆಳವಣಿಗೆ ಕುರಿತು ಮಾಹಿತಿ ಸೋರಿಕೆ
ದೂರು 3: ಕಾಂಗ್ರೆಸ್‌ಗೆ ಮಾಹಿತಿ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ
ದೂರು 4: ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆ ಪ್ರಕರಣದಲ್ಲಿ ತಪ್ಪಿದ ಹಿಡಿತ
ದೂರು 5: ಕಾಂಗ್ರೆಸ್ ಆರೋಪಗಳಿಗೆಲ್ಲಾ ಪ್ರತಿಕ್ರಿಯೆ ನೀಡುವ ವಾತಾವರಣ
ದೂರು 6: ಇಬ್ಬರು ಸಚಿವರಿಂದಲೇ ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿದೆ
ಎಚ್ಚೆತ್ತುಕೊಂಡ ಅಮಿತ್ ಶಾ!
ಬೊಮ್ಮಾಯಿ ದೂರಿನ ಬಳಿಕ ಎಚ್ಚೆತ್ತಿರುವ ಬಿಜೆಪಿ ಚಾಣಾಕ್ಯ ಮಾಹಿತಿ ಸೋರಿಕೆ ಮಾಡಿದವರಿಗೆ ಮದ್ದೆರೆಯುತ್ತಿದ್ದಾರೆ ಎನ್ನಲಾಗಿದೆ. ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಗಿದ್ದ ಸಿಎಂ ಬೊಮ್ಮಾಯಿ ಸರ್ಕಾರದ ಇಬ್ಬರು ಸಚಿವರ ವಿರುದ್ಧ ದೂರು ನೀಡಿದ್ದಾರೆ. ಅಮಿತ್ ಶಾ ಬಳಿ ಅಸಮಾಧಾನ ಹೊರ ಹಾಕಿದ ಬೊಮ್ಮಾಯಿ ಮಾತಿಂದ ತಕ್ಷಣವೇ ಎಚ್ಚೆತ್ತಿರುವ ಅಮಿತ್ ಶಾ, ಸಿಎಂ ದೂರಿನ ನಂತ್ರ ಮಧ್ಯೆ ಪ್ರವೇಶಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾರಿಗೆ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಆ ಇಬ್ಬರು ಸಚಿವರ ಮೇಲೆ ಹದ್ದಿನ ಕಣ್ಣಿಡಲು ಬೊಮ್ಮಾಯಿಗೂ ಸೂಚನೆ ಕೊಟ್ಟಿದ್ದಾರೆ.
ಒಟ್ನಲ್ಲಿ ಚುನಾವಣೆಯ ಹೊಸ್ತಿಲಿನಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಕಾಂಗ್ರೆಸ್‌ಗೆ ಬಿಟ್ ಅಸ್ತ್ರ ಸಿಕ್ಕಿದೆ. ಆದ್ರೆ ಇದೆಲ್ಲದರ ಬಗ್ಗೆ ಕಮಲ ಮನೆಯಲ್ಲಿ ಉಂಡು ತಿಂದವರೇ ಮಾಹಿತಿ ಸೋರಿಕೆ ಮಾಡ್ತಿರುವುದು ಸಿಎಂಗೆ ಶಾಕ್ ಕೊಟ್ಟಿದೆ. ಸದ್ಯ ಈ ಬಗ್ಗೆ ಬಿಜೆಪಿ ಚಾಣಾಕ್ಯನಿಗೆ ದೂರು ಕೊಟ್ಟಾಗಿದ್ದು, ಆ ಇಬ್ಬರು ಸಚಿವರ ಮೇಲೆ ಬಿಜೆಪಿ ಹದ್ದಿನ ಕಣ್ಣಿಟ್ಟಿದೆ.
ವಿಶೇಷ ವರದಿ: ಮಧುಸೂದನ್, ಪೊಲಿಟಿಕಲ್ ಬ್ಯೂರೋ
The post #Bitcoin ಮಾಹಿತಿ ಕಾಂಗ್ರೆಸ್‌ಗೆ ಲೀಕ್ ಮಾಡಿದ್ದು ಇಬ್ಬರು ಸಚಿವರು -ಅಮಿತ್ಶಾಗೆ CM ಕಂಪ್ಲೆಂಟ್ appeared first on News First Kannada.