‘ಬಿಟ್ಕಾಯಿನ್ ಹಗರಣದಲ್ಲಿ ಸಿಎಂ ತಲೆದಂಡ ಆಗಲಿದೆ’ ಎಂದಿದ್ದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಅವರು.. ಬಿಟ್ ಕಾಯಿನ್ ಹಗರಣದ ಬಗ್ಗೆ ಕೆಲವು ವಿಚಾರಗಳನ್ನ ಪ್ರಸ್ತಾಪಿಸುವೆ. ಮೊನ್ನೆ ನಾನೊಂದು ಹೇಳಿಕೆ ಕೊಟ್ಟಿದ್ದೆ, ಬಿಟ್ ಕಾಯಿನ್ ಹಗರಣದ ಬಗ್ಗೆ ಪಾರದರ್ಶಕ ತನಿಖೆಯಾದರೆ ಬಿಜೆಪಿಯಿಂದ ಮೂರನೇ ಸಿಎಂ ಆಗ್ತಾರೆ ಎಂದಿದ್ದೆ..
ನನ್ನ ಹೇಳಿಕೆಗೆ ಕೆಲವರು ವೈಯಕ್ತಿಕ ಟೀಕೆ ಮಾಡಿದರು, ಕೆಲವರು ವ್ಯಂಗ್ಯ ಮಾಡಿದರು. ಇದು ಬಿಜೆಪಿಯವರ ಸ್ಟ್ಯಾಂಡರ್ಡ್ ಆಪರೇಟಿಂಗ್ ಸಿಸ್ಟಂ, ಅದರ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ನನ್ನ ಮೊನ್ನೆಯ ಸ್ಟೇಟ್ಮೆಂಟ್ಗೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ನವರು ಇದ್ದಾರೆ ನೋಡಿಕೊಳ್ಳಿ ಅಂದಿದ್ದರು. ಸಿಎಂ ಹೇಳಿಕೆ ನನ್ನನ್ನು ಸೆಟಲ್ಮೆಂಟ್ಗೆ ಕರೆದಂತಿತ್ತು. ಇದು ಮಹತ್ವದ ವಿಚಾರ ಅಲ್ಲ ಅಂತ ಸಿಎಂ ಹೇಳಿದ್ರು.
ಮೋದಿ ಬಳಿ ಪ್ರಸ್ತಾಪಿಸಿದ್ದು ಏಕೆ..?
ಅದು ಮಹತ್ವದ ವಿಚಾರ ಅಲ್ಲ ಎಂದಾದರೆ ಸಿಎಂ ಯಾಕೆ ಇದನ್ನು ಪ್ರಧಾನಿ ಬಳಿ ಪ್ರಸ್ತಾಪಿಸಿದರು? ನಾನು ಯಾವುದೇ ಆಡಿಯೋ ರಿಲೀಸ್ ಮಾಡ್ತಿಲ್ಲ. 2020ರ ನವೆಂಬರ್ 14 ಶ್ರೀಕಿ ಹಾಗೂ ರಾಬಿನ್ ಖಂಡೇವಾಲ್ ಇಬ್ಬರೂ ಸಿಸಿಬಿಗೆ ಸರೆಂಡರ್ ಆಗಿದ್ರು. ಆದರೆ ಮೂರು ದಿನ ಯಾವುದೇ ಮಾಹಿತಿ ದಾಖಲಿಸಲಿಲ್ಲ. ಮೂರು ದಿನದ ನಂತರ ಪೊಲೀಸ್ ಕಸ್ಟಡಿಗೆ ಕಳುಹಿಸಿದರು.
14 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದರು. ಶ್ರೀಧರ್ ಪೂಜಾರ್ ಎಂಬುವವರು ಕಂಪ್ಲೆಂಟ್ ಕೊಡ್ತಾರೆ. ನಂತರ 14 ದಿನಗಳ ಕಸ್ಟಡಿ ನಂತರ ಡಿಸೆಂಬರ್ 2 ರಂದು ಮತ್ತೆ 12 ದಿನ ಕಸ್ಟಡಿ ತಗೋತಾರೆ. ಆಗ ಶ್ರೀಕಿ ಎಂಬ ವ್ಯಕ್ತಿ ಬಿಟ್ ಕಾಯಿನ್ ಮೂಲಕ ಹೈಡ್ರೋ ಗಾಂಜಾ ತರಿಸುತ್ತಾನೆ ಎಂಬ ಆರೋಪ ಬರುತ್ತದೆ. ಹೀಗಾಗಿ ಜನವರಿ 7ವರೆಗೂ ಮತ್ತೆ ಪೊಲೀಸ್ ಕಸ್ಟಡಿ ನೀಡಲಾಗುತ್ತದೆ ಎಂದರು.
ವೆಬ್ ಆನ್ ಲೈನ್ ಗೇಮಿಂಗ್ ಮೂಲಕ ಅಕ್ರಮದ ದೂರು ದಾಖಲಾಗುತ್ತದೆ. ಮತ್ತೆ 14 ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತದೆ. ಇದು ಸಹ ಶ್ರೀಧರ್ ಪೂಜಾರ್ ಅವರೇ ಕಂಪ್ಲೆಂಟ್ ಕೊಟ್ಟಿರುತ್ತಾರೆ. ಇಲ್ಲಿ ಬಿಟ್ ಕಾಯಿನ್ ವಿಚಾರ ಪ್ರಸ್ತಾಪವಾಗುತ್ತದೆ. ಬಿಟ್ ಕಾಯಿನ್ ಟ್ರಾನ್ಸ್ಫರ್ ಅಥವಾ ಎಕ್ಸ್ ಚೇಂಜ್ ಇರಬಹುದು ಹವಾಲಾ ಹಣ ವರ್ಗಾವಣೆ ಕಂಡು ಬಂದಿದೆ ಎಂದು ಆರೋಪಿಸಿದ್ದಾರೆ.
ತನಿಖಾಧಿಕಾರಿಗಳು ಉತ್ತರ ಕೊಡಬೇಕು
ತನಿಖಾಧಿಕಾರಿ ಶ್ರೀಧರ್ ಪೂಜಾರ್ ಅವರೇ ಕಂಪ್ಲೆನೆಂಟ್ ಆಗಿರುತ್ತಾರೆ. ಕಸ್ಟಡಿಗೆ ತೆಗೆದುಕೊಳ್ಳೋ ಉದ್ದೇಶದಿಂದ ಮತ್ತೊಂದು ಕೇಸ್ ಹಾಕ್ತಾರೆ. ಹೀಗೆ ಯಾಕೆ ಮಾಡಿದರು ಅಂತ ಅಧಿಕಾರಿಗಳು ಉತ್ತರ ಕೊಡಬೇಕು. ಮೊದಲ ಪಂಚನಾಮೆಯಲ್ಲಿ ಸ್ಪಷ್ಟವಾಗಿ ಹೇಳ್ತಾರೆ. ಕ್ರಿಪ್ಟೋ ಕರೆನ್ಸಿ ರಿಕವರಿಗೆ ಮುಂದಾಗಿರುವ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ.
31.8 ಬಿಟ್ ಕಾಯಿನ್ ಸಿಕ್ಕಿದೆ ಅಂತಾರೆ. ಸೇಫ್ ಕಸ್ಟಡಿಗೆ ತೆಗೆದುಕೊಳ್ಳಲು ಪಂಚನಾಮೆ ಮಾಡಬೇಕು ಅಂತಾರೆ. ಪಂಚನಾಮೆ ಮಾಡಿಸಲು ಒಬ್ಬ ಲೈನ್ಮ್ಯಾನ್ ಹಾಗೂ ಒಬ್ಬ ಪವರ್ ಮ್ಯಾನ್ ಕರೆಸ್ತಾರೆ. ನಮಗೆ ಅರ್ಥವಾಗದಿರೋ ಕ್ರಿಪ್ಟೋ ಕರೆನ್ಸಿ ಬಗ್ಗೆ ಸಾಕ್ಷ್ಯಕ್ಕೆ ಒಬ್ಬ ಲೈನ್ ಮ್ಯಾನ್ ಹಾಗೂ ಒಬ್ಬ ಪವರ್ ಮ್ಯಾನ್ಗೆ ಕರೆಸ್ತಾರೆ ಎಂದು ಪ್ರಶ್ನೆ ಮಾಡಿದರು.