Bitcoin Case: ಬಿಟ್​ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಬೆಂಗಳೂರಿನ 5 ಸ್ಟಾರ್ ಹೊಟೇಲಿನಲ್ಲಿ ಬಂಧನ | Bitcoin Case Karnataka Shriki alias Shri Krishna arrested in Bengaluru Five Star Hotel


Bitcoin Case: ಬಿಟ್​ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಬೆಂಗಳೂರಿನ 5 ಸ್ಟಾರ್ ಹೊಟೇಲಿನಲ್ಲಿ ಬಂಧನ

ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ

ಬೆಂಗಳೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಬಿಟ್​ ಕಾಯಿನ್​ ವಿಚಾರಕ್ಕೆ ಸಂಬಂಧಿಸಿ ಆರೋಪಿ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ 5 ಸ್ಟಾರ್​ ಹೋಟೆಲ್​ನಲ್ಲಿ ಶ್ರೀಕೃಷ್ಣ ಬಂಧನವಾಗಿದೆ. ಶ್ರೀಕಿ ತಂಗಿದ್ದ ಹೋಟೆಲ್​ನಲ್ಲಿ ವ್ಯಕ್ತಿಯಿಂದ ಹಲ್ಲೆಗೆ ಯತ್ನ ನಡೆದಿದೆ ಎಂದು ತಿಳಿದುಬಂದಿದೆ. ವಿಷ್ಣು ಭಟ್ ಎಂಬಾತ ಆರೋಪಿ ಶ್ರೀಕಿ ಮೇಲೆ ಹಲ್ಲೆಗೆ ಯತ್ನಿಸಿದ್ದ ಎಂದು ಹೇಳಲಾಗಿದೆ. ಈ ಬಗ್ಗೆ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜೀವನ್​ ಭೀಮಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಶ್ರೀಕಿ, ಗಲಾಟೆ ಮಾಡಿದ್ದ ವಿಷ್ಣು ಭಟ್ ವಶಕ್ಕೆ ಪಡೆಯಲಾಗಿದೆ.

ಬಿಟ್​ ಕಾಯಿನ್​ ವಿಚಾರದಲ್ಲಿ ಬೇಕಾಗಿದ್ದ ಆರೋಪಿ ಶ್ರೀಕಿ 2 ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ. ಶ್ರೀಕಿ ಎಲ್ಲಿದ್ದಾನೆ ಎಂದು ಯಾರಿಗೂ ಗೊತ್ತಿರಲಿಲ್ಲ. ಆದರೆ, ಇದೀಗ ಪ್ರಕರಣ ಮತ್ತೆ ಹೊಸ ತಿರುವು ಪಡೆದುಕೊಂಡಿದೆ. 5 ಸ್ಟಾರ್​ ಹೋಟೆಲ್​ನಲ್ಲಿ ತಂಗಿದ್ದ ಆರೋಪಿ ಶ್ರೀಕಿ ವಶಕ್ಕೆ ಪಡೆಯಲಾಗಿದೆ.

ಆರೋಪಿ ಶ್ರೀಕಿ ಅಲಿಯಾಸ್​ ಶ್ರೀಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೀವನ್ ಭೀಮಾನಗರ ಠಾಣೆಯಲ್ಲಿ ಶ್ರೀಕೃಷ್ಣ ವಿಚಾರಣೆ ನಡೆಸಲಾಗಿದೆ. ಡಿಸಿಪಿ ಶರಣಪ್ಪ ಶ್ರೀಕಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಎರಡೂವರೆ ತಿಂಗಳಿಂದ ಶ್ರೀಕಿ ರಾಯಲ್ ಆರ್ಚಿಡ್‌ 5 ಸ್ಟಾರ್ ಹೋಟೆಲ್‌ನಲ್ಲಿದ್ದ ಎಂದು ತಿಳಿದುಬಂದಿದೆ. ಬೆಂಗಳೂರಿನ ಓಲ್ಡ್‌ ಏರ್‌ಪೋರ್ಟ್‌ ರಸ್ತೆಯ ಹೋಟೆಲಲ್​ನಲ್ಲಿ ಆತ ತಂಗಿದ್ದ. 3 ದಿನ ಹಿಂದೆ ಶ್ರೀಕಿ ಜೊತೆ ಜ್ಯುವೆಲರಿ ಗ್ರೂಪ್ಸ್‌ ಮಾಲೀಕನ ಮಗ ಇದ್ದ.

ಶ್ರೀಕಿ ಅಲಿಯಾಸ್​ ಶ್ರೀಕೃಷ್ಣ ತಂಗಿದ್ದ ಹೋಟೆಲ್​ನಲ್ಲಿ ತಪಾಸಣೆ ಮಾಡಲಾಗಿದೆ. ಎಸಿಪಿ ಡಿ.ಕುಮಾರ್ ನೇತೃತ್ವದಲ್ಲಿ ಪೊಲೀಸರಿಂದ ಪರಿಶೀಲನೆ ನಡೆಸಲಾಗಿದ್ದು, ಶ್ರೀಕಿ ತಂಗಿದ್ದ ರೂಮ್​ನಲ್ಲಿದ್ದ ಲ್ಯಾಪ್​ಟಾಪ್, ಟ್ಯಾಬ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ರಾಯಲ್ ಆರ್ಚಿಡ್‌ 5 ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದ ಶ್ರೀಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶನಿವಾರ ಮಧ್ಯಾಹ್ನವೂ ಹೋಟೆಲ್‌ ಸಿಬ್ಬಂದಿ ಜೊತೆ ವಿಷ್ಣುಭಟ್, ಶ್ರೀಕಿ ಗಲಾಟೆ ಮಾಡಿಕೊಂಡಿದ್ರು. ಸೆಕ್ಯೂರಿಟಿ ಆಫೀಸರ್ ಜತೆಯೂ ಗಲಾಟೆ ಮಾಡಿದ್ದರು ಎಂದು ತಿಳಿದುಬಂದಿದೆ. ತಕ್ಷಣ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ಜೀವನ್ ಭೀಮಾನಗರ ಠಾಣೆಯಲ್ಲಿ ಆರೋಪಿ ಶ್ರೀಕಿ ವಿಚಾರಣೆ ನಡೆಸಲಾಗುತ್ತಿದೆ. ಶ್ರೀಕೃಷ್ಣ ತಂಗಿದ್ದ ಹೋಟೆಲ್‌ನ ಕೊಠಡಿಯಲ್ಲಿ ತಪಾಸಣೆ ನಡೆಸಲಾಗಿದೆ. ಎಸಿಪಿ ಕುಮಾರ್‌, ಇನ್ಸ್‌ಪೆಕ್ಟರ್ ರಾಜಣ್ಣ ತಪಾಸಣೆ ಮಾಡಿದ್ದಾರೆ. ಕುಡಿದ ಅಮಲಿನಲ್ಲಿದ್ದ ವಿಷ್ಣುವನ್ನ‌ ಹೋಟೆಲ್ ಒಳಕ್ಕೆ ಬಿಡಲು ಸೆಕ್ಯುರಿಟಿ ಒಪ್ಪಿಲ್ಲ. ಈ ಕಾರಣಕ್ಕೆ ಗಲಾಟೆ ಆಗಿದೆ ಎಂದು ತಿಳಿದುಬಂದಿದೆ. ಗಲಾಟೆ ಅತಿರೇಕಕ್ಕೆ ಹೋಗ್ತಿದ್ದಂತೆ ಹೋಟೆಲ್ ಸಿಬ್ಬಂದಿಯಿಂದ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ.

ಡ್ರಗ್ಸ್​ ಕೇಸ್​ನಲ್ಲಿ ಅರೆಸ್ಟ್​ ಆಗಿದ್ದ ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ ಸಿಸಿಬಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದ. ಮತ್ತಷ್ಟು ವೆಬ್​ಸೈಟ್​ಗಳ ಹ್ಯಾಕ್​ಗೆ ಪ್ಲ್ಯಾನ್​ ಮಾಡಿರುವುದಾಗಿ ಕೃತ್ಯದ ವಿವರಣೆ ನೀಡಿದ್ದ. ಸಿಸಿಬಿ ಪೊಲೀಸರು ಶ್ರೀಕಿಯನ್ನು ಡ್ರಗ್ಸ್​ಕೇಸ್​ನಲ್ಲಿ ಬಂಧಿಸಿದ್ದರು. ತನಿಖೆ ವೇಳೆ ಆತ ಹಲವು ವೆಬ್ ಸೈಟ್ ಹ್ಯಾಕಿಂಗ್ ಮಾಡುತ್ತಿದ್ದ ವಿಚಾರ ಬಯಲಾಗಿತ್ತು.

ವಿದೇಶಿ ಆ್ಯಪ್ ಸೇರಿದಂತೆ ಸರ್ಕಾರಿ ಆ್ಯಪ್ ಸಹ ಶ್ರೀಕಿ ಹ್ಯಾಕ್ ಮಾಡ್ತಿದ್ದ. ಕೇಸ್ ಸಂಬಂಧ ಸಿಸಿಬಿ, ಶ್ರೀಕಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಬಳಿಕ ತನಿಖೆ ವೇಳೆ ಮತ್ತಷ್ಟು ಮಾಹಿತಿ ಬಯಲಾಗಿತ್ತು. ಈತ ಅಂತಾರಾಷ್ಟ್ರೀಯ ವೆಬ್​​ಸೈಟ್​, ಪೋಕರ್​ ಗೇಮ್​ ಹಾಗೂ ಕ್ರಿಪ್ಟೋ ಕರೆನ್ಸಿಗಳಾದ ಬಿಟ್​ ಕಾಯಿನ್, ವೈಎಫ್​ಐ, ಇಥೆರಿಯಂ ಖಾತೆಗಳನ್ನು ಹ್ಯಾಕ್ ಮಾಡಿದ್ದ ಎಂದು ತಪ್ಪೊಪ್ಪಿಕೊಂಡಿದ್ದ. ಅಲ್ಲದೆ ಶ್ರೀಕಿ ಬಳಿ ಇದ್ದ ಸುಮಾರು 9 ಕೋಟಿ ರೂಪಾಯಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ ಮಾಡಲಾಗಿತ್ತು.

ಇದನ್ನೂ ಓದಿ: ಬಿಟ್ ಕಾಯಿನ್ ವಿಚಾರ ಡೈವರ್ಟ್ ಮಾಡಲು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಲಾಗುತ್ತಿದೆ: ರಾಮಲಿಂಗಾರೆಡ್ಡಿ

ಇದನ್ನೂ ಓದಿ: Bitcoin: ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ 60 ಸಾವಿರ ಯುಎಸ್​ಡಿ ಸಮೀಪಕ್ಕೆ

TV9 Kannada


Leave a Reply

Your email address will not be published. Required fields are marked *