Bizarre News: ನೋಡಿದಾಕ್ಷಣ ಕಣ್ಮರೆಯಾಗುವ ನೀರು; ವಿಜ್ಞಾನಿಗಳಿಗೂ ಆಶ್ಚರ್ಯ, ಭಾರತದಲ್ಲೇ ಇದೆ ಈ ನಿಗೂಢ ಸಮುದ್ರ | Kannada News | Bizarre News | Hide and Seek Beach Chandipur sea water disappears as soon as you see it


ಭಾರತದ ಅನೇಕ ನಿಗೂಢ ಹಾಗೂ ಅಚ್ಚರಿಯ ಸ್ಥಳಗಳಲ್ಲಿ ಚಂಡಿಪುರ ಬೀಚ್ ಕೂಡ ಒಂದಾಗಿದೆ. ಒಂದೊಮ್ಮೆ ನೀವು ಈ ಸ್ಥಳಕ್ಕೆ ಬಂದು ನೋಡಿದಾಗ ಕ್ಷಣಾರ್ಧದಲ್ಲೇ ನೀರು ಕಣ್ಮರೆಯಾಗಿ ಕೆಲ ಹೊತ್ತಿನ ನಂತರ ಗೋಚರವಾಗುತ್ತದೆ.

Bizarre News: ನೋಡಿದಾಕ್ಷಣ ಕಣ್ಮರೆಯಾಗುವ ನೀರು; ವಿಜ್ಞಾನಿಗಳಿಗೂ ಆಶ್ಚರ್ಯ, ಭಾರತದಲ್ಲೇ ಇದೆ ಈ ನಿಗೂಢ ಸಮುದ್ರ

ನೋಡಿದಾಕ್ಷಣ ಕಣ್ಮರೆಯಾಗುವ ಬಂಡೀಪುರ ಬೀಚ್​ ನೀರು (ಸಾಂದರ್ಭಿಕ ಚಿತ್ರ)

Image Credit source: istock

ಭಾರತದಲ್ಲಿ ಅನೇಕ ನಿಗೂಢ ಸ್ಥಳಗಳಿವೆ, ಅದರ ರಹಸ್ಯವನ್ನು ಈವರೆಗೆ ತಿಳಿಯಲಾಗಿಲ್ಲ. ಈಗಲೂ ವಿಜ್ಞಾನಿಗಳು ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ರಹಸ್ಯಗಳಲ್ಲಿ ಒಡಿಶಾದ ಚಂಡಿಪುರ ಬೀಚ್ (Chandipur Beach) ಕೂಡ ಸೇರಿದೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಚಂಡೀಪುರ ಸಮುದ್ರದ ನೀರು ನೋಡಿದ ಮೇಲೆ ಸ್ವಲ್ಪ ಸಮಯದವರೆಗೆ ಕಣ್ಣಿಗೆ ಕಾಣಿಸುವುದಿಲ್ಲ. ಒಡಿಶಾ (Odisha) ರಾಜ್ಯದ ಬಾಲಸೋರ್ ಗ್ರಾಮದ ಬಳಿ ಈ ನಿಗೂಢ ನಡೆಯುತ್ತದೆ.

ಒಡಿಶಾದ ರಾಜಧಾನಿ ಭುವನೇಶ್ವರದಿಂದ ಕೆಲವೇ ಕಿ.ಮೀ ದೂರದಲ್ಲಿರುವ ಈ ನಿಗೂಢ ಬೀಚ್​ನಿಂದ ಸಮುದ್ರದ ನೀರು ಕಾಲಕಾಲಕ್ಕೆ ಕಣ್ಮರೆಯಾಗುತ್ತದೆ ಮತ್ತು ಸ್ವಲ್ಪ ಸಮಯದ ನಂತರ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈ ಕಡಲತೀರದ ನೋಟ ಅದ್ಭುತವಾಗಿದೆ. ಈ ನಿಗೂಢ ಬೀಚ್‌ಗೆ ಸಂಬಂಧಿಸಿದ ಕೆಲವು ಕುತೂಹಲಕಾರಿ ಸಂಗತಿಗಳ ಬಗ್ಗೆ ತಿಳಿಯೋಣ.

TV9 Kannada


Leave a Reply

Your email address will not be published. Required fields are marked *