Maasai tribe: ಮಸಾಯಿ ಬುಡಕಟ್ಟು ಸಮುದಾಯದಲ್ಲಿ ವಧುವಿನ ತಲೆ ಬೋಳಿಸಿ ತಂದೆ ಸೇರಿದಂತೆ ಹಿರಿಯರು ಉಗುಳಿ ಆಶೀರ್ವಾದಿಸುವ ವಿಚಿತ್ರ ಪದ್ಧತಿ ಆಚರಣೆಯಲ್ಲಿದೆ ಎಂದು ನಿಮಗೆ ಗೊತ್ತಿದೆಯೇ?

ಮಸಾಯಿ ಬುಟಕಟ್ಟಿನಲ್ಲಿ ವಧುವಿನ ತಲೆ ಬೋಳಿಸಿ ತಂದೆ ಸೇರಿದಂತೆ ಹಿರಿಯರು ಉಗುಳಿ ಆಶೀರ್ವಾದಿಸುವ ವಿಚಿತ್ರ ಪದ್ಧತಿ ಆಚರಣೆಯಲ್ಲಿದೆ
ಪ್ರಪಂಚದ ವಿವಿಧ ದೇಶಗಳಲ್ಲಿ ವಿಭಿನ್ನ ಸಂಪ್ರದಾಯಗಳು ಆಚರಣೆಯಲ್ಲಿವೆ. ಈ ಆಧುನಿಕ ಯುಗದಲ್ಲೂ ಅನೇಕ ಸಮುದಾಯಗಳು ತಮ್ಮ ಹಳೆಯ ಸಂಪ್ರದಾಯಗಳನ್ನು ಅನುಸರಿಸುತ್ತಾ ಬಂದಿದ್ದಾರೆ. ಬುಡಕಟ್ಟು ಜನಾಂಗದವರು ಇಂದಿಗೂ ಸಾವಿರಾರು ವರ್ಷಗಳ ಹಿಂದಿನ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಾರೆ. ಈ ಬುಡಕಟ್ಟು ಸಮುದಾಯದಲ್ಲಿ ಕೀನ್ಯಾ ಮತ್ತು ತಾಂಜಾನಿಯಾದಲ್ಲಿ ಕಂಡುಬರುವ ಮಸಾಯಿ ಬುಡಕಟ್ಟು (Maasai tribe) ಕೂಡ ಒಂದಾಗಿದೆ. ಈ ಸಮಯದಾದಲ್ಲಿ ಸ್ವತಃ ತಂದೆಯೇ ಮದುವೆಯಾಗಿ ಹೋಗುತ್ತಿರುವ ಮಗಳ ತಲೆಗೆ ಉಗುಳಿ ಆಶೀರ್ವಾದ ಮಾಡುವ ವಿಚಿತ್ರ ಪದ್ಧತಿ ಆಚರಣೆಯಲ್ಲಿದೆ.
ಈ ಬುಡಕಟ್ಟು ಜನಾಂಗದಲ್ಲಿ ಹೆಣ್ಣು ಮಕ್ಕಳು ಮದುವೆಯ ನಂತರ ಬೀಳ್ಕೊಡುವ ಸಂದರ್ಭದಲ್ಲಿ ತಂದೆ ವಧುವಿನ ತಲೆ ಮತ್ತು ಎದೆಯ ಮೇಲೆ ಉಗುಳುತ್ತಾರೆ. ಆ ಮೂಲಕ ತಂದೆ ತನ್ನ ಮಗಳಿಗೆ ಆಶೀರ್ವಾದ ಮಾಡುತ್ತಾನೆ. ಈ ಸಂಪ್ರದಾಯವು ಈ ಬುಡಕಟ್ಟಿನಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಸಂಪ್ರದಾಯದ ಪ್ರಕಾರ, ಇದು ಮಗಳ ಮೇಲಿನ ಪ್ರೀತಿಯನ್ನು ತೋರಿಸುವ ತಂದೆಯ ವಿಧಾನವಾಗಿದೆ. ಮಗಳು ಕೂಡ ತಂದೆಯ ಉಗುಳುವಿಕೆಯನ್ನು ಆಶೀರ್ವಾದವೆಂದು ಪರಿಗಣಿಸುತ್ತಾಳೆ.