Blood Clot: ಆಸ್ಪತ್ರೆಗೆ ದಾಖಲಾಗದ ಕೋವಿಡ್ ರೋಗಿಗಳಲ್ಲಿ ಕೊರೊನಾವು ವರ್ಷದವರೆಗೆ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ ಹೆಚ್ಚಿಸುತ್ತೆ: ಅಧ್ಯಯನ | Study Says Blood clot risk remains for year after Covid in those who aren’t hospitalised


ಕೋವಿಡ್ -19 ಸೋಂಕು ಆಸ್ಪತ್ರೆಗೆ ದಾಖಲಾಗದವರಲ್ಲಿ ಕನಿಷ್ಠ 49 ವಾರಗಳು ಅಥವಾ ಸುಮಾರು ಒಂದು ವರ್ಷದವರೆಗೆ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಕೋವಿಡ್ -19 ಸೋಂಕು ಆಸ್ಪತ್ರೆಗೆ ದಾಖಲಾಗದವರಲ್ಲಿ ಕನಿಷ್ಠ 49 ವಾರಗಳು ಅಥವಾ ಸುಮಾರು ಒಂದು ವರ್ಷದವರೆಗೆ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. 2020ರಲ್ಲಿ ಕೇವಲ 10,500 ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗಳು ಕಂಡುಬರಬಹುದು. ಆದರೆ ಸಾಕಷ್ಟು ಕೊರೊನಾ ಸೋಂಕಿತರಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗಳು ಚಿಕ್ಕದಾಗಿದ್ದು, ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಕೊರೊನಾ ಆರಂಭವಾದ ಬಳಿಕ ಯುಕೆಯಲ್ಲಿ ಹೃದಯಾಘಾತ, ಪಾರ್ಶ್ವವಾಯು ಹಾಗೂ ಇತರೆ ರಕ್ತ ಹೆಪ್ಪುಗಟ್ಟುವಿಕೆಯ 10,500ಕ್ಕೂ ಅಧಿಕ ಹೆಚ್ಚುವರಿ ಪ್ರಕರಣಗಳು ಪತ್ತೆಯಾಗಿದ್ದವು. ಸೌಮ್ಯ ಪ್ರಮಾಣದ ಸೋಂಕನ್ನು ಹೊಂದಿರುವವರಲ್ಲಿ ರಕ್ತಹೆಪ್ಪುಗಟ್ಟುವಿಕೆಯ ಅಪಾಯ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ.

ಕೊರೊನಾ ಸೋಂಕು ತಗುಲಿ ವಾರದ ಬಳಿಕ ಜನರು ಹೃದಯಾಘಾತ, ಪಾರ್ಶ್ವವಾಯು ಅಪಾಯವನ್ನು ಹೊಂದುವ ಸಾಧ್ಯತೆ ಶೇ.21ರಷ್ಟಿರುತ್ತದೆ. ನಾಲ್ಕು ವಾರಗಳ ಬಳಿಕ ಇದು ಶೇ.3.9ಕ್ಕೆ ಇಳಿಕೆಯಾಗುತ್ತದೆ.

ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಹೆಚ್ಚಿತ್ತು, ಆದರೆ ಈಗ ಆಸ್ಪತ್ರೆಗೆ ದಾಖಲಾಗದ ಸೌಮ್ಯ ಪ್ರಮಾಣದ ಸೋಂಕು ತಗುಲಿದ್ದ ರೋಗಿಗಳಲ್ಲೂ ಹೆಚ್ಚಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.