BMTCಯಿಂದ ತಡರಾತ್ರಿವರೆಗೆ ಫೀಡರ್ ಬಸ್ ಕಾರ್ಯಾಚರಣೆ | BMTC to start late night Feeder Bus service BMRCL Namma Metro Bengaluru News


BMTCಯಿಂದ ತಡರಾತ್ರಿವರೆಗೆ ಫೀಡರ್ ಬಸ್ ಕಾರ್ಯಾಚರಣೆ

ಬಿಎಂಟಿಸಿ ಬಸ್

ಬೆಂಗಳೂರು: ಬಿಎಂಟಿಸಿ (BMTC) ಯಿಂದ ತಡರಾತ್ರಿವರೆಗೆ ಫೀಡರ್​ ಬಸ್ ಕಾರ್ಯಾಚರಣೆ ನಡೆಸಲಿದೆ. ತಡರಾತ್ರಿವರೆಗೂ ಮೆಟ್ರೋ ಫೀಡರ್ ಬಸ್ ಕಾರ್ಯಾಚರಣೆ ಮಾಡಲಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಮೆಟ್ರೋ ರೈಲು ಸೇವೆ ಒದಗಿಸಲಿದೆ. ಹೀಗಾಗಿ ಜನರಿಗೆ ಅನುಕೂಲವಾಗಲು ಫೀಡರ್ ಬಸ್​ ಸೇವೆ ಸಿಗಲಿದೆ.

ಕೊರೊನಾ ಸಾಂಕ್ರಾಮಿಕ ಬಳಿಕ ಮೆಟ್ರೋ ರೈಲು ಸೇವೆ ಅವಧಿ ಕಡಿತಗೊಳಿಸಲಾಗಿತ್ತು. ಇದೀಗ ಮತ್ತೆ ಮೆಟ್ರೋ ರೈಲು ಸೇವೆ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಮೆಟ್ರೋ ಸೇವೆ ವಿಸ್ತರಣೆ ಬೆನ್ನಲ್ಲೇ ಫೀಡರ್ ಬಸ್​ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲಾಗಿದೆ.

TV9 Kannada


Leave a Reply

Your email address will not be published. Required fields are marked *