Boris Johnson: ವಿಶ್ವಾಸ ಮತ ಯಾಚನೆಯಲ್ಲಿ ಗೆದ್ದು, ಇಂಗ್ಲೆಂಡ್ ಪ್ರಧಾನಿ ಪಟ್ಟ ಉಳಿಸಿಕೊಂಡ ಬೋರಿಸ್ ಜಾನ್ಸನ್ | Boris Johnson: UK PM Boris Johnson Wins no Confidence vote over partygate scandal


Boris Johnson: ವಿಶ್ವಾಸ ಮತ ಯಾಚನೆಯಲ್ಲಿ ಗೆದ್ದು, ಇಂಗ್ಲೆಂಡ್ ಪ್ರಧಾನಿ ಪಟ್ಟ ಉಳಿಸಿಕೊಂಡ ಬೋರಿಸ್ ಜಾನ್ಸನ್

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್

Image Credit source: Vox

ಸಂಸತ್‌ನಲ್ಲಿ ತಮ್ಮ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯದಲ್ಲಿ ಬೋರಿಸ್ ಜಾನ್ಸನ್ 211 ಮತಗಳನ್ನು ಗಳಿಸಿದ್ದಾರೆ. ಆದರೆ, ಅವರದ್ದೇ ಪಕ್ಷದ (ಕನ್ಸರ್‌ವೇಟಿವ್‌ ಪಾರ್ಟಿ) 148 ಸಂಸದರು ಬೋರಿಸ್‌ ಜಾನ್ಸನ್ ಅವರ ವಿರುದ್ಧ ಮತ ಚಲಾಯಿಸಿದ್ದಾರೆ.

ಲಂಡನ್: ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಸೋಮವಾರ ಮಂಡಿಸಲಾದ ಅವಿಶ್ವಾಸ ನಿರ್ಣಯದಲ್ಲಿ (No Confidence Vote) ವಿಶ್ವಾಸಮತ ಗೆದ್ದು ತಮ್ಮ ಪ್ರಧಾನಿ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಬೋರಿಸ್ ಜಾನ್ಸನ್ (Boris Johnson) 359 ಶಾಸಕರ ಪೈಕಿ 211 ಮತಗಳ ಬೆಂಬಲನ್ನು ಗೆದ್ದರು. ಈ ಮೂಲಕ ಅವರು ಸಂಸತ್​ನ ಶೇ. 59ರಷ್ಟು ಶಾಸಕರ ಬೆಂಬಲವನ್ನು ಪಡೆದರು. ಸಂಸತ್‌ನಲ್ಲಿ ತಮ್ಮ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯದಲ್ಲಿ ಜಾನ್ಸನ್ 211 ಮತಗಳನ್ನು ಗಳಿಸಿದರು. ಆದರೆ, ಅವರದ್ದೇ ಪಕ್ಷದ (ಕನ್ಸರ್‌ವೇಟಿವ್‌ ಪಾರ್ಟಿ) 148 ಮಂದಿ ಸಂಸದರು ಬೋರಿಸ್‌ ಜಾನ್ಸನ್ ಅವರ ವಿರುದ್ಧ ಮತ ಚಲಾಯಿಸಿದ್ದಾರೆ.

ಕೊವಿಡ್‌ ಸಾಂಕ್ರಾಮಿಕದ ವೇಳೆ ಲಾಕ್‌ಡೌನ್‌ ಇದ್ದರೂ ಪಾರ್ಟಿಗಳಲ್ಲಿ ಭಾಗವಹಿಸಿದ್ದು, ಕೊವಿಡ್‌ ನಿರ್ವಹಣೆಯಲ್ಲಿ ವಿಫಲರಾಗಿದ್ದು ಪಕ್ಷದ ಘನತೆಗೆ ಸಾರ್ವಜನಿಕವಾಗಿ ಧಕ್ಕೆ ತಂದಿದೆ ಎಂದು ಸ್ವಪಕ್ಷೀಯರೇ ಬೋರಿಸ್‌ ಜಾನ್ಸನ್ ಅವರ ವಿರುದ್ಧ ಆರೋಪಿಸಿದ್ದರು. ಹೀಗಾಗಿ ಅವರ ರಾಜೀನಾಮೆಗೆ ಆಗ್ರಹಿಸಲಾಗಿತ್ತು. ಸೋಮವಾರ ಒಟ್ಟು 359 ಮತಗಳು ಚಲಾವಣೆಯಾಗಿದ್ದು, ಇದರಲ್ಲಿ 211 ಸಂಸದರು ಹಣದುಬ್ಬರ ಮತ್ತು ಪಾರ್ಟಿಗೇಟ್ ಹಗರಣದಿಂದ ತತ್ತರಿಸಿರುವ ಪಿಎಂ ಜಾನ್ಸನ್ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೋರಿಸ್ ಜಾನ್ಸನ್ ಅವರು ಜೂನ್ 6ರಂದು ಅವಿಶ್ವಾಸ ಮತವನ್ನು ಎದುರಿಸುವ ಮೂಲಕ ತಮ್ಮ ಪ್ರಧಾನಿ ಹುದ್ದೆಯ ಅತ್ಯಂತ ಕಠಿಣ ಪರೀಕ್ಷೆಯನ್ನು ಎದುರಿಸಿದರು. 40ಕ್ಕೂ ಹೆಚ್ಚು ಕನ್ಸರ್ವೇಟಿವ್ ಪಕ್ಷದ ಸಂಸದರು (ಬೋರಿಸ್ ಜಾನ್ಸನ್ ಅವರ ಸ್ವಂತ ಪಕ್ಷದ ಸದಸ್ಯರು) ಮತ್ತು ಅವರ ಸಿಬ್ಬಂದಿ ಕೊವಿಡ್ ಲಾಕ್‌ಡೌನ್‌ಗಳ ಸಮಯದಲ್ಲಿ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಪಾರ್ಟಿಗಳನ್ನು ನಡೆಸಿದ ನಂತರ ಪಿಎಂ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

TV9 Kannada


Leave a Reply

Your email address will not be published.