12 ವರ್ಷಗಳ ಹಿಂದಿನ 2008ರಲ್ಲಿ ಅಹಮದಾಬಾದ್ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಕರಣ ಸಂಬಂಧ ಸ್ಪೆಷಲ್ ಕೋರ್ಟ್ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. 49 ಮಂದಿ ಪೈಕಿ 38 ಅಪರಾಧಿಗಳಿಗೆ ಮರಣದಂಡನೆ ವಿಧಿಸಿದೆ. ಇನ್ನು 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಏನಿದು ಕೇಸ್
2008 ಜುಲೈ 26ನೇ ತಾರೀಕಿನಂದು ಅಹಮದಾಬಾದ್ ನಗರದಲ್ಲಿ ಸುಮಾರು 20ಕ್ಕೂ ಹೆಚ್ಚು ಬಾಂಬ್ ಸ್ಫೋಟಗಳು ಆಗಿದ್ದವು. ಈ ಬಾಂಬ್ ಸ್ಫೋಟದಲ್ಲಿ 56 ಮಂದಿ ಸಾವನ್ನಪ್ಪಿದ್ದರು. ಅಲ್ಲದೇ 200ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದರು. ಇನ್ನು, ಈ ಬಾಂಬ್ ಬ್ಲಾಸ್ಟ್ ಇಂಡಿಯನ್ ಮುಜಾಹಿದ್ದೀನ್ ಎಂಬ ಸಂಘಟನೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದರು.
The post BREAKING: ಅಹಮದಾಬಾದ್ ಬಾಂಬ್ ಬ್ಲಾಸ್ಟ್ ಕೇಸ್.. ಒಂದೇ ಪ್ರಕರಣದಲ್ಲಿ 38 ಜನರಿಗೆ ಗಲ್ಲುಶಿಕ್ಷೆ appeared first on News First Kannada.