ಬೆಂಗಳೂರು: ಇಂದಿನಿಂದ ಬೆಂಗಳೂರಿನಲ್ಲಿ ಆಟೋ ದರ ದುಬಾರಿಯಾಗಲಿದೆ. ಕೊರೋನಾ ಹೊಡೆತ, ಗ್ಯಾಸ್ ದರ ಏರಿಕೆಯಿಂದ ನಲುಗಿದ್ದ ಜನರಿಗೆ ಇವತ್ತಿನಿಂದ ಆಟೋ ಸಂಚಾರವೂ ದುಬಾರಿ ಆಗಲಿದೆ.
ಇಂದಿನಿಂದ ಆಟೋ ಮೀಟರ್ ದರ ಹೆಚ್ಚಳ ಆದೇಶ ಅಧಿಕೃತವಾಗಿ ಜಾರಿಗೆ ಬರಲಿದೆ. ಇನ್ಮುಂದೆ ಮೊದಲ 2 ಕಿ.ಮೀ ಗೆ 30 ರೂಪಾಯಿ ನಿಗದಿಯಾಗಲಿದ್ದು, ಒಮ್ಮೆ ಆಟೋ ಏರಿದರೆ 30 ರೂಪಾಯಿ ಕೊಡಲೇಬೇಕಾಗುತ್ತೆ. ಇಲ್ಲಿಯವರೆಗೆ 25 ರೂಪಾಯಿ ಕನಿಷ್ಟ ದರವಾಗಿತ್ತು. ಇದೀಗ 2 ಕಿಲೋ ಮೀಟರ್ ಬಳಿಕ ಪ್ರತಿ 1 ಕಿಲೋ ಮೀಟರ್ ಗೆ 15 ರೂಪಾಯಿಯಂತೆ ಚಾರ್ಜ್ ಬೀಳಲಿದೆ.
ಇದನ್ನೂ ಓದಿ: 2 ಡೋಸ್ ವ್ಯಾಕ್ಸಿನ್ಗೂ ಬಗ್ಗಲ್ವಾ ಒಮಿಕ್ರಾನ್? ಲಸಿಕಾ ಕಂಪನಿಗಳು ಹೇಳಿದ್ದೇನು?
- ಕನಿಷ್ಠ ದರ ಮೊದಲ 2 ಕಿ.ಮೀಗೆ ದರ -30 ರೂಪಾಯಿ (ಮೂರು ಪ್ರಯಾಣಿಕರಿಗೆ ಮಾತ್ರ)
- ನಂತರದ ಪ್ರತಿ ಕಿಲೋ ಮೀಟರ್ -15 ರೂ (ರೂ.ಹದಿನೈದು ಮಾತ್ರ, ಮೂರು ಪ್ರಯಾಣಿಕರಿಗೆ)
- ಕಾಯುವಿಕೆ ದರ: ಮೊದಲ ಐದು ನಿಮಿಷ ಉಚಿತ, ಮೊದಲ ಐದು ನಿಮಿಷದ ನಂತರ ಪ್ರತಿ ಹದಿನೈದು ನಿಮಿಷ ಅಥವಾ ಅದರ ಭಾಗಕ್ಕೆ 5 ರೂಪಾಯಿ ಏರಿಸಬೇಕು
- ಪ್ರಯಾಣಿಕರ ಲಗೇಜು ದರ -ಮೊದಲ 20 ಕೆಜಿಗೆ ಉಚಿತ. ಮೊದಲ 20 ಕೆಜಿಯಿಂದ ನಂತರದ ಪ್ರತಿ 20 ಕೆಜಿಗೆ ಅಥವಾ ಅದರ ಭಾಗಕ್ಕೆ 5 ರೂಪಾಯಿ ಹೆಚ್ಚಿಸಬೇಕು
- ರಾತ್ರಿ ವೇಳೆ ದರ: ಸಾಮಾನ್ಯ ದರ + ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು (ರಾತ್ರಿ 10 ರಿಂದ ಬೆಳಗಿನ ಜವಾ 5 ಗಂಟೆಯವರೆಗೆ)