#BREAKING ಕರ್ನಾಟಕದ ರಾಜ್ಯಪಾಲರಾಗಿ ಕೇಂದ್ರ ಸಚಿವ ಥಾವರ್​ಚಂದ್ ಗೆಹ್ಲೋಟ್ ನೇಮಕ

#BREAKING ಕರ್ನಾಟಕದ ರಾಜ್ಯಪಾಲರಾಗಿ ಕೇಂದ್ರ ಸಚಿವ ಥಾವರ್​ಚಂದ್ ಗೆಹ್ಲೋಟ್ ನೇಮಕ

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕದ  ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಅವರನ್ನ ನೇಮಕ ಮಾಡಲಾಗಿದೆ. ಕ್ಯಾಬಿನೆಟ್ ವಿಸ್ತರಣೆ ಬೆನ್ನಲ್ಲೇ ರಾಜ್ಯಪಾಲರ ನೇಮಕ ಪ್ರಕ್ರಿಯೆ ನಡೆದಿದ್ದು ಒಟ್ಟು 8 ಮಂದಿ ರಾಜ್ಯಪಾಲರನ್ನ ಹಲವು ರಾಜ್ಯಗಳಿಗೆ ನೇಮಕ ಮಾಡಲಾಗಿದೆ.

ರಾಜ್ಯಪಾಲರ ಪಟ್ಟಿ ಹೀಗಿದೆ..

  1. ಥಾವರ್​​ಚಂದ್ ಗೆಹ್ಲೋಟ್- ಕರ್ನಾಟಕ
  2. ಬಂಡಾರು ದತ್ತಾತ್ರೇಯ- ಹರಿಯಾಣ
  3. ಮಂಗುಭಾಯಿ ಪಟೇಲ್- ಮಧ್ಯಪ್ರದೇಶ
  4. ರಾಜೇಂದ್ರನ್ ವಿಶ್ವನಾಥ್ ಅರ್ಲೇಕರ್- ಹಿಮಾಚಲ ಪ್ರದೇಶ
  5. ಪಿ ಎಸ್ ಶ್ರೀಧರನ್ ಪಿಳ್ಳೈ- ಗೋವಾ
  6. ರಮೇಶಿ ಬಯಿಸ್- ಜಾರ್ಖಂಡ್
  7. ಹರಿಬಾಬು ಕಂಭಾಪತಿ- ಮಿಜೋರಾಂ
  8. ಸತ್ಯದೇವ ನಾರಾಯಣ್ ಆರ್ಯ- ತ್ರಿಪುರ

ವಜೂಭಾಯಿ ವಾಲಾ ಅವರ ರಾಜ್ಯಪಾಲ ಅಧಿಕಾರಾವಧಿ ಕೆಲವು ತಿಂಗಳ ಹಿಂದೆಯೇ ಮುಗಿದಿದ್ದರೂ ಅವರನ್ನೇ ರಾಜ್ಯಪಾಲರಾಗಿ ಮುಂದುವರೆಸಲಾಗಿತ್ತು.

The post #BREAKING ಕರ್ನಾಟಕದ ರಾಜ್ಯಪಾಲರಾಗಿ ಕೇಂದ್ರ ಸಚಿವ ಥಾವರ್​ಚಂದ್ ಗೆಹ್ಲೋಟ್ ನೇಮಕ appeared first on News First Kannada.

Source: newsfirstlive.com

Source link