Breaking.. ಗೋಣಿ ಚೀಲದಲ್ಲಿ ಪತ್ತೆಯಾಯ್ತು ಖ್ಯಾತ ನಟಿ ಶವ


ಇತ್ತೀಚೆಗೆ ಕಾಣೆಯಾಗಿದ್ದ ಖ್ಯಾತ ನಟಿಯೊಬ್ಬರ ಶವ ಗೋಣಿ ಚೀಲದಲ್ಲಿ ಒತ್ತೆಯಾಗಿದ್ದು, ದಿಗ್ಭ್ರಮೆ ಮೂಡಿಸಿದೆ. ಇತ್ತೀಚಿಗೆ ಕಾಣೆಯಾಗಿದ್ದ ಬಾಂಗ್ಲಾದ ಖ್ಯಾತ ನಟಿ ರೈಮಾ ಇಸ್ಲಾಂ ಶಿಮಿ ಢಾಕಾ ಬಳಿಯ ಖೈರಾನಿಗಂಜ್​ ವ್ಯಾಪ್ತಿಯ ಸೇತುವೆಯ ತಟದಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ.

ಕಳೆದ ಮೂರು ದಿನಗಳಿಂದ ನಟಿ ನಾಪತ್ತೆಯಾಗಿದ್ದಾರೆಂದು ಪತಿ ಶೆಕಾವತ್​ ಅಲಿ ನೋಬಲ್​ ಕಾಳಬಂಗನ್​ ಠಾಣೆಯಲ್ಲಿ ಕೇಸ್​ ದಾಖಲಸಿದ್ದರು. ಕೇಸ್​ ದಾಖಲಾದ 3 ದಿನದಲ್ಲಿ ನಟಿ ಹೆಣವಾಗಿ ಪತ್ತೆಯಾಗಿದ್ದಾರೆ. ಈ ವೇಳೆ ಅವರ ದೇಹದ ಮೇಲೆ ಸಾಕಷ್ಟು ಚುಚ್ಚಿದ ಗುರುತುಗಳಿ ಕಂಡಿವೆ. ಹೀಗಾಗಿ ಪತಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಆತನನ್ನು ಮತ್ತು ಅವರ ಕಾರ್​ ಚಾಲಕನನ್ನು ಅರೆಸ್ಟ್​ ಮಾಡಿ ವಿಚಾರಣೆ ಗೊಳಪಡಿಸಿದ್ದಾರೆ.

ಈ ವೇಳೆ ಪತಿ ಶೆಕಾವತ್​ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ಹತ್ಯೆಗೆ ಕಾರಣಗಳೇನು ಎಂಬುದು ಇನ್ನು ತಿಳಿದು ಬಂದಿಲ್ಲ. ಈ ಕೃತ್ಯದಲ್ಲಿ ಇನ್ನು ಹಲವು ಬಾಂಗ್ಲಾ ಕಲಾವಿದರ ಕೈವಾಡವಿದೆ ಎಂದು ಪೋಲೀರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ತಳ್ಳಿದ್ದು ನಟಿಯ ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ.

News First Live Kannada


Leave a Reply

Your email address will not be published. Required fields are marked *