ರಾಯಚೂರು: ಟೈರ್ ಬಾಸ್ಟ್ ಆಗಿ ಭತ್ತದ ಮೂಟೆ ತುಂಬಿದ್ದ ಲಾರಿ ಪಲ್ಟಿಯಾದ ಘಟನೆ ತಾಲೂಕಿನ ದುಗನೂರು ಕ್ರಾಸ್ ಬಳಿ ನಡೆದಿದೆ.
ಲಾರಿ ಟೈರ್ ಬಾಸ್ಟ್ ಆಗಿದ್ದರಿಂದ ಭತ್ತದ ಚೀಲಗಳು ನೆಲಕ್ಕೆ ಉರುಳಿದೆ. ಪರಿಣಾಮ ಲಾರಿಯ ಮುಂಭಾಗದ ಗಾಜುಗಳು ಪುಡಿಪುಡಿಯಾಗಿವೆ. ದುರ್ಘಟನೆಯಲ್ಲಿ ಯಾವುದೇ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಆದರೆ ಮೂಟೆಗಳು ಉರುಳಿ ಬಿದ್ದಿದ್ದರಿಂದ ಕ್ವಿಂಟಾಲ್ಗಟ್ಟಲೆ ಭತ್ತ ಮಣ್ಣಪಾಲಾಗಿದೆ. ಮಾಹಿತಿ ತಿಳಿದು ಇಡಪನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಡಪನೂರು ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.