BREAKING ಟ್ಯಾಂಕರ್​ ಡಿಕ್ಕಿಯಾಗಿ ಧಗಧಗಿಸಿದ ಬಸ್​.. 12 ಜೀವ ಸಜೀವ ದಹನ


ರಾಜಸ್ಥಾನ: ಚಲಿಸುತ್ತಿದ್ದ ಬಸ್​ಗೆ ಟ್ಯಾಂಕರ್​ ಡಿಕ್ಕಿ ಹೊಡೆದು ಬೆಂಕಿ ತಗುಲಿದ ಪರಿಣಾಮ 12 ಜನ ಸಜೀವ ದಹನಗೊಂಡಿರುವ ಭೀಕರ ಘಟನೆ ರಾಜಸ್ಥಾನದ ಬರ್ಮಾರ-ಜೋಧಪುರ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಇನ್ನು ನಿನ್ನೆ ಬೆಳಗ್ಗೆ 10 ಗಂಟೆಗೆ ಬಲರೋಟಾದಿಂದ ಹೊರಟಿದ್ದ ಬಸ್​ಗೆ, ಎದುರಾಗಿ ಬಂದ ಟ್ಯಾಂಕರ್​ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸುಮಾರು 25 ಜನ ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ಸದ್ಯದ ಮಾಹಿತಿ ಪ್ರಕಾರ 10 ಮೃತದೇಹಗಳನ್ನ ಹೊರತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಪಚೊದ್ರಾ ಜಿಲ್ಲಾಧಿಕಾರಿ, ಮತ್ತು ಶಾಸಕ ಮದನ್  ಪ್ರಜಾಪತ್​ ಆಗಮಿಸಿ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *