BREAKING: ಬಾಗಲಕೋಟೆಯಲ್ಲೂ ಕಾಂಟ್ರ್ಯಾಕ್ಟರ್ ನಿವಾಸದ ಮೇಲೆ ಐಟಿ ದಾಳಿ

ಬಾಗಲಕೋಟೆ: ಬೆಂಗಳೂರು ಮಾತ್ರವಲ್ಲ ಬಾಗಲಕೋಟೆಯಲ್ಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾಂಟ್ರ್ಯಾಕ್ಟರ್ ಡಿ.ಆರ್.ಉಪ್ಪಾರ್ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಬಾಗಲಕೋಟೆಯ ನವನಗರದ 69ನೇ ಸೆಕ್ಟರ್ ನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿದ್ದಾರೆ. ರೋನದ್ ಎಂಬವರ ಮನೆಯಲ್ಲಿ ಡಿ.ಆರ್ ಉಪ್ಪಾರ್ ಬಾಡಿಗೆಗೆ ಇದ್ದಾರೆ. ವಿಜಯಪುರ ಮೂಲದವರಾಗಿರುವ ಉಪ್ಪಾರ್ ಅವರು ಪ್ರಭಾವಿ ಗುತ್ತಿಗೆದಾರರಾಗಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭ್ರಷ್ಟರ ಬೇಟೆಗೆ ಇಳಿದ IT ಅಧಿಕಾರಿಗಳು; ಬೆಂಗಳೂರು ಸೇರಿ 50 ಕಡೆ ದಾಳಿ

ಸದ್ಯ ಮನೆಯ ಒಳಗೆ ಪ್ರವೇಶ ಮಾಡಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಮನೆಯ ಎದುರು ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಬಿಎಸ್​ವೈ ಆಪ್ತನಿಗೂ IT ಶಾಕ್; 10ಕ್ಕೂ ಹೆಚ್ಚು ಅಧಿಕಾರಿಗಳ ನಿವಾಸದ ಮೇಲೆ ದಾಳಿ

The post BREAKING: ಬಾಗಲಕೋಟೆಯಲ್ಲೂ ಕಾಂಟ್ರ್ಯಾಕ್ಟರ್ ನಿವಾಸದ ಮೇಲೆ ಐಟಿ ದಾಳಿ appeared first on News First Kannada.

News First Live Kannada

Leave a comment

Your email address will not be published. Required fields are marked *