Breaking; ಬಿಡದಿಯ ಈಗಲ್ ರೆಸಾರ್ಟ್​​​​​ನಲ್ಲಿ ಮಾಜಿ ಪೈಲೆಟ್, ಪತ್ನಿಯ ಬರ್ಬರ ಕೊಲೆ


ರಾಮನಗರ: ವೃದ್ಧ ದಂಪತಿಯನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಈಗಲ್ ರೆಸಾರ್ಟ್​​​ನ ಖಾಸಗಿ ವಿಲ್ಲಾದಲ್ಲಿ ನಡೆದಿದೆ. ವಿಲ್ಲಾ ಮಾಲೀಕರಾದ ಆಶಾ (63), ರಘುರಾಜ್ (70) ಮೃತ ದಂಪತಿಗಳಾಗಿದ್ದು, ಬಿಡದಿಯ ಈಗಲ್ ರೆಸಾರ್ಟ್​​ನ C ಬ್ಲಾಕ್​ನಲ್ಲಿ ಜೋಡಿ ಕೊಲೆ ನಡೆದಿದೆ.

ಮನೆಯ ಎರಡು ಪ್ರತ್ಯೇಕ ಕೋಣೆಗಳಲ್ಲಿ ಮಲಗಿದ್ದ ಗಂಡ ಹೆಂಡತಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಸುಮಾರು ವರ್ಷಗಳಿಂದ ವೃದ್ಧ ದಂಪತಿ ಇದೇ ವಿಲ್ಲಾದಲ್ಲಿ ವಾಸಿಸುತ್ತಿದ್ದು, ಘಟನೆ ಸಂದರ್ಭದಲ್ಲಿ ಮನೆಗೆ ಕಾವಲಿಗಿದ್ದ ಸೆಕ್ಯೂರಿಟಿ ಪರಾರಿಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಣಕ್ಕಾಗಿ ಸುತ್ತಿಗೆಯಲ್ಲಿ ಹೊಡೆದು ವೃದ್ಧ ದಂಪತಿಗಳನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಿಡದಿ ಪೊಲೀಸರು, ರಾಮನಗರ ಎಸ್​ಪಿ ಸಂತೋಷ್ ಬಾಬು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಂದಹಾಗೇ ಮೃತ ರಘುರಾಜ್ ಮಾಜಿ ಏರ್​​ಪೋರ್ಟ್​ ಪೈಲೆಟ್ ಆಗಿದ್ದು, ಸ್ಥಳಕ್ಕೆ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

News First Live Kannada


Leave a Reply

Your email address will not be published.