ಬೆಂಗಳೂರು: ನಾಗರಬಾವಿ ಆರ್.ಕೆ.ಲ್ಯಾಬ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ವೆಂಕಟೇಶ್ ಎಂಬುವವರಿಗೆ ಸೇರಿದ ಆರ್.ಕೆ.ಲ್ಯಾಬ್ ಇದಾಗಿದೆ. ಬೆಳಗ್ಗೆ 8:10ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಬೆಂಕಿ ಅನಾಹುತದಲ್ಲಿ ಕಂಪ್ಯೂಟರ್, ಸೋಫಾ ಸೇರಿ ಹಲವು ವಸ್ತುಗಳು ಅಗ್ನಿಗೆ ಆಹುತಿ ಆಗಿವೆ.
ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
The post BREAKING: ಬೆಂಗಳೂರಲ್ಲಿ ಬೆಂಕಿ ಅವಘಡ; ಧಗಧಗಿಸಿದ ಲ್ಯಾಬ್ appeared first on News First Kannada.