ಬೆಂಗಳೂರು: ಬೆಳ್ಳಂಬೆಳಗ್ಗೆ ರೌಡಿ ಶೀಟರ್ಗಳಿಗೆ ಪೊಲೀಸರು ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಪಶ್ಚಿಮ ವಿಭಾಗದ ರೌಡಿ ಶೀಟರ್ಸ್ ಮನೆಗಳ ಮೇಲೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
6 ಪೊಲೀಸ್ ಠಾಣಾ ವ್ಯಾಪ್ತಿಯ 180 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿಯಾಗಿದೆ. ರೋಡ್, ಕೆಪಿ ಅಗ್ರಹಾರ, ಬ್ಯಾಟರಾಯನಪುರ, ಜೆಜೆ ನಗರ, ಕಾಟನ್ ಪೇಟೆ, ಚಾಮರಾಜ ಪೇಟೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಮೇಲೆ ದಾಳಿಯಾಗಿದೆ.
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಪೆಡ್ಲರ್ಗಳಿಗೆ ನ್ಯಾಯಾಲಯದಿಂದ ಸಮನ್ಸ್ ನೀಡಿದ್ದರೂ ಹಾಜರಾಗದೇ ತಲೆ ಮರೆಸಿಕೊಂಡಿದ್ದರು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದಂತಹ ರೌಡಿಶೀಟಟರ್ಗಳನ್ನ ಕರೆತಂದು ಠಾಣೆಯಲ್ಲಿ ಎಚ್ಚರಿಕೆ ನೀಡಲಾಗುತ್ತಿದೆ. ಒಟ್ಟು 180 ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನೀಡಲಾಗಿದೆ. ಒಟ್ಟು 600 ಮಂದಿ ಪೊಲೀಸರಿಂದ ಕಾರ್ಯಚರಣೆ ನಡೆದಿದೆ.
ಡಿಸಿಪಿ ಸಂಜಯ್ ಪಾಟೀಲ್, ಪಶ್ಚಿ ವಿಭಾಗ
ಜೊತೆಗೆ ಕೆಂಗೇರಿ ಮತ್ತು ವಿಜಯನಗರ ಸಬ್ ಡಿವಿಷನ್ ನಲ್ಲಿ ಮೆಗಾ ರೈಡ್ ಆಗಿದೆ. ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ದಾಳಿಯಾಗಿದೆ.
The post BREAKING ಬೆಳ್ಳಂಬೆಳಗ್ಗೆ 180 ರೌಡಿಗಳಿಗೆ ಶುರುವಾಯ್ತು ನಡುಕ.. ಡಿಸಿಪಿ ಸಂಜೀವ್ ಪಾಟೀಲ್ ಖಡಕ್ ವಾರ್ನಿಂಗ್ appeared first on News First Kannada.