ಮಂಗಳೂರು: ಉಪ್ಪಿನಂಗಡಿಯಲ್ಲಿ 5 ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಜಯಕುಮಾರ್ ಪೂಜಾರಿ ಎಂಬವರ ಮನೆ ಸಮೀಪ ಪ್ಲಾಸ್ಟಿಕ್ ಕವರಿನಲ್ಲಿ 5 ಹ್ಯಾಂಡ್ ಗ್ರೆನೇಡ್ ಕಂಡಿವೆ. ಎಲ್ಲಾ ಗ್ರೆನೇಡ್ಗಳು ತುಕ್ಕು ಹಿಡಿದ ಸ್ಥಿತಿಯಲ್ಲಿವೆ. ಗ್ರೆನೇಡ್ಗಳನ್ನ ನೋಡಿದ ನಿವೃತ್ತ ಸೇನಾಧಿಕಾರಿ ಜಯಕುಮಾರ್, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರೆನೇಡ್ ಪತ್ತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ತನಿಖೆಯನ್ನ ಆರಂಭಿಸಿದ್ದಾರೆ.