Mukesh Ambani ಸೋಮವಾರ ಒಟ್ಟು ಎಂಟು ಬೆದರಿಕೆ ಕರೆಗಳು ಬಂದಿವೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಅಧಿಕಾರಿಗಳು ಡಿಬಿ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮುಖೇಶ್ ಅಂಬಾನಿ
ಉದ್ಯಮಿ ಮುಖೇಶ್ ಅಂಬಾನಿ ಅವರ ಕುಟುಂಬಕ್ಕೆ ಸೋಮವಾರ ಬೆದರಿಕೆ ಕರೆಗಳು ಬಂದಿವೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಡಿಸ್ಪ್ಲೇ ಸಂಖ್ಯೆಗೆ ಬೆದರಿಕೆ ಕರೆ ಮಾಡಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸೋಮವಾರ ಒಟ್ಟು ಎಂಟು ಬೆದರಿಕೆ ಕರೆಗಳು ಬಂದಿವೆ ಎಂದು ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಅಧಿಕಾರಿಗಳು ಡಿಬಿ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾವು ಆಸ್ಪತ್ರೆಯವರಿಂದ ದೂರು ಸ್ವೀಕರಿಸಿದ್ದು ಅದನ್ನು ಪರಿಶೀಲಿಸುತ್ತಿದ್ದೇವೆ. ಆಸ್ಪತ್ರೆಯ ಡಿಸ್ಪ್ಲೇ ನಂಬರ್ನಲ್ಲಿ ಕರೆ ಮಾಡಲಾಗಿದೆ ಎಂದು ತೋರುತ್ತಿದೆ ಎಂದು ಮುಂಬೈ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಿಡ್ ಡೇ ವರದಿ ಮಾಡಿದೆ.
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)