BREAKING ಯಾವುದೇ ಕಾರಣಕ್ಕೂ ಲಾಕ್​ಡೌನ್​ ಇಲ್ಲ -ಡಾ.ಸುಧಾಕರ್


ಬೆಂಗಳೂರು: ಲಾಕ್​ಡೌನ್​ ಮೂಲಕ ಕೊರೊನಾ ನಿಯಂತ್ರಿಸುವುದು ಸರಿಯಲ್ಲ ಎಂದು ನಗರದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್​ಡೌನ್​ ಇಲ್ಲ. ಲಾಕ್​ಡೌನ್​ನಿಂದ ಕೊರೊನಾ ನಿಯಂತ್ರಿಸಲು ಆಗಲ್ಲ. ಒಮಿಕ್ರಾನ್ ತಡೆಗೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದೇವೆ. ಅಧಿಕಾರಿಗಳೊಂದಿಗೆ ನಿತ್ಯವೂ ಸಭೆ ನಡೆಸುತ್ತಿರುವೆ ಎಂದಿದ್ದಾರೆ.

ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳ ಡಿಸಿಗಳ ಜೊತೆ ಸಭೆ ಮಾಡಲಾಗುತ್ತಿದೆ. ಒಂದೇ ವಾರದಲ್ಲಿ ಸೋಂಕು ಕಡಿಮೆಯಾಗಲ್ಲ. ಒಮಿಕ್ರಾನ್​ 5-6 ಪಟ್ಟು ವೇಗವಾಗಿ ಹರಡುತ್ತಿದೆ. ಫೆಬ್ರವರಿ ಮೊದಲ ವಾರ ಒಮಿಕ್ರಾನ್ ಹೆಚ್ಚಾಗಬಹುದು. ಫೆಬ್ರವರಿ 3-4ನೇ ವಾರದವರೆಗೆ ಎಚ್ಚರಿಕೆಯಿಂದಿರಬೇಕು ಎಂದಿದ್ದಾರೆ.

News First Live Kannada


Leave a Reply

Your email address will not be published. Required fields are marked *