BREAKING: ಹಿಜಾಬ್​​ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ.. ಹೈಕೋರ್ಟ್​


ಬೆಂಗಳೂರು: ಉಡುಪಿಯಲ್ಲಿ ಶುರುವಾದ ಹಿಜಾಬ್​​ ವಿವಾದ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈಗ ಹಿಜಾಬ್​​​ ಕೇಸ್​ ಹೈಕೋರ್ಟ್​ ಅಂಗಳದಲ್ಲಿದೆ. ಇಂದು ಕೂಡ ವಕೀಲರಾದ ದೇವದತ್​​ ಕಾಮತ್​​ ಹಿಜಾಬ್​​ ಪರವಾಗಿ ತಮ್ಮ ವಾದ ಮಂಡಿಸಿದ್ದಾರೆ.

ಇನ್ನು, ಸುಧೀರ್ಘ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ನೇತೃತ್ವದ ತ್ರಿಸದಸ್ಯ ಪೀಠ ಈಗ ಮತ್ತೆ ಕೇಸ್​​ ಮುಂದೂಡಿದೆ. ಮತ್ತೆ ಹಿಜಾಬ್​ ಕೇಸ್​ ನಾಳೆಗೆ ಮುಂದೂಡಿ ಆದೇಶಿಸಿದೆ. ಅಲ್ಲದೇ ಯಾವುದೇ ಕಾರಣಕ್ಕೂ ಕೇಸ್​ ಇತ್ಯರ್ಥ ಆಗೋವರೆಗೂ ಯಾರು ಧಾರ್ಮಿಕ ಗುರುತು ಬಳಸುವಂತಿಲ್ಲ ಎಂದು ಪುನರುಚ್ಚರಿಸಿದೆ.

The post BREAKING: ಹಿಜಾಬ್​​ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ.. ಹೈಕೋರ್ಟ್​ appeared first on News First Kannada.

News First Live Kannada


Leave a Reply

Your email address will not be published.