BREAKING: ಹಿಜಾಬ್​​ ಹಂಗಾಮಾ: ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್​


ಬೆಂಗಳೂರು: ಉಡುಪಿಯಲ್ಲಿ ಶುರುವಾದ ಹಿಜಾಬ್​​ ವಿವಾದ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈಗ ಹಿಜಾಬ್​​​ ಕೇಸ್ಹೈಕೋರ್ಟ್ಅಂಗಳದಲ್ಲಿದೆ. ಇಂದು ಕೂಡ ವಕೀಲರಾದ ದೇವದತ್​​ ಕಾಮತ್​​ ಹಿಜಾಬ್​​ ಪರವಾಗಿ ತಮ್ಮ ವಾದ ಮಂಡಿಸಿದ್ದಾರೆ.

ಇನ್ನು, ಸುಧೀರ್ಘ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ನೇತೃತ್ವದ ತ್ರಿಸದಸ್ಯ ಪೀಠ ಈಗ ಮತ್ತೆ ಕೇಸ್​​ ಮುಂದೂಡಿ ಆದೇಶಿಸಿದೆ. ನಿನ್ನೆ ಕೂಡ ಇವತ್ತಿಗೆ ಮುಂದೂಡಿ ವಿಚಾರಣೆ ನಡೆಸಲಾಗಿತ್ತು. ಇವತ್ತು ಮಧ್ಯಾಹ್ನದಿಂದ ಇಲ್ಲಿಯವರೆಗೆ ಸುದೀರ್ಘ ವಿಚಾರಣೆ ನಡೆದಿದ್ದು, ಮತ್ತೆ ನಾಳೆ ಮಧ್ಯಾಹ್ನ ವಿಚಾರಣೆಯನ್ನ 2.30 ಕ್ಕೆ ಮುಂದೂಡಿ ಹೈಕೋರ್ಟ್​ ಆದೇಶಿಸಿದೆ.

 

 

News First Live Kannada


Leave a Reply

Your email address will not be published. Required fields are marked *