BREAKING 2ನೇ ಟೆಸ್ಟ್​ನಲ್ಲಿ ಭರ್ಜರಿ ಗೆಲುವು ದಾಖಲಿಸಿ ಟೆಸ್ಟ್​ ಸರಣಿ ವಶ; ಐತಿಹಾಸಿಕ ದಾಖಲೆ ಬರೆದ ಕೊಹ್ಲಿ ಹುಡುಗರು


ಮುಂಬೈ ಟೆಸ್ಟ್​​ ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಭಾರತದ ಬೌಲರ್​​ಗಳ ಮಾರಕ ಬೌಲಿಂಗ್​​​​ ದಾಳಿಗೆ ನಡುಗಿದ ಪ್ರವಾಸಿ ನ್ಯೂಜಿಲೆಂಡ್​ ತಂಡ, ನಾಲ್ಕನೇ ದಿನದಾಟದ ಮೊದಲ ಸೆಷನ್​​​ನಲ್ಲೇ ಸೋಲಿಗೆ ಶರಣಾಯಿತು.

ಆ ಮೂಲಕ ಹೆಚ್ಚು ರನ್​​​ಗಳಿಂದ ಗೆದ್ದ ದಾಖಲೆ ಕೂಡ ಬರೆಯಿತು. ಅಲ್ಲದೆ, ಟೀಮ್ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್​ ಸರಣಿಯನ್ನ 1-0 ಅಂತರದಲ್ಲಿ ಕೈ ವಶ ಮಾಡಿಕೊಂಡಿತು. 5 ವಿಕೆಟ್​ ನಷ್ಟಕ್ಕೆ 140ರನ್​​ಗಳೊಂದಿಗೆ 4ನೇ ದಿನದಾಟ ಆರಂಭಿಸಿದ ಕಿವೀಸ್​ ಗೆಲುವಿಗೆ ಬೃಹತ್​​​​ 400 ರನ್​​ಗಳ ಅಗತ್ಯವಿತ್ತು. ಆದರೆ ಭಾರತೀಯ ಬೌಲರ್​​​​ಗಳು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ದಿನದಾಟದ ಆರಂಭದಲ್ಲೇ ರಾಚಿನ್​ ರವೀಂದ್ರ, ಕೈಲ್​ ಜೆಮಿಸನ್, ಟಿಮ್​​ ಸೌಥಿ​​ಗೆ ಜಯಂತ್​ ಯಾದವ್​ ಗೇಟ್​ ಪಾಸ್​ ನೀಡಿದ್ರು. ಅಷ್ಟರಲ್ಲಾಗಲೇ ಕಿವೀಸ್​​ 8 ವಿಕೆಟ್​​​ ಕಳೆದುಕೊಂಡು ತಂಡದ ಮೇಲಿನ ಹಿಡಿತವನ್ನ ಸಂಪೂರ್ಣ ಕಳೆದುಕೊಂಡಿತು.

9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಮರ್​ವಿಲ್ಲಿ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದರು. ಇನ್ನು 36 ರನ್​​ಗಳಿಸಿ ಇವತ್ತಿಗೆ ಕ್ರೀಸ್​ ಕಾಯ್ದುಕೊಂಡಿದ್ದ ಹೆನ್ರಿ ನಿಕೋಲಸ್​, ಕೆಲ ಕಾಲ ಹೋರಾಡಿದರು. ಕೊನೆಯಲ್ಲಿ ಅಶ್ವಿನ್​​ ಬೌಲಿಂಗ್​​​ನಲ್ಲಿ ಸ್ಟಂಪ್​ ಔಟ್​ ಆದರು. ಅಶ್ವಿನ್​​​ 4, ಜಯಂತ್​ ಯಾದವ್ 4, ಅಕ್ಷರ್​ ಪಟೇಲ್ 1 ವಿಕೆಟ್ ಕಬಳಿಸಿ ಮಿಂಚಿದರು.

ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 325ರನ್​​​​ ಗಳಿಸಿದ್ರೆ, ನ್ಯೂಜಿಲೆಂಡ್​​ ಕೇವಲ 62 ರನ್​​​ಗಳಿಗೆ ಆಲೌಟಾಗಿ ತೀವ್ರ ಹಿನ್ನಡೆ ಕಂಡಿತ್ತು. ಪರಿಣಾಮ 263ರನ್​​ಗಳ ಮುನ್ನಡೆ ಪಡೆದ ಭಾರತ, 2ನೇ ಇನ್ನಿಂಗ್ಸ್​​​ನಲ್ಲಿ 7 ವಿಕೆಟ್​​ ನಷ್ಟಕ್ಕೆ 276ರನ್​ ಕಲೆ ಹಾಕಿ ಇನ್ನಿಂಗ್ಸ್​​​​ ಡಿಕ್ಲೇರ್​ ಮಾಡಿಕೊಂಡಿತು. ಭಾರತ ನೀಡಿದ ಬೃಹತ್​ 539 ರನ್​​​ಗಳ ಗುರಿ ಬೆನ್ನತ್ತಿದ ಕಿವೀಸ್​​​ 167 ರನ್​​ಗಳಿಗೆ ಆಲೌಟಾಯ್ತು. ಹೀಗಾಗಿ 372 ರನ್​​ಗಳ ಅಂತರದಿಂದ ಪ್ರವಾಸಿ ತಂಡದ ಸೋಲನುಭವಿಸಿತು.

ಇನ್ನು ಎರಡನೇ ಟೆಸ್ಟ್​ ಪಂದ್ಯದ ಫಲಿತಾಂಶ ಹೊರಬಿದ್ದರೆ, ಮೊದಲ ಟೆಸ್ಟ್​ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು. ಹೀಗಾಗಿ 1-0 ಅಂತರದಲ್ಲಿ ಟೆಸ್ಟ್​​​​ ಸರಣಿಯನ್ನ ಭಾರತ ಗೆದ್ದುಕೊಂಡಿದೆ.

ಎರಡನೇ ಟೆಸ್ಟ್​ ಸ್ಕೋರ್​​

  • ಟೀಮ್​ ಇಂಡಿಯಾ ಮೊದಲ ಇನ್ನಿಂಗ್ಸ್​ 325/10
  • ಮೊದಲ ಇನ್ನಿಂಗ್ಸ್​ನಲ್ಲಿ ಕಿವೀಸ್​​​​ 62ಕ್ಕೆ ಆಲೌಟ್
  • ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್​ 276/7ಡಿ
  • ನ್ಯೂಜಿಲೆಂಡ್​​ ಎರಡನೇ ಇನ್ನಿಂಗ್ಸ್​​​ 167/10

 

News First Live Kannada


Leave a Reply

Your email address will not be published. Required fields are marked *