ಮಾಸ್ಕ್ ಎಲ್ಲಾರೂ ಕಡ್ಡಾಯವಾಗಿ ಧರಿಸಬೇಕು. ಜನರು ಏನೂ ಆಗಲ್ಲ ಅಂತಾ ಉದಾಸೀನ ತೋರ್ತಿದ್ದಾರೆ. 17,18, 21 ಯುವಕರು ಸಾವಿಗೀಡಾಗಿದ್ದಾರೆ ಎಂದು ನಗರದಲ್ಲಿ ಸಚಿವ ಡಾ. ಸುಧಾಕರ್ ಹೇಳಿದರು.

ಆರೋಗ್ಯ ಸಚಿವ ಸುಧಾಕರ
ಬೆಂಗಳೂರು: ಮಾಸ್ಕ್ ಎಲ್ಲಾರೂ ಕಡ್ಡಾಯವಾಗಿ ಧರಿಸಬೇಕು. ಜನರು ಏನೂ ಆಗಲ್ಲ ಅಂತಾ ಉದಾಸೀನ ತೋರ್ತಿದ್ದಾರೆ.
17,18, 21 ವರ್ಷದ ಯುವಕರು ಸಾವಿಗೀಡಾಗಿದ್ದಾರೆ ಎಂದು ನಗರದಲ್ಲಿ ಸಚಿವ ಡಾ. ಸುಧಾಕರ್ ಹೇಳಿದರು. ಅವರ ಡೆತ್ ಆಡಿಟ್ ನಡೀತಿದೆ. 60 ವರ್ಷ ಮೇಲ್ಪಟ್ಟವರು ಅತೀ ಜರೂರಾಗಿ ಮೂರನೇ ಡೋಸ್ ತೆಗೆದುಕೊಳ್ಳಬೇಕು. ಮಂಕಿಪಾಕ್ಸ್ ಬಗ್ಗೆಯೂ ಚರ್ಚೆ ಮಾಡಿದ್ದೀವಿ. ದೇಶದಲ್ಲಿ ಒಂಬತ್ತು ಪ್ರಕರಣ ದಾಖಲಾಗಿವೆ. ಕೇರಳದಲ್ಲಿ ಐದು, ದೆಹಲಿಯಲ್ಲಿ ನಾಲ್ಕು ಕೇಸ್ ಪತ್ತೆಯಾಗಿದ್ದು,
ಕರ್ನಾಟಕದಲ್ಲಿ ಮಂಕಿಪಾಕ್ಸ್ ಕೇಸ್ ಪತ್ತೆ ಆಗಿಲ್ಲ. ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಮಲೇರಿಯ, ಡೆಂಘೀ, ಹೆಚ್ 1 ಎನ್ 1 ಬಗ್ಗೆಯೂ ಅಧ್ಯಯನ ಆಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ. ಮಲೇರಿಯಾ 114 ಪಕ್ರರಣ ಇದೆ.
ಡೆಂಘೀ 4415 ಮಂದಿಗೆ ಬಂದಿದ್ದು, 36 ಸಾವಿರ ಟೆಸ್ಟಿಂಗ್ ಮಾಡಿದ್ದೇವೆ. ಚಿಕೂನದ ಗುನ್ಯಾ 978, ಹೆಚ್ 1ಎನ್ 1 303 ಪ್ರಕರಣ ದಾಖಲಾಗಿದೆ. ಇದರ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.