Breaking News: ಗಾಯಕ ಸಿಧು ಮೂಸೆವಾಲಾ ಕೊಲೆ ತನಿಖೆ ಚುರುಕು: 60 ಸ್ಥಳಗಳಲ್ಲಿ ಎನ್​ಐಎ ಏಕಕಾಲಕ್ಕೆ ದಾಳಿ | Sidhu Moose Wala Murder Case NIA raids 60 locations in north India to probe Goldy Brar Lawrence Bishnoi


ಮುಖ ಆರೋಪಿಗಳಾದ ಲಾರೆನ್ಸ್​ ಬಿಷ್ಣೋಯ್, ಗೋಲ್ಡೀ ಬ್ರಾರ್ ಅವರಿಗೆ ಸೇರಿದ ಹಲವು ಸ್ಥಳಗಳ ಮೇಲೆ ಸೋಮವಾರ ಮುಂಜಾನೆ ದಾಳಿ ನಡೆಸಿದೆ.

Breaking News: ಗಾಯಕ ಸಿಧು ಮೂಸೆವಾಲಾ ಕೊಲೆ ತನಿಖೆ ಚುರುಕು: 60 ಸ್ಥಳಗಳಲ್ಲಿ ಎನ್​ಐಎ ಏಕಕಾಲಕ್ಕೆ ದಾಳಿ

ಸಿಧು ಮೂಸೆವಾಲಾ

ದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (National Investigation Agency – NIA) ಪ್ರಮುಖ ಆರೋಪಿಗಳಾದ ಲಾರೆನ್ಸ್​ ಬಿಷ್ಣೋಯ್, ಗೋಲ್ಡೀ ಬ್ರಾರ್ ಅವರಿಗೆ ಸೇರಿದ ಹಲವು ಸ್ಥಳಗಳ ಮೇಲೆ ಸೋಮವಾರ ಮುಂಜಾನೆ ದಾಳಿ ನಡೆಸಿದೆ. ಸಿಧು ಮೂಸೆ ವಾಲಾ ಕೊಲೆಯಲ್ಲಿ ಭೂಗತ ಲೋಕದ ಈ ದುಷ್ಕರ್ಮಿಗಳು ವಹಿಸಿದ್ದ ಪಾತ್ರದ ಬಗ್ಗೆ ಎನ್​ಐಎ ಮಾಹಿತಿ ಕಲೆ ಹಾಕುತ್ತಿದೆ. ದೆಹಲಿ, ರಾಷ್ಟ್ರ ರಾಜಧಾನಿ ಪ್ರದೇಶ (ಎನ್​ಸಿಆರ್) ಮತ್ತು ಹರಿಯಾಣದ ವಿವಿಧ ಸ್ಥಳಗಳಲ್ಲಿ ಎನ್​ಐಎ ಸಿಬ್ಬಂದಿ ಶೋಧ ಆರಂಬಿಸಿದ್ದಾರೆ.

ಪಂಜಾಬ್ ಚುನಾವಣೆಗೂ ಮುನ್ನ ಕಾಂಗ್ರೆಸ್ (Congress) ಸೇರಿದ್ದ ಜನಪ್ರಿಯ ಪಂಜಾಬಿ ಗಾಯಕ ಮತ್ತು ರಾಪರ್ ಸಿಧು ಮೂಸೆ ವಾಲಾ (Sidhu Moose Wala) ಅವರನ್ನು ಕಳೆದ ಮೇ ತಿಂಗಳಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮೂಸೆ ವಾಲಾ ಅವರು ಮಾನ್ಸಾದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಮ್​ ಆದ್ಮಿ ಪಾರ್ಟಿಯ ಡಾ.ವಿಜಯ್ ಸಿಂಗ್ಲಾ ವಿರುದ್ಧ 63,323 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಸಿಧು ಮೂಸೆ ವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಪಂಜಾಬ್ ಸರ್ಕಾರ ವಾಪಸ್ ಪಡೆದ ಬೆನ್ನಲ್ಲೇ ಸಿಧು ಮೂಸೆವಾಲಾ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.

ಮೂಸೆವಾಲಾ ಕೊಲೆಯ ಹೊಣೆಯನ್ನು ಹಲವಾರು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಹೊತ್ತುಕೊಂಡಿದ್ದಾರೆ. ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್ ಪರವಾಗಿ ತಾನೇ ಈ ಕೊಲೆ ಮಾಡಿದ್ದಾಗಿ ಗೋಲ್ಡಿ ಬ್ರಾರ್ ಎನ್ನುವಾತ ಹೇಳಿಕೊಂಡಿದ್ದ. ಮೂಸೆವಾಲಾರ ಮೃತ ದೇಹದಲ್ಲಿ 25 ಗುಂಡುಗಳು ನುಗ್ಗಿದ್ದ ಗಾಯದ ಗುರುತುಗಳಿದ್ದವು. ಈ ಘಟನೆ ಪಂಜಾಬ್​ನಲ್ಲಿ ವ್ಯಾಪಕ ಆಕ್ರೋಶ ಹುಟ್ಟುಹಾಕಿತ್ತು.

ತಾಜಾ ಸುದ್ದಿ

TV9 Kannada


Leave a Reply

Your email address will not be published.