ಉತ್ತರ ಪ್ರದೇಶ: ಯುಪಿಯ ಬಂದಾದಲ್ಲಿ ದೋಣಿ ಮುಳುಗಿ ಸುಮಾರು 20 ಮಂದಿ ಸತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ

Banda
ಉತ್ತರ ಪ್ರದೇಶ: ಉತ್ತರ ಪ್ರದೇಶದ (Uttar Pradesh) ಬಂದಾ ಎಂಬಲ್ಲಿ ಯಮುನಾ ನದಿಯಲ್ಲಿ 40 ಮಂದಿಯನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು, ಮಹಿಳೆಯರು ಸೇರಿದಂತೆ 20 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಘಟನೆ ನಡೆದಾಗ ಬೋಟ್ ಮರ್ಕಾ ಘಾಟ್ನಿಂದ ಫತೇಪುರಕ್ಕೆ ತೆರಳುತ್ತಿತ್ತು. ಮಹಿಳಾ ಪ್ರಯಾಣಿಕರು ರಕ್ಷಾ ಬಂಧನವನ್ನು ಆಚರಿಸಲು ತಮ್ಮ ಮನೆಗೆ ಹೋಗುತ್ತಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಫತೇಪುರ್ನಿಂದ ಮರ್ಕಾ ಗ್ರಾಮಕ್ಕೆ ಯಮುನಾ ನದಿಯಲ್ಲಿ ಪ್ರಯಾಣಿಕರನ್ನು ತುಂಬಿದ್ದ ದೋಣಿ ಮಗುಚಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನೂ ದೋಣಿಯಲ್ಲಿದ್ದ ಜನರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬಂದಾ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.