Breast Cancer: ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್;​ ಎಮೋಷನಲ್​ ವಿಡಿಯೋ ಹಂಚಿಕೊಂಡ ಅನುಪಮ್​ ಖೇರ್​ | Mahima Chaudhary talks about her breast cancer journey in a video with Anupam Kher


Breast Cancer: ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್;​ ಎಮೋಷನಲ್​ ವಿಡಿಯೋ ಹಂಚಿಕೊಂಡ ಅನುಪಮ್​ ಖೇರ್​

ಮಹಿಮಾ ಚೌಧರಿ, ಅನುಪಮ್ ಖೇರ್

Mahima Chaudhary | Anupam Kher: ಕ್ಯಾನ್ಸರ್​ನಿಂದಾಗಿ ಮಹಿಮಾ ಚೌಧರಿ ಅವರ ಜೀವನದಲ್ಲಿ ಹಲವು ಘಟನೆಗಳು ಎದುರಾದವು. ಇತರೆ ಕ್ಯಾನ್ಸರ್​ ರೋಗಿಗಳನ್ನು ನೋಡಿ ಅವರು ಧೈರ್ಯ ತಂದುಕೊಂಡರು.

ಬಾಲಿವುಡ್​ನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಮಹಿಮಾ ಚೌಧರಿ (Mahima Chaudhary) ಅವರ ಅಭಿಮಾನಿಗಳಿಗೆ ಎರಡು ಸುದ್ದಿ ಇದೆ. ಒಂದು ಬೇಸರದ ಸುದ್ದಿ, ಇನ್ನೊಂದು ಖುಷಿಯ ಸುದ್ದಿ. ಬೇಸರದ ಸುದ್ದಿ ಏನೆಂದರೆ ಮಹಿಮಾ ಚೌಧರಿ ಅವರಿಗೆ ಸ್ತನ ಕ್ಯಾನ್ಸರ್​ (Breast Cancer) ಆಗಿದೆ.  ಖುಷಿಯ ಸುದ್ದಿ ಏನೆಂದರೆ ಅವರು ಈಗಾಗಲೇ ಆ ಕ್ಯಾನ್ಸರ್​ನಿಂದ ಗುಣಮುಖರಾಗಿದ್ದಾರೆ. ತಮಗೆ ಕ್ಯಾನ್ಸರ್​ ಆಗಿತ್ತು ಎಂಬ ವಿಷಯವನ್ನು ಇಷ್ಟು ದಿನಗಳವರೆಗೆ ಮಹಿಮಾ ಅವರು ಹೇಳಿಕೊಂಡಿರಲಿಲ್ಲ. ಆದರೆ ಈಗ ನಟ ಅನುಪಮ್​ ಖೇರ್​ (Anupam Kher) ಅವರು ಎಲ್ಲವನ್ನೂ ಬಹಿರಂಗಪಡಿಸುವಂತೆ ಮಾಡಿದ್ದಾರೆ. ಮಹಿಮಾ ಮತ್ತು ಅನುಪಮ್​ ಅವರು ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅನುಪಮ್​ ಕೇಳಿದ ಹಲವು ಪ್ರಶ್ನೆಗಳಿಗೆ ಮಹಿಮಾ ಉತ್ತರ ನೀಡಿರುವ ಈ ವಿಡಿಯೋ ತುಂಬ ಎಮೋಷನಲ್​ ಆಗಿದೆ. ಮಹಿಮಾ ಈಗ ಸಂಫೂರ್ಣ ಗುಣಮುಖರಾಗಿದ್ದಾರೆ. ಹಾಗಿದ್ದರೂ ಕೂಡ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಅನುಪಮ್​ ಖೇರ್​ ಮನವಿ ಮಾಡಿಕೊಂಡಿದ್ದಾರೆ.

ತಮಗೆ ಮೊದಲ ಬಾರಿಗೆ ಕ್ಯಾನ್ಸರ್​ ಇದೆ ಎಂಬುದು ಗೊತ್ತಾದಾಗ ತಮ್ಮ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ಮಹಿಮಾ ಚೌಧರಿ ವಿವರಿಸಿದ್ದಾರೆ. ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದುಕೊಂಡಿದ್ದರಿಂದ ಅವರ ತಲೆ ಕೂದಲು ಉದುರಿ ಹೋಗಿದೆ. ಹಾಗಾಗಿ ಅವರು ವಿಗ್​ ಧರಿಸಿ ಶೂಟಿಂಗ್​ನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಕ್ಯಾನ್ಸರ್​ನಿಂದಾಗಿ ಮಹಿಮಾ ಅವರ ಜೀವನದಲ್ಲಿ ಹಲವು ಘಟನೆಗಳು ಎದುರಾದವು. ಅನೇಕ ಬಗೆಯ ಜನರನ್ನು ಅವರು ಭೇಟಿ ಮಾಡಬೇಕಾಯಿತು. ಇತರೆ ಕ್ಯಾನ್ಸರ್​ ರೋಗಿಗಳನ್ನು ನೋಡಿ ಧೈರ್ಯ ತಂದುಕೊಂಡ ಮಹಿಮಾ ಅವರು ಈಗ ತಮ್ಮ ಸ್ವಂತ ಅನುಭವವನ್ನು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

TV9 Kannada


Leave a Reply

Your email address will not be published.