ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ 12 ಗಡಿ ರಸ್ತೆಗಳನ್ನ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ ನಂತರ ಮಾತನಾಡಿದ ಸಚಿವ ರಾಜನಾಥ್​ ಸಿಂಗ್​, ಅರುಣಾಚಲ ಪ್ರದೇಶ ಮತ್ತು ಲಡಾಕ್​ ಗಡಿಗಳಲ್ಲಿ ರಸ್ತೆಯ ಮೂಲಸೌಕರ್ಯ ಒದಗಿಸುವುದು ಅತ್ಯವಶ್ಯಕವಾಗಿದೆ ಅಂತ ತಿಳಿಸಿದ್ರು.

ಗಡಿ ಭಾಗದಲ್ಲಿ ರಸ್ತೆಗಳ ನಿರ್ಮಾಣದಿಂದ ಸಾಮಾಜಿಕ ಮತ್ತು ಆರ್ಥಿಕ ಮಹತ್ವವನ್ನು ಹೊಂದಿದ್ದು, ಈ ಗಡಿ ರಸ್ತೆಗಳ ಉದ್ಘಾಟನೆಯಿಂದ ನಮ್ಮ ಸೇನೆಗೆ ಬೇಕಾದ ಉಪಕರಣಗಳನ್ನ ಸಾಗಿಸಲು ಹಾಗೂ ಸೇನೆಯ ಸಿಬ್ಬಂದಿ ಸಂಚರಿಸಲು ಉಪಯುಕ್ತವಾಗುತ್ತದೆ ಅಂತ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದ್ದಾರೆ.

ಪ್ರಮುಖವಾಗಿ ಅಸ್ಸಾಂನ ಲಕ್ಷ್ಮಿಪುರ್​ ಜಿಲ್ಲೆಯ ಕಿಮನ್ ಬಳಿ 20 ಕಿಮೀ ಉದ್ದದ ಡಬಲ್​ ಲೈನ್​ ರೋಡ್​​ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳ ಗಡಿ ಪ್ರದೇಶಗಳನ್ನು ಸಂಪರ್ಕಿಸುವ 12 ರಸ್ತೆಗಳಿಗೆ ಚಾಲನೆ ನೀಡಲಾಗಿದೆ. ಇದರಲ್ಲಿ ಲಡಾಖ್​​ ಹಾಗೂ ಜಮ್ಮು ಕಾಶ್ಮೀರದಲ್ಲಿ ತಲಾ ಒಂದು ರಸ್ತೆ ಹಾಗೂ ಅರುಣಾಚಲ ಪ್ರದೇಶದಲ್ಲಿ 11 ರಸ್ತೆಗಳನ್ನು ನಿರ್ಮಿಸಲಾಗಿದೆ.

The post BRO ನಿರ್ಮಿಸಿದ 12 ನೂತನ ಗಡಿ ರಸ್ತೆಗಳನ್ನ ಉದ್ಘಾಟಿಸಿದ ರಾಜ್​ನಾಥ್ ಸಿಂಗ್.. ಏನಿದರ ವಿಶೇಷತೆ..? appeared first on News First Kannada.

Source: newsfirstlive.com

Source link