BS Yediyurappa: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಜೀವನದಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪ್ರದಾನ | Former CM BS Yediyurappa given Jeevanadi Nationa Award in Mandya by Durdundeshwar Mahanta Shivayogi mutt


Durdundeshwar Mahanta Shivayogi mutt: ಶ್ರೀಗಳ 14ನೇ ವರ್ಷದ ಪುಣ್ಯ ಸ್ಮರಣೆ, 6ನೇ ವರ್ಷದ ಮಹಾರಥೋತ್ಸವ ಸಮಾರಂಭದಲ್ಲಿ ಯಡಿಯೂರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ವಿವಿಧ ಮಠಾಧೀಶರು ಆಶೀರ್ವದಿಸಿದರು.

BS Yediyurappa: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಜೀವನದಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪ್ರದಾನ

ಯಡಿಯೂರಪ್ಪಗೆ ಜೀವನದಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪ್ರದಾನ

ಮಂಡ್ಯ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ (BS Yediyurappa) ಜೀವನದಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ (Jeevanadi National Award) ಪ್ರದಾನ ಮಾಡಲಾಗಿದೆ. ಮಂಡ್ಯ (Mandya) ಜಿಲ್ಲೆ ಪಾಂಡವಪುರ ತಾಲೂಕಿನ ಬೇಬಿ ಗ್ರಾಮದಲ್ಲಿ ನಡೆದ 6ನೇ ವರ್ಷದ ಮಹಾರಥೋತ್ಸವ ಸಮಾರಂಭದಲ್ಲಿ ಈ ಪುರಸ್ಕಾರ ಕೊಡಮಾಡಲಾಗಿದೆ. ಮರಿದೇವರು ಶಿವಯೋಗಿ ಶ್ರೀ ಸ್ಮರಣೆಯಲ್ಲಿ ದುರ್ದಂಡೇಶ್ವರ ಮಹಂತ ಶಿವಯೋಗಿ ಮಠದ (Durdundeshwar Mahanta Shivayogi mutt) ವತಿಯಿಂದ ಪ್ರದಾನ ಮಾಡಲಾಗಿದೆ.

ಶ್ರೀಗಳ 14ನೇ ವರ್ಷದ ಪುಣ್ಯ ಸ್ಮರಣೆ, 6ನೇ ವರ್ಷದ ಮಹಾರಥೋತ್ಸವ ಸಮಾರಂಭದಲ್ಲಿ ಯಡಿಯೂರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ವಿವಿಧ ಮಠಾಧೀಶರು ಆಶೀರ್ವದಿಸಿದರು. ಈ ವೇಳೆ ಸಚಿವ ಕೆ.ಸಿ. ನಾರಾಯಣ ಗೌಡ, ಶಾಸಕ ಸಿ.ಎಸ್. ಪುಟ್ಟರಾಜು ಉಪಸ್ಥಿತರಿದ್ದರು.

ಸಂಸದೆ ಸಮಲತಾ ಕಿವಿಯೋಲೆ ಸವರಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದೇನು?

ಇದೇ ವೇಳೆ, ಬಿಎಸ್ ವೈ ಅವರು ಬೇಬಿ ಮಠದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಂಡ್ಯ ಸಂಸದೆ ಸಮಲತಾ ಅಂಬರೀಶ್​ ಅವರ ಕಿವಿಯೋಲೆ ಸವರಿ, ಉಭಯ ಕುಶಲೋಪರಿ ವಿಚಾರಿಸಿದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *