BSF Group B Recruitment 2022: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗಾವಕಾಶ | Bsf group b recruitment 2022 sub inspector and various post


BSF Group B Recruitment 2022: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗಾವಕಾಶ

BSF Group B Recruitment 2022

BSF Group B Recruitment 2022: ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗವನ್ನು ಎದುರು ನೋಡುತ್ತಿದ್ದರೆ ಬಿಎಸ್ ಎಫ್ ನಲ್ಲಿ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆ ಪ್ರಕಾರ, ಇನ್ಸ್​ಪೆಕ್ಟರ್, ಸಬ್ ಇನ್ಸ್ ಪೆಕ್ಟರ್, ಜೂನಿಯರ್ ಇಂಜಿನಿಯರ್/ ಸಬ್ ಇನ್ಸ್ ಪೆಕ್ಟರ್ (ಎಲೆಕ್ಟ್ರಿಕಲ್) ಸೇರಿದಂತೆ ಒಟ್ಟು 90 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು BSF ಅಧಿಕೃತ ವೆಬ್‌ಸೈಟ್ rectt.bsf.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಏಪ್ರಿಲ್ 25 ರಿಂದ ಶುರುವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 08 ಜೂನ್ 2022 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಬಹುದು ಹೇಗೆ?

1. ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ .

2. ಅದರ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ‘ನೋಂದಣಿ’ ಮೇಲೆ ಕ್ಲಿಕ್ ಮಾಡಿ.

3. ವೈಯಕ್ತಿಕ ಮಾಹಿತಿಯ ಮೇಲೆ ಕ್ಲಿಕ್ ಮಾಡುವ ಮೂಲಕ ಎಲ್ಲಾ ಮಾಹಿತಿಯನ್ನು ಒದಗಿಸಿ.

4. ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಸಹಾಯದಿಂದ ಲಾಗಿನ್ ಮಾಡಿ.

5. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ವಿದ್ಯಾರ್ಹತೆ:

ಸಬ್ ಇನ್ಸ್‌ಪೆಕ್ಟರ್ (ವರ್ಕ್ಸ್) – ಸಿವಿಲ್ ಇಂಜಿನಿಯರಿಂಗ್​ನಲ್ಲಿ ಡಿಪ್ಲೋಮಾ ಮಾಡಿರಬೇಕು.

ಜೂನಿಯರ್ ಇಂಜಿನಿಯರ್ / ಸಬ್ ಇನ್ಸ್‌ಪೆಕ್ಟರ್ (ಎಲೆಕ್ಟ್ರಿಕಲ್) – ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು.

ಇನ್ಸ್‌ಪೆಕ್ಟರ್ (ಆರ್ಕಿಟೆಕ್ಟ್) – ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದಿರಬೇಕು. ಕೌನ್ಸಿಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ನೋಂದಾಯಿಸಿರಬೇಕು.

ವಯೋಮಿತಿ:
ಅಭ್ಯರ್ಥಿಗಳ ವಯಸ್ಸು 30 ವರ್ಷ ಮೀರಿರಬಾರದು. 08 ಜೂನ್ 2022 ರ ಆಧಾರದ ಮೇಲೆ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 200 ರೂ. ಪಾವತಿಸಬೇಕು. ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.

TV9 Kannada


Leave a Reply

Your email address will not be published. Required fields are marked *