ಬೆಂಗಳೂರು: ರಾಜ್ಯ ಬಿಜೆಪಿ ಪಾಳಯದಲ್ಲಿ ಸಿಎಂ ಬದಲಾವಣೆಯ ಬಿರುಗಾಳಿ ಎದ್ದಿದೆ. ಆದರೆ ಈ ನಾಯಕತ್ವ ಬದಲಾವಣೆಗೆ ನಿನ್ನೆ ಮೊನ್ನೆ ಶುರುವಾದ ಪ್ರಕ್ರಿಯೆ ಅಲ್ಲ, ಅದಕ್ಕೆ ಸುದೀರ್ಘ ಲೆಕ್ಕಾಚಾರ, ಅಳೆದು ತೂಗಿ ತೆಗೆದುಕೊಂಡ ತೀರ್ಮಾನ. ಒಂದು ವರ್ಷದಿಂದ ನಡೆಯುತ್ತಿದ್ದ ಪ್ರಿಪರೇಷನ್​​​, ಆದ್ರೆ ಯಾವುದೇ ಸುಳಿವು ಸಿಗದಂತೆ ಮುಂಜಾಗೃತೆ ವಹಿಸಲಾಗಿತ್ತು. ವರ್ಷದಿಂದ ಹೈಕಮಾಂಡ್​ ಜಾಣ ನಡೆ ಅನುಸರಿಸಿತ್ತು.

ಮೊನ್ನೆಯಷ್ಟೇ ಪಕ್ಷದ ಹೈಕಮಾಂಡ್​ ನಾಯಕರ ಭೇಟಿ ಬಳಿಕ ಬಿಎಸ್​ವೈ ಸಿಎಂ ಬದಲಾವಣೆ ಬಗ್ಗೆ ಸ್ಪಷ್ಟನೆಕೊಟ್ಟಿದ್ದರು. ಆದರೆ ಮುಖ್ಯಮಂತ್ರಿಗಳು ಸ್ಪಷ್ಟನೆ ಕೊಟ್ಟು ಮೂರು ದಿನ ಕಳೆಯುವ ಮುನ್ನವೇ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರತಿಸಾರಿಯಂತೆ ಈ ಬಾರಿ ಇದು ಕೇವಲ ಚರ್ಚಾ ವಿಷಯವಾಗಿ ಉಳಿಯದೆ, ಅದಕ್ಕೆ ಪೂರಕವಾಗುವಂತಹ ರಾಜಕೀಯ ಚಟುವಟಿಕೆಗಳೂ ಆರಂಭಗೊಂಡಿವೆ. ಈ ನಡುವೆ ಸಿಎಂ ಆಗಿ ಜುಲೈ 26ರಂದೇ ಯಡಿಯೂರಪ್ಪ ಕೊನೆ ಭಾಷಣ ಮಾಡ್ತಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಹೀಗೆ ಬಿಜೆಪಿಯಲ್ಲಿ ನಡೀತಿರೋ ಚರ್ಚೆ ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿದೆ. ಯಾಕಂದ್ರೆ, ಹೈಕಮಾಂಡ್ ಹೇಳಿದ್ರೆ, ನಾನು ಸಿಎಂ ಸ್ಥಾನದಿಂದ ಕೆಳಗಿಳಿಯೋದಾಗಿ, ಈ ಹಿಂದೆ ಖುದ್ದು ಯಡಿಯೂರಪ್ಪರೇ ಹೇಳಿಕೆ ನೀಡಿದ್ದರು. ಹೀಗಿದ್ರೂ, ಈ ಪಾಟಿ ಚರ್ಚೆ ನಡೆಯುತಿರೋದ್ಯಾಕೆ ಅನ್ನೋ ಪ್ರಶ್ನೆ ಮೂಡದೇ ಇರಲ್ಲ. ಇದಕ್ಕೆ ಉತ್ತರ ಹುಡುಕ್ತಾ ಹೊರಟ್ರೆ ಸಿಗೋ ಉತ್ತರ ಹೈಕಮಾಂಡ್ ಜಾಣ ಹೆಜ್ಜೆ ಇಡ್ತಿದೆ ಅನ್ನೋದು. ವರ್ಷದಿಂದ ಬದಲಾವಣೆ ತಂತ್ರ ಹೆಣೆದಿರೋದು ಇಲ್ಲಿ ಸ್ಪಷ್ಟವಾಗ್ತಿದೆ..

ಏಕಾಏಕಿ ಸಿಎಂ ಬದಲಾವಣೆಗೆ ಕೈ ಹಾಕಿಲ್ಲ ಹೈಕಮಾಂಡ್
ಬಿಎಸ್​​ವೈ ಕೆಳಗಿಳಿಸುವ ತೀರ್ಮಾನದ ಹಿಂದೆ ವರ್ಷದ ಲೆಕ್ಕ
ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಏಕಾಏಕಿ ಹೈಕಮಾಂಡ್ ಕೈ ಹಾಕಿಲ್ಲ, ಬದಲಾಗಿ ಸುಮಾರು ಒಂದು ವರ್ಷದಿಂದ ಪ್ಲಾನ್​ ರೂಪಿಸಲಾಗ್ತಿದೆ. ಬಿಎಸ್​​ವೈ ಕೆಳಗಿಳಿಸುವ ತೀರ್ಮಾನದ ಹಿಂದೆ ವರ್ಷದ ಲೆಕ್ಕಾಚಾರ ಅಡಗಿದೆ. ಬದಲಾವಣೆ ಮಾಡಲೇಬೇಕಾದ್ರೆ ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ಎನ್ನೆಲ್ಲಾ ಮುನ್ನೆಚ್ಚರಿಕೆ ಅಗತ್ಯ ಅನ್ನೋದನ್ನ ಪಕ್ಕಾ ರೆಡಿ ಮಾಡ್ಕೊಂಡು ಹೈಕಮಾಂಡ್​ ಅಖಾಡಕ್ಕಿಳಿದಿದೆ.
ವರ್ಷದಿಂದ ‘ಬದಲಾವಣೆ’ ತಂತ್ರ..!

ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನ ಬದಲಾವಣೆ ಮಾಡೋದಾದ್ರೆ, ಅದ್ರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಅನ್ನೋ ನಿಟ್ಟಿನಲ್ಲಿ ಒಂದಷ್ಟು ಮುನ್ನೆಚ್ಚರಿಕಾ ಮಂತ್ರಗಳನ್ನ ಹೈಕಮಾಂಡ್​ ವರ್ಷದಿಂದ ಜಪಿಸ್ತಿದೆ. ಅದರ ಮೊದಲ ಭಾಗವಾಗಿ ನಳಿನ್ ಕುಮಾರ್​ ಕಟೀಲ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ​​​, ಅರುಣ್​​​ ಸಿಂಗ್​ರ ಮೂಲಕ ದಾಲ ಉರುಳಿಲಾಯ್ತು. ಈ ನಾಯಕರಿಂದಲೇ ಮುಂದಿನ 2 ವರ್ಷಗಳ ಕಾಳ ಯಡಿಯೂರಪ್ಪರೇ ಸಿಎಂ ಅಂತಾ ಹೇಳಿಸಲಾಯ್ತು.

ಬಿಜೆಪಿ ಒಳಾಂಗಣದಲ್ಲಿ ಬದಲಾವಣೆ ಪ್ರಕ್ರಿಯೆ ನಡೀತಿದೆ ಅನ್ನೋದಕ್ಕೆ ಸಂಬಂದಪಟ್ಟ ಹೇಳಿಕೆಗಳು ಹೊರಬೀಳದಂತೆ ಎಚ್ಚರಿಕೆ ನೀಡಲಾಗಿತ್ತು. ಇನ್ನೊಂದೆಡೆ ಬದಲಾವಣೆ ಆಗಲೇಬೇಕು ಅಂತಾ ಸಿಎಂ ವಿರೋಧಿ ಬಣ ಒತ್ತಡ ಹೇರಿದಾಗಲೂ ಸೂಕ್ಷ್ಮ ಅವಲೋಕನ ನಡೆದಿತ್ತು. ಈ ಹಿಂದೆ ಅರುಣ್​​ ಸಿಂಗ್​​​ ರಾಜ್ಯಕ್ಕೆ ಬಂದಿದ್ದು, ಹೈಕಮಾಂಡ್​ ತಂತ್ರ ಅಂತಲೇ ಹೇಳಲಾಗ್ತಿದೆ. ರಾಜ್ಯಕ್ಕೆ ಭೇಟಿ ಕೊಟ್ಟು ಕೆಲವರ ಅಭಿಪ್ರಾಯಕ್ಕೆ ಕಿವಿಯಾಗಿದ್ದೇವೆ ಅಂತಷ್ಟೇ ಅರುಣ್​​ ಸಿಂಗ್​​​ ಹೇಳಿದ್ದರು. ಹೀಗೆ ರಾಜ್ಯ ಬಿಜೆಪಿ ಉಸ್ತುವಾರಿ ಮೂಲಕ ಎಲ್ಲಕ್ಕೂ ತೆರೆ ಎಳೆಯಲಾಗಿದೆ ಎಂಬ ಸಂದೇಶವನ್ನ ಹೈಕಮಾಂಡ್ ರವಾನಿಸಿಬಿಟ್ಟಿತ್ತು. ಅಷ್ಟೇ ಅಲ್ಲದೇ ಬದಲಾವಣೆ ನಿಶ್ಚಿತವಾದ್ರೆ, ಮುಂದಿನ ಸಿಎಂ ಯಾರು ಎಂಬ ರಹಸ್ಯವೂ ಸೋರಿಕೆ ಆಗದಂತೆ ಎಚ್ಚರಿಕೆಯನ್ನ ಹೈಕಮಾಂಡ್​ ವಹಿಸಿತ್ತು ಎನ್ನಲಾಗಿದೆ.

ಇದೆಲ್ಲಾ ಲೆಕ್ಕಾಚಾರ ಒಂದನ್ನಂತೂ ಸ್ಪಷ್ಟವಾಗಿ ಹೇಳ್ತಿದೆ. ನಾಯಕತ್ವ ಬದಲಾವಣೆ ನಿನ್ನೆ ಮೊನ್ನೆ ಶುರುವಾದ ಪ್ರಕ್ರಿಯೆ ಅಲ್ಲ, ಅದು ಸುದೀರ್ಘ ಲೆಕ್ಕಾಚಾರ, ಅಳೆದು ತೂಗಿ ತೆಗೆದುಕೊಂಡ ತೀರ್ಮಾನ.. ಒಂದು ವರ್ಷದಿಂದ ನಡೀತಿದ್ದ ಪ್ರಿಪರೇಷನ್​​​. ಹೀಗೆ ಯಾವುದೇ ಸುಳಿವು ಸಿಗದಂತೆ ಮುಂಜಾಗೃತೆ ವಹಿಸಲಾಗಿತ್ತು. ಆದ್ರೀಗ ಸಿಎಂ ಬದಲಾವಣೆಯ ಬಿರುಗಾಳಿ ರಾಜ್ಯ ಬಿಜೆಪಿ ಪಾಳಯದಲ್ಲಿ ಎದ್ದಿದೆ. ಈಗಲೂ ಮುಖ್ಯಮಂತ್ರಿಗಳ ಬದಲಾವಣೆ ಅಷ್ಟು ಸುಲಭದ ಮಾತಲ್ಲ. ಇದನ್ನ ಹೈಕಮಾಂಡ್​ ಹೇಗೆ ನಿಭಾಯಿಸುತ್ತೆ ಅನ್ನೋದೇ ಮುಂದಿರೋ ಪ್ರಶ್ನೆ.

ವಿಶೇಷ ಬರಹ; ವೀರೇಂದ್ರ ಉಪ್ಪುಂದ, ನ್ಯೂಸ್​ ಫಸ್ಟ್, ಬೆಂಗಳೂರು

The post BSY ಕೆಳಗಿಳಿಸುವ ತೀರ್ಮಾನದ ಹಿಂದೆ ಬಿಜೆಪಿ ಹೈಕಮಾಂಡ್​​​ನ ವರ್ಷದ ತಂತ್ರ -ಏನಿದರ ಸೀಕ್ರೆಟ್​? appeared first on News First Kannada.

Source: newsfirstlive.com

Source link