ಮೂರು ತಿಂಗಳಿಂದ ಬಸ್ ಸಮಸ್ಯೆ -ಪ್ರತಿಭಟನಾರ್ಥ ಪಾದಯಾತ್ರೆ ಹೊರಟ ವಿದ್ಯಾರ್ಥಿಗಳು
ರಾಯಚೂರು: ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಪಾದಯಾತ್ರೆ ಮೂಲಕ ಕಾಲೇಜಿಗೆ ಹೊರಟಿದ್ದಾರೆ. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಹರವಿ ಗ್ರಾಮದ ವಿದ್ಯಾರ್ಥಿಗಳಿಂದ ಈ ಪ್ರತಿಭಟನಾರ್ಥ ಪಾದಯಾತ್ರೆ ನಡೆಸಿದ್ದಾರೆ. ಕಾಲೇಜ್ ಸಮಯಕ್ಕೆ ಸಮರ್ಪಕ ಬಸ್ ಬಾರದ ಹಿನ್ನೆಲೆ ವಿದ್ಯಾರ್ಥಿಗಳು ಮಾನ್ವಿ ಪಟ್ಟಣಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಕಳೆದ ಮೂರು ತಿಂಗಳಿಂದ ವಿದ್ಯಾರ್ಥಿಗಳಿಗೆ ಇದೇ ಬಸ್ ಸಮಸ್ಯೆಯಿದೆ.
ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರೂ ಅಧಿಕಾರಿಗಳು ಕ್ಯಾರೇ ಅಂದಿಲ್ಲ. ಇಂದು ಬಸ್ ಬಾರದ ಹಿನ್ನೆಲೆಯಲ್ಲಿ ಹರವಿ ಇಂದ ಮಾನ್ವಿ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ. ವಿದ್ಯಾರ್ಥಿಗಳು ಮಾನ್ವಿ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
(bus inconvenience manvi college student walk up to college as protest)