Cancer Symptoms: 10 Causes Of Cancer you Should Be Strictly Avoided Health Tips | Cancer: ಪ್ರಾಣವನ್ನೇ ತೆಗೆಯುವ ಕ್ಯಾನ್ಸರ್​​ನಿಂದ ಪಾರಾಗಲು ಈ 10 ವಿಷಯಗಳನ್ನು ನೆನಪಿನಲ್ಲಿಡಿ


ಮಾರಣಾಂತಿಕ ರೋಗವಾಗಿರುವ ಕ್ಯಾನ್ಸರ್​ ಹೇಗೆ ಬರುತ್ತದೆ ಎಂದು ನಿಖರವಾಗಿ ಹೇಳಲು ಕಷ್ಟ. ಆದರೆ, ನಮ್ಮ ಜೀವನಶೈಲಿಗೂ ಕ್ಯಾನ್ಸರ್​ಗೂ ಸಂಬಂಧ ಇರುವುದಂತೂ ಹೌದು.

Cancer: ಪ್ರಾಣವನ್ನೇ ತೆಗೆಯುವ ಕ್ಯಾನ್ಸರ್​​ನಿಂದ ಪಾರಾಗಲು ಈ 10 ವಿಷಯಗಳನ್ನು ನೆನಪಿನಲ್ಲಿಡಿ

ಕ್ಯಾನ್ಸರ್

ನವದೆಹಲಿ: ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು (Cancer Cases) ತೀವ್ರಗತಿಯಲ್ಲಿ ಹೆಚ್ಚುತ್ತಿವೆ. ಸದ್ಯಕ್ಕೆ 200ಕ್ಕೂ ಹೆಚ್ಚು ವಿಧದ ಕ್ಯಾನ್ಸರ್​ಗಳಿವೆ. ಸ್ತನ, ಶ್ವಾಸಕೋಶ, ತಲೆ, ಕುತ್ತಿಗೆ, ಗರ್ಭಕೋಶ, ಅಂಡಾಶಯ, ಪ್ರಾಸ್ಟೇಟ್, ಕೊಲೊನ್, ಗುದನಾಳ, ಅನ್ನನಾಳ, ಹೊಟ್ಟೆ, ವೃಷಣ, ಮೂತ್ರಪಿಂಡ, ಪಿತ್ತಜನಕಾಂಗದ ಇವುಗಳೆಲ್ಲ ಕ್ಯಾನ್ಸರ್‌ಗಳ ಕೆಲವು ಸಾಮಾನ್ಯ ವಿಧಗಳಾಗಿವೆ. ಕ್ಯಾನ್ಸರ್‌ ರೋಗಕ್ಕೆ ಕಾರಣಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಅವುಗಳನ್ನು ತಡೆಯುವುದು ಇಂದಿನ ಅಗತ್ಯವಾಗಿದೆ.

ಒಬ್ಬರ ದೇಹದಲ್ಲಿನ ಸಾಮಾನ್ಯ ಜೀವಕೋಶಗಳು ಅಸಹಜವಾಗಿ ವರ್ತಿಸಿದಾಗ ಕ್ಯಾನ್ಸರ್ ಸಂಭವಿಸುತ್ತದೆ. ಕ್ಯಾನ್ಸರ್ ಪ್ರಪಂಚದಾದ್ಯಂತ ಹೆಚ್ಚಿನ ರೋಗ ಮತ್ತು ಮರಣ ಪ್ರಮಾಣವನ್ನು ಉಂಟುಮಾಡುತ್ತಿದೆ. ಮಾರಣಾಂತಿಕ ರೋಗವಾಗಿರುವ ಕ್ಯಾನ್ಸರ್​ ಹೇಗೆ ಬರುತ್ತದೆ ಎಂದು ನಿಖರವಾಗಿ ಹೇಳಲು ಕಷ್ಟ. ಆದರೆ, ನಮ್ಮ ಜೀವನಶೈಲಿಗೂ ಕ್ಯಾನ್ಸರ್​ಗೂ ಸಂಬಂಧ ಇರುವುದಂತೂ ಹೌದು. ಕ್ಯಾನ್ಸರ್ ಬಗ್ಗೆ ಇನ್ನೂ ಅರಿವಿನ ಕೊರತೆ ಇದೆ. ಅನೇಕ ಜನರಿಗೆ ತಮಗೆ ಕ್ಯಾನ್ಸರ್​ ಇದೆ ಎಂದು ಗೊತ್ತಾಗುವುದರೊಳಗೆ ಬಹಳ ತಡವಾಗಿರುತ್ತದೆ. ಕಾರಣಗಳ ಬಗ್ಗೆ ತಿಳಿದಿಲ್ಲ ಮತ್ತು ಮೌನವಾಗಿ ಬಳಲುತ್ತಿದ್ದಾರೆ. ಕ್ಯಾನ್ಸರ್ ಗೆ ಕಾರಣವಾಗುವ ಕೆಲವು ಅಪಾಯಕಾರಿ ಅಂಶಗಳು ಹೀಗಿವೆ…

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *