Car- Deer Accident: ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಜಿಂಕೆ, ಮುಂದೇನಾಯ್ತು? | Moving car collides with deer at siddapur in uttara kannada deer died on the spot


Car- Deer Accident: ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಜಿಂಕೆ, ಮುಂದೇನಾಯ್ತು?

ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಜಿಂಕೆ, ಮುಂದೇನಾಯ್ತು?

ಕಾರವಾರ: ವೇಗವಾಗಿ ಚಲಿಸುತ್ತಿದ್ದ ಕಾರಿಗೆ ಜಿಂಕೆ ಅಚಾನಕ್ಕಾಗಿ ಡಿಕ್ಕಿ ಹೊಡೆದಿದ್ದು, ಅದು ಸ್ಥಳದಲ್ಲೇ ಅಸುನೀಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ರಾಜ್ಯ ಹೆದ್ದಾರಿ-93ರ ಕಲ್ಕುಣಿ ಕ್ರಾಸ್ ಬಳಿ ಈ ಆಕಸ್ಮಿಕ ಘಟನೆ ನಡೆದಿದೆ. ಅಂದಾಜು 10 ವರ್ಷ ಪ್ರಾಯದ ಗಂಡು ಜಿಂಕೆ ಅಪಘಾತದಲ್ಲಿ ಕೊನೆಯುಸಿರೆಳೆದಿದೆ. ಟಾಟಾ ಕಂಪನಿಯ ಕಾರು ಕಲ್ಕುಣಿ ಕ್ರಾಸ್ ಬಳಿ ಚಲಿಸುತ್ತಿದ್ದಾಗ ಜಿಂಕೆ ಏಕಾಏಕಿ ರಸ್ತೆಯಲ್ಲಿ ಅಡ್ಡಬಂದಿದೆ. ಕಾರಿಗೆ ಡಿಕ್ಕಿ ಹೊಡೆದು, ಜಿಂಕೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಹೆಚ್ಚು ಡ್ಯಾಮೇಜ್ ಆಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಸುನೀಗಿದ ಜಿಂಕೆಯನ್ನು ಶವಪರೀಕ್ಷೆಗಾಗಿ ಅರಣ್ಯ ಸಿಬ್ಬಂದಿ ಸಿದ್ಧಾಪುರದ ಅರಣ್ಯಾಧಿಕಾರಿ ಕಚೇರಿಗೆ ಕೊಂಡೊಯ್ದಿದ್ದಾರೆ.

ಹಸು ಮೇಯಿಸುವಾಗ ಮಹಿಳೆ ಮೇಲೆ ಆನೆ ದಾಳಿ:
ಮೈಸೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ಮುಂದುವರಿದಿದ್ದು, ಹಾಡಿ ಮಹಿಳೆಯ ಮೇಲೆ ಆನೆಯೊಂದು ದಾಳಿ‌ ಮಾಡಿದೆ. ಕಾಡಿನಿಂದ ನಾಡಿಗೆ ಬಂದಿರುವ ಆನೆಗಳು ದಿಕ್ಕಾಪಾಲಾಗಿ ಗ್ರಾಮದಲ್ಲಿ ಓಡಾಡುತ್ತಿವೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಅದ್ವಾಳ ಗ್ರಾಮದ ಕೆರೆ ಬಳಿ ಹಸು ಮೇಯಿಸುತ್ತಿದ್ದಾಗ ಮಹಿಳೆಯ ಮೇಲೆ ಆನೆ ದಾಳಿ ಮಾಡಿ, ಗಾಯಗೊಳಿಸಿದೆ. ಹರಳಳ್ಳಿ ಗ್ರಾಮದ 55 ವರ್ಷ ಮಹಿಳೆ ಪುಟ್ಟಲಕ್ಷ್ಮಮ್ಮ ಗಯಗೊಂಡವರು. ಈ ಮಧ್ಯೆ, ಆನೆಯನ್ನು ಕಾಡಿಗೆ ವಾಪಸ್ಸು ಕಳುಹಿಸಲು ಅರಣ್ಯ‌ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

TV9 Kannada


Leave a Reply

Your email address will not be published.