ಕೋವಿಡ್ ಮಹಾಮಾರಿಗೆ ನಿರ್ದೇಶಕ ತಮೀರ ಸಾವು

ಚೆನ್ನೈ: ಮಹಾಮಾರಿ ಕೋವಿಡ್ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ತಮಿಳು ಚಿತ್ರರಂಗದ ಹಿರಿಯ ಸಿನಿಮಾ ನಿರ್ದೇಶಕ ತಮೀರ ಸಾವನ್ನಪ್ಪಿದ್ದಾರೆ. ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿನಿಂದ ನರಳುತ್ತಿದ್ದ ತಮೀರ ಅವರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಸೋಮವಾರ ಕೊನೆಯುಸಿರೆಳೆದಿದ್ದಾರೆ. ಫೇಮಸ್ ನಿರ್ದೇಶಕರುಗಳಾದ ಕೆ. ಬಾಲಚಂದೆರ್ ಹಾಗೂ ಭಾರತೀಯರಾಜಾ ಅವರ ಬಳಿ ಸಹಾಯಕ ನಿರ್ದೇಶಕರಾಗಿ ತಮೀರ ಕೆಲಸ ಮಾಡಿದ್ದರು. ತಮಿಳಿನ ‘ರೆಟ್ಟೈಸುಜಿ’ ಸಿನಿಮಾ ಮೂಲಕ ಫುಲ್ ಪ್ಲೆಡ್ಜ್ ನಿರ್ದೇಶಕರಾಗಿ …

ಸಣ್ಣ ವ್ಯಾಪಾರದಿಂದ ಬಿಗ್‌ ಬಜೆಟ್‌ ಸಿನಿಮಾ ನಿರ್ಮಾಪಕನಾದ ಕೆ.ರಾಮು

ಕನ್ನಡ ಚಿತ್ರರಂಗದ “ಕೋಟಿ ನಿರ್ಮಾಪಕ’ ಖ್ಯಾತಿಯ, ಹಿರಿಯ ನಿರ್ಮಾಪಕ, ನಟಿ ಮಾಲಾಶ್ರೀ ಪತಿ ಕೆ. ರಾಮು (54) ಸೋಮವಾರ ಕೊರೋನಾ ಸೋಂಕಿನಿಂದ ನಿಧನರಾದರು. ಒಂದು ವಾರದ ಹಿಂದೆ ರಾಮು ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಅದಾದ ಬಳಿಕ ಹೋಂ ಕ್ವಾರೆಂಟೈನ್‌ನಲ್ಲಿದ್ದ ರಾಮು ಅವರ ಉಸಿರಾಟದಲ್ಲಿ ಏರು ಪೇರು ಉಂಟಾದ ಹಿನ್ನೆಲೆಯಲ್ಲಿ ಶನಿವಾರವಷ್ಟೇ, ನಗರದ ಎಂ.ಎಸ್‌ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದಾರೂ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 8 ಗಂಟೆಯ ಹೊತ್ತಿಗೆ ರಾಮು …

ಬಾಲಿವುಡ್ ನ ಮತ್ತೊಂದು ಸಿನಿಮಾದಲ್ಲಿ ನಟಿಸ್ತಾರಂತೆ ರಶ್ಮಿಕಾ ಮಂದಣ್ಣ..!

ಬೆಂಗಳೂರು : ಕರ್ನಾಟಕ ಬ್ಯೂಟಿ ರಶ್ಮಿಕಾ ಮಂದಣ್ಣ ಕೈನಲ್ಲಿ ಸಾಕಷ್ಟು ಚಿತ್ರಗಳಿವೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಕೊಡಗಿನ ಕುವರಿ ದಕ್ಷಿಣ ಭಾರತದ ಸಿನಿಮಾಗಳ ಜೊತೆಗೆ ಬಾಲಿವುಡ್ ನಲ್ಲಿಯೂ ಮಿಂಚುತ್ತಿದ್ದಾರೆ. ಈ ಹಿಂದೆ ಎರಡು ಸಿನಿಮಾಕ್ಕೆ ಸಹಿ ಹಾಕಿರುವ ಕಿರಿಕ್ ಪಾರ್ಟಿ ಬೆಡಗಿ ಇದೀಗ ಬಿ-ಟೌನ್ ನ ಮೂರನೇ ಸಿನಿಮಾದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ. ಮಿಷನ್ ಮಜ್ನು ಚಿತ್ರದ ಮೂಲಕ ಬಾಲಿವುಡ್  ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಂಡ ಇವರು, ನಟ ಸಿದ್ಧಾರ್ಥ್ ಮಲ್ಹೋತ್ರಾಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಬಾಲಿವುಡ್ ಬಿಗ್ …

ಕೋವಿಡ್ ಸೋಂಕಿಗೆ ಕನ್ನಡದ ಖ್ಯಾತ ಚಿತ್ರ ನಿರ್ಮಾಪಕ ರಾಮು ಬಲಿ

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ನಟಿ ಮಾಲಾಶ್ರೀ ಅವರ ಪತಿ ರಾಮು ಅವರು ಕೋವಿಡ್ ಸೋಂಕಿಗೆ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದ ಹಿಂದೆ ಕೋವಿಡ್ ಸೋಂಕು ದೃಢ ಪಟ್ಟಿತ್ತು, ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ದುರದೃಷ್ಟವಶಾತ್ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಿರ್ಮಾಪಕ ರಾಮು ಅವರು ಗೂಳಿ, ಕಲಾಸಿಪಾಳ್ಯ, ಲಾಕಪ್ ಡೆತ್, ಕಲಾಸಿಪಾಳ್ಯ, ರಜನಿ, ಚಾಮುಂಡಿ, ನಂಜುಂಡಿ, ದುರ್ಗಿ, ಸರ್ಕಲ್ ಇನ್ಸ್ ಪೆಕ್ಟರ್, ಲೇಡಿ ಪೋಲೀಸ್, ಲೇಡಿ ಕಮಿಷನರ್, ಕಿಚ್ಚ, ಕಿರಣ್ …

ನಟಿ ಪೂಜಾ ಹೆಗ್ಡೆಗೆ ಕೋವಿಡ್ ಪಾಸಿಟಿವ್ ದೃಢ  

ಹೈದರಾಬಾದ್ : ದೇಶದ ಜನರನ್ನು ಪೆಡಂಭೂತದಂತೆ ಕಾಡುತ್ತಿರುವ ಮಹಾಮಾರಿ ಕೋವಿಡ್ ಚಿತ್ರರಂಗದ ತಾರೆಯರನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ. ಚಿತ್ರರಂಗದ ಹಲವು ತಾರೆಯರಲ್ಲಿ ಈಗಾಗಲೇ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಕೆಲವರು ಚಿಕಿತ್ಸೆ ಪಡೆದುಕೊಂಡು ಸಂಪೂರ್ಣ ಗುಣಮುಖರಾಗಿದ್ದರೆ, ಮತ್ತೆ ಕೆಲವರೂ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ನಟಿ ಪೂಜಾ ಹೆಗ್ಡೆ ಅವರಿಗೂ ಕೋವಿಡ್ ಪಾಸಿಟಿವ್ ದೃಢವಾಗಿದೆ. ಭಾನುವಾರ ತನಗೆ ಕೋವಿಡ್ ಪಾಸಿಟಿವ್ ಬಂದಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿರುವ ಪೂಜಾ, ಎಲ್ಲರಿಗೂ ನಮಸ್ಕಾರ. ನನಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಎಲ್ಲಾ …

ಸುದೀಪ್‌ ಆರೋಗ್ಯದ ಬಗ್ಗೆ ಜಪಾನ್ ಅಭಿಮಾನಿ ಕಾಳಜಿ

ನಟ ಕಿಚ್ಚ ಸುದೀಪ್‌ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರ ಸಲಹೆಯಂತೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಈ ವಾರಾಂತ್ಯದ ಕಿರುತೆರೆ ಕಾರ್ಯಕ್ರಮದಲ್ಲೂ ಸುದೀಪ್‌ ಕಾಣಿಸಿಕೊಂಡಿಲ್ಲ. ಮತ್ತೂಂದೆಡೆ ಅನಾರೋಗ್ಯದಿಂದ ಬೇಗ ಗುಣಮುಖರಾಗಲಿ ಎಂದು ಸುದೀಪ್‌ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇನ್ನು ಕನ್ನಡಿಗ ಅಭಿಮಾನಿಗಳು ಮಾತ್ರವಲ್ಲದೆ, ಬೇರೆ ದೇಶಗಳಲ್ಲಿರುವ ಸುದೀಪ್‌ ಅಭಿಮಾನಿಗಳು ಕೂಡ ಕಿಚ್ಚನ ಆರೋಗ್ಯ ಸುಧಾರಿಸಲಿ ಎಂದು ಹಾರೈಸುತ್ತಿದ್ದಾರೆ. ಇದನ್ನೂ ಓದಿ:ಶಿವರಾಜ್ ಕುಮಾರ್ ಚಿತ್ರ ದಲ್ಲಿ ಗಾಯಕಿ ಮಂಗ್ಲಿ ನಟನೆ ಇದೇ ವೇಳೆ, ಜಪಾನ್‌ ನಲ್ಲಿರುವ ಸುದೀಪ್‌ ಅವರ ಮಹಿಳಾ …

2021ನೇ ಸಾಲಿನ ಆಸ್ಕರ್ ಪ್ರಶಸ್ತಿ ಘೋಷಣೆ: ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ನಟಿ ಯಾರು?

ವಾಷಿಂಗ್ಟನ್: ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಭಾನುವಾರ(ಏಪ್ರಿಲ್ 25) ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿ ಘೋಷಣೆಯಾಗಿದೆ. ಈ ಬಾರಿಯೂ ಯಾವುದೇ ಅಧಿಕೃತ ಸಮಾರಂಭ ನಡೆಯದೇ, ವರ್ಚುವಲ್ ಆಗಿ ಪ್ರಶಸ್ತಿ ವಿಜೇತ ನಟ, ನಟಿ ಹಾಗೂ ಚಿತ್ರಗಳನ್ನು ಘೋಷಿಸಲಾಗಿದೆ. ಚೀನಾದ ಕ್ಲೋಯ್ ಜಾವ್ ನಿರ್ದೇಶನದ “ನೋಮಡ್ ಲ್ಯಾಂಡ್” ಅತ್ಯುತ್ತಮ ಚಿತ್ರವಾಗಿ ಮೂಡಿಬಂದಿದೆ. ಬ್ರಿಟನ್ ನಟ ಆಂಥೋನಿ ಹಾಪ್ಕಿನ್ಸ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೋಮಡ್ ಲ್ಯಾಂಡ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಫ್ರಾನ್ಸಿಸ್ ಮೆಕ್ ಡೋರ್ಮಾಂಡ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. …

ಲಾಕ್‌ಡೌನ್‌ ಎಫೆಕ್ಟ್: ಕೃಷಿ ಕೆಲಸದಲ್ಲಿ ಉಪೇಂದ್ರ ಬಿಝಿ

ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್‌ ವೇಳೆ ನಟ ರಿಯಲ್‌ಸ್ಟಾರ್‌ ಉಪೇಂದ್ರ ತಮ್ಮ ಕೃಷಿ ಭೂಮಿಯಲ್ಲಿ ಹೊಸ ತಂತ್ರಜ್ಞಾನವನ್ನು ಬೆಳಸಿಕೊಂಡು, ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು ನಿಮಗೆ ಗೊತ್ತಿರಬಹುದು. ಈ ವೇಳೆ ಉಪೇಂದ್ರ ಕೃಷಿಯಲ್ಲಿ ಒಂದಷ್ಟು ಪ್ರಯೋಗಗಳನ್ನು ಮಾಡಿ, ಸಾಕಷ್ಟು ಬೆಳೆಗಳನ್ನು ಬೆಳೆಯುವ ಮೂಲಕ ಒಂದಷ್ಟು ಅಭಿಮಾನಿಗಳಿಗೆ ಮಾದರಿಯಾಗಿದ್ದರು. ಇನ್ನು ಈ ವರ್ಷ ಕೂಡ ಕೊರೋನಾ ಎರಡನೇ ಅಲೆಯ ಆತಂಕ ಜೋರಾಗುತ್ತಿದ್ದು, ಸರ್ಕಾರ ಈಗಾಗಲೇ ವಾರದಲ್ಲಿ ಐದು ದಿನ ನೈಟ್‌ ಕರ್ಫ್ಯೂ ಮತ್ತು ವಾರಾಂತ್ಯದಲ್ಲಿ ಲಾಕ್‌ಡೌನ್‌ ಘೋಷಿಸಿದೆ. ಹೀಗಾಗಿ ಬಹುತೇಕ …

ನಿತ್ಯ 5000 ಜನರಿಗೆ ಊಟ : ವಲಸೆ ಕಾರ್ಮಿಕರ ಹಸಿವು ನೀಗಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್

ಮುಂಬೈ : ಕೋವಿಡ್ ಎರಡನೇ ಅಲೆಗೆ ನಲುಗುತ್ತಿರುವ ಕಾರ್ಮಿಕ ವರ್ಗಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಆಪತ್ಭಾಂದವ ಆಗಿದ್ದಾರೆ. ಸ್ವತಃ ರಸ್ತೆಗೆ ಇಳಿದು ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿದ್ದಾರೆ. ಹಸಿದ ಹೊಟ್ಟೆಗಳಿಗೆ ಅನ್ನ ನೀಡುತ್ತಿದ್ದಾರೆ. ಹೌದು, ಭಾರತದಲ್ಲಿ ಮತ್ತೊಂದು ಬಾರಿ ಕೋವಿಡ್ ಅಟ್ಟಹಾಸ ಮೆರೆಯುತ್ತಿದೆ. ಅದರಲ್ಲೂ ವಾಣಿಜ್ಯ ನಗರಿ ಮುಂಬೈನಲ್ಲಿ ಮಹಾಮಾರಿ ಸೋಂಕು ರಣಕೇಕೆ ಹಾಕುತ್ತಿದೆ. ಸುಂಟರಗಾಳಿಯಂತೆ ಅಪ್ಪಳಿಸಿರುವ ಕೋವಿಡ್ ಸೋಂಕಿಗೆ ದೇಶದ ಜನಕ್ಕೆ ಅಕ್ಷರಶಃ ದಿಕ್ಕು ತೋಚದಂತಾಗಿದೆ. ಅದರಲ್ಲೂ ವಲಸೆ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಈಗಾಗಲೇ ಘೋಷಣೆಯಾಗಿರುವ …

ಶಿವರಾಜ್ ಕುಮಾರ್ ಚಿತ್ರ ದಲ್ಲಿ ಗಾಯಕಿ ಮಂಗ್ಲಿ ನಟನೆ

ದರ್ಶನ್‌ ಅವರ “ರಾಬರ್ಟ್‌’ ಚಿತ್ರದ ತೆಲುಗು ಅವತರಣಿಕೆ “ಕಣ್ಣೇ ಅದಿರಿಂದಿ…’ ಹಾಡಿನ ಮೂಲಕ ಏಕಾಏಕಿ ಜನಪ್ರಿಯತೆ ಪಡೆದು ಕೊಂಡ ಗಾಯಕಿ ಮಂಗ್ಲಿ ಈಗ ನಟನೆಯ ಮೂಲಕ ಕನ್ನಡ ಚಿತ್ರ ರಂಗಕ್ಕೆ ಕಾಲಿಡುತ್ತಿದ್ದಾರೆ. ಅದು ಶಿವರಾಜ್‌ ಕುಮಾರ್‌ ನಟನೆಯ ಸಿನಿಮಾ ಮೂಲಕ. ಹೌದು, ಶಿವರಾಜ್‌ ಕುಮಾರ್‌ ನಟನೆಯ 124ನೇ ಸಿನಿಮಾದಲ್ಲಿ ಗಾಯಕಿ ಮಂಗ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರ ರಂಗಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗಷ್ಟೇ ಕನ್ನಡ ಚಿತ್ರವೊಂದಕ್ಕೆ ಹಾಡಿದ್ದ ಮಂಗ್ಲಿ, ಉಪ ಚುನಾವಣಾ ಪ್ರಚಾರಕ್ಕಾಗಿ ಮಸ್ಕಿಗೆ ಬಂದಿದ್ದರು. …