Categories
Cinema

ಯುಗಾದಿ ಹಬ್ಬಕ್ಕೆ ಬಂತು ಶ್ರೀಮುರಳಿ-ಆಶಿಕಾ ಜೋಡಿಯ ‘ಲವ್‌ಸಮ್’ ಟೀಸರ್ 

"ಮದಗಜ" ಚಿತ್ರತಂಡ ಯುಗಾದಿ ಹಬ್ಬದಂದು ಚಿತ್ರದ  ‘ಲವ್‌ಸಮ್’ ಟೀಸರ್ ಬಿಡುಗಡೆ ಮಾಡಿದೆ. ಇದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಆನಂದ್ ಆಡಿಯೋ  ಮೂಲಕ ಹೊರಬಂದಿದೆ.

“ನಮ್ಮ ಕೊನೆಯ ಎರಡು ಟೀಸರ್ ಗಳಲ್ಲಿ, ನಾಯಕ ಶ್ರೀಮುರಳಿ ಮತ್ತು ನಟ ಜಗಪತಿ ಬಾಬು ಅವರ ಲುಕ್ ಅನ್ನು ನೀಡಿದ್ದೇವೆ. ಈ ಟೀಸರ್ ಆಶಿಕಾ ರಂಗನಾಥ್ ನಿರ್ವಹಿಸಿದ ನಾಯಕಿಯ ಪಾತ್ರವನ್ನು ಪರಿಚಯಿಸುತ್ತದೆ ಮತ್ತು ಅಅರು ನಾಯಕ ಜೋಡಿಯಾಗಿ ಹೇಗೆ ಕಾಣುತ್ತಾರೆ ಎನ್ನುವುದನ್ನು ಹೇಳಲಿದೆ." ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ.

ಚಿತ್ರದ ಮೊದಲ ಕೆಲವು ಸ್ಟಿಲ್‌ಗಳನ್ನು ನಿರ್ದೇಶಕರು ಹಂಚಿಕೊಂಡಿದ್ದು, ಇದರಲ್ಲಿ ಆಶಿಕಾ ರಂಗನಾಥ್ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಶ್ರೀಮುರಳಿ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುತ್ತಿರುವುದು ಇದೇ ಮೊದಲು, ಮತ್ತು ಇಬ್ಬರೂ ತಮ್ಮ ಹೊಸ ಅವತಾರಗಳಲ್ಲಿ ನೆಟಿಜನ್‌ಗಳನ್ನು ಮೆಚ್ಚಿಸಲು ಹೊರಟಿದ್ದಾರೆ. ಏತನ್ಮಧ್ಯೆ, ಫಿಲ್ಮ್ ಸೆಟ್ ಗಳಲ್ಲಿ ಕಾಲಿಗೆ ಗಾಯವಾದ ಶ್ರೀಮುರಳಿ ಅವರಿಗೆ ಈಗ 15 ದಿನಗಳ ಬೆಡ್ ರೆಸ್ಟ್ ಸೂಚಿಸಲಾಗಿದೆ, ಮತ್ತು ಚಿತ್ರ ನಿರ್ಮಾಪಲರು ಅವರ ಶೂಟಿಂಗ್ ದಿನಾಂಕಗಳನ್ನು ಮರು ನಿಗದಿಪಡಿಸಿದ್ದಾರೆ. ಉಮಾಪತಿ ಫಿಲ್ಮ್ಸ್ ನಿರ್ಮಿಸಿದ ಈ ಯೋಜನೆಯು ಕೊನೆಯ ಹಂತದ ಚಿತ್ರೀಕರಣದಲ್ಲಿದೆ.

ಕನ್ನಡದಲ್ಲಿ ತಯಾರಾದ ಫ್ಯಾಮಿಲಿ ಮಾಸ್ ಎಂಟರ್‌ಟೈನರ್ ಪ್ಯಾನ್-ಇಂಡಿಯಾ ರಿಲೀಸ್ ಗೆ ಸಜ್ಜಾಗಿದ್ದು ಏಕಕಾಲದಲ್ಲಿ ಇದನ್ನು ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆ ಮಾಡಲಾಗುವುದು. ತಂಡವು ಆಗಸ್ಟ್  ತಿಂಗಳಲ್ಲಿ ಚಿತ್ರದ ರಿಲೀಸ್ ಗೆ ಸಿದ್ದವಾಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದಂದು ಸಿನಿ ಮಂದಿರಕ್ಕೆ "ಮದಗಜ" ಲಗ್ಗೆ ಇಡುವುದು ಪಕ್ಕಾ ಎನ್ನಲಾಗಿದೆ. ಆದಾಗ್ಯೂ, ನಿರ್ಮಾಣ ಸಂಸ್ಥೆ ಇದರ ಬಗ್ಗೆ ಯಾವ ಅಧಿಕೃತ ಮಾಹಿತಿ ನೀಡಿಲ್ಲ. ದೊಡ್ಡ ಪಾತ್ರವರ್ಗವನ್ನು ಒಳಗೊಂಡಿರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದರೆ ಡಿಒಪಿ ನವೀನ್ ಕುಮಾರ್ ಕ್ಯಾಮೆರಾ ಕೆಲಸ ನಿರ್ವಹಿಸಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ಡಾ.ರಾಜ್ ಕುಮಾರ್ ಅಗಲಿ ಇಂದಿಗೆ 15 ವರ್ಷ: ಮುಖ್ಯಮಂತ್ರಿ ಸೇರಿದಂತೆ ಗಣ್ಯರು, ಕಲಾವಿದರು, ಅಭಿಮಾನಿಗಳು, ಕುಟುಂಬ ವರ್ಗ ಸ್ಮರಣೆ 

ಬೆಂಗಳೂರು: ಕನ್ನಡ ಚಿತ್ರರಂಗದ ಮೇರುನಟ, ಅನಭಿಷಿಕ್ತ ನಟಸಾರ್ವಭೌಮ ಡಾ ರಾಜ್ ಕುಮಾರ್ ಅಗಲಿ ಇಂದಿಗೆ 15 ವರ್ಷ.  ಭಾರತೀಯ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ಡಾ ರಾಜ್ ಕುಮಾರ್ 5 ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮೆರೆದವರು.

ಇಂದಿಗೂ ಅವರನ್ನು ನೆನೆಸಿಕೊಳ್ಳದವರು ಬಹುಶಃ ಕರ್ನಾಟಕದಲ್ಲಿ ಯಾರೂ ಇರಲಿಕ್ಕಿಲ್ಲ. ಅಭಿಮಾನಿಗಳ ಹೃದಯದಲ್ಲಿ ಅವರು ಅಜರಾಮರಾಗಿದ್ದಾರೆ. ಅವರ ಅಚ್ಚಳಿಯದ ಚಿತ್ರಗಳು, ನಟನೆ, ಅದ್ಬುತ ಕಂಠಕ್ಕೆ ಮನಸೋಲದವರಿಲ್ಲ. 2006ರ ಏಪ್ರಿಲ್ 12ರಂದು ಡಾ ರಾಜ್ ಕುಮಾರ್ ಭೌತಿಕವಾಗಿ ಅಗಲಿಹೋದರು. ಆಗ ಅವರಿಗೆ 76 ವರ್ಷವಾಗಿತ್ತು.

ಅವರ ನಿಧನ ನಂತರವೂ ಅವರ ಹೆಸರಿನಲ್ಲಿ ಜನ್ಮದಿನ ಮತ್ತು ಪುಣ್ಯದಿನದಂದು ಅಭಿಮಾನಿಗಳ ಸಂಘ, ಕುಟುಂಬ ವರ್ಗದವರು ಹತ್ತಾರು ಕಾರ್ಯಕ್ರಮಗಳು, ನೇತ್ರದಾನ, ರಕ್ತದಾನ, ಅನ್ನದಾನ , ಆರೋಗ್ಯ ತಪಾಸಣೆ ಇತ್ಯಾದಿಗಳನ್ನು ಹಮ್ಮಿಕೊಂಡು ಬಂದಿದ್ದಾರೆ.

ಇಂದು 15ನೇ ವರ್ಷದ ಪುಣ್ಯತಿಥಿ ಸಂದರ್ಭದಲ್ಲಿ ಅವರ ಮಕ್ಕಳು, ಕುಟುಂಬ ವರ್ಗ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ರಾಜಕೀಯ ನಾಯಕರು, ಸ್ಯಾಂಡಲ್ ವುಡ್ ಕಲಾವಿದರು, ಅಭಿಮಾನಿಗಳು ನೆನಪು ಮಾಡಿಕೊಂಡಿದ್ದಾರೆ. 

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ಚೊಚ್ಚಲ ನಿರ್ದೇಶಕ ಸಂತೋಷ್ ಜಿ. ಸಿನಿಮಾಗೆ ಪುಟ್ಟಣ್ಣನವರ ಕ್ಲಾಸಿಕ್ ಚಿತ್ರ 'ಶುಭಮಂಗಳ' ಹೆಸರು

ಹಳೆಯ ಕ್ಲಾಸಿಕ್ ಚಿತ್ರಗಳ ಶೀರ್ಷಿಕೆಗಳನ್ನು ತಮ್ಮ ಹೊಸ ಚಿತ್ರಗಳಿಗಿಡುವುದು ಕನ್ನಡ ಸಿನಿ ಉದ್ಯಮದಲ್ಲಿ ಚಾಲ್ತಿಯಲ್ಲಿರುವ ಟ್ರೆಂಡ್. ಇದಾಗಲೇ ಗಣೇಶ್ ಅಭಿನಯದ "ಗೀತಾ", ಶರಣ್ ಅಭಿನಯದ "ಗುರು ಶಿಷ್ಯರು"  ಇಂತಹಾ ಕ್ಲಾಸಿಕ್ ಶೀರ್ಷಿಕೆಗಳನ್ನು ಪಡೆದುಕೊಂಡಿದೆ. ಇದೀಗ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಶುಭಮಂಗಳ" ಚಿತ್ರದ ಸರದಿ.

ಸ್ಯಾಂಡಲ್ ವಿಡ್ ಗೆ ಹೊಸಬರಾದ ನಿರ್ದೇಶಕ ಸಂತೋಷ್ ಜಿ. ತಮ್ಮ ಚಿತ್ರಕ್ಕೆ "ಶುಭಮಂಗಳ" ಶೀರ್ಷಿಕೆ ಫೈನಲ್ ಮಾಡಿದ್ದಾರೆ. ಸಿನಿಮಾದಲ್ಲಿ ಮೇಘನಾ ಗಾಂವ್ಕರ್, ಹಿತಾ ಚಂದ್ರಶೇಖರ್, ಸಿದ್ಧಾರ್ಥ್ ಮಾದ್ಯಮಿಕ, ರಾಕೇಶ್ ಮಯ್ಯ  ಅಭಿನಯಿಸಿದ್ದು ಶೂಟಿಂಗ್ ಪೂರ್ಣಗೊಳಿಸಿದ್ದ ಈ ಚಿತ್ರಕ್ಕೆ ಇದೀಗ ಕನ್ನಡದ ಕ್ಲಾಸಿಕ್ ಚಿತ್ರದ ಹೆಸರನ್ನಿಡಲಾಗಿದೆ.

ಆರತಿ, ಶ್ರೀನಾಥ್, ಅಂಬರೀಶ್, ಶಿವರಾಮ್ ನಟಿಸಿದ 1975ರ ಚಿತ್ರ ಇಂದಿಗೂ ಸಿನಿ ಅಭಿಮಾನಿಗಳ ಎದೆಯಲ್ಲಿ ಸ್ಥಾನ ಪಡೆದಿದೆ. ಹಿರಿಯ ನಿರ್ದೇಶಕ ಭಗವಾನ್(ದೊರೆ ಭಗವಾನ್) ಅನಾವರಣಗೊಳಿಸಿದ ಶೀರ್ಷಿಕೆ ಲಾಂಚ್ ಸಂಬಂಧ ತಂಡ ವಿಶೇಷವಾದ ಟೀಸರ್ ಸಹ ಬಿಡುಗಡೆ ಮಾಡಿದೆ. ಕಿರುಚಿತ್ರ ನಿರ್ದೇಶಕ ಸಂತೋಷ್ ಅವರ  ಕಥೆ ವಿವಾಹ, ಪ್ರೀತಿ, ಕಾಮನೆ, ಮಕ್ಕಳು, ವೃದ್ದರನ್ನು ಒಳಗೊಂಡಿದೆ. ಜುದಾ ಸ್ಯಾಂಡಿ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದರೆ ರಾಕೇಶ್ ಕ್ಯಾಮರಾ ನಿರ್ವಹಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಶೇ. 100 ಪ್ರೇಕ್ಷಕರಿಗೆ  ಅವಕಾಶ ಸಿಕ್ಕಿದ ನಂತರ ಬಿಡುಗಡೆಯಾಗಲು ಕಾಯುತ್ತಿರುವ ಚಿತ್ರಗಳಲ್ಲಿ "ಶುಭಮಂಗಳ" ಕೂಡ ಒಂದಾಗಿದೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ನಿರ್ದೇಶಕ ಪವನ್ ಕುಮಾರ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್?

ನಿರ್ದೇಶಕ ಸಂತೋಷ್ ಆನಂದರಾಮ್ ಅವರು "ಯುವರತ್ನ"ದ ನಂತರ ಪುನೀತ್ ರಾಜ್‌ಕುಮಾರ್ ಉತ್ತಮ ಆಫರ್ ಗಳನ್ನು ಹೊಂದಿದ್ದಾರೆ. ಅವರೀಗ ನಿರ್ದೇಶಕ ಪವನ್ ಕುಮಾರ್ ಅವರೊಂದಿಗೆ ಕೆಲಸ ಮಾಡಲು ಸಜ್ಜಾಗಿದ್ದಾರೆ.  ಪ್ರಮುಖ ಪ್ರೊಡಕ್ಷನ್ ಹೌಸ್‌ ಒಂದರ ಪ್ರೋತ್ಸಾಹದೊಂದಿಗೆ ಈ ಚಿತ್ರ ತಯಾರಾಗಿತ್ತಿದ್ದು ಇದಾಗಲೇ ನಟನ ಅಭಿಮಾನಿಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಂಚಲನವನ್ನುಂಟು ಮಾಡಿದೆ.

ಲೂಸಿಯಾ ಮತ್ತು ಯು-ಟರ್ನ್‌ ಚಿತ್ರದ ಮೂಲಕ ಪ್ರಸಿದ್ಧರಾಗಿರುವ ನಿರ್ದೇಶಕ ಪವನ್, ಪವರ್‌ಸ್ಟಾರ್ ಇದಾಗಲೇ ನಿರ್ಮಾಣ ಸಂಸ್ಥೆ ಅನುಮೋದಿಸಿದ ಸ್ಕ್ರಿಪ್ಟ್ ಗೆ ಒಪ್ಪಿದ್ದಾರೆ. ಆದರೂ ನಟ ಅಥವಾ ನಿರ್ದೇಶ್ಕರು ಇದುವರೆಗೆ ಯೋಜನೆ ಬಗ್ಗೆ ಯಾವ ಅಧಿಕೃತ ಹೇಳಿಕೆ ನೀಡಿಲ್ಲ.

ಏತನ್ಮಧ್ಯೆ, ಯುವರತ್ನದ ನಂತರ ಪುನೀತ್ ನಿರ್ದೇಶಕ ಚೇತನ್ ಕುಮಾರ್ ಅವರ ಆಕ್ಷನ್ ಎಂಟರ್ಟೈನರ್ ಜೇಮ್ಸ್ ಕಡೆಗೆ ಗಮನ ಹರಿಸಿದ್ದಾರೆ. . ಮತ್ತೊಂದೆಡೆ, ಪವನ್ ತಮ್ಮ ತೆಲುಗು ವೆಬ್‌ಸರೀಸ್‌ಗಳ ಪ್ರಿ ಪ್ರೊಡಕ್ಷನ್ ಕೆಲಸ ಮಾಡುತ್ತಿದ್ದಾರೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಘೋಷಣೆಯಾಗುವ ನಿರೀಕ್ಷೆಇರುವ ಪುನೀತ್ ಚಿತ್ರದ ಚಿತ್ರಕಥೆಯಲ್ಲಿ ನಿರ್ದೇಶಕ ಏಕಕಾಲದಲ್ಲಿ ಕೆಲಸ ಮಾಡಲಿದ್ದಾರೆ, ಏತನ್ಮಧ್ಯೆ, ಜಯಣ್ಣ ಫಿಲ್ಮ್ಸ್ ನಿರ್ಮಾಣ ಮಾಡಿದ ದಿನಕರ್ ತೂಗುದೀಪ ಚಿತ್ರದಲ್ಲಿ ಸಹ ಪುನೀತ್ ಅಭಿನಯಿಸುವವರಿದ್ದಾರೆ. ಇದು ಈ ವರ್ಷದ ಕೊನೆಯಲ್ಲಿ ಸೆಟ್ಟೇರಲಿದೆ. ಯೋಜನೆಯ ಬಹುಪಾಲು ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದ್ದು ಪುನೀತ್ "ಪೈಲ್ವಾನ್" ನಿರ್ದೇಶಕ  ಎಸ್ ಕೃಷ್ಣ ಅವರೊಂದಿಗೂ ಕಮರ್ಷಿಯಲ್ ಎಂಟರ್ಟೈನರ್ ಒಂದರಲ್ಲಿ ಕಾಣಿಸಿಕೊಳ್ಳಲು ತೀರ್ಮಾನಿಸಿದ್ದಾರೆ, ಈ ಚಿತ್ರದಲ್ಲಿ ಪುನೀತ್ ರಾ ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ಸಿನಿಮಾದಲ್ಲೂ ಸಿಕ್ಸರ್ ಬಾರಿಸ್ತಾರಾ ಪ್ರವೀಣ್

ಬೆಂಗಳೂರು: ಅಂಗಳದಲ್ಲಿ ಅಭಿಮಾನಿಗಳ ಕೂಗು, ಬ್ಯಾಟ್, ಬಾಲ್, ಸಿಕ್ಸರ್‍ಗಳ ಸುರಿಮಳೆ,  ಇದರೆಲ್ಲದರಿಂದ ಹೊರಬಂದಿರುವ ಪ್ರವೀಣ್ ಶ್ರೀ ಈಗ ನಾಯಕ ನಟರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

ಚಿಕ್ಕಂದಿನಿಂದ ಪ್ರವೀಣ್ ಅವರ ಕನಸು ಇದ್ದದ್ದು ಕ್ರಿಕೆಟರ್ ಆಗಬೇಕು ಎಂದೇ. ಆದರೆ ಕ್ರಿಕೆಟ್‍ನಲ್ಲಿ ಅಂತರರಾಷ್ಟ್ರೀಯ ಪಂದ್ಯ, ಇಲ್ಲದಿದ್ದರೆ ಐಪಿಎಲ್ ಆಡಿದರಷ್ಟೇ ಭವಿಷ್ಯ ಇದೆ. ಪ್ರವೀಣ್ ಅಂತಾರಾಷ್ಟ್ರೀಯ ಪಂದ್ಯ ಆಡದಿದ್ದರೂ ಅಲ್ಲಿ ಕಡಿಮೆ ಛಾಪು ಮೂಡಿಸಿಲ್ಲ. ಕರ್ನಾಟಕದ ಅಂಡರ್ 19, ಅಂಡರ್ 22 ಹಾಗೂ  ರೈಲ್ವೇಸ್ ತಂಡಗಳಲ್ಲಿ ಆಡಿದ್ದಾರೆ. ಕ್ಲಬ್‌ ಒಂದಕ್ಕಾಗಿ ಆಡುವಾಗ ಅವರು ಹೊಡೆದಿದ್ದ 188 ರನ್‍ಗಳ ಇನಿಂಗ್ಸ್ ಈಗಲೂ ಅವರನ್ನು ಕಾಡುತ್ತಿದೆ. ಕೆಪಿಎಲ್, ಕೆಸಿಸಿನಲ್ಲೂ ಆಡಿ ಮಿಂಚಿದ್ದಾರೆ.

ಸಿನಿಮಾದಲ್ಲಿ ಪ್ರವೀಣ್
"ನಾನು ಸುದೀಪ್ ಅಣ್ಣ ಅವರ ಅಭಿಮಾನಿ. ಅವರನ್ನೇ ನನ್ನ ರೋಲ್ ಮಾಡೆಲ್ ಎಂದು ನಂಬುತ್ತೇನೆ. ಅವರ ಅಭಿನಯ ನೋಡಿ ನನಗೂ ನಟನೆಯಲ್ಲಿ ಆಸಕ್ತಿ ಬೆಳೆಯಿತು. ಕಳೆದ 5-6 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಏನಾದರೂ ಸಾಧಿಸಬೇಕು ಎಂದು ಅವಕಾಶದ ಹುಡುಕಾಟದಲ್ಲಿದ್ದೆ. ಕ್ರಿಕೆಟ್ ಆಡುವಾಗ ನನಗೆ ಯಾರೂ ಬೆಂಬಲಿಗರು ಇರಲಿಲ್ಲ.  "ಡಿಯರ್ ಕಣ್ಮಣಿ"ಗೆ ಆಡಿಷನ್ ಕೊಟ್ಟ ನಂತರ  ವಿಸ್ಮಯಾ ಗೌಡ ಅವರು ನನಗೆ ಬೆಂಬಲ ಕೊಟ್ಟರು. ಮೊದಲೇ ಸ್ನೇಹಿತರಾಗಿದ್ದರು ಆದರೆ ಅವರ ತಂಡದ ಉತ್ಸಾಹ, ಸಿನಿಮಾದ ಕಥೆ, ನನಗೆ ಸಿಕ್ಕ ಪಾತ್ರ, ಅದರಲ್ಲೂ ಮೊದಲ ಸಿನಿಮಾದಲ್ಲೇ "ಹೀರೋ ರೋಲ್' ಇದೆಲ್ಲಾ ನೋಡಿ ನಾನು ನಿಜಕ್ಕೂ ಕನಸು ಕಾಣಲು ಆರಂಭಿಸಿದೆ ಎಂದರು.

ಕ್ರಿಕೆಟ್‍ನಲ್ಲೂ ನಾನು ಸಾಕಷ್ಟು ಬೆವರು ಹರಿಸಿದ್ದೆ. ಅದೇ ರೀತಿ ಸಿನಿಮಾಕ್ಕಾಗಿ ಕೂಡ ನಾನು ಶ್ರಮಹಾಕಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಗೆದ್ದೇ ಗೆಲ್ಲುತ್ತೇನೆ ಅನ್ನುವ ಭರವಸೆ ನನಗಿದೆ ಎಂದು ಹೇಳಿದರು.

ನಿರ್ದೇಶಕಿ ವಿಸ್ಮಯಾ ಕನಸು
ಕ್ರಿಕೆಟ್ ನಿಂದ ಸಿನಿಮಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಪ್ರವೀಣ್ ಅವರ ಪಾತ್ರದ ಬಗ್ಗೆ ಸಿನಿಮಾ ತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಆಟಗಾರನಿಂದ ನಟನಾಗಲಿರುವ ಪ್ರವೀಣ್ ಅವರಿಗೆ ವಿಸ್ಮಯಾ  ಅವರಿಂದ ಧ್ವನಿ, ನಟನೆ, ಲುಕ್ ಎಲ್ಲಾ ರೀತಿಯಲ್ಲೂ ತರಬೇತಿಯನ್ನು ನೀಡಲಾಗುತ್ತಿದೆ.

'ಈ ಸಿನಿಮಾದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ತೆರೆ ಮೇಲೂ ಅದು ಹಾಗೇ ಕಾಣಬೇಕಾದರೆ ತರಬೇತಿ ಬೇಕು ಎನ್ನುವುದು ವಿಸ್ಮಯಾ ಅವರ ಕನಸು. ಅವರ ಶ್ರಮ ಹಾಗೂ ಕನಸಿಗೆ ನಾವು ಬೆಂಬಲ ನೀಡುತ್ತಿದ್ದೇವೆ. ನಮ್ಮ ಎಲ್ಲಾ  ಅಗತ್ಯ ಹಾಗೂ ಭರವಸೆಗೂ ವಿಸ್ಮಯಾ ಅವರು ಜೊತೆ ಇದ್ದಾರೆ' ಎಂದು ಪ್ರವೀಣ್ ಹೇಳಿದರು.
 

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ನಂದಕಿಶೋರ್ ನಿರ್ದೇಶನದ ಸಿನಿಮಾದಲ್ಲಿ ರೇಷ್ಮಾ ನಾಣಯ್ಯ ನಾಯಕಿ

ಬಹುನಿರೀಕ್ಷಿತ ಚಿತ್ರ ಏಕ್ ಲವ್ ಯಾ ಇನ್ನಷ್ಟೇ ತೆರೆಗೆ ಬರಬೇಕಿದೆ. ಈ ಚಿತ್ರದಲ್ಲಿ ನಟಿಸಿದ್ದ ನಟಿ ರೇಷ್ಮಾ ನಾಣಯ್ಯ ತಮ್ಮ ಮೂರನೇ ಸಿನಿಮಾ ನಟನೆಗಾಗಿ ತಯಾರಾಗುತ್ತಿದ್ದಾರೆ.
  
ಪೊಗರು ಯಶಸ್ಸಿನಲ್ಲಿರುವ ನಂದ ಕಿಶೋರ್ ಅವರ ಮುಂದಿನ ಸಿನಿಮಾದಲ್ಲಿ ನಟಿ ರೇಷ್ಮಾ ನಾಣಯ್ಯ ಶ್ರೇಯಸ್ ಮಂಜುಗೆ ನಾಯಕ ನಟಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. 

ಬಾಲ್ಯದಿಂದಲೂ ನಟಿಯಾಗಬೇಕೆಂಬ ರೇಷ್ಮಾ ನಾಣಯ್ಯ ಅವರ ಕನಸು ಪ್ರೇಮ್ ನಿರ್ದೇಶನದಲ್ಲಿ ಅಭಿನಯಿಸುವ ಮೂಲಕ ನನಸಾಗಿತ್ತು. ಏಕ್ ಲವ್ ಯಾ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಎರಡನೇ ಸಿನಿಮಾ ''ಮಾರ್ಗ''ದಲ್ಲಿ ಚೇತನ್ ಜೊತೆಗೆ ರೇಷ್ಮಾ ನಟಿಸಿದ್ದು ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಲಿದೆ.
 
ಇದೇ ವೇಳೆ ನಂದ ಕಿಶೋರ್ ಅವರ ಸಿನಿಮಾ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಕೆ ಮಂಜು ಅರ್ಪಿಸುತ್ತಿರುವ ಗುಜ್ಜಾಲ್ ಪುರುಷೋತ್ತಮ್ ಅವರ ಗುಜ್ಜಾಲ್ ಟಾಕೀಸ್ ಬ್ಯಾನರ್ ನಡಿ ಸಿನಿಮಾ ತಯಾರಾಗುತ್ತಿದೆ. 

ಈ ತಿಂಗಳಲ್ಲಿ ಸಿನಿಮಾದ ಮುಹೂರ್ತ ನಡೆಯಲಿದ್ದು, ತಾಂತ್ರಿಕ ವಿಭಾಗದಲ್ಲಿ ಕೆಎಂ ಪ್ರಕಾಶ್ ಎಡಿಟಿಂಗ್, ಸಿನಿಮೆಟೋಗ್ರಾಫರ್ ಆಗಿ ಶೇಖರ್ ಚಂದ್ರು ಇದ್ದಾರೆ, ಸಂಗೀತ ನಿರ್ದೇಶಕರನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. 

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ನಟ ರಕ್ಷಿತ್ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರೆಂಟ್

ಬೆಂಗಳೂರು: ಅನುಮತಿ ಇಲ್ಲದೇ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಹಾಡು ಬಳಸಿದ್ದ ಮೊಕದ್ದಮೆಗೆ ಸಂಬಂಧಪಟ್ಟಂತೆ ನಟ ರಕ್ಷಿತ್ ಶೆಟ್ಟಿ ಬಂಧನಕ್ಕೆ ನಗರದ 9ನೇ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.

‘ಶಾಂತಿ ಕ್ರಾಂತಿ’ ಚಿತ್ರದ ಹಾಡನ್ನು ಲಹರಿ ಸಂಸ್ಥೆ ಅನುಮತಿ ಇಲ್ಲದೇ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಬಳಸಲಾಗಿತ್ತು. ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡಿಯೋ ವಿರುದ್ಧ ಲಹರಿ ಸಂಸ್ಥೆಯವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.

ಮೊಕದ್ದಮೆ ವಿಚಾರಣೆಗೆ ಹಲವು ಬಾರಿ ಗೈರಾಗಿದ್ದರಿಂದಾಗಿ ನಟ, ಸಂಗೀತ ನಿರ್ದೇಶಕ, ಪರಮ್ವಾ ಸ್ಟುಡಿಯೊ ಮಾಲೀಕರ ವಿರುದ್ಧ ವಾರಂಟ್ ಜಾರಿ ಮಾಡಲಾಗಿದೆ. ಅವರೆಲ್ಲರನ್ನೂ ಬಂಧಿಸಿ ಏಪ್ರಿಲ್ 27ರಂದು ವಿಚಾರಣೆಗೆ ಹಾಜರುಪಡಿಸುವಂತೆ ಪೊಲೀಸರಿಗೆ ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಕಿರಿಕ್ ಪಾರ್ಟಿಯಲ್ಲಿ ಲಹರಿ ಸಂಸ್ಥೆಗೆ ಸೇರಿದ ಹಾಡುಗಳ ಅಕ್ರಮ ಬಳಕೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಯಾರದೇ ಅನುಮತಿ ಇಲ್ಲದೇ ಹಾಡುಗಳನ್ನು ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಈ ಬಗ್ಗೆ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ಹಾಕಿದ್ದ ಲಹರಿ ರೆಕಾರ್ಡಿಂಗ್ಸ್ ಕಾನೂನು ಹೋರಾಟ ಆರಂಭಿಸಿತ್ತು. ಕಾಪಿ ರೈಟ್ಸ್ ಆಕ್ಟ್ 63ಎ & 63 ಬಿ ಅಡಿಯಲ್ಲಿ ಕೇಸ್ ಹಾಕಲಾಗಿತ್ತು.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ಕೊರೋನಾ ಕರ್ಫ್ಯೂ: ರಾತ್ರಿ 10ರ ಬಳಿಕ ಸಿನಿಮಾ ಪ್ರದರ್ಶನ ಇಲ್ಲ

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯದ ಪ್ರಮುಖ ನಗರಗಳಲ್ಲಿ ನೈಟ್ ಕರ್ಪ್ಯೂ ಜಾರಿಯಾಗಿದೆ. ಇದರಿಂದ ರಾತ್ರಿ 10 ಗಂಟೆಯ ಬಳಿಕ ಸುಖಾ ಸುಮ್ಮನೆ ಅಡ್ಡಾದಿಡ್ಡಿ ಓಡಾಟಕ್ಕೆ ಬ್ರೇಕ್ ಬೀಳಲಿದೆ.

ಈ ಕೊರೋನಾ ಕರ್ಪ್ಯೂ ಸಿನಿಮಾ ರಂಗದ ಮೇಲೂ ಪರಿಣಾಮ ಬೀರಲಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಅರ್ಧದಷ್ಟು ಆಸನ ಭರ್ತಿಗೆ ಮಾತ್ರ ಅವಕಾಶವಿದ್ದು, ಕರ್ಪ್ಯೂ ಕಾರಣದಿಂದಾಗಿ ರಾತ್ರಿ 10ರೊಳಗೆ ಚಿತ್ರ ಪ್ರದರ್ಶನಗಳು ಮುಗಿಯಬೇಕಿದೆ.

ಬೆಂಗಳೂರಿನ ಪೂರ್ಣಿಮಾ ಥಿಯೇಟರ್ ನಲ್ಲಿ ಇಷ್ಟು ವರ್ಷಗಳ ಕಾಲ ನಡೆಯುತ್ತಿದ್ದ ರಾತ್ರಿ 10 ಗಂಟೆಯ ಬಳಿಕ ಶೋ ರದ್ದುಗೊಳ್ಳಲಿದೆ. 7.30ರ ಪ್ರದರ್ಶನ ಸಹ ರದ್ದುಗೊಳಿಸಲು ಕೆಲ ಚಿತ್ರಮಂದಿರಗಳ ಮಾಲೀಕರು ನಿರ್ಧರಿಸಿದ್ದಾರೆ.

ಮೊದಲ ಅಲೆಯ ಕೊರೋನಾ ಲಾಕ್ ಡೌನ್ ಸಡಿಲಿಕೆಯಾದ ಬಳಿಕ ಚಿತ್ರ ಮಂದಿರದಲ್ಲಿ ಅರ್ಧದಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿತ್ತು. ಆದರೆ ಆ ಬಳಿಕ ಒತ್ತಾಯದ ಮೇರೆಗೆ ಶೇಕಡ 100ರಷ್ಟು ಆಸನಕ್ಕೆ ಅನುಮತಿ ದೊರಕಿತ್ತು. ಆದರೆ ಕೊರೋನಾ ಎರಡನೇ ಅಲೆಯಿಂದಾಗಿ ಕೇವಲ 2 ತಿಂಗಳಲ್ಲೇ ಮತ್ತೆ ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಆಸನ ಭರ್ತಿಗೆ ಅನುಮತಿ ನೀಡಲಾಗಿದೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ತಾಂತ್ರಿಕ ದೋಷದಿಂದ 'ವಕೀಲ್ ಸಾಬ್' ಪ್ರದರ್ಶನ ಸ್ಥಗಿತ'; ವೀಕ್ಷಕರಿಂದ ಚಿತ್ರಮಂದಿರದಲ್ಲಿ ದಾಂಧಲೆ: ವಿಡಿಯೋ

ತೆಲಂಗಾಣ: ಕೊರೋನಾ ವೈರಸ್ ಭೀತಿಯ ನಡುವೆಯೂ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ 'ವಕೀಲ್ ಸಾಬ್' ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. 

ಥಿಯೇಟರ್ ಗಳಲ್ಲಿ ಶೇ.50 ರಷ್ಟು ಆಸನದ ಮಿತಿ ಇದ್ದರೂ ಮೂರು ವರ್ಷಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ಬೆಳ್ಳಿ ಪರದೆ ಮೇಲೆ ಕಂಡ ಅಭಿಮಾನಿಗಳು ಸಾಕಷ್ಟು ಥ್ರಿಲ್ ಆಗಿದ್ದಾರೆ.

ಈ ಮಧ್ಯೆ ತೆಲಂಗಾಣದ ಜೋಗುಲಾಂಬ ಗಡ್ವಾಲ್ ಥಿಯೇಟರ್ ನಲ್ಲಿ  ತಾಂತ್ರಿಕ ದೋಷದಿಂದ ವಕೀಲ್ ಸಾಬ್ ಚಿತ್ರವನ್ನು ನಿಲ್ಲಿಸಿದ್ದರಿಂದ ವೀಕ್ಷಕರ ಆಕ್ರೋಶ ಸ್ಫೋಟಿಸಿತು. ಕೂಗಾಟ, ಕಿರುಚಾಟದ ಮೂಲಕದ ಥಿಯೇಟರ್ ನಲ್ಲಿ ದಾಂಧಲೆ ನಡೆಸಿದ್ದಾರೆ. ಗಾಜುಗಳನ್ನು ಪುಡಿಪುಡಿ ಮಾಡಿ, ಬಾಗಿಲು, ಕಿಟಕಿ, ಪಿರೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. 

 ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಅಭಿನಯಿಸಿದ 'ಪಿಂಕ್' ಸಿನಿಮಾ ರಿಮೇಕ್ ಇದಾಗಿದ್ದು, ವೇಣು ಶ್ರೀರಾಮ್ ನಿರ್ದೇಶನ ಮಾಡಿದ್ದಾರೆ. ಇನ್ನೂ ಟ್ವಿಟರ್ ನಲ್ಲಿ ಈ ಚಿತ್ರದ ಬಗ್ಗೆ ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ಸಂಗೀತ ಸಂಯೋಜಕ ಅರ್ಜುನ್ ಜನ್ಯಗೆ ಕೋವಿಡ್ ಸೋಂಕು; ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅರ್ಜುನ್ ಜನ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. 'ತಡವಾಗಿ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿತು. ನಂತರ ಕೊರೊನಾ ಪರೀಕ್ಷೆ ಮಾಡಿಸಿದಾಗ ವರದಿ ಪಾಸಿಟಿವ್ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಾನು ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದೇನೆ' ಎಂದು ತಿಳಿಸಿದ್ದಾರೆ.

ಈ ಸುದ್ದಿ ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಹಲವು ಸಿನಿಮಾ ಕೆಲಸಗಳನ್ನು ಬ್ಯುಸಿ ಆಗಿದ್ದ ಅರ್ಜುನ್​ ಜನ್ಯ, ಕೊವಿಡ್-19 ಕಾರಣದಿಂದ ಗ್ಯಾಪ್​ ತೆಗೆದುಕೊಳ್ಳುವಂತಾಗಿದೆ.

ಎಲ್ಲ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ ಕೂಡ ನನಗೆ ಹೇಗೆ ಕೊರೊನಾ ವೈರಸ್​ ತಗುಲಿತು ಎಂಬುದು ತಿಳಿದಿಲ್ಲ. ಶೀಘ್ರವೇ ಚೇತರಿಸಿಕೊಳ್ಳುತ್ತೇನೆ ಎಂಬ ಭರವಸೆ ಇದೆ. ನೆಗೆಟಿವ್​ ವರದಿ ಬಂದ ಬಳಿಕ ವೈದ್ಯರ ಸಲಹೆ ಪಡೆದುಕೊಂಡು ಕೆಲಸ ಆರಂಭಿಸುತ್ತೇನೆ’ ಎಂದು ಮಾಧ್ಯಮಗಳಿಗೆ ಅರ್ಜುನ್ ಜನ್ಯ ಪ್ರತಿಕ್ರಿಯೆ ನೀಡಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More