Categories
Cinema

ಆಸ್ಕರ್ 2021: ಕ್ಲೋಯ್ ಝಾವೋ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರಕಥೆಗೆ 'ಫಾದರ್'ಗೆ ಪ್ರಶಸ್ತಿ

ವಾಷಿಂಗ್ಟನ್: 93ನೇ ಆಸ್ತರ್ ಪ್ರಶಸ್ತಿಗಳು ಘೋಷಣೆಯಾಗಿದ್ದು, ನೋಮದ್ ಲ್ಯಾಂಡ್ ಚಿತ್ರಕ್ಕಾಗಿ ಕ್ಲೋಯ್ ಝಾವೋ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಕ್ರಿಸ್ಟೋಫರ್ ಹ್ಯಾಂಪ್ಟನ್ ಮತ್ತು ಫ್ಲೋರಿಯನ್ ಝೆಲ್ಲರ್ ಪ್ರಶಸ್ತಿ ಪಡೆದಿದ್ದಾರೆ.

ಈ ಹಿಂದೆ ಇದೇ ಫ್ಲೋರಿಯನ್ ಝೆಲ್ಲರ್ ನಿರ್ದೇಶನದ ಚಿತ್ರ 2014ರಲ್ಲಿ ಆರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿತ್ತು. ಇನ್ನು ಕಾಮಿಡಿ ಥ್ರಿಲ್ಲರ್ ಚಿತ್ರ 'ಪ್ರಾಮಿಸಿಂಗ್ ಯಂಗ್ ವುಮನ್' ಚಿತ್ರಕ್ಕಾಗಿ ಮೂಲ ಚಿತ್ರಕಥೆ ವಿಭಾಗದಲ್ಲಿ ಎಮರಾಲ್ಡ್ ಫಿನ್ನೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಉಳಿದಂತೆ 'ದಿ ಫಾದರ್', 'ಜುದಾಸ್ ಮತ್ತು ಬ್ಲ್ಯಾಕ್ ಮೆಸ್ಸಿಹ್', 'ಮಿನಾರಿ', 'ನೋಮಾಡ್ಲ್ಯಾಂಡ್', 'ಸೌಂಡ್ ಆಫ್ ಮೆಟಲ್' ಮತ್ತು 'ದಿ ಟ್ರಯಲ್ ಆಫ್ ಚಿಕಾಗೊ 7' ಚಿತ್ರಗಳು ಆರು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ.

ಗೋಲ್ಡನ್ ಗ್ಲೋಬ್ ಬಳಿಕ ಆಸ್ಕರ್ ಗೆ ಮುತ್ತಿಟ್ಟ ಡೇನಿಯಲ್ ಕಲುಯುಯಾ 
ಇನ್ನು ಈ ಹಿಂದೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದು ಸುದ್ದಿಯಾಗಿದ್ದ ಬ್ರಿಟೀಷ್ ನಟ ಡೇನಿಯಲ್ ಕಲುಯುಯಾ ಇದೀಗ 'ಜುದಾಸ್ ಮತ್ತು ಬ್ಲಾಕ್ ಮೆಸ್ಸಿಹ್' ಚಿತ್ರದ ಸಹಾಯಕ ಪಾತ್ರಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ಅಂತೆಯೇ ಡೆನ್ಮಾರ್ಕ್‌ನ 'ಅನದರ್ ರೌಂಡ್' ಚಿತ್ರ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ  ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 

ಕೊರೋನಾ ಹಿನ್ನಲೆಯಲ್ಲಿ ಮುಂದೂಡಿಕೆಯಾಗಿದ್ದ ಆಸ್ಕರ್ ಕಾರ್ಯಕ್ರಮ
93 ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಈ ವರ್ಷ ಮಾರ್ಚ್ 15 ರಂದು ಘೋಷಿಸಲಾಗಿತ್ತು. ಈ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಡಾಲ್ಬಿ ಥಿಯೇಟರ್ ಮತ್ತು ಯೂನಿಯನ್ ಸ್ಟೇಷನ್ ನಲ್ಲಿ ನಡೆಸಲಾಗುತ್ತಿದೆ. ಈ ಹಿಂದೆ ಕೋವಿಡ್-19 ಸಾಂಕ್ರಾಮಿಕದ ಹಿನ್ನಲೆಯಲ್ಲಿ  ಕಾರ್ಯಕ್ರಮವನ್ನು ಈ ಹಿಂದಿನ ವೇಳಾಪಟ್ಟಿಗಿಂತ 2 ತಿಂಗಳು ಮುಂದೂಡಲಾಗಿತ್ತು. ಅಕಾಡೆಮಿ ಪ್ರಶಸ್ತಿಗಳ ಪ್ರಧಾನ ಕಾರ್ಯಕ್ರಮ ಮುಂದೂಡಿಕೆಯಾಗಿರುವುದು ಇತಿಹಾಸದಲ್ಲೇ ಇದು ನಾಲ್ಕನೇ ಬಾರಿಯಾಗಿದೆ ಎಂದು ಹೇಳಲಾಗಿದೆ.
 

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ಟಾಲಿವುಡ್ ಹಿರಿಯ ನಟ ಪೊಟ್ಟಿ ವೀರಯ್ಯ ವಿಧಿವಶ

ಹೈದರಾಬಾದ್: ಟಾಲಿವುಡ್ ಹಿರಿಯ ನಟ ಪೊಟ್ಟಿ ವೀರಯ್ಯ (74) ನಿಧನರಾಗಿದ್ದಾರೆ. ಸ್ವಲ್ಪ ಸಮಯ ಅನಾರೋಗ್ಯದಿಂದ ಬಳಲುತ್ತಿದ್ದ ವೀರಯ್ಯ ಹೃದಯಾಘಾತದಿಂದ ಭಾನುವಾರ ಆಸ್ಪತ್ರೆಯಲ್ಲಿ ನಿಧನರಾದರು.

ವೀರಯ್ಯ  ನಲ್ಗೊಂಡ ಜಿಲ್ಲೆಯ ತಿರುಮಲಗಿರಿ ತಾಲ್ಲೂಕಿನ ಫಣಿಗಿರಿ ಎಂಬ ಹಳ್ಳಿಯ ಪ್ರೌಢಶಾಲೆಯಲ್ಲಿದ್ದಾಗ ನಾಟಕಗಳಲ್ಲಿ ಪಾತ್ರಗಳ ಮಾಡುವ ಮೂಲಕ ಎಲ್ಲರನ್ನೂ ನಗಿಸುತ್ತಿದ್ದರು. ಸಿನಿಮಾಗೆ ಬರುವ ಮೊದಲು ಅವರು ಹೂವಿನ ಅಲಂಕಾರ ಮಾಡುವ  ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. 

ವೀರಯ್ಯ ತೆಲುಗು ಮಾತ್ರವಲ್ಲದೆ ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಹ ಅಭಿನಯಿಸಿದ್ದರು.

ಅವರ ಅಜ್ಜ ರಾಧಮ್ಮ ಪೆಲ್ಲಿ, ಯುಗಂಧರ್, ಗಜಡೊಂಗ, ಗೋರಾ ನಾಗಮ್ಮ, ಅಟ್ಟಂಗರಿ ಪೆಟ್ಟಿನಂ ಸೇರಿ ಐನೂರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ಪಿಕ್ಕಾಸು, ಗುದ್ದಲಿ ಹಿಡಿದು ತೋಟದಲ್ಲಿ ಮಣ್ಣು ಅಗೆದ ನಟ ಉಪೇಂದ್ರ 

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ತಡೆಗಟ್ಟಲು ಸರ್ಕಾರ ಹೇರುವ ಲಾಕ್ ಡೌನ್ ಸಮಯದಲ್ಲಿ ಹಲವರು ಹಲವು ಉತ್ತಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಕ್ರಿಯಾತ್ಮಕ ನಟ, ನಿರ್ದೇಶಕ ಎಂದೇ ಹೆಸರಾಗಿರುವ ಇತ್ತೀಚೆಗೆ ರಾಜಕೀಯಕ್ಕೆ ಬಂದಿರುವ ನಟ ಉಪೇಂದ್ರ ವಾರಾಂತ್ಯ ಲಾಕ್ ಡೌನ್, ಕರ್ಫ್ಯೂ ಸಮಯವನ್ನು ಉತ್ತಮ ಕಾಯಕದ ಮೂಲಕ ಕಳೆದರು.

ಬಣ್ಣ ಹಚ್ಚುವುದನ್ನು ಬಿಟ್ಟು ಗದ್ದೆಗೆ ಇಳಿದಿದ್ದಾರೆ. ತಮ್ಮ ಜಮೀನಿನಲ್ಲಿ ಪಿಕ್ಕಾಸು, ಗುದ್ದಲಿ ಹಿಡಿದು ಬೇಸಾಯ ಮಾಡುತ್ತಿದ್ದಾರೆ. ಕೃಷಿಯಲ್ಲಿ ಆಸಕ್ತಿ ಹೊಂದಿರುವ ಉಪೇಂದ್ರ ಅವರು ಈ ರೀತಿ ಕೃಷಿ ಮಾಡಿ ತಮ್ಮ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ಸಿನಿಮಾ, ರಾಜಕೀಯ ಮುಗಿದ ಅಧ್ಯಾಯ: ಅಭಿಮಾನಿಗಳ ಪ್ರಶ್ನೆಗೆ ರಮ್ಯಾ ಉತ್ತರ

ಸ್ಯಾಂಡಲ್‌ವುಡ್‌ನ‌ ಮೋಹಕ ತಾರೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುತ್ತಾರಾ ಎಂಬ ಪ್ರಶ್ನೆಯನ್ನು ಅವರ ಅಭಿಮಾನಿಗಳು ಕಳೆದ ಐದಾರು ವರ್ಷಗಳಿಂದ ಕೇಳುತ್ತಲೇ ಬರುತ್ತಿದ್ದಾರೆ. ಆದರೆ ಈ ಪ್ರಶ್ನೆಗೆ ಇಷ್ಟು ವರ್ಷಗಳಲ್ಲಿ ರಮ್ಯಾ ಎಲ್ಲೂ ಸ್ಪಷ್ಟವಾಗಿ ಉತ್ತರಿಸದಿದ್ದರಿಂದ, ತಮ್ಮ ನೆಚ್ಚಿನ ಹೀರೋಯಿನ್‌ ಮತ್ತೆ ಸ್ಕ್ರೀನ್‌ಮೇಲೆ ಬರಬಹುದು ಎಂಬ ನಿರೀಕ್ಷೆಯನ್ನ ರಮ್ಯಾ ಅಭಿಮಾನಿಗಳು ಕೂಡ ಇಟ್ಟುಕೊಂಡಿದ್ದರು. ಆದರೆ ಅಭಿಮಾನಿಗಳ ಈ ನಿರೀಕ್ಷೆ ಸದ್ಯಕ್ಕೆ ಈಡೇರುವಂತೆ ಕಾಣುತ್ತಿಲ್ಲ. ಅದಕ ಕಾರಣ ರಮ್ಯಾ ಸ್ವತಃ ತಾವೇ ಈ ಬಗ್ಗೆ ನೀಡಿರುವ ಉತ್ತರ.

ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ರಮ್ಯಾ, “ಸಿನಿಮಾ ಎನ್ನುವುದು ಮುಗಿದು ಹೋದ ಅಧ್ಯಾಯ’ ಎಂದು ಹೇಳುವ ಮೂಲಕ ಸದ್ಯಕ್ಕೆ ಸಿನಿಮಾಕ್ಕೆ ಬರುವ ಯೋಚನೆ ಇಲ್ಲ ಎನ್ನುವುದನ್ನ ಸ್ಪಷ್ಟಪಡಿಸಿದ್ದಾರೆ.

ಹೌದು, ಸದ್ಯ ಕೊರೋನಾ ವೀಕೆಂಡ್‌ ಲಾಕ್‌ಡೌನ್‌ ಇದ್ದು, ಇದೇ ವೇಳೆ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಜೊತೆ ಮಾತುಕಥೆ ನಡೆಸಿದ ರಮ್ಯಾ, ಅಭಿಮಾನಿಗಳ ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸಿದರು.

“ಮತ್ತೆ ಯಾವಾಗ ಸಿನಿಮಾಗೆ ವಾಪಸ್‌ ಆಗ್ತೀರಾ’ ಎಂಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರುವ ರಮ್ಯಾ, “ಸಿನಿಮಾ ಜರ್ನಿ ಯಾವತ್ತೋ ಮುಗಿದು ಹೋಗಿದೆ’ ಎಂದು ಹೇಳುವ ಮೂಲಕ ಮತ್ತೆ ಸಿನಿಮಾಕ್ಕೆ ಬರುವ ಯೋಚನೆಯಿಲ್ಲ ಎಂದಿದ್ದಾರೆ.

ಸಿನಿಮಾದ ನಂತರ ರಮ್ಯಾ ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದರು, ಕಳೆದ ಕೆಲ ವರ್ಷಗಳಿಂದ ರಮ್ಯಾ ರಾಜಕೀಯದಲ್ಲೂ ಸಕ್ರಿಯವಾಗಿಲ್ಲ. ಈ ಬಗ್ಗೆಯೂ “ನೀವು ಸಕ್ರಿಯ ರಾಜಕಾರಣಕ್ಕೆ ವಾಪಸ್‌ ಬರಲ್ವಾ’ ಎಂದು ಪ್ರಶ್ನಿಸಿರುವ ಅಭಿಮಾನಿಯೊಬ್ಬರಿಗೆ, “ಇಲ್ಲ, ನನ್ನ ಸಮಯ ಮುಗಿದಿದೆ’ ಎಂದು ಉತ್ತರಿಸಿದ್ದಾರೆ ರಮ್ಯಾ.

ಸಿನಿಮಾ ಮತ್ತು ರಾಜಕೀಯದ ಪ್ರಶ್ನೆ ಜೊತೆಗೆ ರಮ್ಯಾ ಮದುವೆ ಬಗ್ಗೆಯೂ ಅಭಿಮಾನಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನೀವು ಮದುವೆ ಆಗಿದ್ದೀರಾ..?, ಡೇಟಿಂಗ್‌ ಮಾಡ್ತಿದ್ದೀರಾ..? ನಿಮಗೆ ಬಾಯ್‌ಫ್ರೆಂಡ್‌ ಇದ್ದಾರಾ..? ಎಂಬ ಅಭಿಮಾನಿಗಳ ಪ್ರಶ್ನೆಗಳಿಗೂ ಕೂಲ್‌ ಆಗಿಯೇ ಉತ್ತರಿಸಿರುವ ರಮ್ಯಾ, ಇದಕ್ಕೆಲ್ಲಾ “ಇಲ್ಲ’ ಎಂದಿದ್ದಾರೆ.

ನಿಮ್ಮಲ್ಲಿ ನೀವು ದ್ವೇಷಿಸುವ ಅಂಶವೇನು? ಎಂಬ ಪ್ರಶ್ನೆಗೆ ರಮ್ಯಾ, “ನನ್ನ ಭಾವನೆಗಳನ್ನು ನಿಯಂತ್ರಿಸುವಲ್ಲಿಅಸಮರ್ಥತೆ’ ಎಂದು ಉತ್ತರಿಸಿದ್ದಾರೆ.

ಇದೇ ವೇಳೆ ಅಭಿಮಾನಿಯೊಬ್ಬ ರಮ್ಯಾಗೆ, “ನೀವು ರಕ್ಷಿತ್‌ ಶೆಟ್ಟಿನಾ ಮದುವೆ ಆಗಿ’ ಎಂದಿದ್ದಾನೆ. ಅದಕ್ಕೂ ಬಹಳ ಕೂಲ್‌ ಆಗಿ ಉತ್ತರಿಸಿದ ರಮ್ಯಾ, ರಕ್ಷಿತ್‌ ಶೆಟ್ಟಿ ಅವರ ಇನ್ಸ್ಟಾ ಖಾತೆಯನ್ನು ಟ್ವೀಟ್‌ ಮಾಡಿ ನಗುವ ಎಮೋಜಿ ಹಾಕಿದ್ದಾರೆ. ಇನ್ನು ಮದುವೆ ಬಗ್ಗೆ ಅಭಿಮಾನಿಗಳಿಂದ ಒಂದರ ಹಿಂದೊಂದು ಪ್ರಶ್ನೆಗಳು ಎದುರಾದಂತೆ, ಸುಸ್ತಾದ ರಮ್ಯಾ, “ಮದುವೆ… ಮದುವೆ… ಮಾಡುವುದಕ್ಕೆ ಇದೊಂದೇ ಕೆಲಸ ಇರುವುದು ಅನ್ನೋ ಹಾಗೆ. ಮದುವೆ ಆದಮೇಲೆ ಖುಷಿಯಿಂದ ಇರುವುದಕ್ಕೆ ಆಗಲ್ಲ ಗೊತ್ತಾ?’ ಎಂದು ಪ್ರತಿಕ್ರಿಯಿಸುವ ಮೂಲಕ ಮದುವೆ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ಫ‌ುಲ್‌ಸ್ಟಾಪ್‌ ಹಾಕಿದ್ದಾರೆ.

ಒಟ್ಟಾರೆ ಹಲವು ಸಮಯದಿಂದ ರಮ್ಯಾ ಸಿನಿಮಾಕ್ಕೆ ಬರುತ್ತಾರಾ? ರಾಜಕೀಯಕ್ಕೆ ಬರುತ್ತಾರಾ? ಮದುವೆ ಆಗುತ್ತಾರಾ? ಎಂಬ ಎಲ್ಲ ಪ್ರಶ್ನೆಗಳಿಗೂ ಒಂದೇ ವೇಳೆ ಉತ್ತರಿಸಿರುವ ರಮ್ಯಾ, ತಮ್ಮ ಬಗ್ಗೆ ಹರಿದಾಡುತ್ತಿದ್ದ ಎಲ್ಲ ಅಂತೆ- ಕಂತೆಗಳಿಗೂ ತೆರೆ ಎಳೆದಿದ್ದಾರೆ.

ಸಿನೆಮಾ – Udayavani – ಉದಯವಾಣಿ
Read More

Categories
Cinema

ಲಾಕ್‌ಡೌನ್‌ ನಡುವೆ ಸರಳವಾಗಿ ನಡೆದ ರಾಜ್‌ ಕುಮಾರ್‌ ಹುಟ್ಟುಹಬ್ಬ

ವರನಟ ಡಾ.ರಾ ಜ್‌ ಕುಮಾರ್‌ ಅವರ ಹುಟ್ಟು ಹಬ್ಬ ವನ್ನು ಶನಿವಾರ (ಏ.24) ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ದೇವ ರು ಗಳು ಸರಳ ‌ವಾಗಿ ಆಚರಿಸಿದ್ದಾರೆ. ರಾಘವೇಂದ್ರ ರಾಜ್‌  ಕುಮಾರ್‌ ಬೆಳಗ್ಗೆ ರಾಜ್‌ ಪುಣ್ಯ ಭೂಮಿಗೆ ತೆರಳಿ ಪೂಜೆ ಸಲ್ಲಿಸದರು.

ಕೋವಿಡ್ ಹಾಗೂ ವೀಕೆಂಡ್‌ ಲಾಕ್‌ ಡೌನ್‌ ಇದ್ದ ಕಾರಣ ಕೆಲವೇ ಕೆಲವು ಮಂದಿ ಪುಣ್ಯ ಭೂಮಿಯಲ್ಲಿ ಪೂಜೆ ಸಲ್ಲಿಸಬೇಕಾಯಿತು. ಪ್ರತಿ ವರ್ಷ ಅಣ್ಣಾವ್ರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಹಲವು ಸಾಮಾ ಜಿಕ ಕಾರ್ಯ ಗಳ ಮೂಲಕ ಆಚರಿಸುತ್ತಿದ್ದರು. ಆದರೆ, ಕಳೆದ ವರ್ಷ ಹಾಗೂ ಈ ವರ್ಷ ಕೋವಿಡ್ ದಿಂದ ಸರಳವಾಗಿ ಆಚರಿಸುವ ಅನಿವಾರ್ಯತೆ ಎದುರುರಾಗಿದೆ.

ಕನಕಪುರದ ಫಾರ್ಮ್ ಹೌ ಸ್‌ ನಲ್ಲಿ ಶಿವಣ್ಣ ಆಚರಣೆ: ಶಿವ ರಾ ಜ್‌ ಕು ಮಾರ್‌

ಅವ ರು ಕನಕಪುರದ ಫಾರ್ಮ್ ಹೌಸ್‌ ನಲ್ಲಿ ಇದ್ದ ಕಾರಣ, ಅಲ್ಲೇ ಅಣ್ಣಾವ್ರ ಹುಟ್ಟು ಹ ಬ್ಬ ವನ್ನು ಆಚರಿಸಿದರು. ಹೊಲದ ಮಧ್ಯದಲ್ಲಿ ಅಣ್ಣಾವ್ರ ಭಾವ ಚಿತ್ರವಿಟ್ಟು, ಅದಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ.

ನಟ ಪುನೀತ್‌ ವಿಶಿಷ್ಟ ಗಿಫ್ಟ್:

ಪುನೀತ್‌ ರಾಜ್‌ ಕುಮಾರ್‌ ತಮ್ಮ ತಂದೆಯ ಹುಟ್ಟು ಹಬ್ಬಕ್ಕೆ ವಿಭಿನ್ನವಾಗಿ ಕೊಡುಗೆ ನೀಡಿದ್ದಾರೆ. ಅದು ಭಾವನಾ ತ್ಮಕ ಹಾಡೊಂದನ್ನು ಹಾಡುವ ಮೂಲಕ. “ಬಡ ವರ ಬಂಧು’ ಚಿತ್ರದ “ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ.. ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ…’ ಹಾಡನ್ನು ಭಾವನಾತ್ಮಕವಾಗಿ ಹಾಡಿದ್ದಾರೆ. ಹಾಡಿನುದ್ದಕ್ಕೂ ಪುನೀತ್‌ ಭಾವು ಕರಾಗಿದ್ದು ಕಂಡು ಬರುತ್ತದೆ. ತಾವು ಹಾಡಿದ ವಿಡಿಯೋವನ್ನು ಟ್ವಿಟರ್‌ ನಲ್ಲಿ ಶೇರ್‌ ಮಾಡಿರುವ ಪುನೀತ್‌, “ಅಪ್ಪಾಜಿ  ಅವರ ಹುಟ್ಟು ಹಬ್ಬಕ್ಕೆ ನಮ್ಮ ಪುಟ್ಟ ಕಾಣಿಕೆ’ ಎಂದು ಬರೆದು ಕೊಂಡಿದ್ದಾರೆ. ಈ ಹಾಡನ್ನು ಅಭಿ ಮಾನಿಗಳು ಮೆಚ್ಚಿಕೊಂಡಿದ್ದಾರೆ.

ರಾಜ್‌ ಸ್ಮರಿ ಸಿದ ತಾರೆಯರು :

ಡಾ.ರಾ ಜ್‌ ಕುಮಾರ್‌ ಅವರ ಹುಟ್ಟು ಹಬ್ಬವನ್ನು ಅಭಿ ಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮದೇ ರೀತಿಯಲ್ಲಿ ಆಚರಿಸುವ ಮೂಲಕ ಸ್ಮರಣೆ ಮಾಡಿದರೆ, ತಾರೆ ಯರು ಕೂಡಾ ಟ್ವೀಟ್‌ ಮೂಲಕ ರಾಜ್‌ ಅವರಿಗೆ ನಮಿಸಿದ್ದಾರೆ. ನಟ ರಾದ ಸುದೀಪ್‌, ದರ್ಶನ್‌, ರಮೇಶ್‌ ಅರ ವಿಂದ್‌, ಜಗ್ಗೇಶ್‌, ಗಣೇಶ್‌, ಶರಣ್‌ ಸೇರಿದಂತೆ ಅನೇಕರು ಟ್ವೀಟ್‌ ಮೂಲಕ ಅಣ್ಣಾ ವ್ರನ್ನು ನೆನ ಪಿ ಸಿ ಕೊಂಡಿ ದ್ದಾರೆ. ಇನ್ನು ಪರ ಭಾಷೆಯ ಹಲವು ನಟರು ಕೂಡಾ ರಾಜ್‌ ಹುಟ್ಟು ಹಬ್ಬದಂದು ಸ್ಮರಿ ಸಿ ದ್ದಾರೆ. ಮೆಗಾ ಸ್ಟಾರ್‌ ಚಿರಂಜೀವಿ, ಅಣ್ಣಾವ್ರ ಜೊತೆಗಿನ ಬಾಂಧ ವ್ಯ ನೆನಪಿಸಿಕೊಂಡು, “ಅಣ್ಣಾವ್ರು ನಿಜವಾದ ಬಂಗಾರದ ಮನುಷ್ಯ. ಅವರು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿ ದ್ದಾರೆ’ ಎಂದಿದ್ದಾರೆ. ಇನ್ನು, ಮಂಗಳೂರು ಪೊಲೀಸ್‌ ಕಮೀಶನರ್‌ ಶಶಿ ಕು ಮಾರ್‌, “ಆಡಿ ಸಿ ನೋಡು, ಬೀಳಿಸಿ ನೋಡು..’ ಹಾಡನ್ನು ಹಾಡುವ ಮೂಲಕ ರಾಜ್‌ ಅವ ರನ್ನು ಸ್ಮರಿಸಿದ್ದಾರೆ.

ಮೂರು ಕೃತಿಗಳು ಲೋಕಾರ್ಪಣೆ : ವರನಟ ಡಾ. ರಾಜಕುಮಾರ್‌ ಜನ್ಮದಿನದಂದು ಮೂರು ಕೃತಿಗಳು ಲೋಕಾರ್ಪಣೆಗೊಂಡವು. ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಿತ್ರ ನಿರ್ದೇಶಕ ಬಿ ಎಂ. ಗಿರಿರಾಜ ಅವರ ಚೊಚ್ಚಲ ಕೃತಿ “ಕಥೆಗೆ ಸಾವಿಲ್ಲ’ ಮತ್ತು ಎಸ್‌. ರತ್ನ ವಿಠ್ಠಲ್ಕರ್‌ ಬರೆದ “ಪುನರ್ವಸಂತ’ ಕವನ ಸಂಕಲನವನ್ನು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಲೋಕಾರ್ಪಣೆಗೊಳಿಸಿದ್ದಾರೆ. ಇನ್ನು ಹಿರಿಯ ಪತ್ರಕರ್ತ ಮಹೇಶ್‌ ದೇವಶೆಟ್ಟಿ ಬರೆದಿರುವ, “ಬಂಗಾರದ ಮನುಷ್ಯ’ ಚಿತ್ರದ ಕುರಿತ “ಮೇಕಿಂಗ್‌ ಆಫ್ ಬಂಗಾರದ ಮನುಷ್ಯ’ ಕೃತಿ ಕೂಡ ಅಣ್ಣಾವ್ರ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ.

ಸಿನೆಮಾ – Udayavani – ಉದಯವಾಣಿ
Read More

Categories
Cinema

ಪುನೀತ್ ನಟನೆಯ ಜೇಮ್ಸ್ ಚಿತ್ರಕ್ಕೆ ರವಿ ವರ್ಮಾ ಸಾಹಸ ಸಂಯೋಜನೆ

ಬೆಂಗಳೂರು: ಈ ವಾರವೂ 'ಬಿಗ್ ಬಾಸ್' ವೇದಿಕೆಗೆ ಕಿಚ್ಚ ಸುದೀಪ್ ಬರುತ್ತಿಲ್ಲ. ಅನಾರೋಗ್ಯದ ಕಾರಣ ಈ ವಾರಾಂತ್ಯವೂ ಬಿಗ್ ಬಾಗ್ ಸಂಚಿಕೆಗಳ ಚಿತ್ರೀಕರಣಕ್ಕೆ ಹಾಜರಾಗುತ್ತಿಲ್ಲ ಎಂದು  ಖುದ್ದು ಸುದೀಪ್ ಟ್ವಿಟ್ಟರ್ ಮೂಲಕ ಸ್ಪಷ್ಟ ಪಡಿಸಿದ್ದಾರೆ.

 'ಬಿಗ್ ಬಾಸ್' ವೀಕೆಂಡ್  ಸಂಚಿಕೆಗಳ ಚಿತ್ರೀಕರಣಕ್ಕೆ ಮಿಸ್ ಆಗುತ್ತಿದ್ದೇನೆ. 'ಬಿಗ್ ಬಾಸ್' ವೇದಿಕೆ ಮೇಲೆ ಗಂಟೆಗಟ್ಟಲೆ ಶೂಟಿಂಗ್ ಮಾಡಿ ಎಲ್ಲಾ ಸ್ಪರ್ಧಿಗಳಿಗೂ ನ್ಯಾಯ ಒದಗಿಸುವ ಮುನ್ನ ನನಗೆ ಇನ್ನೂ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಇದು ಕಠಿಣ ನಿರ್ಧಾರ. ಚಿತ್ರೀಕರಣವನ್ನು ರದ್ದು   ಮಾಡಿದ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ನನಗಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು  ಸುದೀಪ್ ಟ್ವೀಟ್ ಮಾಡಿದ್ದಾರೆ.

 

ಹಿಂದಿನ ವಾರಾಂತ್ಯದ ಸಂಚಿಕೆಯ ಚಿತ್ರೀಕರಣದ ವೇಳೆಯೂ ಸುದೀಪ್ ಗೈರಾಗಿದ್ದರು. ಬಿಗ್ ಬಾಗ್ ಕನ್ನಡ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ಗೈರು ಎದ್ದುಕಾಣುತ್ತಿದೆ. ಆದಾಗ್ಯೂ, ನಟ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. 

ಬಿಗ್ ಬಾಗ್ ಕನ್ನಡ ಆವೃತ್ತಿ ಆರಂಭವಾದಾಗಿನಿಂದಲೂ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿಯೇ ನಡೆಸಿಕೊಡುತ್ತಾ ಬಂದಿದ್ದಾರೆ. ಬಿಗ್ ಬಾಗ್ ಕನ್ನಡ ಜನಪ್ರಿಯತೆ ಮತ್ತು ಯಶಸ್ಸಿನ ಹಿಂದೆ ಸುದೀಪ್ ಅವರ ಪಾತ್ರ ಮಹತ್ವದ್ದಾಗಿದೆ.  ಆಗಾಗ್ಗೆ ತಮ್ಮ ಕ್ರೆಸ್ಟ್ ಹಾಗೂ  ಅವರ ಗೇಮ್ ನ ಉದ್ದೇಶದ ಬಗ್ಗೆ ತಿಳಿಸುತ್ತಾ ಸ್ಪರ್ಧಿಗಳಿಗೆ ಅಗತ್ಯ ಮಾರ್ಗದರ್ಶನವನ್ನು ನೀಡುತ್ತಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ಧನ್ವೀರ್ ನಟನೆಯ 'ಬಂಪರ್' ಸಿನಿಮಾಗೆ ಹೊಸ ನಿರ್ದೇಶಕ!

ಬೆಂಗಳೂರು: ಕೊರೋನಾ ಎರಡನೇ ಅಲೆ ಸೃಷ್ಟಿಯಾದ ಮೇಲೆ ಸಾಕಷ್ಟು ಮಂದಿಗೆ ಪಾಸಿಟಿವ್ ಬಂದಿದೆ, ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು, ಶ್ರೀಮಂತರು ಕೂಡ ಸೋಂಕಿಗೆ ತುತ್ತಾಗುತ್ತಿದ್ದಾರೆ.

ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪ ಸಾಕಷ್ಟು ಕೇಳಿಬರುತ್ತಿದೆ. ಕೊರೋನಾ ಪಾಸಿಟಿವ್ ಗೆ ಒಳಗಾಗಿರುವ ನಟಿ ಅನು ಪ್ರಭಾಕರ್ ಕೂಡ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಮೊನ್ನೆ ಏಪ್ರಿಲ್ 17ರಂದು ನಟಿ ಅನು ಪ್ರಭಾಕರ್ ಗೆ ಕೊರೋನಾ ಸೋಂಕು ಇರುವುದು ಗೊತ್ತಾಯಿತು. ಅದಾಗಿ ಐದು ದಿನ ಕಳೆದರೂ ಇನ್ನೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಡೆಯಿಂದ ಪ್ರತಿಕ್ರಿಯೆಯೇ ಬಂದಿಲ್ಲವಂತೆ. ಕೊರೋನಾ ದೃಢಪಟ್ಟು 5 ದಿನವಾಗಿದೆ, ಹೋಂ ಐಸೊಲೇಷನ್ ನಲ್ಲಿದ್ದೇನೆ. ಆದರೆ ಬಿಬಿಎಂಪಿ ಕಡೆಯಿಂದ ಯಾವ ಫೋನ್ ಬಂದಿಲ್ಲ, ಕೋವಿಡ್ ವಾರ್ ವೆಬ್ ಸೈಟ್ ನಲ್ಲಿ ತಮ್ಮ ಹೆಸರು ಅಪ್ಡೇಟ್ ಕೂಡ ಆಗಿಲ್ಲ, ಇನ್ನೂ ನನಗೆ ಬಿಯು ಸಂಖ್ಯೆ ಬಂದಿಲ್ಲ, ಈ ವಿಷಯವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ ಎಂದು ಆರೋಗ್ಯ ಸಚಿವ ಸುಧಾಕರ್ ಅವರ ಟ್ವಿಟ್ಟರ್ ಖಾತೆಯನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ರೊಮ್ಯಾಂಟಿಕ್ ಚಿತ್ರದಲ್ಲಿ ನಟಿಸಲು ನಾನು ಮೊದಲು ಹೆದರಿದ್ದೆ: ಧನ್ವೀರ್

ವಿನಯ್ ರಾಜ್‌ಕುಮಾರ್ ಅಭಿನಯದ "ಪೆಪೆ" ಸಿನಿಮಾಗೆ ರಘು ದೀಕ್ಷಿತ್ ಸಂಗೀತ ನೀಡಲಿದ್ದಾರೆ. ಚೊಚ್ಚಲ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ಆಕ್ಷನ್ ಡ್ರಾಮಾದಲ್ಲಿ ಯಾವ ಹಾಡುಗಳಿಲ್ಲ.ಸಂಗೀತ ನಿರ್ದೇಶಕರು ಚಿತ್ರದ ಹಿನ್ನೆಲೆ ಸ್ಕೋರ್ ನೀಡುವ ಕೆಲಸವನ್ನಷ್ಟೇ ಮಾಡಲಿದ್ದಾರೆ.

ರಘು ದೀಕ್ಷಿತ್ ಈ ಹಿಂದೆ ಕೃಷ್ಣ ಅವರ "ಲವ್ ಮೋಕ್‌ಟೇಲ್" ಚಿತ್ರದ ಮೂಲಕ ಹಿಟ್ ನೀಡಿದ್ದರು. ಇನ್ನು ರಘು ದೀಕ್ಷಿತ್ "ನಿನ್ನ ಸನಿಹಕೆ", "ಆರ್ಕೆಸ್ಟ್ರಾ" ಚಿತ್ರಗಳ ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನೂ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ "ಪೆಪೆ" ಶೆಡ್ಯೂಲ್ ನಲ್ಲಿ "ಮಾಯಾ ಕನ್ನಡಿ" ನಾಯಕಿ ಕಾಜಲ್ ಕುಂದರ್ ನಾಯಕಿಯಾಗಿರುವ ಭಾಗ ಕೊಡಗಿನಲ್ಲಿ ಚಿತ್ರೀಕರಣವಾಗಿತ್ತು.

ವಿನಯ್ ರಾಜ್‌ಕುಮಾರ್ ಅವರ ಫಸ್ಟ್ ಲುಕ್ ಯುಗಾದಿಯಂದು ಹೊರಬಂದಿದ್ದು ಉದಯ್ ಶಂಕರ್ ಎಸ್ ಮತ್ತು ನಿಜಗುಣ ಗುರುಸ್ವಾಮಿ ಅವರು ಚಿತ್ರಕ್ಕೆ ಬಂಡವಾಳ ತೊಡಗಿಸಿದ್ದಾರೆ. ಚಿತ್ರಕ್ಕೆ ಸಮರ್ಥ್ ಉಪಾಧ್ಯಾಯ ಸ್ಛಾಯಾಗ್ರಹಣವಿದೆ. ಇದೆಲ್ಲದರ ನಡುವೆ ಈ ಮಧ್ಯೆ, ಶೀಘ್ರದಲ್ಲೇ ಅನಾವರಣಗೊಳ್ಳಲಿರುವ ಟೀಸರ್ ಕೆಲಸ ಭರದಿಂದ ಸಾಗಿದೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ಡಾ. ರಾಜ್ ಕುಮಾರ್ 92ನೇ ಜಯಂತಿ: ಮಕ್ಕಳಿಂದ ರಾಜ್ ಸ್ಮಾರಕಕ್ಕೆ ಪೂಜೆ, ಮನದುಂಬಿ ಹಾಡಿದ ಪುನೀತ್

ಹುಬ್ಬಳ್ಳಿ: ರಾಕೇಶ್ ಕಾಟ್ವೆ ಎಂಬಾತನ ರುಂಡ, ಮುಂಡ ಬೇರ್ಪಟ್ಟಿದ್ದು ಅರ್ಧಂಬರ್ಧ ಸುಟ್ಟು ಹಾಕಿದ್ದ ಆತನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಇದೀಗ ಛೋಟಾ ಬಾಂಬೆ ಚಿತ್ರದ ನಟಿ ಶನಾಯ, ಪ್ರಿಯಕರ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. 

ಏಪ್ರಿಲ್ 11ರಂದು ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ರಾಕೇಶ್ ಮೃತದೇಹ ಪತ್ತೆಯಾಗಿತ್ತು. ಈ ಮೃತದೇಹ ಶನಾಯಳ ಸಹೋದರ ರಾಕೇಶ್ ಎಂದು ತಿಳಿಯುತ್ತಿದ್ದಂತೆ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದರು. 

ಪ್ರಕರಣದ ತನಿಖೆಗಿಳಿಯುತ್ತಿದ್ದಂತೆ ಪೊಲೀಸರು ಶನಾಯಳ ಪ್ರಿಯಕರ ನಿಯಾಜ್, ಸಹಚರರಾದ ಮಲ್ಲಿಕ್, ಫಿರೋಜ್, ಸೈಫುದ್ದೀನ್ ನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಶನಾಯ ಮತ್ತು ನಿಯಾಜ್ ನ ಪ್ರೀತಿಗೆ ರಾಕೇಶ್ ಆಕ್ಷೇಪಿಸುತ್ತಿದ್ದ. ಇದೇ ಕಾರಣಕ್ಕೆ ಏಪ್ರಿಲ್ 9ರಂದು ರಾಕೇಶನ ಕತ್ತು ಹಿಸುಕಿ ನಯಾಜ್ ಕೊಂದಿದ್ದು ನಂತರ ಮೃತದೇಹವನ್ನು ಕಾರಿನಲ್ಲಿ ಮನೆಗೆ ಸಾಗಿಸಿದ್ದರು. 

700

ಈ ವೇಳೆ ಶನಾಯಗೆ ಇಂದು ಮನೆಗೆ ಬರಬೇಡ, ನಿನ್ನ ಅಣ್ಣನಿಗೆ ಯಾರೋ ಹೊಡೆದಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದು ಹೇಳಿ ಮತ್ತೊಂದು ಮನೆಗೆ ಕಳುಹಿಸಿದ್ದರು. ನಂತರ ಮನೆಗೆ ಬಂದ ನಿಯಾಜ್ ರಾಕೇಶ ರುಂಡ ಮತ್ತು ಮುಂಡವನ್ನು ಬೇರ್ಪಡಿಸಿ ಕೈಕಾಲುಗಳನ್ನು ಪೀಸ್ ಪೀಸ್ ಮಾಡಿದ್ದರು. ಆನಂತರ ಆತನ ಶವಕ್ಕೆ ಪೆಟ್ರೋಲ್ ಸುರಿದು ಅರ್ಧಂಬರ್ಧ ಸುಟ್ಟು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.    

ಸಹೋದರನ ಕೊಲೆನೆ ನೆರವು ನೀಡಿದ ಆರೋಪದ ಮೇಲೆ ಪೊಲೀಸರು ಶನಾಯಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

700

ಶನಾಯಾ 2018ರಲ್ಲಿ ತೆಲುಗಿನಲ್ಲಿ ಬಿಡುಗಡೆಯಾಗಿದ್ದ ಇದಂ ಪ್ರೇಮಂ ಜೀವನಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ 2021ರಲ್ಲಿ ಕನ್ನಡದ ಒಂದು ಗಂಟೆಯ ಕಥೆ ಹಾಗೂ ಛೋಟಾ ಬಾಂಬೆ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ಜನ ಸಾಯುತ್ತಿದ್ದರೆ ನೀವು ಮೋಜು ಮಾಡುತ್ತಿದ್ದಿರಿ: ಸೆಲೆಬ್ರಿಟಿಗಳ ವಿರುದ್ಧ ಸಿದ್ಧಕಿ ಆಕ್ರೋಶ

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂ ಘೋಷಿಸುತ್ತಿದ್ದಂತೆ ಮಾಲ್ಡಿವ್ಸ್ ಗೆ ಹಾರಿರುವ ಕೆಲವು ತಾರೆಯರ ವಿರುದ್ಧ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಕಿ ಆಕ್ರೋಶ ಹೊರಹಾಕಿದ್ದರು.

ಇಲ್ಲಿ ಜನ ಊಟ ಇಲ್ಲದೇ ಸಾಯುತ್ತಿದ್ದಾರೆ, ನೀವು ಹಣವನ್ನು ಪ್ರವಾಸದಲ್ಲಿ ಉಡಾಯಿಸುತ್ತಿದ್ದೀರ. ಸ್ವಲ್ಪವಾದ್ರೂ ನಾಚಿಕೆ ಬೇಡವೇ ಎಂದು ಖಾರವಾಗಿ ಪ್ರಶ್ನಿಸಿರುವ ಸಿದ್ಧಕಿ, ನಿಮ್ಮನ್ನು ಸ್ಟಾರ್​​ಗಳೆಂದು ಆರಾಧಿಸುವ ಜನರೇ ಇಂದು ಸಂಕಷ್ಟದಲ್ಲಿದ್ದಾರೆ. ಸಾಧ್ಯವಾದರೆ ಅವರ ಕಷ್ಟಗಳಿಗೆ ಸ್ಪಂದಿಸಿ, ಇಲ್ಲವೇ ಸುಮ್ಮನಿರಿ. ಇಂಥ ಸಮಯದಲ್ಲಿ ಪ್ರವಾಸದ ಸುಂದರ ಫೋಟೋಗಳನ್ನು ಹಾಕಿ ಮಾನ ಕಳೆದುಕೊಳ್ಳಬೇಡಿ ಎಂದು ಗುಡುಗಿದ್ದಾರೆ.  

ಇನ್ನು ಇತ್ತೀಚೆಗಷ್ಟೇ ಬಾಲಿವುಡ್​ನ ಲವ್​ಬರ್ಡ್ಸ್​​ ರಣವೀರ್​ ಕಪೂರ್​- ಆಲಿಯಾ ಭಟ್​​ ಕೊರೋನಾದಿಂದ ಗುಣಮುಖರಾಗುತ್ತಲೇ ಮಾಲ್ಡೀವ್ಸ್​ಗೆ ಹಾರಿದ್ದರು. ನಟಿಮಣಿಯರಾದ ಜಾಹ್ನವಿ ಕಪೂರ್​, ಶ್ರದ್ಧಾ ಕಪೂರ್​, ದಿಶಾ ಪಟಾಣಿ ಕೂಡ ಬೀಚ್​ನಲ್ಲಿ ಬಿಕಿನಿ ತೊಟ್ಟು ಮಿಂಚುತ್ತಿರುವ ಫೋಟೋಗಳನ್ನು ಅಪಲೋಡ್​ ಮಾಡಿದ್ದರು.

ಇನ್ನು ಮುಂಬೈನಲ್ಲಿ ಕೋವಿಡ್ ಸೋಂಕು ಕೈ ಮೀರಿ ವ್ಯಾಪಿಸುತ್ತಿದೆ. ಒಂದು ಕಡೆ ಚೀನಿ ವೈರಸ್ ಅಬ್ಬರ ಹೆಚ್ಚಾಗಿದ್ದರೆ, ಮತ್ತೊಂದೆಡೆ ಆಸ್ಪತ್ರೆಗಲ್ಲಿ ಬೆಡ್ ಹಾಗೂ ಆಕ್ಸಿಜನ್‍ಗಳ ಅಭಾವ ಎದುರಾಗಿದೆ. ಕೋವಿಡ್ ಸರಪಳಿ ತುಂಡರಿಸಲು ಮಹಾ ಸರ್ಕಾರ ಹರಸಾಹಸ ಪಡುತ್ತಿದೆ.

ಸಿನೆಮಾ – Udayavani – ಉದಯವಾಣಿ
Read More