ನೀವು ತಿನ್ನಲು ಅನ್ನ ಸಿಗದೆ ಸಾಯುತ್ತೀರಿ: ಆಂಬುಲೆನ್ಸ್-ಸ್ಮಶಾನದವರ ವಿರುದ್ಧ ಜಗ್ಗೇಶ್ ಆಕ್ರೋಶ

ಬೆಂಗಳೂರು: ಕೋವಿಡ್ ಮಹಾಮಾರಿಗೆ ಬಲಿಯಾದವರ ಅಂತ್ಯ ಸಂಸ್ಕಾರಕ್ಕೆ ಆ್ಯಂಬುಲೆನ್ಸ್ ಹಾಗೂ ಚಿತಾಗಾರದ ಸಿಬ್ಬಂದಿಗಳು ಹಣ ಪೀಕುತ್ತಿರುವ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಬಿಬಿಎಂಪಿಯವರೇ ಮಾಡಬೇಕು. ಆದರೆ, ಈ ನಿಮಯ ಗಾಳಿಗೆ ತೂರಿರುವ ಕೆಲವರು, ಕೋವಿಡ್‍ನಿಂದ ಬಲಿಯಾದವರ ಶವಗಳ ಮೇಲೆ ಹಣದ ದಂಧೆಗೆ ಇಳಿದಿವೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದೀಗ ಸ್ವತಃ ಕನ್ನಡದ ನಟ ನವರಸ ನಾಯಕ ಜಗ್ಗೇಶ್ ಅವರೇ ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. …

ಪ್ರೇಮ್‌ ಮೊಗದಲ್ಲಿ 3 ಮಿಲಿಯನ್‌ ನಗು!

ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ ಚಿತ್ರದ “ಹೇಳು ಯಾಕೆ’ ಹಾಡು ಯುಗಾದಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ಆ ಹಾಡು ಪ್ರೇಕ್ಷಕರ ಮೆಚ್ಚುಗೆ ಪಡೆ ಯುವ ಮೂಲಕ ಮೂರು ಮಿಲಿಯನ್‌ ಹಿಟ್ಸ್‌ ಪಡೆದುಕೊಂಡಿದೆ. ಇದು ಪ್ರೇಮ್‌ ಅವರಿಗೆ ಖುಷಿ ಕೊಟ್ಟಿದೆ. ಈ ಯಶಸ್ಸಿಗೆ ಕಾರಣರಾದವರಿಗೆ ಪ್ರೇಮ್‌ ಧನ್ಯವಾದ ತಿಳಿಸಿದ್ದಾರೆ. ಈ ಹಾಡನ್ನು ಸ್ವತಃ ಪ್ರೇಮ್‌ ಬರೆದು ಹಾಡಿದ್ದರು. ಈಗಾಗಲೇ ಅನೇಕ ಸಿನಿಮಾಗಳು ಕನ್ನಡದ ಜೊತೆಗೆ ಪರಭಾಷೆಯಲ್ಲೂ ತಯಾರಾಗುತ್ತಿದೆ. ಈ ಸಾಲಿಗೆ ಈಗ ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ …

ಕೋವಿಡ್ ನಿಂದ ಭಾವನನ್ನು ಕಳೆದು ಕೊಂಡ ಗಟ್ಟಿಮೇಳ ನಟ ಪವನ್ : ನೋವಿನಲ್ಲಿ ಹೇಳಿದ್ದೇನು ಗೊತ್ತಾ?

ಬೆಂಗಳೂರು :  ಕೋವಿಡ್ ಸೋಂಕಿನಿಂದ ಧಾರಾವಾಹಿ ನಟ ಪವನ್ ಕುಮಾರ್  ಅವರ ಭಾವ ಮತ್ತು ಭಾವನ ತಂದೆ ಮೃತ ಪಟ್ಟಿದ್ದಾರೆ. ಕಳೆದ ಎರಡು ದಿನದಲ್ಲಿ ಸಂಬಧಿಕರನ್ನು ಕಳೆದುಕೊಂಡಿರುವ ಪವನ್ ನೋವಿನ ಮಾತುಗಳನ್ನಾಡಿ ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಅವರು, ಇದು ಮೊದಲು ಬಂದ ಕೋವಿಡ್ ಅಲೆಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಯಾರ ಮಾತನ್ನೂ ಕೇಳಬೇಡಿ.. ಹುಷಾರಾಗಿರಿ.. ಅಂತ ಜನರಲ್ಲಿ ಕೇಳಿಕೊಂಡಿದ್ದಾರೆ. ಸೋಂಕಿನಿಂದ ಭಾವ ಹಾಗೂ ಭಾವನ ತಂದೆಯನ್ನ ಎರಡು ದಿನದಲ್ಲಿ ಕಳೆದುಕೊಂಡಿದ್ದಾರೆ. ಇನ್ನೂ ಮೂರು ಜನ ಕೋವಿಡ್ ಕಾರಣ …

ಕೊರೊನಾಕ್ಕೆ ಭಯಪಡಬೇಡಿ, ಧೈರ್ಯವಾಗಿ ಎದುರಿಸಿ: ಪುನೀತ್ ರಾಜ್ ಕುಮಾರ್

ದಿನದಿಂದ ದಿನಕ್ಕೆ ಕೊರೋನಾ ಎರಡನೇ ಅಲೆಯ ಅಬ್ಬರ ಜೋರಾಗುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿದೆ. ಇದು ಸಹಜವಾಗಿಯೇ ಜನಸಾಮಾನ್ಯರಲ್ಲಿ ಭಯ-ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ನಟ ಪವರ್ ಸ್ಟಾರ್‌ ಪುನೀತ್‌ ರಾಜಕುಮಾರ್‌, ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. “ಒಂದು ವೇಳೆ ಕೊರೋನಾ ಪಾಸಿಟಿವ್‌ ಬಂದ್ರೂ ಬೇಜಾರಾಗಬೇಡಿ, ಭಯ ಪಡಬೇಡಿ. ಧೈರ್ಯವಾಗಿ ಎದುರಿಸಿ. ಮಾಸ್ಕ್ ಧರಿಸೋದು ಮರಿಬೇಡಿ. ಸುರಕ್ಷತಾ ಕ್ರಮಗಳನ್ನು ಅನುಸರಿಸಿ’ ಎಂದು ಪವರ್‌ಸ್ಟಾರ್‌ ಮನವಿ ಮಾಡಿದ್ದಾರೆ. ಈ ಕುರಿತು ವಿಡಿಯೋದಲ್ಲಿ ಮಾತನಾಡಿರುವ ಪುನೀತ್‌ ರಾಜಕುಮಾರ್‌, “ಕೊರೊನಾ …

ಅಪ್ಪಾಜಿ ಜನ್ಮದಿನಕ್ಕೆ ಪುಟ್ಟ ಕಾಣಿಕೆ ನೀಡಿದ ಅಪ್ಪು

ಬೆಂಗಳೂರು : ಇಂದು ನಟಸಾರ್ವಭೌಮ, ವರನಟ ಡಾ. ರಾಜಕುಮಾರ್ ಅವರ 92ನೇ ಜನ್ಮ ದಿನ. ಕನ್ನಡ ಚಿತ್ರರಂಗದ ಧ್ರುವತಾರೆ ಅಣ್ಣಾವ್ರ ಹುಟ್ಟುಹಬ್ಬದ ದಿನವಾದ ಇಂದು ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ನಟ ಪುನೀತ್ ರಾಜಕುಮಾರ್ ತಮ್ಮ ತಂದೆಯ ಜನ್ಮದಿನಕ್ಕೆ ಪುಟ್ಟ ಕಾಣಿಕೆ ನೀಡಿದ್ದಾರೆ. ರಾಜಕುಮಾರ್ ಅವರು ಹಾಡಿರುವ ಬಡವರ ಬಂಧು ಸಿನಿಮಾದ ‘ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕತೆಯ ಹೇಳಿವೆ. ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿವೆ. ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ. ಬಿಸಿಲು …

ಅನಾರೋಗ್ಯ: ಈ ವಾರವೂ 'ಬಿಗ್ ಬಾಸ್' ವೇದಿಕೆಗೆ ಕಿಚ್ಚ ಸುದೀಪ್ ಗೈರು!

ಬೆಂಗಳೂರು: ಈ ವಾರವೂ 'ಬಿಗ್ ಬಾಸ್' ವೇದಿಕೆಗೆ ಕಿಚ್ಚ ಸುದೀಪ್ ಬರುತ್ತಿಲ್ಲ. ಅನಾರೋಗ್ಯದ ಕಾರಣ ಈ ವಾರಾಂತ್ಯವೂ ಬಿಗ್ ಬಾಗ್ ಸಂಚಿಕೆಗಳ ಚಿತ್ರೀಕರಣಕ್ಕೆ ಹಾಜರಾಗುತ್ತಿಲ್ಲ ಎಂದು  ಖುದ್ದು ಸುದೀಪ್ ಟ್ವಿಟ್ಟರ್ ಮೂಲಕ ಸ್ಪಷ್ಟ ಪಡಿಸಿದ್ದಾರೆ.  'ಬಿಗ್ ಬಾಸ್' ವೀಕೆಂಡ್  ಸಂಚಿಕೆಗಳ ಚಿತ್ರೀಕರಣಕ್ಕೆ ಮಿಸ್ ಆಗುತ್ತಿದ್ದೇನೆ. 'ಬಿಗ್ ಬಾಸ್' ವೇದಿಕೆ ಮೇಲೆ ಗಂಟೆಗಟ್ಟಲೆ ಶೂಟಿಂಗ್ ಮಾಡಿ ಎಲ್ಲಾ ಸ್ಪರ್ಧಿಗಳಿಗೂ ನ್ಯಾಯ ಒದಗಿಸುವ ಮುನ್ನ ನನಗೆ ಇನ್ನೂ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಇದು ಕಠಿಣ ನಿರ್ಧಾರ. ಚಿತ್ರೀಕರಣವನ್ನು ರದ್ದು   ಮಾಡಿದ …

ಪ್ರೀತಿಗೆ ವಿರೋಧ: ಸಹೋದರನ ಕೊಲೆ ಸಂಬಂಧ ಕನ್ನಡದ ನಟಿ ಶನಾಯ ಕಾಟ್ವೆ, ಪ್ರಿಯಕರನ ಬಂಧನ

ಹುಬ್ಬಳ್ಳಿ: ರಾಕೇಶ್ ಕಾಟ್ವೆ ಎಂಬಾತನ ರುಂಡ, ಮುಂಡ ಬೇರ್ಪಟ್ಟಿದ್ದು ಅರ್ಧಂಬರ್ಧ ಸುಟ್ಟು ಹಾಕಿದ್ದ ಆತನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಇದೀಗ ಛೋಟಾ ಬಾಂಬೆ ಚಿತ್ರದ ನಟಿ ಶನಾಯ, ಪ್ರಿಯಕರ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ.  ಏಪ್ರಿಲ್ 11ರಂದು ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ರಾಕೇಶ್ ಮೃತದೇಹ ಪತ್ತೆಯಾಗಿತ್ತು. ಈ ಮೃತದೇಹ ಶನಾಯಳ ಸಹೋದರ ರಾಕೇಶ್ ಎಂದು ತಿಳಿಯುತ್ತಿದ್ದಂತೆ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದರು.  ಪ್ರಕರಣದ ತನಿಖೆಗಿಳಿಯುತ್ತಿದ್ದಂತೆ ಪೊಲೀಸರು ಶನಾಯಳ ಪ್ರಿಯಕರ ನಿಯಾಜ್, ಸಹಚರರಾದ ಮಲ್ಲಿಕ್, ಫಿರೋಜ್, …

ದೃಶ್ಯವೊಂದಕ್ಕಾಗಿ ರಾಜ್‌ ಕುಮಾರ್ ಎಂಟು ಗಂಟೆ ಕದಲದೇ ನಿಂತೇ ಇದ್ದರು!

“ದಶಾವತಾರ ’ ಚಿತ್ರದಲ್ಲಿ ರಾಜ್‌ಕುಮಾರ್‌ ರಾವಣ ಪಾತ್ರವನ್ನು ಮಾಡಿರೋದು ಗೊತ್ತೇ ಇದೆ. ದಶಕಂಠನ ಈ ಪಾತ್ರಕ್ಕೆ ರಾವಣನ ಹತ್ತೂ ತಲೆಗಳನ್ನು ತೋರಿಸಬೇಕಿತ್ತು. ಹತ್ತೂ ತಲೆಗಳೂ ಜೀವಂತ ತಲೆಗಳಾಗಿರಬೇಕಿತ್ತು. ಇವತ್ತಿನ ಗ್ರಾಫಿಕ್ಸ್‌ ತಂತ್ರಜ್ಞಾನ ಅವತ್ತು ಇರಲಿಲ್ಲ. ಟ್ರಿಕ್ಸ್‌ ಶಾಟ್ಸ್‌ ಅನಿವಾರ್ಯವಾಗಿತ್ತು. ಕ್ಯಾಮರಾಮೆನ್‌ ದೊರೆ ಅವರು ಮೂರು ದಿನ ಹಗಲು-ರಾತ್ರಿ ಯೋಚಿಸಿ ಒಂದು ಐಡಿಯಾ ಕಂಡು ಹಿಡಿದರು. ರಾಜ್‌ ಅವರಿಗೆ ಅವರ ಯೋಜನೆ ವಿವರಿಸಿ, ಚಿತ್ರೀಕರಣಕ್ಕೆ ಒಂದು ಇಡೀ ರಾತ್ರಿ ಬೇಕಾಗುತ್ತದೆ ಎಂದು, ಅಲ್ಲದೆ ನಿಂತ ಜಾಗದಿಂದ ಒಂದಿಂಚೂ ಅತ್ತಿತ್ತ ಕದಲಬಾರದು …

ಈ ವಾರವೂ ವೀಕೆಂಡ್‌ನ‌ಲ್ಲಿ ಕಿಚ್ಚನ ದರ್ಶನವಿಲ್ಲ

ಪ್ರತಿವಾರ ರಿಯಾಲಿಟಿ ಶೋ ಮೂಲಕ ವೀಕೆಂಡ್‌ನ‌ಲ್ಲಿ ನಟ ಕಿಚ್ಚ ಸುದೀಪ್‌ ಕಿರುತೆರೆ ಪ್ರೇಕ್ಷಕರಿಗೆ ತಮ್ಮ ನಿರೂಪಣೆ ಮೂಲಕ ದರ್ಶನ ಕೊಡುತ್ತಿದ್ದರು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸುದೀಪ್‌ ಕಳೆದವಾರ ತಮ್ಮ ಕಿರುತೆರೆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ಕಳೆದ ವಾರ ಕಿರುತೆರೆ ವೀಕ್ಷಕರಿಗೆ ಸುದೀಪ್‌ ಅವರನ್ನು ಟಿವಿಯಲ್ಲಿ ನೋಡುವ ಅವಕಾಶ ಮಿಸ್‌ ಆಗಿತ್ತು. ಇನ್ನು ಈ ವಾರ ಸುದೀಪ್‌ ಎಂದಿನಂತೆ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಕಳೆದ ವಾರದಂತೆ ಈ ವಾರವೂ ಕಿರುತೆರೆಯಲ್ಲಿ ಕಿಚ್ಚ ಸುದೀಪ್‌ ಕಾಣಿಸಿಕೊಳ್ಳುತ್ತಿಲ್ಲ. ಸುದೀಪ್‌ ಆರೋಗ್ಯದಲ್ಲಿ …

ಇಂದು ವರನಟ ಡಾ.ರಾಜ್‌ ಕುಮಾರ್ 93ನೇ ಹುಟ್ಟುಹಬ್ಬ

ಇಂದು ವರನಟ ಡಾ. ರಾಜ್‌ಕುಮಾರ್‌ ಅವರ 93ನೇ ಹುಟ್ಟುಹಬ್ಬ. ಅಭಿಮಾನಿಗಳ ಏಪ್ರಿಲ್‌ 24, 2021 ಪಾಲಿಗೆ ದೊಡ್ಡ ಹಬ್ಬ. ಅಭಿಮಾನಿಗಳನ್ನೇ ದೇವರೆಂದು ಕರೆದ ಮಹಾನ್‌ ವ್ಯಕ್ತಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ. ರಾಜ್‌ ಇವತ್ತು ನಮ್ಮ ಜೊತೆಗಿಲ್ಲದೇ ಇರಬಹುದು. ಆದರೆ, ಪ್ರತಿ ಅಭಿಮಾನಿಯ ಮನದಲ್ಲಿ ಕನ್ನಡ ನೆಲದ ಕಣಕಣದಲ್ಲೂ ಅವರ ಉಸಿರಿದೆ. ಅದೇ ಕಾರಣದಿಂದ ರಾಜ್‌ ಕುಮಾರ್‌ ಅಂದಿನಿಂದ ಇಂದಿನವರೆಗೆ ಎಲ್ಲಾ ತಲೆಮಾರುಗಳಿಗೆ ಪ್ರೇರಣೆಯಾಗುತ್ತಲೇ ಬಂದಿದ್ದಾರೆ. ಕೊರೊನಾ ಲಾಕ್‌ಡೌನ್‌ ಇಲ್ಲದೇ ಇರುತ್ತಿದ್ದರೆ ಇಂದು ಡಾ. ರಾಜ್‌ …