Categories
Food

ಬಾಳೆಹಣ್ಣಿನ ಬಜ್ಜಿ

ಬೇಕಾಗುವ ಪದಾರ್ಥಗಳು

  • ಮೈದಾ ಹಿಟ್ಟು- ಅರ್ಧ ಬಟ್ಟಲು
  • ಅಕ್ಕಿ ಹಿಟ್ಟು – 2 ಚಮಚ
  • ಸಕ್ಕರೆ- 2 ಚಮಚ
  • ಅರಿಶಿನದ ಪುಡಿ- ಅರ್ಧ ಚಮಚ
  • ಏಲಕ್ಕಿ ಪುಡಿ- ಕಾಲು ಚಮಚ
  • ಚುಕ್ಕಿ ಬಾಳೆಹಣ್ಣು- 3
  • ಎಣ್ಣೆ- ಕರಿಯಲು ಆಗತ್ಯವಿರುವಷ್ಟು

ಮಾಡುವ ವಿಧಾನ…

  • ಮೈದಾ ಹಿಟ್ಟು, ಅಕ್ಕಿ ಹಿಟ್ಟು , ಸಕ್ಕರೆ, ಅರಿಶಿನದ ಪುಡಿ, ಏಲಕ್ಕಿ ಪುಡಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಸ್ವಲ್ಪ ನೀರು ಹಾಕಿ ಬಜ್ಜಿಯ ಹಿಟ್ಟಿನಂತೆ ಕಲಸಿಕೊಳ್ಳಬೇಕು.
  • ನಂತರ ಚುಕ್ಕಿ ಬಾಳೆಹಣ್ಣಿನ ಸಿಪ್ಪೆ ತೆಗೆದು, ಉದ್ದಕ್ಕೆ ಸಣ್ಣಗೆ ಕತ್ತರಿಸಿಕೊಳ್ಳಬೇಕು. ನಂತರ ಒಲೆಯ ಮೇಲೆ ಎಣ್ಣೆ ಇಟ್ಟು. ಕಾದ ನಂತರ ಹಿಟ್ಟಿಗೆ ಕತ್ತರಿಸಿದ ಬಾಳೆಹಣ್ಣನ್ನು ಅದ್ದಿ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಬಾಳೆಹಣ್ಣಿನ ಬಜ್ಜಿ ಸವಿಯಲು ಸಿದ್ಧ.

Kannadaprabha – ಆಹಾರ-ವಿಹಾರ – https://www.kannadaprabha.com/food/
Read More

Categories
Food

ಬಾಳೆಹಣ್ಣಿನ ಮಾಲ್ಪುವಾ

ಬೇಕಾಗುವ ಪದಾರ್ಥಗಳು…

  • ಚುಕ್ಕಿ ಬಾಳೆಹಣ್ಣು- 1
  • ಹಾಲು- 3 ಬಟ್ಟಲು
  • ಸಕ್ಕರೆ- 1.5 ಬಟ್ಟಲು
  • ಗೋಧಿ ಹಿಟ್ಟು- 1 ಬಟ್ಟಲು
  • ಸಣ್ಣ ರವೆ- ಒಂದು ಸಣ್ಣ ಬಟ್ಟಲು
  • ಜೀರಿಗೆ- ಒಂದು ಚಮಚ
  • ಏಲಕ್ಕಿ ಪುಡಿ- ಅರ್ಧ ಚಮಚ
  • ಕ್ರೀಮ್- 2 ಚಮಚ
  • ಕೇಸರಿ ದಳ- 10
  • ಎಣ್ಣೆ-ಕರಿಯಲು

ಮಾಡುವ ವಿಧಾನ…

  • ಮೊದಲು ಮಿಕ್ಸಿ ಜಾರ್'ಗೆ ಒಂದು ಬಾಳೆಹಣ್ಣು ಹಾಗೂ ಅರ್ಧ ಬಟ್ಟಲು ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
  • ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು, ಗೋಧಿಹಿಟ್ಟು, ರವೆ, ಜೀರಿಗೆ, ಜೀರಿಗೆ, ಏಲಕ್ಕಿ ಪುಡಿ, ಕ್ರೀಮ್ ಹಾಕಿ ಮಿಶ್ರಣ ಮಾಡಿಕೊಂಡು, ಸ್ವಲ್ವ ಸ್ವಲ್ಪವೇ ಹಾಲನ್ನು ಹಾಕಿ ಉಂಡೆ ಕಟ್ಟದಂತೆ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.
  • ಒಲೆಯ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಸ್ವಲ್ಪ ನೀರು, ಸಕ್ಕರೆ ಹಾಗೂ ಕೇಸರಿ ದಳವನ್ನು ಹಾಕಿ ಪಾಕ ಸಿದ್ದಪಡಿಸಿಟ್ಟುಕೊಳ್ಳಬೇಕು.
  • ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆಯನ್ನು ಹಾಕಬೇಕು. ಎಣ್ಣೆ ಕಾದ ನಂತರ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವರೆಗೂ ಕರಿಯಬೇಕು. ನಂತರ ಈಗಾಗಲೇ ತಯಾರಿಸಿಕೊಂಡ ಸಕ್ಕರೆ ಪಾಕಕ್ಕೆ ಹಾಕಿ, 2 ನಿಮಿಷಗಳಾದ ಬಳಿಕ ತೆಗೆದರೆ ರುಚಿಕರವಾದ ಬಾಳೆಹಣ್ಣಿನ ಮಾಲ್ಪುವಾ ಸವಿಯಲು ಸಿದ್ಧ. 

Kannadaprabha – ಆಹಾರ-ವಿಹಾರ – https://www.kannadaprabha.com/food/
Read More

Categories
Food

ಬಾದಾಮಿ ಮಿಲ್ಕ್ ಶೇಕ್

ಬೇಕಾಗುವ ಪದಾರ್ಥಗಳು…

  • ಬಾದಾಮಿ-  25 (ನೆನೆಸಿ ಸಿಪ್ಪೆ ತೆಗೆದದ್ದು)
  • ಹಾಲು – 1 ಲೀಟರ್
  • ಕಂಡೆನ್ಸ್ಡ್ ಮಿಲ್ಕ್ – ಅರ್ಧ ಬಟ್ಟಲು
  • ಸಕ್ಕರೆ- ಸ್ವಲ್ಪ
  • ಕೇಸರಿ- ಸ್ವಲ್ಪ
  • ವೆನಿಲಾ ಐಸ್ ಕ್ರೀಮ್ – ಸ್ವಲ್ಪ

ಮಾಡುವ ವಿಧಾನ…

  • ಮೊದಲಿಗೆ ಬಾದಾಮಿ ಹಾಗೂ ಸ್ವಲ್ಪ ಹಾಲನ್ನು ಮಿಕ್ಸಿ ಜಾರ್'ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು.
  • ಒಲೆಯ ಮೇಲೆ ಪಾತ್ರೆ ಇಟ್ಟು ಹಾಲನ್ನು ಹಾಕಿ 5-10 ನಿಮಿಷ ಕಾಯಿಸಬೇಕು. (ಆಗಾಗ ಸ್ಪೂನ್ ನಲ್ಲಿ ಕೈಯಾಡಿಸುತ್ತಿರಬೇಕು.
  • ನಂತರ ಕಂಡೆನ್ಸ್ಡ್ ಮಿಲ್ಕ್, ರುಬ್ಬಿಕೊಂಡ ಬಾದಾಮಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 10 ನಿಮಿಷ ಕುದಿಯಲು ಬಿಡಬೇಕು. ನಂತರ ಕೇಸರಿ ದಳವನ್ನು ಹಾಕಿ 3 ನಿಮಿಷ ಕಾಯಲು ಬಿಡಿ.
  • ನಂತರ ಹಾಲು ಸಂಪೂರ್ಣವಾಗಿ ತಣ್ಣಗಾದ ಬಳಿಕ ಫ್ರಿಡ್ಜ್ ನಲ್ಲಿ 30 ನಿಮಿಷ ಇಡಿ. ನಂತರ ಮಿಕ್ಸಿ ಜಾರ್'ಗೆ ಸಣ್ಣಗಾದ ಹಾಲು ಸ್ವಲ್ಪ ಸಕ್ಕರೆ ಹಾಗೂ ಐಸ್'ಕ್ರೀಮ್ ಹಾಕಿ ರುಬ್ಬಿಕೊಂಡರೆ ರುಚಿಕರವಾದ ಬಾದಾಮಿ ಮಿಲ್ಕ್ ಶೇಕ್ ಕುಡಿಯಲು ಸಿದ್ಧ.

Kannadaprabha – ಆಹಾರ-ವಿಹಾರ – https://www.kannadaprabha.com/food/
Read More

Categories
Food

ಬೇಳೆ ದೋಸೆ

ಬೇಕಾಗುವ ಪದಾರ್ಥಗಳು

  • ಹೆಸರುಬೇಳೆ – ಒಂದು ಸಣ್ಣ ಬಟ್ಟಲು
  • ಉದ್ದಿನಬೇಳೆ – ಒಂದು ಸಣ್ಣ ಬಟ್ಟಲು
  • ಕಡಲೆಬೇಳೆ- ಒಂದು ಸಣ್ಣ ಬಟ್ಟಲು
  • ತೊಗರಿಬೇಳೆ – ಒಂದು ಸಣ್ಣ ಬಟ್ಟಲು
  • ಅಕ್ಕಿ- ಒಂದು ಸಣ್ಣ ಬಟ್ಟಲು
  • ಜೀರಿಗೆ- ಒಂದು ಚಮಚ
  • ಒಣಗಿದ ಮೆಣಸಿನ ಕಾಯಿ -4-5

ಮಾಡುವ ವಿಧಾನ…

  • ಹೆಸರುಬೇಳೆ, ಉದ್ದಿನಬೇಳೆ, ಕಡಲೆಬೇಳೆ, ತೊಗರಿಬೇಳೆ, ಅಕ್ಕಿ, ಜೀರಿಗೆ, ಒಣಗಿದ ಮೆಣಸಿನ ಕಾಯಿ ಎಲ್ಲವನ್ನೂ 1 ಗಂಟೆ ಕಾಲ ನೆನೆಸಿಟ್ಟುಕೊಳ್ಳಬೇಕು.
  • ನಂತರ ನೆನೆಸಿದ ಬೇಳೆ, ಅಕ್ಕಿ ಎಲ್ಲವನ್ನೂ ಮಿಕ್ಸಿ ಜಾರ್'ಗೆ ಹಾಕಿ ರುಬ್ಬಿಕೊಳ್ಳಬೇಕು.
  • ನಂತರ ರುಬ್ಬಿಕೊಂಡ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಅಡುಗೆ ಸೋಡವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
  • ನಂತರ ಒಲೆಯ ಮೇಲೆ ತವಾ ಇಟ್ಟು ಕಾದ ನಂತರ ಹಿಟ್ಟನ್ನು ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ ರುಚಿಕರವಾದ ಬೇಳೆ ದೋಸೆ ಸವಿಯಲು ಸಿದ್ಧ.

Kannadaprabha – ಆಹಾರ-ವಿಹಾರ – https://www.kannadaprabha.com/food/
Read More

Categories
Food

ಓಟ್ಸ್ ಬನಾನ ಪ್ಯಾನ್ ಕೇಕ್

ಬೇಕಾಗುವ ಪದಾರ್ಥಗಳು

  • ರೋಲ್ಡ್ ಓಟ್ಸ್- 1 ಬಟ್ಟಲು
  • ಚುಕ್ಕೆ ಬಾಳೆಹಣ್ಣು- 1
  • ಸಕ್ಕರೆ- ಸ್ವಲ್ಪ
  • ಮೊಟ್ಟೆ- 1
  • ಜೇನುತುಪ್ಪ- 1 ಚಮಚ
  • ಚಕ್ಕೆ ಪುಡಿ- ಕಾಲು ಚಮಚ
  • ಬೇಕಿಂಗ್ ಸೋಡಾ- 1/4 ಚಮಚ
  • ಉಪ್ಪು- ಚಿಟಿಕೆಯಷ್ಟು

ಮಾಡುವ ವಿಧಾನ…

  • ಪಾತ್ರೆಯೊದಕ್ಕೆ ರೋಲ್ಡ್ ಓಟ್ಸ್, ಚುಕ್ಕೆ ಬಾಳೆಹಣ್ಣು, ಸಕ್ಕರೆ, ಮೊಟ್ಟೆ, ಜೇನುತುಪ್ಪ, ಚಕ್ಕೆಪುಡಿ, ಬೇಕಿಂಗ್ ಸೋಡಾ, ಉಪ್ಪು ಎಲ್ಲವನ್ನೂ ಹಾಕಿ ಬೀಟರ್ ನಿಂದ ನುಣ್ಣಗೆ ಮಾಡಿಕೊಳ್ಳಬೇಕು.
  • ನಂತರ ಒಲೆಯ ಮೇಲೆ ಪ್ಯಾನ್ ಇಟ್ಟು ಕಾದ ಬಳಿಕ ಸ್ವಲ್ಪ ಹಿಟ್ಟನ್ನೇ ಹಾಕಿ ಎರಡೂ ಬದಿಯಲ್ಲಿ ಹಾಕಿ ಸುಟ್ಟರೆ ರುಚಿಕರವಾದ ಓಟ್ಸ್ ಬಾಳೆಹಣ್ಣು ಪ್ಯಾನ್ ಕೇಕ್ ಸವಿಯಲು ಸಿದ್ಧ.

Kannadaprabha – ಆಹಾರ-ವಿಹಾರ – https://www.kannadaprabha.com/food/
Read More

Categories
Food

ರಾಗಿ ಲಾಡೂ

ಬೇಕಾಗುವ ಪದಾರ್ಥಗಳು

  • ರಾಗಿ ಹಿಟ್ಟು- 1 ಬಟ್ಟಲು
  • ದ್ರಾಕ್ಷಿ, ಗೋಂಡಬಿ- ಸ್ವಲ್ಪ
  • ನೀರು- ಅರ್ಧ ಬಟ್ಟಲು
  • ಬೆಲ್ಲ- 150 ಗ್ರಾಂ
  • ಏಲಕ್ಕಿ ಪುಡಿ- ಅರ್ಧ ಚಮಚ
  • ತುಪ್ಪ ಸ್ವಲ್ಪ

ಮಾಡುವ ವಿಧಾನ…

  • ಬಾಣಲೆಗೆ 2 ಚಮಚ ತುಪ್ಪವನ್ನು ಹಾಕಿ ರಾಗಿ ಹಿಟ್ಟನ್ನು 3-5 ನಿಮಿಷ ಹುರಿದುಕೊಳ್ಳಬೇಕು.
  • ಪ್ಯಾನ್ ವೊಂದಕ್ಕೆ ಸ್ವಲ್ಪ ತುಪ್ಪ ಹಾಕಿ ಕಾದ ನಂತರ ದ್ರಾಕ್ಷಿ ಹಾಗೂ ಗೋಡಂಬಿ ಹುರಿದಿಟ್ಟುಕೊಳ್ಳಬೇಕು.
  • ಬಾಣಲೆಗೆ ನೀರು ಹಾಕಿ ಕಾದ ಬಳಿಕ ಬೆಲ್ಲವನ್ನು ಹಾಕಿ 2 ನಿಮಿಷ ಕುದಿಯಲು ಬಿಡಬೇಕು.
  • ಬೆಲ್ಲದ ನೀರನ್ನು ಶೋಧಿಸಿಟ್ಟುಕೊಳ್ಳಬೇಕು. ರಾಗಿ ಹಿಟ್ಟಿಗೆ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಹಾಗೂ ಬೆಲ್ಲದ ನೀರನ್ನು ರಾಕಿ ನಿಧಾನವಾಗಿ ಮಿಶ್ರಣ ಮಾಡಿಕೊಂಡು ಉಂಡೆ ಕಟ್ಟಿದರೆ, ರುಚಿಕರವಾದ ಹಾಗೂ ಆರೋಗ್ಯಕರವಾದ ರಾಗಿ ಲಾಡೂ ಸವಿಯಲು ಸಿದ್ಧ.

Kannadaprabha – ಆಹಾರ-ವಿಹಾರ – https://www.kannadaprabha.com/food/
Read More

Categories
Food

ಆಲೂ ಸ್ಟಫ್

ಬೇಕಾಗುವ ಪದಾರ್ಥಗಳು

  • ಆಲೂಗಡ್ಡೆ-2
  • ಬೆಣ್ಣೆ- 4 ಚಮಚ
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಹಾಲು- 4 ಚಮಚ
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 2
  • ಉಪ್ಪು- ರುಚಿಗೆ ತಕ್ಕಷ್ಟು
  • ಕಾಳು ಮೆಣಸಿನ ಪುಡಿ- ಅರ್ಧ ಚಮಚ

ಮಾಡುವ ವಿಧಾನ…

  • ಆಲೂಗಡ್ಡೆಯನ್ನು ಬೇಯಿಸಿ ಬಂದ ನಂತರ ಆರಿಸಿ ಉದ್ದುದ್ದಕ್ಕೆ ಮಧ್ಯಕ್ಕೆ ಕತ್ತರಿಸಿಕೊಳ್ಳಿ. ಎಚ್ಚರಿಕೆಯಿಂದ ಮಧ್ಯಭಾಗವನ್ನು ಮಾತ್ರವೇ ತೆಗೆದು ಉಳಿದ ಭಾಗವನ್ನು ಟೋಪಿಯಂತೆ ಹಾಗೇ ಬಿಡಿ.
  • ತೆಗೆದುಕೊಂಡ ಮಧ್ಯದ ಭಾಗವನ್ನು ಚೆನ್ನಾಗಿ ಕಿವುಚಿ. ಇದಕ್ಕೆ ಹಾಲು, ಬೆಣ್ಣೆ, ಹೆಚ್ಚಿದ ಈರುಳ್ಳಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು, ಮೆಣಸಿನ ಪುಡಿ, ಎಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಟೋಪಿಯಂತೆ ತೆಗೆದಿಟ್ಟುಕೊಂಡ ಉಳಿದ ಆಲೂಗಡ್ಡೆ ಮಧ್ಯ ಭಾಗಕ್ಕೆ ಮಾಡಿಟ್ಟುಕೊಂಡ ಆಲೂಗಡ್ಡೆ ಮಿಶ್ರಣವನ್ನು ಒಂದೆರಡು ಚಮಚ ಹಾಕಿ ತುಂಬಿ. ಹೀಗೆ ಎಲ್ಲವನ್ನೂ ಮಾಡಿ, ಓವನ್ ನಲ್ಲಿಟ್ಟು ಸಾಮಾನ್ಯ ಉಷ್ಣತೆಯಲ್ಲಿಯೇ 15-20 ನಿಮಿಷ ಬೇಯಿಸಿದರೆ ರುಚಿಕರವಾದ ಆಲೂ ಸ್ಟಫ್ ಸವಿಯಲು ಸಿದ್ಧ. 

Kannadaprabha – ಆಹಾರ-ವಿಹಾರ – https://www.kannadaprabha.com/food/
Read More

Categories
Food

ಮಸಾಲಾ ಕಾರ್ನ್ ಫ್ರೈಸ್

ಬೇಕಾಗುವ ಪದಾರ್ಥಗಳು..

  • ಸ್ವೀಟ್ ಕಾರ್ನ್- 2
  • ಜೋಳದ ಹಿಟ್ಟು-1 ಬಟ್ಟಲು
  • ಅಕ್ಕಿ ಹಿಟ್ಟು- 1 ಬಟ್ಟಲು
  • ಜೀರಿಗೆ ಪುಡಿ- 1 ಚಮಚ
  • ಮೆಣಸಿನ ಪುಡಿ – ಅರ್ಧ ಚಮಚ
  • ಬೆಳ್ಳುಳ್ಳು ಪುಡಿ- ಅರ್ಧ ಚಮಚ
  • ಆಂಚೂರ್ ಪೌಡರ್ – ಕಾಲು ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಕರಿಯಲು

ಮಾಡುವ ವಿಧಾನ…

  • ಮೊದಲಿಗೆ ಜೋಳವನ್ನು ಮಧ್ಯೆ ಕತ್ತರಿಸಿಕೊಂಡು ಟೂತ್ ಪಿಕ್ ಗಳ ಮೂಲಕ ಜೋಳವನ್ನು ಹಾಕಿಕೊಳ್ಳಬೇಕು.
  • ನಂತರ ಪಾತ್ರೆಯೊಂದಕ್ಕೆ ನೀರು ಹಾಗೂ ಜೋಳವನು ಟೂತ್ ಪಿಕ್ ಗಳ ಜೊತೆಗೆಯೇ ಬೇಯಿಸಿಕೊಳ್ಳಬೇಕು.
  • ಬಳಿಕ ಬೆಂದ ಜೋಳಕ್ಕೆ ಅಕ್ಕಿ ಹಿಟ್ಟು, ಜೋಳದ ಹಿಟ್ಟು, ಜೀರಿಗೆ ಪುಡಿ, ಮೆಣಸಿನ ಪುಡಿ, ಬೆಳ್ಳುಳ್ಳಿ ಪುಡಿ, ಆಂಚೂರ್ ಪುಡಿ, ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು,
  • ಬಳಿಕ ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಜೋಳವನ್ನು ಹಾಕಿ ಕೆಂಪಗೆ ಕರಿದರೆ, ರುಚಿಕರವಾದ ಮಸಾಲಾ ಕಾರ್ನ್ ಫ್ರೈಸ್ ಸವಿಯಲು ಸಿದ್ಧ.

Kannadaprabha – ಆಹಾರ-ವಿಹಾರ – https://www.kannadaprabha.com/food/
Read More

Categories
Food

ಬಿಸ್ಕೆಟ್ ಪುಡಿಂಗ್

ಬೇಕಾಗುವ ಪದಾರ್ಥಗಳು…

  • ಗೋಧಿ ಬಿಸ್ಕೆಟ್- 15
  • ಮೊಟ್ಟೆ- 3
  • ಸಕ್ಕರೆ -100 ಗ್ರಾಂ
  • ಉಪ್ಪು-1/4 ಚಮಚ
  • ಏಲಕ್ಕಿ ಪುಡಿ- 1/4 ಚಮಚ
  • ಹಾಲು- 250 ಎಂಎಲ್

ಮಾಡುವ ವಿಧಾನ…

  • ಮೊದಲಿಗೆ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬಿಸ್ಕೆಟ್, ಮೊಟ್ಟೆ, ಸಕ್ಕರೆ, ಉಪ್ಪು, ಏಲಕ್ಕಿ ಪುಡಿ ಹಾಗೂ ಹಾಲು ಹಾಕಿ ರುಬ್ಬಿಕೊಳ್ಳಿ.
  • ನಂತರ ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ 1/2 ಬಟ್ಟಲು ಸಕ್ಕರೆ ಹಾಕಿ ಕೆಂಪಗಾಗುವವರೆಗೂ ಕೈಯಾಡಿಸಿ ಕೆರಾಮೆಲ್ ಸಿದ್ಧಪಡಿಸಿಕೊಳ್ಳಿ.
  • ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು, ಇದರ ಈಗಾಗಲೇ ರುಬ್ಬಿಕೊಂಡ ಬಿಸ್ಕೆಟ್ ಮಿಶ್ರಣವನ್ನು ಹಾಕಿ ಮುಚ್ಚಿಡಿ.
  • ದೊಡ್ಡ ಪಾತ್ರೆಗೆ ನೀರನ್ನು ಹಾಕಿ ಅದರಲ್ಲಿ ಬಿಸ್ಕೆಟ್ ಮಿಶ್ರಣ ಹಾಕಿರುವ ಪಾತ್ರೆಯನ್ನು ಇಟ್ಟು 30 ನಿಮಿಷ ಕಡಿಮೆ ಉರಿಯಲ್ಲಿ ಬೇಯಲು ಬಿಡಿ.
  • ತಣ್ಣಗಾದ ಬಳಿಕ ಪಾತ್ರೆ ತೆಗೆದು ನಿಧಾನಗತಿಯಲ್ಲಿ ಕೇಕ್ ತೆಗೆದರೆ ರುಚಿಕರವಾದ ಬಿಸ್ಕೆಟ್ ಕೇಕ್ ಸವಿಯಲು ಸಿದ್ಧ.

Kannadaprabha – ಆಹಾರ-ವಿಹಾರ – https://www.kannadaprabha.com/food/
Read More

Categories
Food

ಬೆಂಗಳೂರು ಸ್ಟೈಲ್ ಬಿರಿಯಾನಿ

ಬೇಕಾಗುವ ಪದಾರ್ಥಗಳು

  • ಎಣ್ಣೆ- 1 ಬಟ್ಟಲು
  • ಕೋಳಿ ಮಾಂಸ- ಅರ್ಧ ಕೆಜಿ
  • ಹಸಿಮೆಣಸಿನ ಕಾಯಿ- 5
  • ಈರುಳ್ಳಿ- ಉದ್ದಕ್ಕೆ ಹೆಚ್ಚಿದ್ದು ಸ್ವಲ್ಪ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
  • ಟೊಮ್ಯಾಟೋ- ಸಣ್ಣಗೆ ಕತ್ತರಿಸಿದ್ದು 2
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಪುದೀನಾ ಸೊಪ್ಪು-ಸ್ವಲ್ಪ
  • ಅಚ್ಚ ಖಾರದ ಪುಡಿ- 1 ಚಮಚ
  • ಗರಂ ಮಸಾಲೆ ಪುಡಿ – ಅರ್ಧ ಚಮಚ
  • ನಿಂಬೆಹಣ್ಣು- 1 (ರಸ)
  • ಮೊಸರು- ಅರ್ಧ ಬಟ್ಟಲು
  • ಉಪ್ಪು-ರುಚಿಗೆ ತಕ್ಕಷ್ಟು
  • ಅಕ್ಕಿ- 1 ಬಟ್ಟಲು (ನೆನೆಸಿದ್ದು)

ಮಾಡುವ ವಿಧಾನ…

  • ಮೊದಲಿಗೆ ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿಯಿರಿ.
  • ಬಳಿಕ ಶುಂಠಿ, ಬೆಳ್ಳುಳ್ಳಿ, ಟೊಮೆಟೋ ಹಾಕಿ ಕೆಂಪಗಾದ ಬಳಿಕ ಕೊತ್ತಮಂಬರಿ ಸೊಪ್ಪು, ಪುದೀನಾ, ಅಚ್ಚ ಖಾರದ ಪುಡಿ, ಗರಂ ಮಸಾಲೆ ಪುಡಿ, ನಿಂಬೆ ಹಣ್ಣಿನ ರಸ ಹಾಗೂ ಮೊಸರು ಹಾಕಿ 5 ನಿಮಿಷ ಬಿಡಿ.
  • ನಂತರ ಉಪ್ಪು ಹಾಗೂ ಮಾಂಸವನ್ನು ಹಾಕಿ 10 ನಿಮಿಷ ಚೆನ್ನಾಗಿ ಬೇಯಲು ಬಿಡಿ.
  • ಮತ್ತೊಂದೆಡೆ ಒಲೆಯ ಮೇಲೆ ಪಾತ್ರೆಯೊಂದಕ್ಕೆ ನೀರು, ಉಪ್ಪು, ಸ್ವಲ್ಪ ಪುದೀನಾ ಸೊಪ್ಪು ಹಾಗೂ ಅಕ್ಕಿಯನ್ನು ಹಾಕಿಡಿ. ಅಕ್ಕಿ 3/4 ಭಾಗದಷ್ಟು ಬೆಂದ ಬಳಿಕ ಬಸಿದು ಅನ್ನವನ್ನು ಸಿದ್ಧಪಡಿಸಿಕೊಳ್ಳಿ.
  • ನಂತರ ಸ್ವಲ್ಪ ಅನ್ನು ತೆಗೆದು ತಟ್ಟೆಯೊಂದಕ್ಕೆ ಹಾಕಿ ಈಗಾಗಲೇ ಮಾಡಿಕೊಂಡ ಮಸಾಲೆಯನ್ನು ಸ್ವಲ್ಪ ಹಾಕಿ ನಂತರ ಮತ್ತೆ ಸ್ವಲ್ಪ ಅನ್ನವನ್ನು ಹಾಕಿ ಲೇಯರ್ ಲೇಯರ್ ರೀತಿ ಹಾಕಿ ಮಧ್ಯಮ ಉರಿಯಲ್ಲಿ ಅನ್ನ ಪೂರ್ತಿ ಬೇಯುವವವರೆ 5-6 ನಿಮಿಷ ಬಿಡಿ. ನಂತರ ನಿಧಾನವಾಗಿ ಮಸಾಲೆ ಜೊತೆಗೆ ಅನ್ನವನ್ನು ಮಿಶ್ರಣ ಮಾಡಿದರೆ, ರುಚಿಕರವಾದ ಬೆಂಗಳೂರು ಸ್ಟೈಲ್ ಬಿರಿಯಾನಿ ಸವಿಯಲು ಸಿದ್ಧ.

Kannadaprabha – ಆಹಾರ-ವಿಹಾರ – https://www.kannadaprabha.com/food/
Read More