ಚರ್ಮ ರೋಗದ ಸಮಸ್ಯೆಯೇ…? ಇಲ್ಲಿದೆ ಸರಳ ಪರಿಹಾರ

ಚರ್ಮ ರೋಗಗಳು  ಎಲ್ಲರನ್ನೂ ಗಾಢವಾಗಿ ಕಾಡುವ ಸಮಸ್ಯೆಗಳಲ್ಲಿ ಒಂದು. ಕೆಲವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸ್ಪಲ್ಪ ಪ್ರಮಾಣದಲ್ಲಿ ದೇಹವನ್ನು ಬಾಧಿಸಿದರೆ ಇನ್ನೂ ಕೆಲವು ಚರ್ಮರೋಗಗಳು ದೇಹದ ಮೇಲೆ ಭಾರಿ ಪರಿಣಾಮವನ್ನು ಬೀರುತ್ತದೆ. ಚರ್ಮ ರೋಗಳನ್ನು ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ದೊರಕುವ ಹಲವು ಗಿಡಮೂಲಿಕೆಗಳು ಮತ್ತು ನೈಸರ್ಗಿಕ ವಸ್ತುಗಳಿಂದ ಪರಿಣಾಮಕಾರಿಯಾಗಿ ಗುಣಪಡಿಸಿಕೊಳ್ಳಬಹುದಾಗಿದೆ. ಚರ್ಮರೋಗದ ನಿವಾರಣೆಗೆ ಹೀಗೆ ಮಾಡಬಹುದು 1.ನಮ್ಮ ಸುತ್ತಮತ್ತಲು ಒದಗುವ ಬೇವಿನ ಎಲೆಯನ್ನು ಹುರಿದು ಅದನ್ನು ಸ್ಪಲ್ಪ ಹೊಂಗೆ ಎಣ್ಣೆಯೊಂದಿಗೆ ಬೆರಸಿ ದೇಹಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ …

ಆಹಾರಕ್ರಮಗಳ ಬದಲಾವಣೆ; ಪಿತ್ತದ ಸಮಸ್ಯೆಗೆ ಇಲ್ಲಿದೆ ಪರಿಹಾರ

ಪಿತ್ತ ರೋಗ ಸಾಮಾನ್ಯವಾಗಿ ಹಲವರಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ನಮ್ಮ ಆಹಾರಕ್ರಮಗಳ ಬದಲಾವಣೆಯಿಂದ ದೇಹವನ್ನು ಬಾಧಿಸುವ ಈ ಪಿತ್ತದ ಸಮಸ್ಯೆ ಯಿಂದಾಗಿ ದೇಹ ಅನಾರೋಗ್ಯಕ್ಕೆ ಈಡಾಗುತ್ತದೆ. ಪಿತ್ತದ ಸಮಸ್ಯೆ ಇರುವವರು ತಮ್ಮ ಆಹಾರ ಕ್ರಮಗಳಲ್ಲಿ ಸ್ಪಲ್ಪ ಬದಲಾವಣೆಗಳನ್ನು ಮಾಡಿಕೊಂಡರೂ ಅಜೀರ್ಣ, ಎದೆ ಮತ್ತು ಗಂಟಲಿನಲ್ಲಿ ಉರಿ ಅನುಭವ, ತಲೆ ಸುತ್ತು, ಹುಳಿತೇಗು, ವಾಂತಿ ಮುಂತಾದ ವಿವಿಧ ಬಗೆಯ ಸಮಸ್ಯೆಗಳಿಂದ ಬಳಲುತ್ತಾರೆ. ಪಿತ್ತದ ಸಮಸ್ಯೆಗೆ ಪರಿಹಾರಗಳೇನು. ನಮ್ಮ ದೇಹದಲ್ಲಿನ ಪ್ರತಿಯೊಂದು ಸಮಸ್ಯೆಗಳಿಗೆ ನೈಸರ್ಗಿಕವಾಗಿ ಸಿಗುವ ವಸ್ತುಗಳಲ್ಲಿ ಪರಿಹಾರಗಳಿದ್ದು, ಈ ನಡುವೆ …

ದೇಹದ ತೂಕ ಇಳಿಸಲು ನೆರವಾಗುವ ಹಾಲು ಮಿಶ್ರಿತ ಚಹಾ

ತೆಳ್ಳಗೆ ಇರಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಬೆಳಗ್ಗೆದ್ದು ಒಂದು ಲೋಟ ಚಹಾ ಕುಡಿಯದೇ ಇರುವುದು ಸಾಧ್ಯವೇ ಇಲ್ಲ. ಗ್ರೀನ್‌ ಟೀ ಇಷ್ಟವಾಗೋದಿಲ್ಲ ಎನ್ನುವವರಿಗೂ ಒಂದು ದಾರಿಯಿದೆ. ಅದುವೇ ದೇಹದ ತೂಕ ಇಳಿಸುವ ಆರೋಗ್ಯಕರ ಚಹಾ. ದೇಹದ ತೂಕ ಇಳಿಸಲು ಕಪ್ಪು, ಹಸುರು, ಗಿಡಮೂಲಿಕೆಗಳಿರುವ ಚಹಾ ಉತ್ತಮವೆಂದು ಕೇಳಿದ್ದೇವೆ. ಇದನ್ನೂ ಓದಿ:ಲಾಲ್ ಭಾಗ್ ಬಳಿ ಯುವಕನ ಮೇಲೆ ಹಲ್ಲೆ ಪ್ರಕರಣ: ಓರ್ವ ಅಪ್ರಾಪ್ತ ವಯಸ್ಕ ಸೇರಿ ಮೂವರ ಬಂಧನ ಮುಖ್ಯವಾಗಿ ಹಾಲು ಹಾಕಿ ಮಾಡಿದ ಚಹಾದಲ್ಲಿ …

ಆರೋಗ್ಯ ಸಂಜೀವಿನಿ ಈ ಪಪ್ಪಾಯ

ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಭ್ಯವಾಗುವ ಹಲವಾರು ಹಣ್ಣು ಹಂಪಲುಗಳು ತನ್ನಲ್ಲಿ ಅತೀ ಹೆಚ್ಚಿನ ಪ್ರಮಾಣದ ವಿಟಮಿನ್ ಗಳನ್ನು ಒಳಗೊಂಡಂತೆ ಆರೋಗ್ಯಕ್ಕೆ ಪೂರಕವಾಗುವ ಅಂಶಗಳನ್ನು ಒಳಗೊಂಡಿರುತ್ತದೆ.  ಅಂತಹ ಹಣ್ಣುಗಳಲ್ಲಿ ಪಪ್ಪಾಯ ಕೂಡಾ ಒಂದು. ದಕ್ಷಿಣ ಆಪ್ರೀಕಾ ಮೂಲದ ಈ ಪಪ್ಪಾಯ ಹಣ್ಣು ಕೊಲಂಬಸ್ ನಿಂದ ಜಗತ್ತಿಗೆ ಪರಿಚಿತವಾಯಿತು. ಅವಾಬಿ(ದೇವರ ಹಣ್ಣು) ಎಂದು ಕರೆಸಿಕೊಳ್ಳುವ ಈ ಪಪ್ಪಾಯ ಹಣ್ಣು ತನ್ನ ರುಚಿ ಹಾಗೂ ಆರೋಗ್ಯಕ್ಕೆ ಪೂರಕವಾಗಿರುವ ಅಂಶಗಳ ಮೂಲಕ ಭಾರತದಲ್ಲಿ ನೆಲೆಯೂರಿದೆ. ಇದನ್ನೂ ಓದಿ:ಸಂಹಿತಾ ವಿನ್ಯಾ ಬೋಲ್ಡ್‌ ನಡಿಗೆ ಪಪ್ಪಾಯಿ …

ಪ್ರಾಯೋಜಿತ: ಮಗುವಿನ ಓಪನ್ ಹಾರ್ಟ್ ಸರ್ಜರಿಗೆ ಧನಸಹಾಯ ಮಾಡಿ-ದಂಪತಿ ಮನವಿ

ಭರವಸೆಗಳನ್ನೇ ಕಳೆದುಕೊಂಡಿರುವ ತಂದೆ ತಾಯಿ ತಮ್ಮ ಮಗನನ್ನು ಉಳಿಸಲು ನಿಮ್ಮ ಮೊರೆ ಬಂದಿದ್ದಾರೆ. ದಯವಿಟ್ಟು ದಾನ ಮಾಡಿ ನನ್ನ ಮಗನ ಹೃದಯ ದುರ್ಬಲವಾಗಿದೆ. ಅವನಿಗೆ ತಕ್ಷಣವೇ ಓಪನ್ ಹಾರ್ಟ್ ಸರ್ಜರಿ ಆಗಬೇಕಿದೆ. ಸಹಾಯ ಮಾಡಿ. “ಹುಟ್ಟಿದ ತಕ್ಷಣ ಆಸ್ಪತ್ರೆಯ ತೊಟ್ಟಿಲಲ್ಲಿ ನನ್ನ ಮಗ ಶಾಂತವಾಗಿ ನಿದ್ದೆ ಮಾಡುತ್ತಿರುವುದನ್ನು ನಾನು ಮೊದಲ ಬಾರಿಗೆ ನೋಡಿದಾಗ, ನನಗೆ ಒಂದು ರೀತಿಯ ಜವಾಬ್ದಾರಿಯ ಅನುಭವವಾಯಿತು. ನಾನು ಬಹಳ ಖುಷಿಯಾಗಿದ್ದೆ ಮತ್ತು ಜಗತ್ತಿನಲ್ಲಿರುವ ಒಳ್ಳೆಯದೆಲ್ಲವನ್ನೂ ಅವನಿಗೆ ದೊರಕಿಸಬೇಕು ಎನ್ನುವ ಆಶಯದಲ್ಲಿದ್ದೆ. ಆದರೆ ಬರುವ …

ರೋಗ ನಿರೋಧಕ ಶಕ್ತಿ ವೃದ್ಧಿಗೆ ದಿನ ನಿತ್ಯ ‘ಹಿತ್ತಲ ತುಳಸಿ’ ಕಷಾಯ ಸೇವಿಸಿ

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ  ಆರೋಗ್ಯವನ್ನು ಹಾಳು ಮಾಡುವ ಹಲವಾರು ರೋಗಗಳಿಂದ ದೇಹವನ್ನು ರಕ್ಷಿಸಿಕೊಳ್ಳಬಹುದಾಗಿದೆ. ಈ ಸಲುವಾಗಿ ದಿನನಿತ್ಯದ  ಕೆಲವು ಆರೋಗ್ಯ ಕ್ರಮಗಳ ಮೂಲಕ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಅಧಿಕಗೊಳಿಸಿಕೊಳ್ಳಬಹುದಾಗಿದೆ. ಹಲವಾರು ನೈಸರ್ಗಿಕ ವಸ್ತುಗಳನ್ನು ಬಳಸಿ ಕಷಾಯವನ್ನು ತಯಾರಿಸಿ ದಿನ ನಿತ್ಯ ಸೇವಿಸುವುದರಿಂದ ನಮ್ಮ  ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದಾಗಿದೆ. ಅಂತಹ ಒಂದು ಕಷಾಯದ ಕುರಿತಾದ ಮಾಹಿತಿ ಇಲ್ಲಿದೆ. ಕಷಾಯ ಮಾಡಲು ಬೇಕಾಗುವ ಸಾಮಾಗ್ರಿಗಳು ಹಿತ್ತಲ ತುಳಸಿ, ಅರಶಿನ, ಶುಂಠಿ , ಜೀರಿಗೆ, ಬೆಲ್ಲ, …

ಆರೋಗ್ಯಕ್ಕೂ, ಸೌಂದರ್ಯಕ್ಕೂ ಅಲೋವೆರಾ ಸಿದ್ದೌಷಧ

ಅಲೋವೆರಾವನ್ನು ಹೆಚ್ಚಾಗಿ ಸೌಂದರ್ಯ ವರ್ಧಕಗಳಲ್ಲಿ ಬಳಸಲಾಗುತ್ತದೆ.ಆರೋಗ್ಯಕ್ಕೂ ಅಲೋವೆರಾ ಹೇಳಿಮಾಡಿಸಿದ ಸಸ್ಯ. ಆ್ಯಂಟಿ ವೈರಲ್ ಹಾಗೂ ಆ್ಯಂಟಿ ಬಯೋಟಿಕ್ ಅಂಶವನ್ನು ಹೊಂದಿರುವ ಸಸ್ಯ ಮಲಬದ್ಧತೆಯಿಂದ ಡಯಾಬಿಟಿಸ್ ಅನ್ನೂ ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿರುವುದರೊಂದಿಗೆ ಅನೇಕ ಗುಣಲಕ್ಷಣಗಳನ್ನು ಹೊಂದಿದೆ. ಅಲೋವೆರಾದ ಆರೋಗ್ಯ ಸಂಬಂಧಿ ಪ್ರಯೋಜನಗಳ ಬಗ್ಗೆ ನೀವು ಈ ಹಿಂದೆ ಕೇಳಿರಬಹುದು ಅಥವಾ ಓದಿರಬಹುದು. ಚರ್ಮ, ತಲೆಕೂದಲು ಉದುರುವಿಕೆಗೆ ಪ್ರಯೋಜನಕಾರಿ ಎಂದು ನಿಮಗೆ ಗೊತ್ತಿರಬಹುದು ಆದರೇ ತೂಕ ಇಳಿಸಿಕೊಳ್ಲು ಇದು ಪ್ರಯೋಜಕಾರಿ ಎಂದು ನಿಮಗೆ ಗೊತ್ತಿರಲಿಕ್ಕಿಲ್ಲ. ಅಪಾರ ಪೌಷ್ಟಿಕಾಂಶವನ್ನು ಹೊಂದಿರುವ ಅಲೋವೆರಾ …