Categories
Life Style

ಸುಖಕರ ಪ್ರವಾಸಕ್ಕೆ ‘ಟ್ರಾವೆಲ್ ಬ್ಯಾಗ್’   

ನೀವು ವೀಕೆಂಡ್ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಿರಾ ? ಮನೆಯಿಂದ ಹೊರಡುವ ಮುನ್ನ ಹಳೆಯ ಸೂಟ್‍ಕೇಸ್‍ನಲ್ಲಿ ಬಟ್ಟೆ ತುಂಬಲು ಕಷ್ಟ ಪಡುತ್ತಿದ್ದಿರಾ? ಹಾಗಾದರೆ ಇಲ್ಲೊಂದು ಕ್ಷಣ ಗಮನ ನೀಡಿ. ನಿಮ್ಮ ಪ್ರವಾಸ ಆರಾಮದಾಯಕ ಹಾಗೂ ಸುಖಕರವಾಗಬೇಕಾದರೆ ನೀವು ತೆಗೆದುಕೊಂಡು ಹೋಗುವ ಲಗೇಜ್ ಬ್ಯಾಗ್ ಕೂಡ ಒಂದು ಕಾರಣವಾಗುತ್ತದೆ.

ಸ್ನೇಹಿತರ ಜತೆ ದೀರ್ಘಕಾಲಿಕ ಪ್ರವಾಸ ಇಲ್ಲವೆ ಒಂದೆರಡು ದಿನಗಳ ಟ್ರಿಪ್ ಕೈಗೊಳ್ಳಲು ನೀವು ಪ್ಲ್ಯಾನ್ ಮಾಡಿದ್ದರೆ, ಮೊದಲು ನೀವು ತೆಗೆದುಕೊಂಡು ಹೋಗುವ ವಸ್ತುಗಳ ಬಗ್ಗೆ ಗಮನ ಹರಿಸುವುದು ಉತ್ತಮ. ಅದರ ಜತೆಗೆ ನಿಮ್ಮ ವಸ್ತುಗಳನ್ನು ಕ್ಯಾರಿ ಮಾಡಲು ನೀವು ಉಪಯೋಗಿಸುವ ಟ್ರಾವೆಲ್ ಬ್ಯಾಗ್ ಕೂಡ ಬಹುಮುಖ್ಯ.

ಸಾಮಾನ್ಯವಾಗಿ ಟ್ರಾವೆಲ್ ಬ್ಯಾಗ್‍ಗಳು ಕಡಿಮೆ ತೂಕದವು ಆಗಿರಬೇಕು. ಸುಲಭವಾಗಿ ತೆಗೆದುಕೊಂಡು ಹೋಗುವಂತಿರಬೇಕು. ಪ್ರವಾಸದ ವೇಳೆಯಲ್ಲಿ ನಿಮ್ಮ ಟ್ರಾವೆಲ್ ಬ್ಯಾಗ್ ನಿಮಗೆ ಕಿರಿಕಿರಿಯಾಗಬಾರದು. ಹಾಗಾದರೆ ಸದ್ಯ ನಿಮಗಾಗಿ ಮಾರುಕಟ್ಟೆಯಲ್ಲಿರುವ ಕೆಲವು ಸುಂದರ ಟ್ರಾವಲ್ ಬ್ಯಾಗ್ ಇಲ್ಲಿವೆ ನೋಡಿ.

  • ಬ್ಯಾಕ್‍ಪ್ಯಾಕ್ ಸ್ಟ್ರೈಲ್ : ಪ್ರವಾಸಿಗರಿಗೆ ಬ್ಯಾಕ್‍ಪ್ಯಾಕ್ ಶೈಲಿಯ ಈ ಬ್ಯಾಗ್ ತುಂಬ ಅನುಕೂಲಕರ. ನಿಮಗೆ ಅಗತ್ಯ ಇರುವ ವಸ್ತುಗಳನ್ನು ತುಂಬಿಕೊಂಡು, ಹೆಗಲ ಮೇಲೆ ಬ್ಯಾಗ್ ಹಾಕಿಕೊಂಡು ಎಷ್ಟು ದೂರವಾದರೂ ನಡೆಯಬಹುದು. ಇದು ಕ್ಯಾರಿ ಮಾಡಲು ಸುಲಭ ಹಾಗೂ ನೋಡಲು ಅತ್ಯಾಕರ್ಷಕವಾಗಿಯೂ ಕಾಣಿಸುತ್ತದೆ.

The Best Travel Bags

  • ಡಫೆಲ್ ಬ್ಯಾಗ್ : ಬಟ್ಟೆ ತುಂಬಿದ ಹೆಣಬಾರದ ಸೂಟ್‍ಕೇಸ್‍ ಹೊತ್ತುಕೊಂಡು ಸುಸ್ತಾಗುವ ಬದಲಿಗೆ ಡಫೆಲ್ ಬ್ಯಾಗ್ ಮೊರೆ ಹೊಗುವುದು ಉತ್ತಮ. ಇವು ಹಗುರ ಹಾಗೂ ಅರಾಮದಾಯಕವಾಗಿವೆ. ಒಂದೆರಡು ದಿನಗಳ ಪ್ರವಾಸಕ್ಕೆ ಡಫೆಲ್ ಬ್ಯಾಗ್ ಉತ್ತಮ ಆಯ್ಕೆ.

The Best Travel Bags

  • ಟ್ರಾವೆಲ್ ಟೂಟೆ : ನೀವು ಪ್ರವಾಸಕ್ಕೆ ಹೊರಡುವ ಮುನ್ನ ಅಗತ್ಯ ಇರುವ ಎಲ್ಲ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದು ಅಗತ್ಯವೆನಿಸಿದರೆ ಟೂಟೆ ಬ್ಯಾಗ್ ನಿಮ್ಮ ಸಹಾಯಕ್ಕೆ ಬರಬಹುದು.

The Best Travel Bags

  • ಮೆಸೆಂಜರ್ ಬ್ಯಾಗ್ : ಇವು ಭದ್ರತೆ ದೃಷ್ಟಿಯಿಂದಲೂ ಉತ್ತಮವಾಗಿರುವ ಬ್ಯಾಗ್. ಇದು ಪರ್ಸ್ ಇಡಲು ಹೊಸ ವಿನ್ಯಾಸವನ್ನು ಹೊಂದಿದೆ.

ಟ್ರಾವೆಲ್ ಬ್ಯಾಗ್ ಖರೀದಿಸುವ ಮುನ್ನ ಗಮನಿಸಬೇಕಾದ ಅಂಶಗಳು :

 

ಅಳತೆ ಮತ್ತು ತೂಕ :

ಬ್ಯಾಗ್ ಖರೀದಿಸುವ ಮುನ್ನ ಅದರ ಅಳತೆ ಹಾಗೂ ಅದರ ತೂಕದ ಬಗ್ಗೆ ಗಮನ ನೀಡಿ. ಎಷ್ಟು ತೂಕದ ವಸ್ತುಗಳನ್ನು ಅದರಲ್ಲಿ ಇಡಬಹುದು ಎಂಬುದರ ಬಗ್ಗೆ ವಿಚಾರಿಸಿಕೊಳ್ಳಿ.

ಎಲ್ಲ ಫೀಚರ್‍ ಬಗ್ಗೆ ತಿಳಿದುಕೊಳ್ಳಿ :

ಕಡಿಮೆ ತೂಕದ ಬ್ಯಾಗ್‍ ಮೇಲಿನ ಆಫರ್ ಗಳು, ಇತ್ತೀಚಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಬ್ಯಾಗ್, ಅವು ಹೊಂದಿರುವ ವಿಶೇಷ ಫೀಚರ್ ( ಉದಾ: ವಾಟರ್ ಫ್ರ್ಯೂಪ್) ಬಗ್ಗೆ ತಿಳಿದುಕೊಳ್ಳಿ.

ಫ್ಯಾಶನ್ – Udayavani – ಉದಯವಾಣಿ
Read More

Categories
Life Style

ಮುಖದ ಕಾಂತಿ ಹೆಚ್ಚಿಸುತ್ತೆ ಕಾಫಿ ಪುಡಿ

ನಿಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಬ್ಯೂಟಿ ಪಾರ್ಲರ್‍ ಗೆ ಹೋಗಬೇಕಾಗಿಲ್ಲ. ಅಂಗಡಿಗಳಲ್ಲಿ ದೊರೆಯುವ ನಾನಾ ಬಗೆಯ ಕ್ರೀಮ್‍ಗಳ ಮೊರೆ ಹೋಗಬೇಕಾಗಿಲ್ಲ. ಒಂದು ಚಮಚ ಕಾಫಿ ಪುಡಿಯಿಂದ ಕಾಂತಿಯುತ ಮುಖ ನಿಮ್ಮದಾಗಿಸುತ್ತದೆ.

ಹೌದು, ಪಾನೀಯವಾಗಿ ಬಳಸುವ ಕಾಫಿ ಸೌಂದರ್ಯವರ್ಧಕ ವಸ್ತುವಾಗಿಯೂ ಉಪಯೋಗಕ್ಕೆ ಬರುತ್ತದೆ. ಇದು ಕೇಳಲು ಅಚ್ಚರಿಯಾದರೂ ಸತ್ಯ. ಬ್ಯೂಟಿ ಪಾರ್ಲರ್ ಗೆ ಹೋಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡೋ ಬದಲು ಮನೆಯಲ್ಲಿ ಕಾಫಿ ಪುಡಿಯಿಂದ ಸೌಂದರ್ಯ ವೃದ್ಧಿಸಿಕೊಳ್ಳಬಹುದು.

ಬೇಕಾಗುವ ಪದಾರ್ಥ :

  • ಕಾಫಿ ಪುಡಿ
  • ರೋಸ್ ವಾಟರ್
  • ಸಕ್ಕರೆ
  • ಜೇನು ತುಪ್ಪ
  • ಅರ್ಧ ನಿಂಬೆ‌ ಹಣ್ಣು
  • ಅಕ್ಕಿ ಹಿಟ್ಟು

ವಿಧಾನ :

ಮೊದಲಿಗೆ ಒಂದು ಸ್ಪೂನ್ ಕಾಫಿ ಪುಡಿಗೆ ಸ್ವಲ್ಪ ರೋಸ್ ವಾಟರ್ ಹಾಕಿ ಕಲಸಿಕೊಂಡು ಮುಖಕ್ಕೆ ಹಚ್ಚಿ ಮಸಾಜ್‍ ಮಾಡಿಕೊಳ್ಳಬೇಕು.ನಂತರ ಮುಖ ತೊಳೆದುಕೊಳ್ಳಿ. ಇದ್ರಿಂದ ಫೇಸ್ ಕ್ಲೀನ್ ಆಗುತ್ತೆ.

ಮತ್ತೊಂದು ಚಮಚ ಕಾಫಿ ಪುಡಿ ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಸಕ್ಕರೆ, ಒಂದು ಚಮಚ ಜೇನು ತುಪ್ಪ, ಅರ್ಧ ನಿಂಬೆ‌ ಹಣ್ಣಿನ ರಸ ಬೆರೆಸಿ ಮುಖಕ್ಕೆ ಸ್ಕ್ರಬ್ ಮಾಡಿ ಎರಡು ನಿಮಿಷ ಬಿಟ್ಟು ಮುಖ ತೊಳೆಯಿರಿ.

ಇದಾದ ಬಳಿಕ ಕೊನೆಯ ಹಂತವಾಗಿ ಮತ್ತೊಂದು ಚಮಚ ಕಾಫಿ ಪುಡಿಗೆ ಒಂದು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಜೇನುತುಪ್ಪ ಸೇರಿಸಿ, ಮುಖಕ್ಕೆ ಪ್ಯಾಕ್ ಹಾಕಿ. ಪ್ಯಾಕ್‍ ಡ್ರೈ ಆಗುವವರೆಗೂ ಬಿಟ್ಟು, ನಂತರ ತಣ್ಣೀರಲ್ಲಿ ಮುಖ ತೊಳೆಯಿರಿ.

ಎಷ್ಟು ದಿನ ?

ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಇದು ಸುಲಭ ವಿಧಾನ. ವಾರಕ್ಕೆ ಎರಡು ದಿನ ಈ ರೀತಿ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಫ್ಯಾಶನ್ – Udayavani – ಉದಯವಾಣಿ
Read More

Categories
Life Style

ಬೇಸಿಗೆಯ ಸೆಖೆಗೆ ಪೈಜಾಮ ಧರಿಸಿದರೆ ಆರಾಮ

ರಾತ್ರಿ ಮಲಗುವ ಮುನ್ನ ತೊಡುತ್ತಿದ್ದ ಪೈಜಾಮಾ (ಪೈಜಾಮ) ಸೂಟ್‌ ಇದೀಗ ಸ್ಟ್ರಿಂಗ್‌-ಸಮ್ಮರ್‌ನ (ವಸಂತ-ಬೇಸಿಗೆ) ಫ್ಯಾಶನ್‌ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು! ಹೌದು, ಮಹಿಳೆಯರು ಕಾಲರ್‌ ಇರುವ, ಇಡೀ ತೋಳಿನ (ಫ‌ುಲ್‌ ಸ್ಲಿವ್‌) ಪ್ಲೇನ್‌ ಅಥವಾ ಸಾಲಿಡ್‌ ಕಲರ್ಡ್‌ (ಒಂದೇ ಬಣ್ಣದ) ಪೈಜಾಮಾ ಸೂಟ್‌ಗಳನ್ನು ಆಕರ್ಷಕ ಆಕ್ಸೆಸರೀಸ್‌ ಮತ್ತು ಟೈ-ಅಪ್‌ ಹೀಲ್ಸ್‌ ಜೊತೆ ಧರಿಸಿ ಫ್ಯಾಶನ್‌ ಲೋಕದಲ್ಲಿ ಹೊಸ ಅಲೆ ಆರಂಭಿಸಿದ್ದಾರೆ. ನೆನಪಿರಲಿ, ಚೆಕ್ಸ್‌ ಇರುವ ಅಥವಾ ಪ್ರಿಂಟೆಡ್‌ ಪೈಜಾಮಾ ತೊಡಲೇಬೇಡಿ! ಬಣ್ಣ ಆಯ್ಕೆ ಮಾಡುವಾಗಲೂ ಹೊಳೆಯುವ ಬಣ್ಣ ಆಯ್ಕೆ ಮಾಡಬೇಡಿ. ಪೇಸ್ಟಲ್‌ ಶೇಡ್ಸ್‌ , ಅಂದರೆ ತಿಳಿಬಣ್ಣದ ಬಟ್ಟೆಯನ್ನು ಕೊಂಡುಕೊಳ್ಳಿ.

ಆಕ್ಸೆಸರೀಸ್‌ ಎಂದಾಗ ಬೆಲ್ಟ್ , ಬಳೆ, ಸರ ಮತ್ತಿತರ ವಸ್ತುಗಳು ನೆನಪಾದರೂ ಈ ಸೂಟ್‌ ಜೊತೆ ಬರೀ ಕಿವಿಯೋಲೆ ತೊಟ್ಟರಾಯಿತು. ಅದರಲ್ಲೂ ಡ್ಯಾಂಗ್ಲರ್ ಅಂದರೆ ನೇತಾಡುವ ಕಿವಿಯೋಲೆ ಉತ್ತಮ ಆಯ್ಕೆ. ಡ್ಯಾಂಗ್ಲರ್ ನಲ್ಲಿ ಇಂಡಿಯನ್‌ ಡಿಸೈನ್‌ನ ಓಲೆಗಳು ಚೆಂದ. ಅಂದರೆ ಮುತ್ತು, ಹವಳ, ಇತರ ಅಮೂಲ್ಯ ರತ್ನಗಳು, ಕನ್ನಡಿ, ಮಣಿ, ಮುಂತಾದವುಗಳಿಂದ ಮಾಡಿದ ಓಲೆಗಳು.

ಇನ್ನು ಟೈ ಅಪ್‌ ಹೀಲ್ಸ್‌ ಎಂದರೆ ಕಣಕಾಲವರೆಗೆ ದಾರ, ಬಳ್ಳಿ ಅಥವಾ ಸ್ಟಾಪ್‌ನಿಂದ ಕಟ್ಟಬಹುದಾದ ಎತ್ತರದ ಹೀಲ್‌ ಇರುವ ಪಾದರಕ್ಷೆ ಪೈಜಾಮಾದ ಕಾಲುಗಳು ಕಣಕಾಲವರೆಗೆ ಮಾತ್ರ ಇರಬೇಕು. ಹಾಗಿದ್ದರೆ ಮಾತ್ರ ಟೈ-ಅಪ್‌ ಹೀಲ್ಸ್‌ ಎದ್ದು ಕಾಣುತ್ತವೆ. ಇಲ್ಲವಾದಲ್ಲಿ ಅವು ಕಾಣುವುದೇ ಇಲ್ಲ. ಹೀಗಾಗಿಬಿಟ್ಟರೆ ಪೈಜಾಮಾ ತೊಟ್ಟೂ ಪ್ರಯೋಜನವಿಲ್ಲದಂತೆ ಆಗುತ್ತದೆ.

ಈ ಬಟ್ಟೆಗಳು ಬೇಸಿಗೆಯಲ್ಲಿ ಆರಾಮದಾಯಕವಾಗಿದ್ದು, ಬೆವರಿನಿಂದ ಮೈಗೆ ಅಂಟಿಕೊಳ್ಳುವುದಿಲ್ಲ. ಹಾಗಾಗಿ ಮಹಿಳೆಯರು ಇದನ್ನು ಕೇವಲ ಕ್ಯಾಶುವಲ್‌ ಔಟಿಂಗ್‌ಗೆ ಅಲ್ಲದೆ, ಕಚೇರಿ ಹಾಗೂ ಪಾರ್ಟಿಗೂ ತೊಡಬಹುದಾಗಿದೆ. ಪೈಜಾಮಾವನ್ನು ಕೊಳ್ಳುವಾಗ ಒಂದು ಸೈಜ್‌ ದೊಡ್ಡದನ್ನೇ ಕೊಂಡರೆ ಉತ್ತಮ. ಏಕೆಂದರೆ ಪೈಜಾಮಾ ಯಾವತ್ತೂ ಸಡಿಲವಾಗಿರಬೇಕೇ ಹೊರತು, ಬಿಗಿಯಾಗಿರಬಾರದು! ಬಿಗಿಯಾಗಿದ್ದರೆ ಇದನ್ನು ಬೇಸಿಗೆಯಲ್ಲಿ ತೊಡುವ ಉದ್ದೇಶವೇ ವಿಫ‌ಲವಾಗುತ್ತದೆ!

ಈ ಲುಕ್‌ ಪಡೆಯಲು ಹರಸಾಹಸ ಏನೂ ಪಡಬೇಕಾಗಿಲ್ಲ. ಎಷ್ಟು ಸರಳವಾಗಿರುತ್ತದೋ ಅಷ್ಟು ಒಳ್ಳೆಯದು. ಮೇಕಪ್‌ ಕೂಡ ಮಿನಿಮಮ್‌ ಅಂದರೆ ಎಷ್ಟು ಕಡಿಮೆ ಹಚ್ಚಿಕೊಳ್ಳುತ್ತೀರೋ ಅಷ್ಟು ಉತ್ತಮ. ಉಟ್ಟ ಬಟ್ಟೆ ಎದ್ದು ಕಾಣಬೇಕು ಎಂದಾಗ ಯಾವತ್ತೂ ಸರಳ ಹಾಗೂ ಮಿತವಾಗಿ ಮೇಕಪ್‌ ಬಳಸಬೇಕು.

ಈ ಲುಕ್‌ ಜೊತೆ ಪೋನಿಟೇಲ್‌ ಹೇರ್‌ಸ್ಟೈಲ್‌ ಮಾಡುವುದು ಒಳ್ಳೆಯದು. ಬೇಸಿಗೆಯ ಸೆಖೆಯ ದೃಷ್ಟಿಯಿಂದಲೂ ಇದು ಉತ್ತಮ. ಮತ್ತು ನೀವು ತೊಟ್ಟಿರುವ ಡ್ಯಾಂಗ್ಲರ್ ಚೆನ್ನಾಗಿಯೂ ಕಾಣಿಸುವುದು. ಪೋನಿಟೇಲ್‌ ಕೇಶವಿನ್ಯಾಸ ಮಾಡುವಾಗ ಹೈಪೋನಿಯನ್ನು ಆಯ್ಕೆ ಮಾಡಿರಿ. ಲೋ ಪೋನಿ ಕೂಡ ಹಾಕಿಕೊಳ್ಳಬಹುದು, ಆದರೆ ಹೈಪೋನಿ ನಿಮ್ಮ ಮುಖಕ್ಕೆ ನೀಡುವಷ್ಟು ಆತ್ಮವಿಶ್ವಾಸವನ್ನು ಲೋ ಪೋನಿ ನೀಡಲಾರದು. ಈ ದಿರಿಸಿನ ಜೊತೆ ಸ್ಲಿಂಗ್‌ ಬ್ಯಾಗ್‌ ಬದಲಿಗೆ ಕ್ಲಚ್‌ ಬಳಸಿ. ಕ್ಲಚ್‌ ಪರ್ಸುಗಳನ್ನು ಬಳಸುವುದರಿಂದ ಮತ್ತದೇ ಉಪಯೋಗ, ಫೋಕಸ್‌ ನಿಮ್ಮ ಉಡುಪಿನ ಮೇಲೆ ಇರುತ್ತದೆ. ದೊಡ್ಡ ಹ್ಯಾಂಡ್‌ ಬ್ಯಾಗ್‌, ಸ್ಲಿಂಗ್‌ ಬ್ಯಾಗ್‌, ಶೋಲ್ಡರ್‌ ಬ್ಯಾಗ್‌ ಮುಂತಾದವುಗಳು ಈ ಲುಕ್‌ ಜೊತೆ ಚೆನ್ನಾಗಿ ಕಾಣಿಸುವುದಿಲ್ಲ.

ಫ್ಯಾಶನ್ – Udayavani – ಉದಯವಾಣಿ
Read More

Categories
Life Style

‘ಹೆಣ್ಣಿಗೆ ಸೀರೆ ಯಾಕೆ ಅಂದ’ ಎನ್ನುತ್ತಿದ್ದಾರೆ ನಟಿ ತನುಶ್ರೀ ದತ್ತ

ಬಾಲಿವುಡ್ ನಟಿ ತನುಶ್ರೀ ದತ್ತ ಅವರು ವಿವಿಧ ಬಗೆಯ ಸೀರೆಗಳಲ್ಲಿ ಕಂಗೊಳಿಸಿದ್ದಾರೆ. ಹೆಚ್ಚಾನು ಹೆಚ್ಚು ಪಾಶ್ಚಾತ್ಯ ಶೈಲಿಯ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಈ ಬೆಡಗಿ ಸೀರೆ ತೊಡುವುದು ಅಪರೂಪ.

ಇಂದು ಬಿಟೌನ್ ಚೆಲುವೆ ತನುಶ್ರೀ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ತಾರೆಗೆ ಬಾಲಿವುಡ್ ನಟ, ನಟಿಯರು ಹಾಗೂ ಅಭಿಮಾನಿಗಳು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

ತನುಶ್ರೀ ದತ್ತ ಅವರ ಹುಟ್ಟುಹಬ್ಬದ  ನಿಮಿತ್ತ ಸೀರೆ ಮೇಲಿನ ಅವರ ಐದು ಸುಂದರ ಫೋಟೋಗಳು ಇಲ್ಲಿವೆ ನೋಡಿ.

 

ತಿಳಿ ನೀಲಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿರುವ ತನುಶ್ರೀ ಅವರ ಲುಕ್ ಕಣ್ಣು ಕುಕ್ಕುವಂತಿದೆ. ನೀಲಿ ಬಣ್ಣದ ಸೀರೆ ಅವರಿಗೆ ಚೆನ್ನಾಗಿ ಹೊಂದುತ್ತದೆಯಂತೆ. ವರ್ಕ್ ಹಾಗೂ ಸಭೆಗಳಿಗೆ ನೀಲಿ ಬಣ್ಣದ ಸೀರೆ ಧರಿಸುತ್ತಾರಂತೆ.

 

ಕಳೆದ ವರ್ಷ ತನುಶ್ರೀ ಅವರ ಮನೆಯಲ್ಲಿ ಜರುಗಿದ ಪೂಜಾ ಕಾರ್ಯಕ್ರಮದ ವೇಳೆ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಚೆಂದನೆಯ ಬಾರ್ಡರ್ ಗಳಿಂದ ಕೂಡಿರುವ ಈ ಸೀರೆಯ ಮೇಲೆ ಕಪ್ಪು ಬಣ್ಣದ ಚಿತ್ತಾರಗಳಿವೆ.

ನೀಲಿ ಬಣ್ಣದ ಮೇಲೆ ಚೆಂದನೆಯ ಚಿತ್ತಾರಗಳಿರುವ ಈ ಸೀರೆ ತುಂಬಾ ಫೇಮಸ್. ಟ್ರೆಂಡಿಯಾಗಿ ಕಾಣಿಸಿಕೊಳ್ಳುವ ಈ ಬಗೆಯ ಸಾರಿಯಲ್ಲಿ ತನುಶ್ರೀಗೆ ಅಚ್ಚುಮೆಚ್ಚು.

'ಹೆಣ್ಣಿಗೆ ಸೀರೆ ಯಾಕೆ ಅಂದ' ಎನ್ನುತ್ತಿದ್ದಾರೆ ನಟಿ ತನುಶ್ರೀ ದತ್ತ

ಬೂದು ಬಣ್ಣ, ಅದರ ಮೇಲೆ ಬಿಳಿ ಬಣ್ಣದ ಚಿತ್ತಾರಗಳಿರುವ ಸೀರೆ, ತೋಳುರಹಿತ ಕುಪ್ಪಸ ತೊಟ್ಟು ತನುಶ್ರೀ ನಸುನಗೆ ಬೀರಿದ್ದಾರೆ.

'ಹೆಣ್ಣಿಗೆ ಸೀರೆ ಯಾಕೆ ಅಂದ' ಎನ್ನುತ್ತಿದ್ದಾರೆ ನಟಿ ತನುಶ್ರೀ ದತ್ತ

ಇದು ತನುಶ್ರೀ ಅವರು ಕೆಂಪು ಸೀರೆ ಕಾಣಿಸಿಕೊಂಡಿರುವ ಲುಕ್. ಬಂಗಾರ ಬಣ್ಣದ ಕೆಲವು ಚಿತ್ರಗಳು ಈ ಸೀರೆ ಮೇಲಿದೆ. ಕಣ್ಣಿಗೆ ಕನ್ನಡಕ ಹಾಕಿಕೊಂಡಿರು ತನುಶ್ರೀ ಅವರ ಅಂದ ಈ ಸೀರೆಯಲ್ಲಿ ಹೆಚ್ಚಿದೆ.

ಫ್ಯಾಶನ್ – Udayavani – ಉದಯವಾಣಿ
Read More

Categories
Life Style

ಕೂದಲಿನ ಸಮಸ್ಯೆ ನಿವಾರಣೆಗೆ ‘ತುಪ್ಪ’ ರಾಮಬಾಣ

ತುಪ್ಪ ಕೇವಲ ಆಹಾರವಾಗಿ ಮಾತ್ರ ಬಳಸುವ ಪದಾರ್ಥವಲ್ಲ. ಬದಲಾಗಿ ಕೂದಲಿನ ಸಮಸ್ಯೆಗಳಿಗೂ ಮನೆ ಮದ್ದು ಆಗಿ ಪರಿಣಾಮಕಾರಿ ಕಾರ್ಯ ನಿರ್ವಹಿಸಲಿದೆ.

ಒಂದಿಲ್ಲೊಂದು ಕಾರಣಕ್ಕೆ ಕೂದಲು ಉದುರುವಿಕೆ ಸಮಸ್ಯೆ ಎಲ್ಲರಿಗೂ ಕಾಡುತ್ತಿರುತ್ತದೆ. ಹೇರ್ ಫಾಲ್‍ಗೆ ಅಂಕುಶ ಹಾಕಲು ಹರಸಾಹಸ ಪಡುತ್ತಾರೆ. ಅಂಗಡಿಗಳಲ್ಲಿ ದೊರೆಯುವ ಹಲವು ಬಗೆಯ ಶಾಂಪೂ ಟ್ರೈ ಮಾಡಿ ಸುಸ್ತಾಗಿರುತ್ತಾರೆ. ಕೂದಲು ಉದುರುವಿಕೆ ನಮ್ಮ ಕೈ ಮೀರಿ ಹೋಯಿತು ಎಂದು ದುಃಖಿಸುವವರು ಸಾಕಷ್ಟು ಜನ ಇದ್ದಾರೆ. ಹಾಗಾದರೆ ಕೂದಲಿನ ಸಮಸ್ಯೆ ಹೇಗೆ ನಿವಾರಿಸಬಹುದು ? ಮನೆಯಲ್ಲಿಯೇ ಆಯುರ್ವೇದದ ಕ್ರಮಗಳಿಂದ ಈ ಸಮಸ್ಯೆಯಿಂದ ಪಾರಾಗುವುದು ಹೇಗೆ ಎಂಬುದನ್ನು ಇಂದು ತಿಳಿದುಕೊಳ್ಳೋಣ.

ಮೊದಲಿಗೆ ನಿಮ್ಮ ಕೂದಲಿಗೆ ಬಿಸಿ ತುಪ್ಪ ಬಳಸಿ ಮಸಾಜ್ ಮಾಡುವುದರಿಂದ ನಿಮ್ಮ ನೆತ್ತಿಯಲ್ಲಿ ನಯವಾದ ರಕ್ತ ಪರಿಚಲನೆ ಸಾಧ್ಯವಾಗುತ್ತದೆ, ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಆರೋಗ್ಯಕರ ಕೊಬ್ಬುಗಳು ಮತ್ತು ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ನೆತ್ತಿಯನ್ನು ಪೋಷಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ.

ತುಪ್ಪವು ಉತ್ಕರ್ಷಣ ನಿರೋಧಕಗಳು ಮತ್ತು ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ, ಇವೆರಡೂ ನೆತ್ತಿಗೆ ಸುಲಭವಾಗಿ ಹೀರಿಕೊಳ್ಳುವಂತೆ ಮಾಡುತ್ತದೆ. ಇದು ಆಳವಾದ ಕಂಡೀಷನಿಂಗ್ ಮತ್ತು ಒಣ ಮತ್ತು ಹಾನಿಗೊಳಗಾದ ಕೂದಲನ್ನು ಸರಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ನಿಮ್ಮ ಕೂದಲಿಗೆ ತುಪ್ಪ ಹಚ್ಚಿ ಶವರ್ ಕ್ಯಾಪ್ ನಿಂದ ಮುಚ್ಚಿ. ರಾತ್ರಿಯಿಡೀ ಬಿಟ್ಟು ಬೆಳಿಗ್ಗೆ ಸಾಮಾನ್ಯ ನೀರಿನಿಂದ ತೊಳೆಯಿರಿ.

ಕೂದಲಿಗೆ ನೈಸರ್ಗಿಕ ಹೊಳಪನ್ನು ಪಡೆಯಲು ಒಂದು ಚಮಚ ತುಪ್ಪ ಬಿಸಿ ಮಾಡಿ, ನಿಮ್ಮ ನೆತ್ತಿ ಮತ್ತು ಕೂದಲಿಗೆ ಉಜ್ಜಿಕೊಳ್ಳಿ. ಅದನ್ನು ಕೆಲವು ಗಂಟೆಗಳ ಕಾಲ ಬಿಟ್ಟು ಶಾಂಪೂ ಬಳಸಿ ತೊಳೆಯಿರಿ.

ಸ್ಪ್ಲಿಟ್ ಹೇರ್ ಗೆ ಕಾರಣವಾಗುವ ಒಂದು ಪ್ರಾಥಮಿಕ ಕಾರಣವೆಂದರೆ ಅತಿಯಾದ ಸ್ಟೈಲಿಂಗ್. ಆದರೆ ತುಪ್ಪವು ನೈಸರ್ಗಿಕವಾಗಿ ಅಪೌಷ್ಟಿಕತೆಯಿಂದ ಕೂಡಿರುವ ಸ್ಪ್ಲಿಟ್ ಕೂದಲನ್ನು ಪೋಷಿಸುತ್ತದೆ. ವಿಟಮಿನ್ ಎ, ಡಿ, ಕೆ 2 ಮತ್ತು ಇ, ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು ಸಮೃದ್ಧವಾಗಿರುವ ತುಪ್ಪ ನಿಮ್ಮ ಕೂದಲಿಗೆ ಪ್ರಯೋಜನಕಾರಿ. ನೀವು ಮಾಡಬೇಕಾಗಿರುವುದು ಇಷ್ಟೇ, ಸ್ವಲ್ಪ ತುಪ್ಪವನ್ನು ಬೆಚ್ಚಗಾಗಿಸಿ ಮತ್ತು ಅದನ್ನು ನಿಮ್ಮ ಸ್ಪ್ಲಿಟ್ ತುದಿಗಳಿಗೆ ನೇರವಾಗಿ ಅನ್ವಯಿಸಿ. ಒಂದು ಗಂಟೆಯ ನಂತರ ಸೌಮ್ಯವಾದ ಶಾಂಪೂ ಮತ್ತು ತಣ್ಣೀರಿನಿಂದ ತೊಳೆಯಿರಿ.

ಫ್ರಿಜಿ ಕೂದಲು ಒಡೆಯುವಿಕೆ ಮತ್ತು ತೆಳುವಾಗುವುದಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ಅವುಗಳಿಗೆ ನೈಸರ್ಗಿಕ ವಿಧಾನದಿಂದ ಚಿಕಿತ್ಸೆ ನೀಡುವುದು ಉತ್ತಮ. ತುಪ್ಪ ನಿಮಗೆ ಫ್ರಿಜ್ ಮತ್ತು ಒರಟುತನವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಆರ್ಧ್ರಕ ಗುಣಗಳನ್ನು ಹೊಂದಿರುವ ತುಪ್ಪ ನಿಮ್ಮ ಕೂದಲಿನ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಅದನ್ನು ನಯವಾದ, ಹೊಳೆಯುವಂತೆ ಮಾಡುತ್ತದೆ.

ಫ್ಯಾಶನ್ – Udayavani – ಉದಯವಾಣಿ
Read More

Categories
Life Style

ಗರ್ಭಿಣಿಯಾಗಿದ್ದ ಕರೀನಾಳ ಫ್ಯಾಷನ್ : ಮಹಿಳೆಯರಿಗೆ ಟಿಪ್ಸ್ ಕೂಡಾ ಹೌದು..!

ಕರೀನಾ ಕಪೂರ್ ಖಾನ್ ತಮ್ಮ ಉಡುಗೆ, ತೊಡುಗೆ, ಫ್ಯಾಷನ್ನಿಂದಲೇ ಗಮನ ಸೆಳೆಯುವ ನಟಿ. ಕೇವಲ ಪರದೆ ಮೇಲೆ ಮಾತ್ರವಲ್ಲ ಪರದೆ ಹಿಂದೆಯೂ ಕೂಡ ತಮ್ಮ ಆಕರ್ಷಕ ಸ್ಟೈಲ್ ನಿಂದ ಅಭಿಮಾನಿಗಳ ಚಿತ್ತವನ್ನ ತನ್ನತ್ತ ಸೆಳೆಯುತ್ತಾರೆ.

ಹಾಗಾದ್ರೆ ನಟಿ ಕರೀನಾ ತಾವು ಗರ್ಭಿಣಿಯಾಗಿದ್ದಾಗ ಸ್ಟೈಲ್ ಮಾಡ್ತಾನೆ ಇರ್ಲಿಲ್ವ? ಮಾಡ್ತಾ ಇದ್ರು ಯಾವ ರೀತಿ ಉಡುಗೆ ತೊಡುತ್ತಿದ್ರು ಎಂಬ ಕುತೂಹಲ ಬಹುಶಃ ಎಲ್ಲಾ ಮಹಿಳೆಯರಿಗೆ ಇರುವುದು ಸಹಜ. ಹಾಗಾದ್ರೆ ಬನ್ನಿ ಕರೀನಾ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಯಾವೆಲ್ಲ ಔಟ್ ಫಿಟ್ ತೊಡುತ್ತಿದ್ರು ಎಂಬುದರ ಬಗ್ಗೆ ತಿಳಿಯೋಣ. ಇದು ಕರೀನಾರಿಂದ ಮಹಿಳೆಯರಿಗೆ ಸಿಗುವ ಸಣ್ಣ ಟಿಪ್ ಅಂದ್ರೂ ತಪ್ಪಾಗುವುದಿಲ್ಲ..

ಸೈಫ್‍ ಅಲಿಖಾನ್ ಮತ್ತು ಕರೀನಾ ಕಪೂರ್ ಖಾನ್ ಗೆ ಇತ್ತೀಚೆಗೆ ಮುದ್ದಾದ ಗಂಡು ಮಗು ಜನಿಸಿದೆ. ಈಗಗಲೇ ನಾಲ್ಕು ವರ್ಷದ ತೈಮೂರ್ ಇದ್ದು, ಇದು ಎರಡನೇ ಮಗು ಜನಿಸಿದೆ. ಹಾಗಾದ್ರೆ ಗರ್ಭಿಣಿಯಾಗಿದ್ದಾ ಕರೀನಾ ಯಾವ ರೀತಿಯ ಉಡುಗೆ ತೊಡುತ್ತಿದ್ರು ಗೊತ್ತಾ… ಮುಂದೆ ಓದಿ…

ನಟಿಯ ಹೆಚ್ಚಾಗಿ ಲೂಸ್ ಲೂಸ್ ಇರುವ ಟೀ ಶರ್ಟ್ ಗಳನ್ನು ಮತ್ತು ದೊಡ್ಡ ದೊಡ್ಡ ಪ್ಯಾಂಟ್ ಗಳನ್ನು ಧರಿಸುತ್ತಿದ್ರು. ಇದು ತೊಡಲು ಆರಾಮದಾಯಕವಾಗಿದ್ದು, ನಡೆದಾಡಲು, ಕೂರಲು, ನಿಲ್ಲಲು ಸಲೀಸಾಗುತ್ತದೆ. ಈ ಕೆಳಗೆ ಕಾಣುವ ಫೋಟೋದಲ್ಲಿ ನಟಿಯು ದೊಡ್ಡದಾದ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದಾರೆ.

ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಕರೀನಾ ತೊಡುತ್ತಿದ್ದ ಮತ್ತೊಂದು ರೀತಿಯ ಉಡುಗೆ ಅಂದ್ರೆ ಅದು ಕಫ್ತಾನಾ.. ಇದನ್ನು ಕೇವಲ ಮನೆಯಲ್ಲಿ ಮತ್ರವಲ್ಲದೆ ಹೊರಗಡೆ ಹೋಗುವಾಗ, ಶಾಪಿಂಗ್ ಮಾಡುವ ವೇಳೆ, ವಾಕಿಂಗ್ ಮಾಡುವ ವೇಳೆ ಹೀಗೆ ಎಲ್ಲಾ ಕಡೆ ಬಳಸಬಹುದಿತ್ತು.. ಈ ಫೋಟೋದಲ್ಲಿ ಕರೀನಾ ಪಿಂಕ್ ಬಣ್ಣದ ಕಫ್ತಾನಾ ಧರಿಸಿದ್ದಾರೆ.

ಅಗಲ ಮತ್ತು ದೊಡ್ಡದಾದಂತಹ ಬಟ್ಟೆಗಳು ಗರ್ಭಿಣಿ ಮಹಿಳೆಯರಿಗೆ ಹೇಳಿ ಮಾಡಿಸಿದ ಉಡುಪುಗಳು. ಯಾಕಂದ್ರೆ ಅತೀ ಬಿಗಿಯಾಗುವ ಬಟ್ಟೆಗಳನ್ನು ಧರಿಸಿದರೆ ಅವುಗಳನ್ನು ಮ್ಯಾನೇಜ್ ಮಾಡುವುದಕ್ಕೂ ಕಷ್ಟ ಆರೋಗ್ಯದ ದೃಷ್ಟಿಯಿಂದಲೂ ಅಪಾಯ. ಕರೀನಾ ಈ ವಿಡಿಯೋದಲ್ಲಿ ಬಲೂನ್ ತೋಳುಗಳುಳ್ಳ ಉದ್ದನೆಯ ಡ್ರೆಸ್ ತೊಟ್ಟಿದ್ದಾರೆ. ನೀವಿಲ್ಲಿ ಗಮನಿಸಬಹುದು. ಏನಂದ್ರೆ ಕರೀನಾ ತೊಟ್ಟಿರುವ ಈ ಉಡುಪಿನ ಹೊಟ್ಟೆ ಭಾಗ ತುಂಬಾ ಲೂಸ್ ಇದೆ. ಇದ್ರಿಂದ ವಿಯರ್ ಮಾಡಲು ಮತ್ತು ನಡೆದಾಡಲು ತಂಬಾನೆ ಸಹಾಯವಾಗುತ್ತದೆ.

ನಟಿಯು ಇತ್ತ ಫ್ಯಾಷನ್ ಕಡೆ ಕೂಡ ಗಮನ ಕೊಟ್ಟಿದ್ದು, ಬಣ್ಣ ಬಣ್ಣದ ಕುರ್ತಗಳನ್ನೂ ಧರಿಸುತ್ತಿದ್ದರು. ನೀವು ಈ ಫೋಟೋದಲ್ಲಿ ಗಮನಿಸಹುದು, ಹಸಿರು ಬಣ್ಣದ ಕುರ್ತವನ್ನು ಧರಿಸಿ ಕ್ಯಾಮೆರಾಕ್ಕೆ ಪೋಸ್ಟ ನೀಡಿದ್ದಾರೆ.

ಕರೀನಾ ಗರ್ಭವತಿಯಾಗಿದ್ದಾಗ ಸುಮಾರು ರೀತಿಯ ಪ್ರಿಂಟೆಡ್ ಕುರ್ತಾ ಮತ್ತು ಕಫ್ತಾನ್ ಗಲನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ಇವುಗಳು ಕರೀನಾಗೆ ತುಂಬಾ ಚೆನ್ನಾಗಿ ಒಪ್ಪುವ ಉಡುಗೆಗೋಳಾಗಿವೆ.

ಫ್ಯಾಶನ್ – Udayavani – ಉದಯವಾಣಿ
Read More

Categories
Life Style

ಮಾರುಕಟ್ಟೆಗೆ ಟ್ರೆಂಡಿ ವಾಟರ್ ಬಾಟಲ್ ಲಗ್ಗೆ…!  

ಹಳೆಯ ಮಾದರಿಯ ನೀರಿನ ಬಾಟಲ್‍ಗಳು ನಿಮಗೆ ಬೋರ್ ಆಗಿವೆ ? ನೀವು ಹೊಸ ಬಾಟಲಿ ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ ? ಹಾಗಾದರೆ ತಡವೇಕೆ ? ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ವೆರೈಟಿ ಡಿಸೈನ್‍ಗಳ ಆಕರ್ಷಕ ವಾಟರ್ ಬಾಟಲ್‍ಗಳು.

ಬೇಸಿಗೆ ಬೇಗೆಯಲ್ಲಿ ದಾಹ ನೀಗಿಸಲು ಬಾಟಲಿ ನೀರು ಸಹಾಯಕ್ಕೆ ಬರುತ್ತವೆ. ದೂರದ ಪ್ರಯಾಣ, ಕಾಲೇಜು ಇಲ್ಲವೆ ಆಫೀಸ್‍ಗೆ ಹೋಗುವ ಮುನ್ನ ನೀರಿನ ಬಾಟಲಿ ತಪ್ಪದೆ ತೆಗೆದುಕೊಂಡು ಹೋಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅಂಗಡಿಗಳಲ್ಲಿ ದೊರೆಯುವ ಮಿನಿರಲ್ ವಾಟರ್ ಗಳಿಗಿಂತ ಮನೆಯಿಂದಲೇ ಕೊಂಡೊಯ್ಯುವುದು ಉತ್ತಮ. ಒಂದು ಚೆಂದನೆಯ ವಾಟರ್ ಬಾಟಲ್ ಬ್ಯಾಗ್‍ನಲ್ಲಿ ಸಿಕ್ಕಿಸಿಕೊಂಡು ಹೋಗುವುದು ಫ್ಯಾಶನ್. ಒಂದಿಷ್ಟು ಹೊಸ ಶೈಲಿಯ ವಾಟರ್ ಬಾಟಲ್ ಇಲ್ಲಿವೆ ನೋಡಿ…

ಹೈಡ್ರೊ ಫ್ಲಾಸ್ಕ್ : ಹೈಡ್ರೊ ಫ್ಲಾಸ್ಕ್ ಉತ್ಸಾಹಿ ಪ್ರವಾಸಿಗರಿಗೆ, ಟ್ರೆಕ್ಕಿಂಗ್‍ ಪ್ರಿಯರಿಗೆ ಖಂಡಿತ ಇಷ್ಟವಾಗುತ್ತದೆ. ಏಕೆಂದರೆ ಈ ಬ್ರಾಂಡ್‌ನ ಬಾಟಲಿಗಳು ಅತ್ಯುತ್ತಮವಾಗಿವೆ. ಆರಾಮದಾಯಕವಾದ, ಪ್ಲಾಸ್ಟಿಕ್ ಸ್ವಿಂಗ್ ಹ್ಯಾಂಡಲ್ ಅನ್ನು ಹೊಂದಿವೆ, ಮತ್ತು ವಿವಿಧ ಗಾತ್ರಗಳು ಮತ್ತು ಬಣ್ಣಗಳಲ್ಲಿ ಮಾರಾಟದಲ್ಲಿವೆ.

ಮಾರುಕಟ್ಟೆಗೆ ಟ್ರೆಂಡಿ ವಾಟರ್ ಬಾಟಲ್ ಲಗ್ಗೆ…!  

ಇಕೊವೆಸೆಲ್ : ಸದ್ಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಲ್ಲಿರುವ ಇಕೊವೆಸೆಲ್ ವಾಟರ್ ಬಾಟಲ್ ಹಲವು ವೈಶಿಷ್ಟ್ಯತೆಗಳಿಂದ ಕೂಡಿದೆ. ನೀರು-ತಂಪಾಗಿಸುವ ಗುಣಲಕ್ಷಣಗಳ ಹೊಂದಿದೆ. ದೀರ್ಘಕಾಲ ಪಾನೀಯಗಳನ್ನು ತಂಪಾಗಿರಿಸುತ್ತದೆ (ಅಥವಾ ಬಿಸಿಯಾಗಿರುತ್ತದೆ). ಇಕೊವೆಸೆಲ್ ಬಾಟಲ್‍ ನಲ್ಲಿ ತಣ್ಣೀರು ಮತ್ತು ಪಾನೀಯಗಳು 100 ಗಂಟೆಗಳ ಕಾಲ ತಣ್ಣಗಿರುತ್ತದೆ ಎಂದು ಹೇಳಲಾಗುತ್ತದೆ,

ಮಾರುಕಟ್ಟೆಗೆ ಟ್ರೆಂಡಿ ವಾಟರ್ ಬಾಟಲ್ ಲಗ್ಗೆ…!  

 

ಕಲರ್‍ ಫುಲ್ ನೋಟ್‍ಬುಕ್ ಬಾಟಲ್  : ನೋಟ್ ಬುಕ್ ನಂತೆ ಕಾಣುವ ಈ ಬಾಟಲ್‍ ತುಂಬ ಹಗುರ. ಬ್ಯಾಗ್‍ನಲ್ಲಿಯೂ ಭಾರವೆನ್ನಿಸುವುದಿಲ್ಲ. ಕೈಯಲ್ಲಿಯೂ ಅರಾಮಾಗಿ ಹಿಡಿದುಕೊಂಡು ಹೋಗಬಹುದು. ಇದರ ಬೆಲೆ ಕೂಡ ಕಡಿಮೆ. ಪ್ಲಾಸ್ಟಿಕ್ ನಿಂದ ತಯಾರಿಸಲ್ಪಟ್ಟ ಹಲವು ಬಗೆಯ ಬಣ್ಣಗಳಲ್ಲಿ ನೋಟ್ ಬುಕ್ ವಾಟರ್ ಬಾಟಲ್ ಸಿಗುತ್ತವೆ.

ಮಾರುಕಟ್ಟೆಗೆ ಟ್ರೆಂಡಿ ವಾಟರ್ ಬಾಟಲ್ ಲಗ್ಗೆ…!  

ಸೆಲ್ಲೋ ಪ್ಲಾಸ್ಟಿಕ್ ವಾಟರ್ ಬಾಟಲ್ : ಮಾರುಕಟ್ಟೆಯಲ್ಲಿ ಸೆಲ್ಲೋ ಬ್ರ್ಯಾಂಡ್ ನ ಸಾಕಷ್ಟು ವಸ್ತುಗಳಿವೆ. ಒಳ್ಳೆಯ ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಸೆಲ್ಲೋ ನೀರಿನ ಬಾಟಲ್ ಕೂಡ ಪರಿಚಯಿಸಿದೆ. ಪಾಲಿಪ್ರೊಪಿಲೀನ್ ಪ್ಲಾಸ್ಟಿಕ್‍ನಿಂದ ವಿನ್ಯಾಸಗೊಳಿಸಿರುವ ನೀಲಿ ಬಣ್ಣದ ವಾಟರ್ ಬಾಟಲ್ ಮಾರುಕಟ್ಟೆಯಲ್ಲಿವೆ. ಕೈಗೆಟುಕುವ ದರದ ಸೆಲ್ಲೋ ಬಾಟಲ್‍ ಸುರಕ್ಷತೆಯ ದೃಷ್ಟಿಯಲ್ಲಿಯೂ ನಂಬರ್ ಒನ್. ಬಾಯಿ ಮುಚ್ಚಳದಿಂದ ನೀರು ಸೋರುವುದಿಲ್ಲ. ಇದರಿಂದ ಆರಾಮಾಗಿ ಬ್ಯಾಗ್‍ನಲ್ಲಿ ಇಟ್ಟುಕೊಳ್ಳಬಹುದು.

ಮಾರುಕಟ್ಟೆಗೆ ಟ್ರೆಂಡಿ ವಾಟರ್ ಬಾಟಲ್ ಲಗ್ಗೆ…!  

ಅಲ್ಯೂಮಿನಿಯಂ ಸಿಪ್ಪರ್ ಬಾಟಲ್ : ವಿವಿಧ ಬಗೆಯ ಡಿಸೈನ್‍ಗಳ ಸಿಪ್ಪರ್ ಬಾಟಲ್ ಅಲ್ಯೂಮಿನಿಯಂನಿಂದ ಅಭಿವೃದ್ಧಿ ಪಡಿಸಲಾಗಿದೆ. ಇದರಲ್ಲಿ ಬಿಸಿ ಹಾಗೂ ತಣ್ಣನೇಯ ನೀರು ಸಂಗ್ರಹಿಸಬಹುದು. ನೆಲಕ್ಕೆ ಬಿದ್ದರೂ ಒಡೆಯದ ಇದು ದೀರ್ಘಕಾಲಿಕ ಬಾಳಿಕೆ ಬರಲಿದೆ.

ಮಾರುಕಟ್ಟೆಗೆ ಟ್ರೆಂಡಿ ವಾಟರ್ ಬಾಟಲ್ ಲಗ್ಗೆ…!  

ತಾಮ್ರದ ಬಾಟಲ್ : ತಾಮ್ರದ ಪಾತ್ರೆಗಳಲ್ಲಿಯ ನೀರು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಮಾರುಕಟ್ಟೆಯಲ್ಲಿ ತಾಮ್ರದಿಂದ ತಯಾರಿಸಲ್ಪಟ್ಟ ನೀರಿನ ಬಾಟಲ್‍ ಗಳಿವೆ. ಇದರ ಮೇಲ್ಮೈ ಕೂಡ ಚಿತ್ತಾರಗಳಿಂದ ಕೂಡಿದ್ದು ನೋಡಲು ಆಕರ್ಷಕವಾಗಿದೆ.

ಮಾರುಕಟ್ಟೆಗೆ ಟ್ರೆಂಡಿ ವಾಟರ್ ಬಾಟಲ್ ಲಗ್ಗೆ…!  

ಫ್ಯಾಶನ್ – Udayavani – ಉದಯವಾಣಿ
Read More

Categories
Life Style

ನಿಮ್ಮ ಬೆಡ್ ರೂಂ ಅಂದ ಹೆಚ್ಚಿಸುವುದು ಹೇಗೆ ? …ಇಲ್ಲಿವೆ ನೋಡಿ ಕೆಲವು ಟಿಪ್ಸ್

ಮನೆ ಅಂದವಾಗಿದ್ದರೆ ನೋಡಲು ಚಂದ. ಅದರಲ್ಲೂ ಬೆಡ್ ರೂಂಗಳು ಎಷ್ಟು ಚೊಕ್ಕಟವಾಗಿರುತ್ತವೆಯೋ ಅಷ್ಟು ನಮ್ಮ ಮನಸ್ಸು ಉಲ್ಲಸಿತವಾಗಿರುತ್ತವೆ.

ದಿನವಿಡೀ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬರುವವರು ಬಯಸುವುದು ಸುಖಕರ ನಿದ್ದೆ. ನಿದ್ರೆ  ಎಷ್ಟೋ ಖಾಯಿಲೆಗಳಿಗೆ ಮದ್ದು ಎನ್ನುವ ಮಾತು ಇದೆ. ನಾವು ದೈಹಿಕವಾಗಿ ಮಾನಸಿಕವಾಗಿ ಎಷ್ಟೇ ಬಳಲಿದ್ದರೂ ಚುಟುಕು ನಿದ್ದೆ ನಮ್ಮಲ್ಲಿ ಹೊಸತನ ಮೂಡಿಸುತ್ತೆ. ನಾವು ನಿದ್ದೆ ಮಾಡಲು ಕೊಡುವ ಮಹತ್ವ ಬೆಡ್ ರೂಮಿಗೂ ನೀಡುವುದು ಅಗತ್ಯ. ಹಾಗಾದರೆ ನಿಮ್ಮ ಬೆಡ್ ರೂಂ ಹೇಗಿರಬೇಕು ? ನಿಮ್ಮ ನಿದ್ರಾಕೋನೆಗೆ ಹೊಸತನ ನೀಡುವುದು ಹೇಗೆ ? ಇಲ್ಲಿವೆ ನೋಡಿ ಕೆಲವೊಂದು ಟಿಪ್ಸ್.

1 ) ಬೆಡ್ ಶೀಟ್ ಬದಲಿಸುತ್ತೀರಿ :

ದೀರ್ಘಕಾಲದಿಂದ ಬಳಸುತ್ತಿರುವ ಬೆಡ್ ಶೀಟ್ ಹಾಗೂ ತಲೆದಿಂಬುಗಳ ಕವರ್ ಗಳನ್ನು ವಾರಕ್ಕೆ ಒಂದು ಸಲವಾದರೂ ಬದಲಿಸುತ್ತಿರಬೇಕು. ಶುಭ್ರವಾದ ಹಾಗೂ ವಿವಿಧ ಬಣ್ಣಗಳ ಬೆಡ್ ಶೀಟ್ ಉಪಯೋಗಿಸಬೇಕು.

ನಿಮ್ಮ ಬೆಡ್ ರೂಂ ಅಂದ ಹೆಚ್ಚಿಸುವುದು ಹೇಗೆ ? …ಇಲ್ಲಿವೆ ನೋಡಿ ಕೆಲವು ಟಿಪ್ಸ್

2) ಪೇಂಟಿಂಗ್ :  

ಬೆಡ್ ರೂಂ ಗೋಡೆಗಳು ಬರಿದಾಗಿದ್ದರೆ ಅಂದವೆನಿಸುವುದಿಲ್ಲ. ಚೆಂದನೆಯ ಪೇಂಟಿಂಗ್ಸ್ ಹಾಗೂ ನುಡಿಮುತ್ತುಗಳ ಬರಹಗಳು ಗೋಡೆ ಮೇಲೆ ನೇತಾಕಿ.

ನಿಮ್ಮ ಬೆಡ್ ರೂಂ ಅಂದ ಹೆಚ್ಚಿಸುವುದು ಹೇಗೆ ? …ಇಲ್ಲಿವೆ ನೋಡಿ ಕೆಲವು ಟಿಪ್ಸ್

3) ಬೆಡ್ ಲ್ಯಾಂಪ್ :

ನಾವು ಮಲಗುವ ಕೋನೆಯಲ್ಲಿ ಮಂದ ಬೆಳಕಿನ ಚಿಕ್ಕ ಲ್ಯಾಂಪ್ ಇರುವುದು ಉತ್ತಮ. ರಾತ್ರಿ ಹೊತ್ತು ಕಲರ್ ಲೈಟ್‍ ಗಳ ಬೆಡ್ ಲ್ಯಾಂಪ್ ಬೆಳಗಿಸುವುದು ನಿಮ್ಮ ರೂಮಿಗೆ ಆಕರ್ಷಕ ಲುಕ್ ಬರಬಹುದು.

ನಿಮ್ಮ ಬೆಡ್ ರೂಂ ಅಂದ ಹೆಚ್ಚಿಸುವುದು ಹೇಗೆ ? …ಇಲ್ಲಿವೆ ನೋಡಿ ಕೆಲವು ಟಿಪ್ಸ್

4) ಮೆತ್ತನೆಯ ದಿಂಬು :

ಮನೆಯ ಹಾಲ್ ನಲ್ಲಿ ಸೋಫಾ ಮೇಲೆ ಮೆತ್ತನೆಯ ದಿಂಬು ಹಾಗೂ ಅದಕ್ಕೊಂದು ಸುಂದರವಾದ ಕವರ್ ಹಾಕಿರುತ್ತೇವೆ. ಅದೇ ರೀತಿಯ ದಿಂಬುಗಳನ್ನು ಬೆಡ್ ರೂಂಗಳಲ್ಲಿಯೂ ಬಳಸುವುದ ಉತ್ತಮ.

ನಿಮ್ಮ ಬೆಡ್ ರೂಂ ಅಂದ ಹೆಚ್ಚಿಸುವುದು ಹೇಗೆ ? …ಇಲ್ಲಿವೆ ನೋಡಿ ಕೆಲವು ಟಿಪ್ಸ್

5) ಚೆಂದನೆಯ ಕನ್ನಡಿ :

ಬೆಡ್ ರೂಂನಲ್ಲಿ ಕನ್ನಡಿ ಇರದಿದ್ದರೆ ಅದಕ್ಕೊಂದು ಲುಕ್ ಬರಲಾರದು. ಬಟ್ಟೆ ಧರಿಸುವಾಗ ಹಾಗೂ ಮೇಕಪ್ ಮಾಡಿಕೊಳ್ಳಲು ಕನ್ನಡಿ ಬೇಕೇ ಬೇಕು. ಈಗಂತೂ ನಾನಾ ಬಗೆಯ ಕನ್ನಡಿಗಳು ದೊರೆಯುತ್ತವೆ. ನಿಮ್ಮ ಬೆಡ್ ರೂಮಿಗೆ ಸರಿಹೊಂದುವ ಒಂದನ್ನು ಗೋಡೆಗೆ ನೇತುಹಾಕಿ.

.

ನಿಮ್ಮ ಬೆಡ್ ರೂಂ ಅಂದ ಹೆಚ್ಚಿಸುವುದು ಹೇಗೆ ? …ಇಲ್ಲಿವೆ ನೋಡಿ ಕೆಲವು ಟಿಪ್ಸ್

 

ಫ್ಯಾಶನ್ – Udayavani – ಉದಯವಾಣಿ
Read More

Categories
Life Style

ಉಪಾಯ ಒಂದು ಉಪಯೋಗ ಹಲವು …ಟ್ರೆಂಡಿ ಲುಕ್‍ಗೆ ಬೇಕು ಬಂದಾನ

ಫ್ಯಾಶನ್ ಪ್ರಿಯ ಹೆಂಗಳಿಯರು ತಮ್ಮ ಉಡುಗೆ ತೊಡುಗೆ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಪ್ರತಿ ದಿನ ಮಾರುಕಟ್ಟೆಗೆ ಲಗ್ಗೆ ಇಡುವ ಬಗೆ ಬಗೆಯ ಟ್ರೆಂಡಿ ಫ್ಯಾಶನ್ ವಸ್ತುಗಳ ಮೇಲೆ ಅವರ ಕಣ್ಣುಗಳು ಸದಾ ಇರುತ್ತವೆ. ಹೊರಗಡೆ ಹೋಗುವ ಮುನ್ನ ನೂರೆಂಟು ಬಾರಿ ಕನ್ನಡಿ ಮುಂದೆ ನಿಂತು ತಮ್ಮ ಸೌಂದರ್ಯ ಪರೀಕ್ಷಿಸಿಕೊಳ್ಳುವ ಹುಡುಗಿಯರ ಲುಕ್ ಹೆಚ್ಚಿಸಲು ಹೇರ್ ಬಂದಾನಗಳು ಸಹಕಾರಿಯಾಗುತ್ತಿವೆ.

ಹೇರ್ ಬಂದಾನಗಳು ನಿಮ್ಮ ಲುಕ್‍ಗೆ ಹೊಸ ರೂಪ ನೀಡುವುದರಲ್ಲಿ ಎರಡು ಮಾತಿಲ್ಲ. ಹೊರಗಡೆ ಹೋಗುವ ಮುನ್ನ ಧರಿಸಿರುವ ಬಟ್ಟೆಗಳಲ್ಲಿ ಕಂಫರ್ಟೆಬಲ್ ಆಗದಿದ್ದರೂ ನೀವೂ ಚಿಂತಿಸಬೇಕಿಲ್ಲ. ಒಂದು ಚೆಂದನೆಯ ಹೇರ್ ಬಂದಾನ ತಲೆಗೆ ಕಟ್ಟಿಕೊಂಡರೆ ಸಾಕು, ನೀವು ಮತ್ತಷ್ಟು ಸ್ಟೈಲಿಶ್ ಲುಕ್ ನಲ್ಲಿ ಕಂಗೊಳಿಸಬಹುದು.

ಹಾಗಾದರೆ ಬಂದಾನದ ಉಪಯೋಗ ಹೇಗೆ ?  

ಅವಸರದ ಸಂದರ್ಭಗಳಲ್ಲಿ, ಗಡಿಬಿಡಿಯಲ್ಲಿ ನೀವು ನೀಟಾಗಿ ಡ್ರೆಸ್ ಮಾಡುವುದಕ್ಕೆ ಸಾಧ್ಯವಾಗದೆ ಇರಬಹುದು. ಇಂತಹ ವೇಳೆ ಬಂದಾನಗಳು ನಿಮ್ಮ ಮೆರಗು ಹೆಚ್ಚುವಂತೆ ಮಾಡುತ್ತವೆ. ಇವುಗಳನ್ನು ಸುಲಭವಾಗಿ ಎರಡು ಮಡಿಕೆ ಮಡಚಿ, ಹಣೆಯ ಮೇಲೆ ಕಿರೀಟದಂತೆ ಕಟ್ಟಿದರೆ ಸಾಕು. ನೋಡುಗರ ಮುಂದೆ ಸೊಗಸಾಗಿ ಕಾಣುತ್ತೀರಿ.

ಉಪಾಯ ಒಂದು ಉಪಯೋಗ ಹಲವು …ಟ್ರೆಂಡಿ ಲುಕ್‍ಗೆ ಬೇಕು ಬಂದಾನ

ಹೆಡ್ ಬ್ಯಾಂಡ್ ಅಗತ್ಯವಿಲ್ಲ :

ಬಂದಾನಗಳನ್ನು ಹೆಡ್‌ಬ್ಯಾಂಡ್ ಆಗಿಯೂ ಧರಿಸಬಹುದು. ಇದರಿಂದ ಸ್ಟೈಲಿಶ್ ಲುಕ್ ನಿಮ್ಮದಾಗುತ್ತೆ. ನಿಮ್ಮ ತಲೆ ಕೂದಲು ಕೆದರಿಕೊಂಡು ವಿಕಾರಗೊಂಡ ವೇಳೆ ಬಂದಾನ ಸಹಾಯಕ್ಕೆ ಬರುತ್ತೆ. ಎರಡು ಸುತ್ತು ಮಡಿಕೆ ಮಾಡಿ ತಲೆಗೆ ಹೆಡ್ ಬ್ಯಾಂಡ್ ಆಗಿ ಕಟ್ಟುವುದರಿಂದ ಒಂದು ಟ್ರೆಂಡಿ ಲುಕ್ ನೀಡುತ್ತೆ.

ಉಪಾಯ ಒಂದು ಉಪಯೋಗ ಹಲವು …ಟ್ರೆಂಡಿ ಲುಕ್‍ಗೆ ಬೇಕು ಬಂದಾನ

ಹೇರ್ ಟೈ :

ಅವಸರದಲ್ಲಿ ಹೇರ್ ಟೈ ಮರೆತಿದ್ದರೆ, ಇಲ್ಲವೆ ನಿಮ್ಮ ಕೂದಲುಗಳಿಗೆ ಕಟ್ಟಿದ್ದ ಟೈ ಜಾರಿ ಕಳೆದು ಹೋಗಿದ್ದರೆ ನೀವು ಚಿಂತಿಸಬೇಕಿಲ್ಲ. ನಿಮ್ಮ ಬ್ಯಾಗ್ ನಲ್ಲಿರುವ ಬಂದಾನವನ್ನೇ ಟೈ ಆಗಿ ಬಳಸಬಹುದು. ಇದು ಹೊಸ ಬಗೆಯೆ ಫ್ಯಾಶನ್ ಆಗೋದರಲ್ಲಿ ಅನುಮಾನವಿಲ್ಲ. ನೋಡಲು ಕೂಡ ಆಕರ್ಷಕವಾಗಿ ಕಾಣುವುದರಿಂದ ನಿಮ್ಮ ತಲೆ ಕೂದಲಿನ ಅಂದವನ್ನೂ ಹೆಚ್ಚಿಸುತ್ತೆ.

ಉಪಾಯ ಒಂದು ಉಪಯೋಗ ಹಲವು …ಟ್ರೆಂಡಿ ಲುಕ್‍ಗೆ ಬೇಕು ಬಂದಾನ

ಟಾಪ್ ಆಗಿಯೂ ಸಹಕಾರಿ :

ಬಂದಾನ ಹಲವು ಬಗೆಯಲ್ಲಿ ಉಪಯೋಗಕಾರಿಯಾಗಿದೆ. ಹೇರ್ ಬ್ಯಾಂಡ್, ಹೇರ್ ಟೈ, ಹೆಡ್ ಬ್ಯಾಂಡ್ ಆಗಿಯೂ ನಿಮ್ಮ ಸೌಂದರ್ಯ ಹೆಚ್ಚಿಸುವ ಇವುಗಳನ್ನು ಟಾಪ್ ಆಗಿಯೂ ಧರಿಸಬಹುದು. ಎರಡು ಬಂದಾನಗಳ ತುದಿಯಿಂದ ಕಟ್ಟಿ ಟಾಪ್ ಆಗಿ ಪರಿವರ್ತಿಸಬಹುದು. ಇನ್ನೂ ಅಟ್ರ್ಯಾಕ್ಟಿವ್ ಆಗಿ ಕಾಣಿಸಿಕೊಳ್ಳಬೇಕಂದರೆ ಬೇರೆ ಬೇರೆ ಬಣ್ಣಗಳ ಎರಡು ಬಂದಾನಗಳ ಸಹಾಯದಿಂದ ಟಾಪ್ ತಯಾರಿಸಿ ಧರಿಸಬಹುದು.

ಉಪಾಯ ಒಂದು ಉಪಯೋಗ ಹಲವು …ಟ್ರೆಂಡಿ ಲುಕ್‍ಗೆ ಬೇಕು ಬಂದಾನ

ಕೊರಳ ಪಟ್ಟಿ  :

ನೀವು ಒಮ್ಮೆ ಖರೀದಿಸಿದ ಬಂದಾನಗಳು ಹಲವು ಬಗೆಯಲ್ಲಿ ಉಪಯೋಗಕ್ಕೆ ಬರುತ್ತವೆ. ವೆರೈಟಿ ಬಂದಾನಗಳನ್ನು ಕೊರಳ ಪಟ್ಟಿ (ಟೈ) ಯಾಗಿಯೂ ಕಟ್ಟಬಹುದು. ಈ ಹೊಸ ಫ್ಯಾಶನ್ ನಿಮಗೂ ಇಷ್ಟವಾಗುತ್ತೆ. ನೋಡುಗರನ್ನು ನಿಮಿತ್ತ ಸೆಳೆಯುವಂತೆ ಮಾಡುತ್ತೆ.

ಉಪಾಯ ಒಂದು ಉಪಯೋಗ ಹಲವು …ಟ್ರೆಂಡಿ ಲುಕ್‍ಗೆ ಬೇಕು ಬಂದಾನ

ಇನ್ನು ಮಾರುಕಟ್ಟೆಯಲ್ಲಿ ಹಲವು ಬಣ್ಣಗಳ ಬಂದಾನಗಳು ಲಭ್ಯ ಇವೆ. ಹಲವು ವೆರೈಟಿ ಜತೆಗೆ ಬಗೆ ಬಗೆಯ ಚಿತ್ತಾರಗಳಿರುವ ಟ್ರೆಂಡಿಯಾಗಿರೋ ಬಂದಾನಗಳು ನಿಮಗೆ ದೊರೆಯುತ್ತವೆ.

ಫ್ಯಾಶನ್ – Udayavani – ಉದಯವಾಣಿ
Read More

Categories
Life Style

ಪುಟಾಣಿಗಳಿಗಾಗಿ ವಿವಿಧ ಫ್ಯಾಶನ್ ಉಡುಗೆ ಮಾರುಕಟ್ಟೆಗೆ ಲಗ್ಗೆ  

ನಮಗೆ ಬಟ್ಟೆ ಖರೀಸುವ ವೇಳೆ ಸಾಕಷ್ಟು ಬಾರಿ ಯೋಚಿಸುತ್ತೇವೆ. ಹಲವು ಶೋ ರೂಂ, ದೊಡ್ಡ ದೊಡ್ಡ ಮಾಲ್ ಗಳಿಗೆ ಅಲೆಯುತ್ತೇವೆ. ನೂರೆಂಟು ಬಗೆಯ ಉಡುಗೆಗಾಗಿ ತಡಕಾಡುತ್ತೇವೆ. ಕೊನೆಗೊಂದು ಕೊಂಡುಕೊಳ್ಳುತ್ತೇವೆ. ಕಾರಣ ಅವು ನಮಗೆ ಅರಾಮಾದಾಯಕ ಮತ್ತು ಸೊಗಸಾಗಿ ಕಾಣಬೇಕೆಂಬುದು ನಮ್ಮ ಉದ್ದೇಶವಾಗಿರುತ್ತವೆ.

ಒಂದು ಸಣ್ಣ ಪ್ಯಾಂಟ್ ಕೊಂಡುಕೊಳ್ಳಲು ನೂರಾರು ಅಂಗಡಿಗಳಿಗೆ ಅಲೆಯುವ ಎಷ್ಟೋ ಜನರು, ತಮ್ಮ ಮಕ್ಕಳ ಬಟ್ಟೆ ಆಯ್ಕೆ ಮಾಡಲು ಅಷ್ಟೊಂದು ಸಮಯ ನೀಡುವುದಿಲ್ಲ. ಆದರೆ, ಪುಟ್ಟ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಸರಿಹೊಂದುವ, ಅವರಿಗೆ ಅರಾಮದಾಯಕ ಹಾಗೂ ನೋಡಲು ಸುಂದರವಾಗಿಯೂ ಕಾಣುವಂತಹ ಉಡುಗೆ ತೊಡುಗೆ ಆಯ್ಕೆ ಮಾಡುವುದರತ್ತ ಗಮನ ಹರಿಸುವುದು ಕೂಡ ಮುಖ್ಯ.

ಈಗ ಮಾರುಕಟ್ಟೆಯಲ್ಲಿ ನಾನಾ ಬಗೆಯ ಬಟ್ಟೆಗಳು ಲಗ್ಗೆ ಇಟ್ಟಿವೆ. ಆಫ್ ಲೈನ್ ಇರಬಹುದು ಅಥವಾ ಆನ್ ಲೈನ್ ನಲ್ಲಿರಬಹುದು, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಉಡುಪುಗಳು ನಮ್ಮ ಕಣ್ಣು ಮುಂದೆ ಇವೆ.

1 ) ಉದ್ದನೇಯ ಉಡುಗೆ  : ಈ ಬಗೆಯ ಉಡುಪು ಮೊಣಕಾಲಿನ ವರೆಗೆ ಇರುತ್ತೆ. ರೌಂಡ್ ನೆಕ್ ಹೊಂದಿರುವ ಇದು ನೋಡಲು ಅಂದವಾಗಿ ಕಾಣುತ್ತೆ. ಸಂಪೂರ್ಣ ಹತ್ತಿಯಿಂದಲೇ ಸಿದ್ಧವಾಗಿರುವುದರಿಂದ ಮಕ್ಕಳಿಗೆ ಅರಾಮಾದಾಯಕ. ಅರ್ಧ ತೋಳುಗಳ ಈ ಉಡುಪು ಹಲವು ವಿಧದ ಬಣ್ಣಗಳಲ್ಲಿ ಲಭ್ಯ. ಆನ್ ಲೈನ್ ನಲ್ಲಿ ಇದರ ಬೆಲೆ 650 ರೂ.

ಹೆಣ್ಣು ಮಕ್ಕಳ ಚಂದನೆಯ ಉಡುಗೆ ಮಾರುಕಟ್ಟೆಗೆ ಲಗ್ಗೆ  

 

2) ಸ್ಟೈಲೋಬಗ್ ಫಿಟ್ & ಫ್ಲೇರ್ ಕ್ಯಾಶುಯಲ್ ಉಡುಗೆ : ಇದು 4-5 ವರ್ಷದ ಹೆಣ್ಣು ಮಕ್ಕಳಿಗೆ ಹೇಳಿ ಮಾಡಿಸಿದಂತಹ ಉಡುಪು. ಪಾಲಿಸ್ಟರ್ ನಿಂದ ತಯಾರಿಸಲ್ಪಟ್ಟ ಇದರ ಮೇಲೆ ಬಣ್ಣ ಬಣ್ಣದ ಚಿತ್ತಾರಗಳಿವೆ. ಹಾಫ್ ಶೋಲ್ಡರ್ ಬಗೆಯ ಸ್ಟೈಲಿಶ್ ನೆಕ್ ಇದೆ. ಆನ್ ಲೈನ್ ನಲ್ಲಿ ಇದರ ಬೆಲೆ 599 ರೂ.

ಹೆಣ್ಣು ಮಕ್ಕಳ ಚಂದನೆಯ ಉಡುಗೆ ಮಾರುಕಟ್ಟೆಗೆ ಲಗ್ಗೆ  

3) ರೌಂಡ್ ನೆಕ್ ಲೈನ್ ಇರುವ ಉಡುಗೆ ಖರೀದಿ ಕಡಿಮೆ ಮಾಡಿ  : ಇನ್ನು ಮಾರುಕಟ್ಟೆಯಲ್ಲಿ ಹಲವು ಬಗೆಯ ಬಟ್ಟೆಗಳು ಲಗ್ಗೆ ಇಟ್ಟಿರುತ್ತವೆ. ಆದರೆ, ರೌಂಡ್ ನೆಕ್ ಜತೆಗೆ ಲೈನ್ ಇರುವ ಬಟ್ಟೆ ಖರೀದಿಸುವುದು ಕಡಿಮೆ ಮಾಡುವುದು ಉತ್ತಮ. ಅದರ ಬದಲಾಗಿ ಸಂಪೂರ್ಣ ರೌಂಡ್ ಕೊರಳಿನ ಬಟ್ಟೆಗಳು ಸಾಕಷ್ಟು ಲಭ್ಯ ಇವೆ. ಆನ್ ಲೈನ್ ನಲ್ಲಿ ಇದರ ಬೆಲೆ 799 ರೂ.

ಹೆಣ್ಣು ಮಕ್ಕಳ ಚಂದನೆಯ ಉಡುಗೆ ಮಾರುಕಟ್ಟೆಗೆ ಲಗ್ಗೆ  

4) ಸ್ಕೇಟರ್ ಮಿನಿ ಉಡುಗೆ : ಸಂಪೂರ್ಣ ಹತ್ತಿಯಿಂದ ( ಕಾಟನ್ ) ತಯಾರಾಗಿರುವ ಈ ಉಡುಗೆಯಲ್ಲಿ ಅಂದವಾದ ಹೂವಿನ ಚಿತ್ತಾರಗಳಿವೆ. ತೋಳುರಹಿತ ಈ ಮಿನಿ ಸ್ಕರ್ಟ್ ಗಳಲ್ಲಿ ಹೆಣ್ಣು ಮಕ್ಕಳು ಅಂದವಾಗಿ ಕಾಣುತ್ತಾರೆ. ಜತೆಗೆ ಇದು ಅವರಿಗೆ ಅರಾಮಾದಾಯ. ಆನ್ ಲೈನ್ ನಲ್ಲಿಇದರ ಬೆಲೆ 389 ರೂ.

ಹೆಣ್ಣು ಮಕ್ಕಳ ಚಂದನೆಯ ಉಡುಗೆ ಮಾರುಕಟ್ಟೆಗೆ ಲಗ್ಗೆ  

ಫ್ಯಾಶನ್ – Udayavani – ಉದಯವಾಣಿ
Read More