Categories
News

ಹಡಗಿಗೆ ಡಿಕ್ಕಿಯೊಡೆದ ದೋಣಿ; 12 ಮಂದಿ ಮೀನುಗಾರರು ನಾಪತ್ತೆ

ದಕ್ಷಿಣ ಕನ್ನಡ: ನವ ಮಂಗಳೂರು ಬಳಿಯ ಕರಾವಳಿ ಪ್ರದೇಶದಲ್ಲಿ ಮೀನುಗಾರರ ದೋಣಿಯೊಂದು ಹಡಗಿಗೆ ಡಿಕ್ಕಿಹೊಡೆದ ಪರಿಣಾಮ 12 ಮೀನುಗಾರರು ಕಾಣೆಯಾಗಿರುವ ಘಟನೆ ನಡೆದಿದೆ.

ಮೀನುಗಾರರ ದೋಣಿಯು ಕೇರಳದ ಕೋಳಿಕೋಡ್ ಜಿಲ್ಲೆಯಿಂದ ಮಂಗಳೂರಿಗೆ ಬರುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಕೋಸ್ಟ್ ಗಾರ್ಡ್ ಸಿಬ್ಬಂದಿ ಬಂದು ನಾಪತ್ತೆಯಾದವರಿಗಾಗಿ ಶೋಧ ನಡೆಸಿದ್ದಾರೆ. ಒಟ್ಟು 14 ಮಂದಿ ಮೀನುಗಾರರು ನಾಪತ್ತೆಯಾಗಿದ್ದರು ಎನ್ನಲಾಗಿದ್ದು ಈ ಪೈಕಿ ಇಬ್ಬರು ಪತ್ತೆಯಾಗಿದ್ದು ಉಳಿದ 12 ಜನರಿಗೆ ಶೋಧ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ. ಇನ್ನು ದೋಣಿಗೆ ಡಿಕ್ಕಿಯಾದ ಹಡಗು ಸ್ಥಳದಿಂದ ಪರಾರಿಯಾಗಿದೆ ಎನ್ನಲಾಗಿದೆ.

The post ಹಡಗಿಗೆ ಡಿಕ್ಕಿಯೊಡೆದ ದೋಣಿ; 12 ಮಂದಿ ಮೀನುಗಾರರು ನಾಪತ್ತೆ appeared first on News First Kannada.

Source: News First Kannada
Read More

Categories
News

ಚುನಾವಣೆ ನಂತರ ಟಫ್​ರೂಲ್ಸ್ ಜಾರಿಗೆ ತಂದು, ಕಠಿಣ ಕ್ರಮ ಕೈಗೊಳ್ಳುವಂತೆ ಮಾಡ್ತೇವೆ- ಶ್ರೀರಾಮುಲು

ಬೀದರ್: ಎರಡು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆ ಮತ್ತು ಒಂದು ಕ್ಷೇತ್ರದ ಲೋಕಸಭಾ ಉಪಚುನಾವಣೆ ನಂತರ ಟಫ್ ರೂಲ್ಸ್ ಜಾರಿಗೆ ತಂದು ಕಠಿಣ ಕ್ರಮ ಕೈಗೊಳ್ಳುವಂಥ ಮಾಡುತ್ತೇವೆ ಎಂದು ಬಸವಕಲ್ಯಾಣದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ಚುನಾವಣೆ ವೇಳೆ ಕೊವೀಡ್ ನಿಯಮಗಳನ್ನು ಪಾಲನೆ ಮಾಡಿ ಎಂದು ಜನ್ರಿಗೆ ಹೇಳುತ್ತಿದ್ದೇವೆ. ಎರಡನೇಯ ಅಲೆ ಜಾಸ್ತಿಯಾಗಿರುವ ಸಮಯದಲ್ಲಿ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ಎಲ್ಲರು ಜಾಗೃತಿಯಲ್ಲಿ ಇದ್ರೆ ಒಳ್ಳೆಯದು. ದೇಶದಲ್ಲೆ ಕೊರೊನಾ ಜಾಸ್ತಿಯಾಗಿದೆ. ಚುನಾವಣೆ ಆದ ಬಳಿಕ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ತಂದು ಕಠಿಣ ಕ್ರಮ ಕೈಗೊಳ್ಳುವಂಥ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಇನ್ನು ವಿಪಕ್ಷದ ವಿರುದ್ಧ ಕಿಡಿಕಾರಿದ ಅವರು.. 10 ವರ್ಷ ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ರು. ಕುರುಬ ಸಮುದಾಯ ಎಸ್​ಟಿಗೆ ಸೇರಿಸಿ ಎಂದು ಹೋರಾಟ ಮಾಡುತ್ತಿದೆ. ಪಂಚಮಸಾಲಿ ಸಮುದಾಯ 2Aಗೆ ಸೇರಿಸಬೇಕು ಎಂದು ಹೋರಾಟ ಮಾಡುತ್ತಿದೆ. ಇಂದು ಎಲ್ಲಾ ಸಮಾಜಗಳು ಹೋರಾಟ ಮಾಡಲು ಕಾಂಗ್ರೆಸ್ ಸರ್ಕಾರವೇ ಕಾರಣ‌. ಹಿಂದುಳಿದ ಜಾತಿ ಹೆಸರನ್ನು ಹಿಡ್ಕೊಂಡು ಸಿದ್ದರಾಮಯ್ಯ ಸಿಎಂ ಆದ್ರು. ಈ ಎಲ್ಲಾ ಸಮಸ್ಯೆಗಳಿಗೆ ಸಿದ್ದರಾಮಯ್ಯನವರು ಪರಿಹಾರ ಮಾಡೋಕೆ ಆಗಿಲ್ಲ. ಚುನಾವಣೆ ಬಂದಾಗ ಮಾತ್ರ ಹಿಂದುಳಿದ ಸಮಾಜಗಳು ನೆನಪಿಗೆ ಬರುತ್ತೆ. ಇಲ್ಲಾ ಅಂದ್ರೆ ಯಾವುದೇ ಸಮಾಜ ನೆನಪಾಗಲ್ಲ ಎಂದು ಬಸವಕಲ್ಯಾಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸಚಿವ ಶ್ರೀರಾಮುಲು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

The post ಚುನಾವಣೆ ನಂತರ ಟಫ್​ರೂಲ್ಸ್ ಜಾರಿಗೆ ತಂದು, ಕಠಿಣ ಕ್ರಮ ಕೈಗೊಳ್ಳುವಂತೆ ಮಾಡ್ತೇವೆ- ಶ್ರೀರಾಮುಲು appeared first on News First Kannada.

Source: News First Kannada
Read More

Categories
News

ತಾಂತ್ರಿಕ ಸಲಹಾ ಸಮಿತಿಯಿಂದ 16 ಅಂಶಗಳ ಶಿಫಾರಸು; ಲಾಕ್​ ಡೌನ್​ ಗೊಂದಲಗಳಿಗೆ ಬೀಳುತ್ತಾ ಬ್ರೇಕ್..?

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ 16 ಅಂಶಗಳ ಶಿಫಾರಸ್ಸನ್ನ ನೀಡಿದೆ. ಆ ಶಿಫಾರಸ್ಸನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿದೆ.

ಆರೋಗ್ಯ ಸಚಿವ ಡಾ. ಸುಧಾಕರ್​ ಜೊತೆ ಈ ಸಂಬಂಧ ಚರ್ಚೆ ನಡೆಸಿರುವ ಸಮಿತಿ ಅಲ್ಲಿ ಚರ್ಚಿಸಲಾದ ಅಂಶಗಳನ್ನೇ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ. ಆ ಮೂಲಕ ಈಗಾಗಲೇ ಮುಖ್ಯಮಂತ್ರಿಗಳು ತಿಳಿಸಿರುವಂತೆ ಲಾಕ್​ಡೌನ್​ ಮಾಡುವ ಕ್ರಮವನ್ನ ಕೈ ಬಿಟ್ಟಿದೆ. ಲಾಕ್​ಡೌನ್​ಗೆ ಬದಲಾಗಿ ಈ 16 ಅಂಶಗಳ ಶಿಫಾರಸ್ಸನ್ನೇ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸಲಹೆ ನೀಡಲಾಗಿದೆ.

ತಜ್ಞರು ಕೊಟ್ಟ ಶಿಫಾರಸ್ಸಿನ ಕೆಲವು ಅಂಶಗಳು ಹೀಗಿವೆ.. 

 • ರಾಜ್ಯದ 8 ನಗರಗಳಲ್ಲಿ ಜಾರಿಯಾಗಿರುವ ಕೊರೊನಾ ಕರ್ಫ್ಯೂವನ್ನ ಯಥಾವತ್ತಾಗಿ ರಾಜ್ಯಾದ್ಯಾಂತ ವಿಸ್ತರಣೆ ಮಾಡುವುದು.
 • ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸುವುದು ಅನಿವಾರ್ಯವಾಗಿದೆ, ಕನಿಷ್ಠ ಮುಂದಿನ ಒಂದೂವರೆ ತಿಂಗಳು ಗಡಿಭಾಗಗಳಲ್ಲಿ ಹದ್ದಿನ ಕಣ್ಣು ಇಡಲೇಬೇಕು. ಅಂತರರಾಜ್ಯ ಪ್ರಯಾಣಿಕರ ಮೇಲೆ ಕಡ್ಡಾಯವಾಗಿ ನಿಗಾವಹಿಸಬೇಕು.
 • ಹೊಟೇಲ್‌ಗಳಲ್ಲಿ ಸೇವೆಯನ್ನ ಸ್ಥಗಿತಗೊಳಿಸುವುದು, ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡುವುದು. ಬಾರ್​ ಮತ್ತು ರೆಸ್ಟೋರೆಂಟ್‌ಗಳಲ್ಲೂ ಇದೇ ನಿಯಮ ಜಾರಿಗೊಳಿಸುವುದು.
 • ಬೆಳಿಗ್ಗೆ 5 ಘಂಟೆಯಿಂದ 10 ಘಂಟೆಯವರೆಗೂ ಹಾಗೂ ಸಂಜೆ 5 ಘಂಟೆಯಿಂದ ರಾತ್ರಿ 10 ಘಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಟ್ಟು, ಹಗಲಿನ ಸಮಯದಲ್ಲೂ 10 ಘಂಟೆಯಿಂದ 5 ಘಂಟೆಯವರೆಗೂ ಕರ್ಫ್ಯೂ ಜಾರಿಗೊಳಿಸಿದ್ರೆ ಕೊರೊನಾ ಹಿಡಿತಕ್ಕೆ ತರಬಹುದು.
 • ಈಗ ಆರಂಭವಾಗಿರುವ ಸಿನಿಮಾ ಮಂದಿರಗಳು, ಜಿಮ್‌ಗಳು ಬಂದ್​ ಮಾಡಿದ್ರೆ, ಒಳಿತು. ಸ್ವಿಮ್ಮಿಂಗ್​ ಫೂಲ್‌ಗಳನ್ನು ಬಂದ್​ ಮಾಡಲೇಬೇಕು.
 • ಬೆಂಗಳೂರಿನಲ್ಲಿ ವಾರ್ಡ್​ ‌ಮಟ್ಟದಲ್ಲಿ 45 ವರ್ಷ ಮೇಲ್ಪಟ್ಟವರನ್ನು ಗುರುತಿಸಿ, ಲಸಿಕೆ ಹಾಕಿಸಿಕೊಂಡಿದ್ದಾರೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ತಂಡ ರಚಿಸಬೇಕು. 1ನೇ ಡೋಸ್​​ ಪಡೆದುಕೊಂಡವರು 2ನೇ ಡೋಸ್‌ಗೆ ಬಂದಿಲ್ಲವಾದ್ರೆ, ಅಂತಹವರನ್ನು ಕೂಡ ಪತ್ತೆ ಹಚ್ಚುವ ಕೆಲಸ ಮಾಡುವುದು.
 • ಸಾರ್ವಜನಿಕರ ಹಿತಾಸಕ್ತಿಯ ಹಿನ್ನೆಲೆಯಲ್ಲಿ, ಸೆಲೆಬ್ರಿಟಿಗಳ ಕಡೆಯಿಂದ ಕೊರೊನಾ ಸೋಂಕಿನ ಎಚ್ಚರಿಕೆಯ ಬಗ್ಗೆ ಜಾಗೃತಿ ಮೂಡಿಸುವುದು.
 • ಜನಸಂದಣಿ ನಿಯಂತ್ರಿಸಬೇಕು, ಜನಸಂದಣಿ ಇರುವ ಮಾರ್ಕೆಟ್​ ಮತ್ತಿತರ ಕಡೆ 144 ಸೆಕ್ಷನ್​ ಜಾರಿ‌ ಮಾಡಬೇಕು.
 • ಬಿಬಿಎಂಪಿಯ ಪ್ರತೀ ವಾರ್ಡ್​ಗೆ ಎರಡು ಆ್ಯಂಬುಲೆನ್ಸನ್ನ ನಿಯೋಜನೆ ಮಾಡಬೇಕು.
 • ಖಾಸಗಿ ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದ ರೆಮ್ಡಿಸಿವಿರ್​ ಪೂರೈಕೆ ಮಾಡಬೇಕು.
 • ಹೋಂ ಐಸೋಲೇಷನ್​ನಲ್ಲಿ ಇರುವವರಿಗೆ ಮೆಡಿಕಲ್​‌ ಕಿಟ್​, ಆಕ್ಸಿಮೀಟರ್​ ಒದಗಿಸಿಬೇಕು, ಅವರ ಬಗ್ಗೆ ಸೂಕ್ತ ನಿಗಾ ಇರಿಸಬೇಕು.
 • ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿರುವ ರೋಗಿಗಿಗಳನ್ನು ಕೊರೊನಾ ಕೇರ್​ ಸೆಂಟರ್​ಗಳಿಗೆ ಸ್ಥಳಾಂತರಿಸಬೇಕು.
 • ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದ ಆಕ್ಸಿಜನ್​, ಬೆಡ್​ಗಳು, ಔಷಧಿಗಳ ಪೂರೈಕೆ ಮತ್ತು ದಾಸ್ತಾನು ಮಾಡಬೇಕು.
 • ನಕಲಿ ಆಕ್ಸಿಮೀಟರ್​ಗಳನ್ನು ನಿಷೇಧಿಸಬೇಕು.
 • ರಾಜ್ಯದ ಉತ್ತರ ಭಾಗದ ಕೆಲವು ಜಿಲ್ಲೆಗಳಿಗೆ ಟೆಲಿ ಐಸಿಯು, ಟೆಲಿ ಟ್ರೀಟ್ಮೆಂಟ್​ ಸೇವೆ ಪೂರೈಸಬೇಕು.
 • ವೈದ್ಯರು, ಸ್ಟಾಫ್​ ನರ್ಸ್​ ಗಳಿಗೆ ಕೊರೊನಾ ಪ್ರಿವೆನ್ಷನ್​ ಬಿಹೇವಿಯರ್​ ತರಬೇತಿ ನೀಡಬೇಕು.

ಈ ನಿಯಮಗಳನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ರೆ ಕೊರೊನಾ ಕಂಟ್ರೋಲ್​ ಮಾಡುವ ಸಾಧ್ಯತೆಗಳಿದೆ ಎಂದು ತಜ್ಞರ ತಂಡ ಮಾಹಿತಿ ನೀಡಿದೆ.

The post ತಾಂತ್ರಿಕ ಸಲಹಾ ಸಮಿತಿಯಿಂದ 16 ಅಂಶಗಳ ಶಿಫಾರಸು; ಲಾಕ್​ ಡೌನ್​ ಗೊಂದಲಗಳಿಗೆ ಬೀಳುತ್ತಾ ಬ್ರೇಕ್..? appeared first on News First Kannada.

Source: News First Kannada
Read More

Categories
News

ಕೊರೊನಾ ವಿರುದ್ಧ ಯುದ್ಧ; ವಿದೇಶದಿಂದಲೂ ಭಾರತಕ್ಕೆ ವ್ಯಾಕ್ಸಿನ್ ತರಲು ಕೇಂದ್ರ ನಿರ್ಧಾರ

ಭಾರತದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ವಿದೇಶದಿಂದಲೂ ಕೊರೊನಾ ವ್ಯಾಕ್ಸಿನ್ ತರುವ ಪ್ರಕ್ರಿಯೆಗೆ ವೇಗ ನೀಡಲು ನಿರ್ಧರಿಸಿದೆ. ದೇಶದಲ್ಲಿ ಯುದ್ಧೋಪಾದಿಯಲ್ಲಿ ವ್ಯಾಕ್ಸಿನ್ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಪೆಂಡಿಂಗ್ ಇರುವ ಅರ್ಜಿಗಳಿಗೂ ಅನುಮೋದನೆ ನೀಡಲು ನಿರ್ಧರಿಸಿದೆ.

ಈಗಾಗಲೇ ದೇಶದಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್ ಎರಡು ಲಸಿಕೆ ನೀಡಲಾಗುತ್ತಿದೆ. ಇಂದು ರಷ್ಯಾ ಅಭಿವೃದ್ಧಿ ಪಡಿಸಿರುವ ಮತ್ತು ಭಾರತದಲ್ಲೇ ತಯಾರಾಗುವ ಸ್ಫುಟ್ನಿಕ್ ವಿ ವ್ಯಾಕ್ಸಿನ್​ಗೂ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತೊಂದು ಪ್ರಮುಖ ಕ್ರಮ ಕೈಗೊಂಡಿದ್ದು, ಭಾರತದಲ್ಲಿ ವ್ಯಾಕ್ಸಿನ್ ನೀಡಲು ಅನುಮತಿ ಕೋರಿದ್ದರೂ ಪೆಂಡಿಂಗ್ ಇರುವ ಅರ್ಜಿಗಳಿಗೆ ಅನುಮೋದನೆ ನೀಡುವ ಕ್ರಮಕ್ಕೆ ವೇಗ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸದ್ಯ ಅಮೆರಿಕಾ ಅಭಿವೃದ್ಧಿ ಪಡಿಸಿರುವ ಮತ್ತು ಭಾರತದಲ್ಲೇ ಫ್ಯಾಕ್ಟರಿಯನ್ನೂ ಹೊಂದಿರುವ ಸಿಂಗಲ್ ಡೋಸ್ ವ್ಯಾಕ್ಸಿನ್ ಜಾನ್ಸನ್ ಅಂಡ್ ಜಾನ್ಸನ್ ಕೂಡ ಭಾರತದಲ್ಲಿ ವ್ಯಾಕ್ಸಿನ್ ನೀಡಲು ಒಲವು ತೋರಿದೆ. ಇನ್ನೊಂದೆಡೆ ಅಮೆರಿಕಾದ ಫೈಜರ್ ಮತ್ತು ಜರ್ಮನಿಯ ಬಯೋಎನ್​ಟೆಕ್ ಜಂಟಿಯಾಗಿ ಅಭಿವೃದ್ಧಿ ಪಡಿಸಿ, ಉತ್ಪಾದಿಸುತ್ತಿರುವ mRNA ಫೈಜರ್ ವ್ಯಾಕ್ಸಿನ್ ಕೂಡ ಕಳೆದ ಡಿಸೆಂಬರ್​ನಲ್ಲಿಯೇ ಭಾರತದಲ್ಲಿ ಅನುಮತಿ ಕೋರಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ ಅರ್ಜಿ ಸಲ್ಲಿಸಿತ್ತು. ಬಳಿಕ ಡಿಸಿಜಿಇ ಮತ್ತಷ್ಟು ವರದಿ ಕೇಳಿದ ಬೆನ್ನಲ್ಲೇ ತನ್ನ ಅರ್ಜಿಯನ್ನು ಫೈಜರ್ ಹಿಂಪಡೆದಿತ್ತು. ಅಲ್ಲದೇ ಕ್ರೆಡಿಲ್ಲಾ, ನೊವಾವ್ಯಾಕ್ಸ್ ಮುಂತಾದ ವ್ಯಾಕ್ಸಿನ್ ಕೂಡ ಭಾರತದಲ್ಲಿ ಎಮರ್ಜನ್ಸಿಯಾಗಿ ನೀಡಲು ಒಲವು ತೋರಿವೆ.. ಜೊತೆಗೆ ನೊವಾವ್ಯಾಕ್ಸ್​ನೊಂದಿಗೆ ಭಾರತ ಸರ್ಕಾರ 6 ತಿಂಗಳ ಹಿಂದೆಯೇ ಸುಮಾರು 100 ಕೋಟಿ ಡೋಸ್​ ಆಫ್ ವ್ಯಾಕ್ಸಿನ್​ಗಾಗಿ ಒಪ್ಪಂದ ಮಾಡಿಕೊಂಡಿತ್ತು.. ಹೀಗಾಗಿ, ಉಳಿದ ವ್ಯಾಕ್ಸಿನ್​ಗಳು ಕೂಡ ಭಾರತದಲ್ಲಿ ಸದ್ಯದಲ್ಲಿಯೇ ಬರಲಿರುವ ಬಗ್ಗೆ ಸದ್ಯಕ್ಕಂತೂ ಭರವಸೆ ಮೂಡಿದೆ.

The post ಕೊರೊನಾ ವಿರುದ್ಧ ಯುದ್ಧ; ವಿದೇಶದಿಂದಲೂ ಭಾರತಕ್ಕೆ ವ್ಯಾಕ್ಸಿನ್ ತರಲು ಕೇಂದ್ರ ನಿರ್ಧಾರ appeared first on News First Kannada.

Source: News First Kannada
Read More

Categories
News

ನೌಕರರು ತಿಂಗಳೆಲ್ಲಾ‌ ಸತ್ಯಾಗ್ರಹ ಮಾಡಿದ್ರೂ ಬಗ್ಗುವುದಿಲ್ಲ ಎನ್ನುವುದು ದೌರ್ಜನ್ಯದ ಪರಮಾವಧಿ- ಕೋಡಿಹಳ್ಳಿ

ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ನೌಕರರು ತಿಂಗಳುಗಳ ಕಾಲ ಸತ್ಯಾಗ್ರಹ ಮಾಡಿದರೂ ನಾವು ಬಗ್ಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಿರುವುದು ದೌರ್ಜನ್ಯದ ಪರಮಾವಧಿ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಕಿಡಿಕಾರಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು.. ಸಾರಿಗೆ ನೌಕರರಿಗೆ ಯುಗಾದಿ‌ ಹಬ್ಬದ ಸಂಭ್ರಮ ಇಲ್ಲದಂತಾಗಿದೆ. ಸರ್ಕಾರ ನೌಕರರಿಗೆ ವೇತನ ನೀಡದೇ ಸತಾಯಿಸುತ್ತಿದೆ, ವೇತನ ನೀಡುವುದೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿರುವುದು ಸರಿಯಲ್ಲ.  ಮಾರ್ಚ್​ ತಿಂಗಳ ವೇತನ ನೀಡಿಲ್ಲ ಎಂದು ಡಿಪೋ ಮ್ಯಾನೇಜರ್​‌ ವಿರುದ್ಧ ಪೊಲೀಸ್​ ಠಾಣೆಗಳಿಗೆ ದೂರು ನೀಡಲಾಗುತ್ತದೆ. ಸಾರಿಗೆ ನೌಕರ ತಿಪ್ಪೇಸ್ವಾಮಿ ಮೊದಲ ದೂರನ್ನ ನೀಡಲಿದ್ದಾರೆ, ಅದೇ ರೀತಿ ರಾಜ್ಯದೆಲ್ಲೆಡೆ ದೂರು ನೀಡಲಾಗುತ್ತದೆ ಎಂದ ಹೇಳಿದ್ರು.

ಸಾರಿಗೆ ಬಸ್​ಗಳನ್ನ ಬಲವಂತದಿಂದ ಓಡಿಸಲಾಗುತ್ತಿದೆ. ಖಾಸಗಿ ವಾಹನ, ಚಾಲಕರ ಮೂಲಕ ಬಸ್​ ಓಡಿಸುವುದು ಸಕ್ಸಸ್​ ಆಗುವುದಿಲ್ಲ. ಈ ರೀತಿ ಎಷ್ಟೇ ಪ್ರಯತ್ನ ಮಾಡಿದ್ರೂ ಅದು ಸಫಲವಾಗುವುದಿಲ್ಲ. ದಂಡಿಸುವ ದಿಕ್ಕಿನಡಿ ಸರ್ಕಾರ ಮುಂದಾಗಬಾರದು, ಸಿಎಂ ಇನ್ನೊಮ್ಮೆ ಈ ಬಗ್ಗೆ ಪರಿಶೀಲಿಸಲಿ. 6ನೇ ವೇತನ ನಮ್ಮ ಬೇಡಿಕೆಯೇ ಆಗಿದ್ದಲ್ಲ, ಸರ್ಕಾರ ನೀಡಿದ ವಾಗ್ಧಾನವಿದು. ಆಗ ವಾಗ್ಧಾನ ನೀಡಿ ಈಗ ಮೊಂಡುವಾದ ಮಾಡೋದು ಸರಿಯಲ್ಲ.. ನ್ಯಾಯವಾದ ದಾರಿಯಲ್ಲಿ‌ ಬರಬೇಕು ಎಂದಿದ್ದಾರೆ.

The post ನೌಕರರು ತಿಂಗಳೆಲ್ಲಾ‌ ಸತ್ಯಾಗ್ರಹ ಮಾಡಿದ್ರೂ ಬಗ್ಗುವುದಿಲ್ಲ ಎನ್ನುವುದು ದೌರ್ಜನ್ಯದ ಪರಮಾವಧಿ- ಕೋಡಿಹಳ್ಳಿ appeared first on News First Kannada.

Source: News First Kannada
Read More

Categories
News

CBSE ಪರೀಕ್ಷೆ ರದ್ದು ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ ಅರವಿಂದ್ ಕೇಜ್ರಿವಾಲ್

ನವದೆಹಲಿ: ಸಿಬಿಎಸ್​ಇ ಪರೀಕ್ಷೆಯನ್ನು ರದ್ದು ಮಾಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಅವರು.. ದೆಹಲಿಯಲ್ಲಿ 6 ಲಕ್ಷ ವಿದ್ಯಾರ್ಥಿಗಳು ಸಿಬಿಎಸ್​ಇ ಪರೀಕ್ಷೆ ಬರೆಯಲಿದ್ದಾರೆ. ಒಂದು ಲಕ್ಷ ಶಿಕ್ಷಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪರೀಕ್ಷಾ ಕೇಂದ್ರಗಳು ಹಾಟ್​​ಸ್ಪಾಟ್ ಆಗಿ ಬದಲಾಗಿ ದೊಡ್ಡ ಮಟ್ಟದಲ್ಲಿ ಸೋಂಕು ಹರಡಲು ಕಾರಣವಾಗುವ ಸಾಧ್ಯತೆಗಳಿವೆ. ಮಕ್ಕಳ ಬದುಕು ಮತ್ತು ಆರೋಗ್ಯ ನಮಗೆ ತುಂಬಾ ಮುಖ್ಯ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ನಾನು ಸಿಬಿಎಸ್​ಇ ಪರೀಕ್ಷೆಗಳನ್ನ ರದ್ದು ಮಾಡುವಂತೆ ಮನವಿ ಮಾಡಿಕೊಳ್ಳುತ್ತೇನೆ.

ಪರ್ಯಾಯ ಮಾರ್ಗಗಳ ಮೂಲಕ ಪರೀಕ್ಷೆ ನಡೆಸುವ ಬಗ್ಗೆ ಚಿಂತಿಸಬೇಕಿದೆ. ಆನ್​ಲೈನ್ ಅಥವಾ ಆಂತರಿಕ ಮೌಲ್ಯಮಾಪನದ ಮೊರೆಹೋಗಬೇಕಿದೆ. ಆದರೆ ಸಿಬಿಎಸ್​ಇ ಖಂಡಿತ ರದ್ದಾಗಬೇಕು.

ಕೊರೊನಾ ಸೋಂಕು ಪ್ರಕರಣಗಳು ವ್ಯಾಪಕವಾಗಿ ಏರಿಕೆ ಕಾಣುತ್ತಿವೆ. ನನಗೆ ತಿಳಿದಿರುವಂತೆ ಕಳೆದ 24 ಗಂಟೆಗಳಲ್ಲಿ 13,500 ಕೇಸ್​ಗಳು ಬೆಳಕಿಗೆ ಬಂದಿವೆ. ನವೆಂಬರ್​​ ತಿಂಗಳಿನಲ್ಲಿ ಹೆಚ್ಚೆಂದರೆ 8,500 ಕೇಸ್​ಗಳು ವರದಿಯಾಗಿದ್ದವು. ಅದಕ್ಕೆ ಹೋಲಿಸಿದರೆ ನಾವು ಈಗಾಗಲೇ 13,500 ಕೇಸ್​ಗಳನ್ನು ನೋಡುತ್ತಿದ್ದೇವೆ.

ಈ ದಾರಿ ಬಹಳ ಅಪಾಯಕಾರಿ. ಕಳೆದ 10-15 ದಿನಗಳ ಅಂಕಿಅಂಶಗಳ ಪ್ರಕಾರ 65 ಪರ್ಸೆಂಟ್ ರೋಗಿಗಳು 45 ಕ್ಕಿಂತ ಕಡಿಮೆ ವಯಸ್ಸಿನವರು. ನಿಮ್ಮ ಆರೋಗ್ಯ ಮತ್ತು ಜೀವನ ನಮಗೆ ಬಹಳ ಮುಖ್ಯ. ಯುವಕರಿಗೆ ನಾನು ಮನವಿ ಮಾಡುವುದೆಂದರೆ ಅತಗತ್ಯವಿದ್ದಲ್ಲಷ್ಟೇ ಮನೆಯಿಂದ ಹೊರಬನ್ನಿ ಎಂದಿದ್ದಾರೆ.

The post CBSE ಪರೀಕ್ಷೆ ರದ್ದು ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ ಅರವಿಂದ್ ಕೇಜ್ರಿವಾಲ್ appeared first on News First Kannada.

Source: News First Kannada
Read More

Categories
News

ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ.. ಎರಡೂವರೆ ಎಕರೆ ಬಾಳೆ ನಾಶ ಮಾಡಿದ ರೈತ

ಕೊಪ್ಪಳ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ವಿರುದ್ಧ ಕೊಪ್ಪಳ‌ ರೈತ ಗವಿಸಿದ್ದಪ್ಪ ಗದ್ದಿಕೇರಿ ಎಂಬುವವರು ತಾವು ಎರಡೂವರೆ ಎಕರೆಯಲ್ಲಿ ಬೆಳೆದ ಬಾಳೆಯನ್ನ ನಾಶ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳದ ಅಳವಂಡಿ ಗ್ರಾಮದ ರೈತನಾದ ಗವಿಸಿದಪ್ಪ ಗದ್ದಿಕೆರಿ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದು.. ರೈತರ ಹೋರಾಟಗಾರರು ಅಂತಾ ಹೇಳಿಕೊಳ್ಳುವ ಚಂದ್ರಶೇಖರಗೆ ರೈತರ ಬಗ್ಗೆ ಕಾಳಜಿ ಇಲ್ಲ. ರೈತರು ಬೆಳೆ ಇಲ್ಲದೇ ಹಾಗೂ ಬೆಳೆಗೆ ಬೆಂಬಲ ಬೆಲೆ‌ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ಚಂದ್ರಶೇಖರ ಅವರಿಗೆ ಸಾರಿಗೆ ನೌಕರರ ಬಗ್ಗೆ ಕಾಳಜಿ ಇದೆ.. ರೈತರ ಬಗ್ಗೆ ಇಲ್ಲ. ಇವರು ರೈತರ ಮುಖಂಡರೋ? ಸಾರಿಗೆ ನೌಕರರ ಮುಖಂಡರೋ? ಮೊದ್ಲು ಸಾರಿಗೆ ನೌಕರರ‌ ಮುಷ್ಕರ ಬಿಟ್ಟು ರೈತರತ್ತ ಗಮನಹರಿಸಲಿ ಎಂದು ಕಿಡಿಕಾರಿದ್ದಾರೆ.

ಕೃಷಿ ಸಚಿವ ಬಿಸಿ ಪಾಟೀಲ್ ಕೂಡ ರೈತರತ್ತ ತಿರುಗಿ ನೋಡ್ತಾಇಲ್ಲ ರೈತರಿಗೆ ಮೇಲೆ ಮೇಲೆ ಸಂಕಷ್ಟ ಎದುರಾಗುತ್ತಿದೆ. ರೈತರಿಗೆ ಆತ್ಮಹತ್ಯೆ ಒಂದೇ ದಾರಿ ಎನ್ನುವಂತಾಗಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

The post ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ.. ಎರಡೂವರೆ ಎಕರೆ ಬಾಳೆ ನಾಶ ಮಾಡಿದ ರೈತ appeared first on News First Kannada.

Source: News First Kannada
Read More

Categories
News

ಪ್ರಿನ್ಸ್ ಹ್ಯಾರಿ ಮದುವೆಯಾಗುತ್ತೇನೆಂದು ನಂಬಿಸಿ ವಂಚಿಸಿದ್ದಾರೆಂದು ಕೋರ್ಟ್ ಮೊರೆ ಹೋದ ಪಂಜಾಬ್ ಮಹಿಳೆ

ಪಂಜಾಬ್: ಪಂಜಾಬ್​ ಮೂಲದ ಮಹಿಳೆಯೋರ್ವರು ಯುಕೆಯ ಪ್ರಿನ್ಸ್ ಹಾರಿ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಅವರನ್ನ ಬಂಧಿಸಬೇಕೆಂದು ಕೋರ್ಟ್ ಮೆಟ್ಟಿಲೇರಿರುವ ವಿಚಿತ್ರ ಘಟನೆ ವರದಿಯಾಗಿದೆ.

ಮಹಿಳೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ಗಳಲ್ಲಿ ಪ್ರಿನ್ಸ್ ಹ್ಯಾರಿ ತನಗೆ ಮದುವೆಯಾಗೋದಾಗಿ ಪ್ರಾಮಿಸ್ ಮಾಡಿ ಮೋಸ ಮಾಡಿದ್ದಾರೆ.. ನನಗೆ ನ್ಯಾಯ ಕೊಡಿಸಿ ಎಂದು ಅರ್ಜಿ ಸಲ್ಲಿಸಿದ್ದಾರೆ. ಪಂಜಾಬ್ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ ಎನ್ನಲಾಗಿದೆ. ವಿಶೇಷ ಮನವಿಯ ಹಿನ್ನೆಲೆ ಅರ್ಜಿದಾರರ ಪರ ವಕೀಲ ಪಲ್ವಿಂದರ್ ಸಿಂಗ್ ಮಹಿಳೆಯ ಪರವಾಗಿ ಕೋರ್ಟ್​ ಮುಂದೆ ಹಾಜರಾಗಿದ್ದಾರೆ. ತಕ್ಷಣವೇ ಪ್ರಿನ್ಸ್ ಹ್ಯಾರಿಯನ್ನ ಬಂಧಿಸಿ ಮದುವೆ ಮತ್ತಷ್ಟು ಮುಂದಕ್ಕೆ ಹೋಗದಂತೆ ತಡೆಯಬೇಕು ಎಂದು ಮನವಿ ಮಾಡಿದ್ದಾರೆ.

ವಿಚಾರಣೆ ನಡೆಸಿದ ಜಡ್ಜ್ ಅರವಿಂದ್ ಸಿಂಗ್ ಸಂಗ್ವಾನ್.. ಪ್ರಿನ್ಸ್ ಹ್ಯಾರಿಯನ್ನುಮದುವೆಯಾಗಲು ಬಯಸುವುದು ಹಗಲುಗನಸು ಕಾಣುವ ಮಹಿಳೆಯ ಕಲ್ಪನೆಯಷ್ಟೇ ಎಂದು ಹೇಳಿದ್ದಾರೆ ಎನ್ನಲಾಗಿದೆ. ಮುಂದುವರೆದು ಕೋರ್ಟ್​ ಮಹಿಳೆಯನ್ನು ಯುಕೆಗೆ ಪ್ರಯಾಣ ಬೆಳೆಸಿರುವ ಇತಿಹಾಸವಿದೆಯೇ ಎಂದು ಪ್ರಶ್ನಿಸಿದಾಗ ಇದೆಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ನಡೆದದ್ದು ಎಂದು ಹೇಳಿಕೆ ನೀಡಿದ್ದಾರೆ.

ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ನಕಲಿ ಅಕೌಂಟ್​ಗಳು ಸೃಷ್ಟಿಯಾಗಿರುವ ವಿಚಾರ ಹೊಸದೇನಲ್ಲ. ನಿಮಗೆ ಮದುವೆಯಾಗುತ್ತೇನೆಂದು ನಂಬಿಸಿದ ಪ್ರಿನ್ಸ್ ಹ್ಯಾರಿ ಬಹುಶಃ ಪಂಜಾಬ್​ನ ಯಾವುದೋ ಹಳ್ಳಿಯ ಸೈಬರ್ ಕೆಫೆಯೊಂದರಲ್ಲಿ ಕೂತಿರುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

The post ಪ್ರಿನ್ಸ್ ಹ್ಯಾರಿ ಮದುವೆಯಾಗುತ್ತೇನೆಂದು ನಂಬಿಸಿ ವಂಚಿಸಿದ್ದಾರೆಂದು ಕೋರ್ಟ್ ಮೊರೆ ಹೋದ ಪಂಜಾಬ್ ಮಹಿಳೆ appeared first on News First Kannada.

Source: News First Kannada
Read More

Categories
News

ಸಾರಿಗೆ ನೌಕರರು v/s ಸರ್ಕಾರ: ಭಿಕ್ಷಾಟನೆಗೆ ಮುಂದಾದ ನೌಕರರು

ಬೆಂಗಳೂರು: ಸಂಬಳ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಡಿಪೋ ಮ್ಯಾನೇಜರ್​ಗಳ ವಿರುದ್ಧ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದಾರೆ. ಯುಗಾದಿ ಹಬ್ಬದ ದಿನದಂದು ಭಿಕ್ಷಾಟನೆ ಮೂಲಕ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.

6 ನೇ ವೇತನ ಆಯೋಗವನ್ನು ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಆರಂಭಿಸಿರುವ ಮುಷ್ಕರ 7ದಿನಕ್ಕೆ ತಲುಪಿದೆ. ಸರ್ಕಾರದ ವಿರುದ್ಧ ನೌಕರರು ತೀವ್ರವಾದ ಹೋರಾಟ ಆರಂಭಿಸಿದ್ದಾರೆ. ಯಾವ ನೌಕರರು ಮುಷ್ಕರದಲ್ಲಿ ಭಾಗಿಯಾಗದೇ ಕರ್ತವ್ಯಕ್ಕೆ ಹಾಜರಾಗಿದ್ದಾರೋ ಅವರಿಗೆಲ್ಲಾ ನಿನ್ನೆ ಸಂಬಳ ನೀಡಲಾಗಿದೆ, ಮುಷ್ಕರ ನಿರತ ನೌಕರರ ಸಂಬಳ ಕಡಿತಗೊಳಿಸಲಾಗಿದೆ.

ಯುಗಾದಿ ಹಬ್ಬಕ್ಕೆ ಸಂಬಳವಿಲ್ಲದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ನೌಕರರು ರಾಜ್ಯಾದ್ಯಂತ ಭಿಕ್ಷೆ ಬೇಡುವ ಮೂಲಕ ವಿನೂತನ ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಂಗಳೂರಿನ ಸದಾಶಿವನಗರ ಸೇರಿದಂತೆ ನಗರದ ಪ್ರಮುಖ ಜಂಕ್ಷನ್​ಗಳಲ್ಲಿ ಬೆಳಿಗ್ಗೆ ಹನ್ನೊಂದು ಗಂಟೆಗೆ ತಟ್ಟೆ ಲೋಟ ಹಿಡಿದು ಹೆಂಡತಿ ಮಕ್ಕಳೊಂದಿಗೆ ಭಿಕ್ಷಾಟನೆ ಮಾಡಲಿದ್ದಾರೆ. ಮತ್ತೊಂದೆಡೆ ಕಾನೂನು ಹೋರಾಟಕ್ಕೂ ಮುಂದಾಗಿರುವ ಸಾರಿಗೆ ನೌಕರರು ಸಂಬಳ ಬಿಡುಗಡೆ ಮಾಡದ ಡಿಪೋ ಮ್ಯಾನೇಜರ್​ಗಳ ವಿರುದ್ಧ ಹತ್ತಿರದ ಪೊಲೀಸ್​ ಠಾಣೆಗಳಲ್ಲಿ ದೂರು ನೀಡಿದ್ದಾರೆ.

ಇಂದು ಕೂಡ ಮುಷ್ಕರ ಅಂತ್ಯವಾಗುವ ಯಾವುದೇ ಸುಳುವುಸಿಗುತ್ತಿಲ್ಲ. ಒಂದು ಕಡೆ ಸರ್ಕಾರ ಯಾವುದೇ ಕಾರಣಕ್ಕೂ ಕೂಟದ ಜೊತೆಗೆ ಮಾತುಕತೆ ಅಸಾಧ್ಯ ಎನ್ನುತ್ತಿದೆ. ಮತ್ತೊಂದು ಕಡೆ ನೌಕರರು ಪಟ್ಟು ಹಿಡಿದು ದಿನಕ್ಕೊಂದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಇಬ್ಬರ ಹಗ್ಗ ಜಗ್ಗಾಟದಲ್ಲಿ ಪ್ರಯಾಣಿಕರ ಪರದಾಟ ಮುಂದುವರಿದಿದೆ.

The post ಸಾರಿಗೆ ನೌಕರರು v/s ಸರ್ಕಾರ: ಭಿಕ್ಷಾಟನೆಗೆ ಮುಂದಾದ ನೌಕರರು appeared first on News First Kannada.

Source: News First Kannada
Read More

Categories
News

ಮಲೆ ಮಾದಪ್ಪನಿಗೆ ವಿಶೇಷ ಪೂಜೆ; ಸರಳ ಸಾಂಪ್ರದಾಯಿಕ ಯುಗಾದಿ ಆಚರಣೆ

ಚಾಮರಾಜನಗರ: ಕೊರೊನಾ ಕಾರಣದಿಂದಾಗಿ ಹನೂರು ಜಿಲ್ಲೆಯ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಮಲೆ ಮಹಾದೇಶ್ವರನ ಬೆಟ್ಟದಲ್ಲಿ ಸರಳ ಹಾಗೂ ಸಂಪ್ರದಾಯಕವಾಗಿ ಯುಗಾದಿಯನ್ನ ಆಚರಣೆ ಮಾಡಲಾಗಿದೆ.

ಇಂದು ಬೆಳಗ್ಗಿನ ಜಾವಾ 3 ರಿಂದ 6 ಗಂಟೆಯವರೆಗೆ ಮಾದಪ್ಪನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಗಿದೆ. ರಥೋತ್ಸವ ರದ್ದಾದ ಹಿನ್ನೆಲೆಯಲ್ಲಿ ಉಮಾ ಮಹೇಶ್ವರ ಉತ್ಸವ ಮೂರ್ತಿಗೆ ಅಭಿಷೇಕ ಮಾಡಲಾಗಿದೆ, ಮಹಾರಥಕ್ಕೆ ಸಾಂಕೇತಿಕವಾಗಿ ಪೂಜೆ ನೆರವೇರಿಸಲಾಗಿದೆ.

ದೇವಾಲಯದ ಆವರಣದಲ್ಲಿ ಬಿಳಿ ಆನೆಯ ಉತ್ಸವ, ಹುಲಿವಾಹನ, ಬಸವವಾಹನ ಹಾಗೂ ರುದ್ರಾಕ್ಷಿ ಉತ್ಸವವನ್ನ ನೆರವೇರಿಸಲಾಗಿದೆ. ಮಾದಪ್ಪನ ಪೂಜೆಯ ನಂತರ ಭಕ್ತರಿಗೆ ಬೇವು, ಬೆಲ್ಲಾ ಹಂಚಲಾಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಯುಗಾದಿಯಂದು ಲಕ್ಷಾಂತರ ಭಕ್ತರು ಮಾದಪ್ಪನ ದರ್ಶನ ಪಡೆಯುತ್ತಿದ್ದರ, ಹಬ್ಬದ ಪ್ರಯುಕ್ತ ಮಹಾರಥೋತ್ಸವ ನಡೆಯುತ್ತಿತ್ತು.  ಆದರೆ ಈ ಬಾರಿ ಕೊರೊನಾ ಕಾರಣದಿಂದಾಗಿ ರಥೋತ್ಸವ ರದ್ದುಮಾಡಲಾಗಿದೆ, ಹೊರಗಿನ ಭಕ್ತರಿಗೆ ಬೆಟ್ಟಕ್ಕೆ ಪ್ರವೇಶವನ್ನ ನಿಷೇಧಿಸಲಾಗಿದೆ.

The post ಮಲೆ ಮಾದಪ್ಪನಿಗೆ ವಿಶೇಷ ಪೂಜೆ; ಸರಳ ಸಾಂಪ್ರದಾಯಿಕ ಯುಗಾದಿ ಆಚರಣೆ appeared first on News First Kannada.

Source: News First Kannada
Read More