Categories
Sports

‘ಐಸಿಸಿ ಪ್ಲೇಯರ್ ಆಫ್ ದಿ ಮಂತ್’ನಲ್ಲಿ ಭಾರತೀಯರ ಪಾರಮ್ಯ: ಈ ಬಾರಿ ಭುವನೇಶ್ವರ್ ಗೆ ಗೌರವ

ಮುಂಬೈ: ಐಸಿಸಿ ನೀಡುವ ತಿಂಗಳ ಶ್ರೇಷ್ಠ ಆಟಗಾರ ಗೌರವಕ್ಕೆ ಭಾರತದ ಭುವನೇಶ್ವರ್ ಕುಮಾರ್ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಯಲ್ಲಿ ತೋರಿದ ಗಮನಾರ್ಹ ಪ್ರದರ್ಶನದಿಂದ ಮಾರ್ಚ್ ತಿಂಗಳ ಈ ಗೌರವಕ್ಕೆ ಭುವನೇಶ್ವರ್ ಪಾತ್ರರಾಗಿದ್ದಾರೆ.

ಮಾರ್ಚ್ ತಿಂಗಳ ಈ ಗೌರವಕ್ಕೆ ಅಫ್ಘಾನಿಸ್ಥಾನದ ರಶೀದ್ ಖಾನ್ ಮತ್ತು ಜಿಂಬಾಬ್ವೆ ತಂಡದ ಸೀನ್ ವಿಲಿಯಮ್ಸ್ ಅವರು ಭುವನೇಶ್ವರ್ ಕುಮಾರ್ ಜೊತೆಗೆ ನಾಮಿನೇಟ್ ಆಗಿದ್ದರು. ಅಂತಿಮವಾಗಿ ಭುವನೇಶ್ವರ್ ಕುಮಾರ್ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:ಈ ಬಾರಿಯ ಮಹಿಳಾ ಐಪಿಎಲ್ ಗೆ ಮೂರು ತಂಡಗಳು ಮಾತ್ರ!

ಈ ವರ್ಷದ ಜನವರಿಯಿಂದ ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಆರಂಭಿಸಿದ್ದು, ಪುರುಷರ ವಿಭಾಗದಲ್ಲಿ ಇದುವರೆಗಿನ ಎಲ್ಲಾ ಪ್ರಶಸ್ತಿಗಳೂ ಭಾರತೀಯರ ಪಾಲಾಗಿದ್ದು ವಿಶೇಷ. ಜನವರಿ ತಿಂಗಳ ಗೌರವಕ್ಕೆ ರಿಷಭ್ ಪಂತ್, ಫೆಬ್ರವರಿ ತಿಂಗಳಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಮಾರ್ಚ್ ತಿಂಗಳಲ್ಲಿ ಭುವನೇಶ್ವರ್ ಕುಮಾರ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಕ್ರೀಡೆ – Udayavani – ಉದಯವಾಣಿ
Read More

Categories
Sports

ಈ ಬಾರಿಯ ಮಹಿಳಾ ಐಪಿಎಲ್ ಗೆ ಮೂರು ತಂಡಗಳು ಮಾತ್ರ!

ನವದೆಹಲಿ: ಐಪಿಎಲ್‌ ಪ್ಲೇಆಫ್ ವೇಳೆ ನಡೆಯುವ ಮಹಿಳಾ ಟಿ20 ಚಾಲೆಂಜಿಂಗ್‌ ಸರಣಿಯಲ್ಲಿ ಮೂರೇ ತಂಡಗಳು ಪಾಲ್ಗೊಳ್ಳಲಿವೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಕಳೆದ ವರ್ಷ 4 ತಂಡಗಳ ನಡುವೆ ಶಾರ್ಜಾದಲ್ಲಿ ಮಹಿಳಾ ಸರಣಿ ಏರ್ಪಡಿಸಲಾಗಿತ್ತು. ಆದರೆ ಕೋವಿಡ್‌ ಕಾರಣದಿಂದ ಈ ಬಾರಿ ಮತ್ತೆ ಮೂರೇ ತಂಡಗಳ ನಡುವೆ ಸರಣಿ ನಡೆಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ:ಕೆಕೆಆರ್‌ ವಿರುದ್ಧ ಗೆಲುವಿನ ಕೇಕೆ ಹಾಕೀತೇ ಮುಂಬೈ?

ಈ ಬಗ್ಗೆ ಶೀಘ್ರವೇ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಗಳ ಜತೆ ಮಾತುಕತೆ ಪ್ರಗತಿಯಲ್ಲಿದ್ದು, ಇಲ್ಲಿನ ಆಟಗಾರ್ತಿಯರ ಲಭ್ಯತೆ ಬಗ್ಗೆ ವಿಶ್ವಾಸ ಹೊಂದಲಾಗಿದೆ. ಹಾಗೆಯೇ ಈ ಪಂದ್ಯಗಳು ನವದೆಹಲಿಯಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಏ.16ರಂದು ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ಸಭೆ ನಡೆಯಲಿದ್ದು, ಇಲ್ಲಿ ಮಹಿಳಾ ಚಾಲೆಂಜಿಂಗ್‌ ಸರಣಿ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ರಾಹುಲ್‌ಗೆ ಮಣಿದ ಸ್ಯಾಮ್ಸನ್‌ : ರಾಜಸ್ಥಾನ್ ವಿರುದ್ಧ ಪಂಜಾಬ್‌ ಗೆ 4 ರನ್ ಗಳ ಗೆಲುವು

ಕ್ರೀಡೆ – Udayavani – ಉದಯವಾಣಿ
Read More

Categories
Sports

ಕೆಕೆಆರ್‌ ವಿರುದ್ಧ ಗೆಲುವಿನ ಕೇಕೆ ಹಾಕೀತೇ ಮುಂಬೈ?

ಚೆನ್ನೈ: ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಗೆ ಶರಣಾದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ರವಿವಾರವಷ್ಟೇ ಹೈದರಾಬಾದ್‌ಗೆ ಸೋಲುಣಿಸಿ “ಗೆಲುವಿನ ಶತಕ’ ಬಾರಿಸಿದ ಕೋಲ್ಕತಾ ನೈಟ್‌ರೈಡರ್ ಮಂಗಳವಾರ ಪರಸ್ಪರ ಮುಖಾಮುಖೀಯಾಗಲಿವೆ.

ಕೆಕೆಆರ್‌ ತಂಡದ ಮುಂಬೈ ಎದುರಿನ ದಾಖಲೆ ಅತ್ಯಂತ ಕಳಪೆ ಎಂಬುದಕ್ಕೆ ಇತಿಹಾಸ ಸಾಕ್ಷಿ ಒದಗಿ ಸುತ್ತದೆ. ಮುಂಬೈ ವಿರುದ್ಧ ಆಡಿದ 27 ಪಂದ್ಯಗಳಲ್ಲಿ ಕೆಕೆಆರ್‌ಗೆ ಗೆಲ್ಲಲು ಸಾಧ್ಯವಾದದ್ದು ಆರರಲ್ಲಿ ಮಾತ್ರ. ಕಳೆದ ಯುಎಇ ಕೂಟದ ಎರಡೂ ಪಂದ್ಯಗಳಲ್ಲಿ ಕೋಲ್ಕತಾ ಮುಂಬೈಗೆ ಶರಣಾಗಿತ್ತು.

ಸೇಡಿಗೆ ಕಾದಿದೆ ಕೆಕೆಆರ್‌
ಈ ಸೋಲುಗಳಿಗೆ ಸೇಡು ತೀರಿಸಲು ಮಾರ್ಗನ್‌ ಪಡೆಯೀಗ ಹವಣಿಸುತ್ತಿದೆ. ಕಳೆದ ಸಲಕ್ಕಿಂತ ವಿಭಿನ್ನವಾದ, ಹೆಚ್ಚು ಸಂತುಲಿತ ಹಾಗೂ ಶಕ್ತಿಶಾಲಿ ತಂಡವಾಗಿ ಕೆಕೆಆರ್‌ ಗೋಚರಿಸುತ್ತಿದೆ.

ತಿರುಗಿ ಬಿದ್ದೀತು ಮುಂಬೈ
ಆರಂಭದ ಕೆಲವು ಪಂದ್ಯಗಳನ್ನು ಸೋಲುತ್ತ ಹೋಗುವುದು ಮುಂಬೈಗೊಂದು ಹವ್ಯಾಸವಾಗಿದೆ. ಹೀಗಾಗಿ ರೋಹಿತ್‌ ಪಡೆಯನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಅದು ಕೂಟದಲ್ಲೇ ಅತ್ಯಂತ “ಸ್ಟ್ರಾಂಗ್‌ ಟೀಮ್‌’. ಯಾವ ಪಂದ್ಯದಲ್ಲೂ ತಿರುಗಿ ಬೀಳಬಲ್ಲ, ಸಿಡಿದು ನಿಲ್ಲಬಲ್ಲ ಸಾಮರ್ಥ್ಯ ಹೊಂದಿದೆ.

ಕ್ರೀಡೆ – Udayavani – ಉದಯವಾಣಿ
Read More

Categories
Sports

ರಾಹುಲ್‌ಗೆ ಮಣಿದ ಸ್ಯಾಮ್ಸನ್‌ : ರಾಜಸ್ಥಾನ್ ವಿರುದ್ಧ ಪಂಜಾಬ್‌ ಗೆ 4 ರನ್ ಗಳ ಗೆಲುವು

ಮುಂಬೈ: ಕೆ.ಎಲ್‌.ರಾಹುಲ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ಶಾಪಮುಕ್ತಗೊಂಡಿದೆ. ಅತ್ಯುತ್ತಮವಾಗಿ ಆಡಿಯೂ ಕಡೆಯಕ್ಷಣದಲ್ಲಿ ಸೋಲುವ ದುಸ್ಥಿತಿಯಿಂದ ಹೊರಬಂದಿದೆ. ಈ ಬಾರಿಯ ಐಪಿಎಲ್‌ನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ಕಡೆಯ ಎಸೆತದವರೆಗೆ ಹೋರಾಡಿ 4 ರನ್‌ಗಳಿಂದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಗೆಲುವು ಸಾಧಿಸಿದೆ.

ಸೋಮವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 6 ವಿಕೆಟಿಗೆ 221 ರನ್‌ ಸೂರೆಗೈದಿತು. ಇದರೊಂದಿಗೆ ಈ ಕೂಟದಲ್ಲಿ ಇನ್ನೂರರ ಗಡಿ ದಾಟಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದನ್ನು ಬೆನ್ನತ್ತಿದ ರಾಜಸ್ಥಾನ; 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 217 ರನ್‌ ಗಳಿಸಿತು.

ಸ್ಯಾಮ್ಸನ್‌ ಅಮೋಘ ಪ್ರತಿಹೋರಾಟ: ರನ್‌ ಬೆನ್ನತ್ತುವ ವೇಳೆ ಪಂಜಾಬ್‌ ತಂಡವನ್ನು ಏಕಾಂಗಿಯಾಗಿ ಸಂಜು ಸ್ಯಾಮ್ಸನ್‌ ಹೆದರಿಸಿದ್ದರು. ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಚಡಪಡಿಸುತ್ತಿದ್ದ ಆ ತಂಡದ ಪರ ಹೋರಾಡಿದ ಅವರು 63 ಎಸೆತದಲ್ಲಿ 12 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 119 ರನ್‌ ಗಳಿಸಿದರು. ಅವರ ಆಟ ನೋಡಿದಾಗ ರಾಜಸ್ಥಾನ ಗೆಲ್ಲುವುದು ಖಾತ್ರಿ ಎಂದು ಲೆಕ್ಕ ಹಾಕಲಾಗಿತ್ತು. ಆದರೆ ಕಡೆಯ ಓವರ್‌ನಲ್ಲಿ ಪೂರ್ಣ ನಿಯಂತ್ರಣ ಸಾಧಿಸಿದ ಅರ್ಷದೀಪ್‌ ಸಿಂಗ್‌, ಕಡೆಯ ಎಸೆತದಲ್ಲಿ ಸ್ಯಾಮ್ಸನ್‌ ವಿಕೆಟ್‌ ಪಡೆದು ಪಂಜಾಬನ್ನು ಗೆಲ್ಲಿಸಿದರು. ಅವರು ಮೂರು ವಿಕೆಟ್‌ ಪಡೆದರು. ಮೊಹಮ್ಮದ್‌ ಶಮಿ 2 ವಿಕೆಟ್‌ ಪಡೆದರು.

ಸಿಡಿದ ರಾಹುಲ್‌, ಹೂಡಾ: ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಪರ ರಾಹುಲ್‌ ಕ್ರೀಸ್‌ ಆಕ್ರಮಿಸಿಕೊಂಡು ನಿಂತರೆ, ಇನ್ನೊಂದೆಡೆ ಹರ್ಯಾಣದ ಬಿಗ್‌ ಹಿಟ್ಟರ್‌ ದೀಪಕ್‌ ಹೂಡಾ ವಿಸ್ಫೋಟಕ ಬ್ಯಾಟಿಂಗ್‌ ಮೂಲಕ ಮುನ್ನುಗ್ಗಿ ಹೋದರು. ರಾಜಸ್ಥಾನ್‌ ಬೌಲರ್‌ಗಳ ಮೇಲೆರಗಿದ ಅವರು ಕೇವಲ 28 ಎಸೆತಗಳಿಂದ 64 ರನ್‌ ಬಾರಿಸಿದರು. ಸಿಡಿಸಿದ್ದು 4 ಫೋರ್‌, 6 ಸಿಕ್ಸರ್‌. ರಾಹುಲ್‌-ಹೂಡಾ 3ನೇ ವಿಕೆಟಿಗೆ ಕೇವಲ 7.4 ಓವರ್‌ಗಳಿಂದ 105 ರನ್‌ ಸೂರೆಗೈದು ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು.
ಅಂತಿಮ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಕೆ.ಎಲ್‌. ರಾಹುಲ್‌ ಶತಕದ ನಿರೀಕ್ಷೆ ಮೂಡಿಸಿದರು. ಆದರೆ ಸಕಾರಿಯ ಇದಕ್ಕೆ ಅಡ್ಡಗಾಲಿಕ್ಕಿದರು. ರಾಹುಲ್‌ 91 ರನ್‌ ಗಳಿಸಿ ವಾಪಸಾಗಬೇಕಾಯಿತು. 50 ಎಸೆತಗಳ ಈ ಆಕರ್ಷಕ ಇನಿಂಗ್ಸ್‌ನಲ್ಲಿ 7 ಬೌಂಡರಿ, 5 ಸಿಕ್ಸರ್‌ ಒಳಗೊಂಡಿತ್ತು.

ಎಂದಿನಂತೆ ಕರ್ನಾಟಕದ ಜೋಡಿ ಪಂಜಾಬ್‌ ಇನಿಂಗ್ಸ್‌ ಆರಂಭಿಸಿತು. ಆದರೆ ಮಾಯಾಂಕ್‌ ಅಗರ್ವಾಲ್‌ (14) ಹೆಚ್ಚು ಹೊತ್ತು ನಿಲ್ಲಲಿಲ್ಲ. 3ನೇ ಓವರ್‌ನಲ್ಲೇ ಸಕಾರಿಯ ಈ ವಿಕೆಟ್‌ ಉಡಾಯಿಸಿದರು. ದ್ವಿತೀಯ ವಿಕೆಟಿಗೆ ಜತೆಗೂಡಿದ ರಾಹುಲ್‌-ಗೇಲ್‌ ಅಬ್ಬರದ ಬ್ಯಾಟಿಂಗಿಗೆ ಮುಂದಾದರು. 7.1 ಓವರ್‌ಗಳ ಜತೆಯಾಟ ನಡೆಸಿ 67 ರನ್‌ ಒಟ್ಟುಗೂಡಿಸಿದರು. ಇದರಲ್ಲಿ ಗೇಲ್‌ ಪಾಲು 40 ರನ್‌. ಸ್ಫೋಟಕ ಹೊಡೆತಗಳಿಗೆ ಮುಂದಾದ ಗೇಲ್‌ 28 ಎಸೆತ ಎದುರಿಸಿ, 4 ಫೋರ್‌ ಹಾಗೂ 2 ಸಿಕ್ಸರ್‌ ಬಾರಿಸಿದರು.
ಪಂಜಾಬ್‌ ಪರ ಆಡಿದ ಕಳೆದ ಮೂರೂ ಋತುಗಳ ಮೊದಲ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದ ಕ್ರಿಸ್‌ ಗೇಲ್‌ (63, 79 ಮತ್ತು 53) ಇಲ್ಲಿ ಈ ಅವಕಾಶ ತಪ್ಪಿಸಿಕೊಂಡರು. 7ನೇ ಬೌಲರ್‌ ರೂಪದಲ್ಲಿ ಬೌಲಿಂಗಿಗೆ ಇಳಿದ ರಿಯಾನ್‌ ಪರಾಗ್‌ ಈ ಬಹುಮೂಲ್ಯ ವಿಕೆಟ್‌ ಕಿತ್ತರು.

ನಿಕೋಲಸ್‌ ಪೂರನ್‌ ಮತ್ತು ಜೈ ರಿಚಡ್ಸìನ್‌ ಖಾತೆ ತೆರೆಯಲು ವಿಫ‌ಲರಾದರು. ಉಳಿದೆಲ್ಲ ಬೌಲರ್ ದುಬಾರಿಯಾದರೆ ಎಡಗೈ ಮಧ್ಯಮ ವೇಗಿ ಸಕಾರಿಯ 31 ರನ್ನಿಗೆ 3 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು.

ಸಂಕ್ಷಿಪ್ತ ಸ್ಕೋರ್‌: ಪಂಜಾಬ್‌ 20 ಓವರ್‌, 221/6

(ಕೆ.ಎಲ್‌.ರಾಹುಲ್‌ 91, ದೀಪಕ್‌ ಹೂಡಾ 64, ಚೇತನ್‌ ಸಕಾರಿಯ 31ಕ್ಕೆ 3).

ರಾಜಸ್ಥಾನ 20 ಓವರ್‌, 217/7

(ಸ್ಯಾಮ್ಸನ್‌ 119, ಅರ್ಷದೀಪ್‌ 35ಕ್ಕೆ 3, ಶಮಿ 33ಕ್ಕೆ 2).

ಕ್ರೀಡೆ – Udayavani – ಉದಯವಾಣಿ
Read More

Categories
Sports

ಐಪಿಎಲ್‌ಗೆ ಸಜ್ಜಾದ RCB ತಂಡದ ದೇವದತ್ತ ಪಡಿಕ್ಕಲ್‌

ಚೆನ್ನೈ : ಕೊರೊನಾ ದಿಂದ ಪೂರ್ತಿ ಚೇತರಿಸಿಕೊಂಡಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್ತ ಪಡಿಕ್ಕಲ್‌ ಐಪಿಎಲ್‌ ಆಡಲು ಸಜ್ಜಾಗಿದ್ದಾರೆ.ಅವರು ಮುಂಬೈ ಎದುರಿನ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದರು.

“ನಾನು ಪೂರ್ತಿವಾಗಿ ಚೇತ ರಿಸಿಕೊಂಡಿದ್ದೇನೆ, ಆಡಲು ಸಿದ್ಧ ನಾಗಿದ್ದೇನೆ’ ಎಂದು ಪಡಿಕ್ಕಲ್‌ ಹೇಳಿದ್ದಾರೆ. ಅವರಿಗೆ ಮಾ. 22ರಂದು ಕೊರೊನಾ ತಗುಲಿತ್ತು. ಅದಾದ ಅನಂತರ ಏಕಾಂತದಲ್ಲಿದ್ದರು. ಕೆಲವೇ ದಿನಗಳ ಹಿಂದೆ ಆರ್‌ಸಿಬಿಯ ಜೈವಿಕ ಸುರಕ್ಷಾ ವಲಯ ಸೇರಿಕೊಂಡಿದ್ದರು. ಕಳೆದ ವರ್ಷ ಐಪಿಎಲ್‌ನಲ್ಲಿ, ಈ ವರ್ಷದ ದೇಶಿ ಕ್ರಿಕೆಟ್‌ನಲ್ಲಿ ಪಡಿಕ್ಕಲ್‌ ಅಮೋಘ ಬ್ಯಾಟಿಂಗ್‌ ತೋರ್ಪಡಿಸಿದ್ದರು.

ಇದನ್ನೂ ಓದಿ :ಕ್ವಾರಂಟೈನ್‌ನಲ್ಲಿರುವವರ ಮೇಲೆ ಕಣ್ಣಿಡಲು CCTV ಅಳವಡಿಕೆಗೆ ಸೂಚನೆ

ಕ್ರೀಡೆ – Udayavani – ಉದಯವಾಣಿ
Read More

Categories
Sports

ಪ್ರೊ ಲೀಗ್‌ ಹಾಕಿ: ಆರ್ಜೆಂಟೀನಾ ವಿರುದ್ಧ ಭಾರತ ಅಮೋಘ ಪರಾಕ್ರಮ : 3-0 ಗೆಲುವು

ಬ್ಯೂನಸ್‌ ಐರೆಸ್‌: ಒಲಿಂಪಿಕ್‌ ಚಾಂಪಿಯನ್‌ ಆರ್ಜೆಂಟೀನಾ ಮೇಲೆ ಅವರದೇ ನಾಡಿನಲ್ಲಿ ದಂಡೆತ್ತಿ ಹೋದ ಭಾರತ ಎಫ್ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯ ದ್ವಿತೀಯ ಪಂದ್ಯದಲ್ಲಿ 3-0 ಗೋಲುಗಳ ಜಯಭೇರಿ ಮೊಳಗಿಸಿದೆ. ಈ ಸಾಧನೆಯಿಂದ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ನೆಗೆದಿದೆ.

ಪಂದ್ಯದ 11ನೇ ನಿಮಿಷದಲ್ಲೇ ಹರ್ಮನ್‌ಪ್ರೀತ್‌ ಸಿಂಗ್‌ ಗೋಲಿನ ಖಾತೆ ತೆರೆದರು. ಬಳಿಕ 25ನೇ ನಿಮಿಷದಲ್ಲಿ ಲಲಿತ್‌ ಉಪಾಧ್ಯಾಯ ಅವರಿಂದ ದ್ವಿತೀಯ ಗೋಲು ಸಿಡಿಯಿತು. ಅಂತಿಮ ಗೋಲನ್ನು ಪಂದ್ಯದ ಮುಕ್ತಾಯಕ್ಕೆ ಕೇವಲ 2 ನಿಮಿಷ ಇರುವಾಗ ಮನ್‌ದೀಪ್‌ ಸಿಂಗ್‌ ಬಾರಿಸಿದರು.

ಪಾಠಕ್‌ ಅಮೋಘ ರಕ್ಷಣೆ
ಆರ್ಜೆಂಟೀನಾ ಕೂಡ ಉತ್ತಮ ಹೋರಾಟವನ್ನೇ ಸಂಘಟಿಸಿತ್ತು. ಆದರೆ ಗೋಲ್‌ ಕೀಪರ್‌ ಕೃಷ್ಣ ಬಹಾದೂರ್‌ ಪಾಠಕ್‌ ಅಮೋಘ ಪ್ರದರ್ಶನ ನೀಡಿ ಭಾರತದ ಪಾಲಿನ ಆಪತಾºಂಧವರಾದರು. ಮಾರ್ಟಿನ್‌ ಫೆರೆರೊ ಅವರ ಎರಡು ಹೊಡೆತಗಳನ್ನು ಅದ್ಭುತ ರೀತಿಯಲ್ಲಿ ತಡೆದರು. ಶನಿವಾರದ ಪಂದ್ಯವನ್ನು ಭಾರತ ಶೂಟೌಟ್‌ನಲ್ಲಿ ಗೆದ್ದಿತ್ತು.

ಈ ಜಯದಿಂದ ಭಾರತ 8 ಪಂದ್ಯಗಳಿಂದ ಒಟ್ಟು 15 ಅಂಕ ಸಂಪಾದಿಸಿತು. ಆಸ್ಟ್ರೇಲಿಯವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಏರಿತು. ಆಸ್ಟ್ರೇಲಿಯ ಇಷ್ಟೇ ಪಂದ್ಯಗಳಿಂದ 14 ಅಂಕ ಗಳಿಸಿದೆ. ಆರ್ಜೆಂಟೀನಾ 6ನೇ ಸ್ಥಾನಕ್ಕೆ ಕುಸಿದಿದೆ (12 ಪಂದ್ಯ, 11 ಅಂಕ). ಭಾರತವಿನ್ನು ಗ್ರೇಟ್‌ ಬ್ರಿಟನ್‌ ಪ್ರವಾಸಕ್ಕೆ ತೆರಳಿ ಮೇ 8 ಮತ್ತು 9ರಂದು ಎರಡು ಪಂದ್ಯಗಳನ್ನು ಆಡಲಿದೆ.

ಕ್ರೀಡೆ – Udayavani – ಉದಯವಾಣಿ
Read More

Categories
Sports

ಘೇಂಡಾಮೃಗ ಉಳಿವಿಗೆ ರೋಹಿತ್‌ ಶರ್ಮ ಅಭಿಯಾನ

ಮುಂಬಯಿ : ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮ ಧರಿಸಿದ ಶೂನಲ್ಲಿದ್ದ ವಿಶೇಷ ಸಂದೇಶವೊಂದು ಇದೀಗ ಭಾರೀ ಸುದ್ದಿಯಾಗಿದೆ.

ಹೌದು, ರೋಹಿತ್‌ ಒಂದು ಕೊಂಬಿನ ಘೇಂಡಾಮೃಗಗಳ ಉಳಿವಿಗಾಗಿ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ತಮ್ಮ ಶೂ ಮೇಲೆ “ಘೇಂಡಾಮೃಗಗಳನ್ನು ಉಳಿಸಿ’ ಎನ್ನುವ ಸಂದೇಶ ಬರೆದು ಮೈದಾನಕ್ಕಿಳಿದಿದ್ದರು.

ಈ ಬಗ್ಗೆ ರೋಹಿತ್‌ ಟ್ವೀಟ್‌ ಮಾಡಿದ್ದು, “ಕ್ರಿಕೆಟ್‌ ಆಡುವುದು ಮತ್ತು ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿಸುವುದು ನನ್ನ ಕನಸಾಗಿದೆ. ಭಾರತದಲ್ಲಿರುವ ಒಂದು ಕೊಂಬಿನ ಘೇಂಡಾಮೃಗ ಇದೀಗ ಅಳಿವಿನಂಚಿನಲ್ಲಿದೆ. ಇದರ ಬಗ್ಗೆ ಕಾಳಜಿ ವಹಿಸದಿದ್ದರೆ ಈ ಸಂತತಿ ಮುಂದಿನ ದಿಗಳಲ್ಲಿ ಕಣ್ಮರೆಯಾಗುವುದು ಖಂಡಿತ. ಇವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿಸಿ ಮುಂದಡಿಯಿಡಬೇಕಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ :ಉತ್ತರ ಪ್ರದೇಶ ಚುನಾವಣೆ : ಕುಲದೀಪ್‌ ಸಿಂಗ್‌ ಸೆಂಗರ್‌‌ ಪತ್ನಿ ಅಭ್ಯರ್ಥಿತನ ರದ್ದು

ಕ್ರೀಡೆ – Udayavani – ಉದಯವಾಣಿ
Read More

Categories
Sports

ಕಿಂಗ್‌ ಆಗಲು ಹೊರಟವರಿಗೆ ರಾಜಸ್ಥಾನದ ಸವಾಲು

ಮುಂಬಯಿ: ಈ ವರೆಗೆ ಐಪಿಎಲ್‌ ಚಾಂಪಿಯನ್‌ ಆಗದ ತಂಡಗಳಲ್ಲಿ ಒಂದಾದ ಪಂಜಾಬ್‌ ತನ್ನ ಹೆಸರನ್ನು ಬದಲಾಯಿಸಿ ರಾಜಸ್ಥಾನ್‌ ವಿರುದ್ಧ ಸೋಮವಾರ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಕೆ.ಎಲ್‌. ರಾಹುಲ್‌ ಪಡೆ ಈಗ “ಪಂಜಾಬ್‌ ಕಿಂಗ್ಸ್‌’ ಆಗಿದೆ. 14ನೇ ಆವೃತ್ತಿಯಲ್ಲಾದರೂ ಅದು ಐಪಿಎಲ್‌ ಕಿಂಗ್‌ ಆದೀತೇ ಎಂಬುದು ಅಭಿಮಾನಿಗಳ ಕುತೂಹಲ.

ಪಂಜಾಬ್‌ ಪಾಲಿಗೆ ಇದೊಂದು ಸೇಡಿನ ಪಂದ್ಯವೂ ಹೌದು. ಕಳೆದ ಆವೃತ್ತಿಯ ಎರಡೂ ಪಂದ್ಯಗಳಲ್ಲಿ ಪಂಜಾಬ್‌ ರಾಜಸ್ಥಾನ್‌ಗೆ ಶರಣಾಗಿತ್ತು. ಗೆಲುವಿನಂಚಿನಲ್ಲಿದ್ದ ಪಂಜಾಬ್‌ ರಾಹುಲ್‌ ತೇವಟಿಯಾ ಅವರ ಸ್ಫೋಟಕ ಬ್ಯಾಟಿಂಗಿಗೆ ತತ್ತರಿಸಿತ್ತು. ಇನ್ನೊಂದು ಪಂದ್ಯದಲ್ಲಿ ಬೆನ್‌ ಸ್ಟೋಕ್ಸ್‌, ಸಂಜು ಕಂಟಕವಾಗಿ ಪರಿಣಮಿಸಿದ್ದರು. ಹೀಗಾಗಿ ಬೃಹತ್‌ ಮೊತ್ತವನ್ನು ಕೂಡ ರಾಹುಲ್‌ ಪಡೆಯಿಂದ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಪಂಜಾಬ್‌ ಬ್ಯಾಟಿಂಗ್‌ ಲೈನ್‌ಅಪ್‌ ಎಂದಿನಂತೆ ಬಲಿಷ್ಠವಾಗಿಯೇ ಇದೆ. ನಾಯಕ ಕೆ.ಎಲ್‌. ರಾಹುಲ್‌, ಕ್ರಿಸ್‌ ಗೇಲ್‌, ಅಗರ್ವಾಲ್‌, ಪೂರಣ್‌ ಜತೆ ಟಿ20ಯ ನಂ.1 ಬ್ಯಾಟ್ಸ್‌ಮನ್‌ ಡೇವಿಡ್‌ ಮಲಾನ್‌, ಆಲ್‌ರೌಂಡರ್‌ಗಳಾದ ಫ್ಯಾಬಿಯನ್‌ ಅಲನ್‌, ಮೊಸೆಸ್‌ ಹೆನ್ರಿಕ್ಸ್‌, ಯುವ ಆಟಗಾರ ಶಾರೂಖ್‌ ಖಾನ್‌ ಬಲವಿದೆ.

ಸಂಜುಗೆ ಸವಾಲು
ರಾಜಸ್ಥಾನ್‌ ತಂಡದ ನೂತನ ನಾಯಕನಾಗಿರುವ ಸಂಜು ಸ್ಯಾಮ್ಸನ್‌ಗೆ ಈ ಬಾರಿಯ ಐಪಿಎಲ್‌ ದೊಡ್ಡ ಸವಾ ಲೊಡ್ಡಲಿದೆ. ಇಷ್ಟು ವರ್ಷ ನಾಯಕತ್ವದ ಒತ್ತಡವಿಲ್ಲದೆ ಬ್ಯಾಟ್‌ ಬೀಸುತ್ತಿದ್ದ ಸ್ಯಾಮ್ಸನ್‌ ಹೆಚ್ಚುವರಿ ಜವಾಬ್ದಾರಿಯ ನಡುವೆಯೂ ಬ್ಯಾಟಿಂಗ್‌ ಲಯವನ್ನು ಕಾಯ್ದುಕೊಳ್ಳಬೇಕಿದೆ.

ಕ್ರೀಡೆ – Udayavani – ಉದಯವಾಣಿ
Read More

Categories
Sports

ಫಿಫಾ ಅಂಡರ್‌-17 ಮಹಿಳಾ ವಿಶ್ವಕಪ್‌: ನಿರ್ದೇಶಕಿ ರೋಮಾ ಖನ್ನಾ ರಾಜೀನಾಮೆ

ಹೊಸದಿಲ್ಲಿ: ಫಿಪಾ ಅಂಡರ್‌-17 ಮಹಿಳಾ ವಿಶ್ವಕಪ್‌ ಮತ್ತು ಎಎಫ್ಸಿ ಮಹಿಳಾ ಏಶ್ಯನ್‌ ಕೂಟದ ನಿರ್ದೇಶಕಿಯಾಗಿದ್ದ ರೋಮಾ ಖನ್ನಾ ತಮ್ಮ ಸ್ಥಾನಕ್ಕೆ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ.

“ನನ್ನ ಮೇಲೆ ನಂಬಿಕೆ ಇರಿಸಿದ್ದಕ್ಕಾಗಿ ಎಐಎಫ್ಎಫ್ ಮತ್ತು ಫಿಫಾಗೆ ಧನ್ಯವಾದ ಹೇಳಲು ಬಯಸುತ್ತೇನೆ. ಭಾರತದಲ್ಲಿ ಪಂದ್ಯಾವಳಿಯನ್ನು ನಡೆಸುವುದು ಹೆಮ್ಮೆ ಮತ್ತು ಗೌರವದ ವಿಚಾರವಾಗಿದೆ. ನಾನು ಸ್ಥಳೀಯ ಸಂಘಟನಾ ಸಮಿತಿಯಲ್ಲಿ ಮಾಡಿದ ಕೆಲಸದ ಬಗ್ಗೆ ಹೆಮ್ಮೆಪಡುತ್ತೇನೆ’ ಎಂದು ರೋಮಾ ಖನ್ನಾ ಹೇಳಿದ್ದಾರೆ.

“ಖನ್ನಾ ಭಾರತದ ಫ‌ುಟ್‌ಬಾಲ್‌ನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ರಾಜೀನಾಮೆ ಬೇಸರ ಮೂಡಿಸಿದೆ. ಆದರೆ ಅವರ ವೈಯಕ್ತಿಕ ನಿರ್ಧಾರವನ್ನು ಗೌರವಿಸುತ್ತೇವೆ ಮತ್ತು ಅವರಿಗೆ ಶುಭ ಹಾರೈಸುತ್ತೇವೆ’ ಎಂದು ಎಐಎಫ್ಎಫ್ ಪ್ರಧಾನ ಕಾರ್ಯದರ್ಶಿ ಕುಶಲ್‌ ದಾಸ್‌ ಹೇಳಿದರು.

ಕ್ರೀಡೆ – Udayavani – ಉದಯವಾಣಿ
Read More

Categories
Sports

ರಾಣಾ ಬ್ಯಾಟಿಂಗ್‌ ಪ್ರತಾಪ; ಕೆಕೆಆರ್‌ ಗೆಲುವಿನ ಆರಂಭ

ಚೆನ್ನೈ: ನಿತೀಶ್‌ ರಾಣಾ ಮತ್ತು ರಾಹುಲ್‌ ತ್ರಿಪಾಠಿ ಅವರ ಬ್ಯಾಟಿಂಗ್‌ ಸಾಹಸದಿಂದ ಹೈದರಾಬಾದ್‌ಗೆ
ದೊಡ್ಡ ಮೊತ್ತದ ಸವಾಲೊಡ್ಡಿದ ಕೋಲ್ಕತಾ ನೈಟ್‌ರೈಡರ್ ರವಿವಾರದ ಐಪಿಎಲ್‌ ಮುಖಾಮುಖೀಯಲ್ಲಿ 10 ರನ್ನುಗಳ ರೋಚಕ ಗೆಲುವು ಸಾಧಿಸಿದೆ.

ಕೆಕೆಆರ್‌ 6 ವಿಕೆಟಿಗೆ 187 ರನ್‌ ಪೇರಿಸಿದರೆ, ವಾರ್ನರ್‌ ಪಡೆ 5 ವಿಕೆಟ್‌ ಉಳಿಸಿಕೊಂಡೂ 177ರ ಗಡಿಯಲ್ಲಿ ನಿಂತಿತು. 10 ರನ್‌ ಆಗುವಷ್ಟರಲ್ಲಿ ವಾರ್ನರ್‌ ಮತ್ತು ಸಾಹಾ ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ಬಳಿಕ ಬೇರ್‌ಸ್ಟೊ-ಪಾಂಡೆ ಸೇರಿಕೊಂಡು ಹೋರಾಟವನ್ನು ಜಾರಿಯಲ್ಲಿರಿಸಿದರು. ಪಾಂಡೆ 61 ರನ್‌ ಮಾಡಿ ಅಜೇಯರಾಗಿ ಉಳಿದರೂ ತಂಡವನ್ನು ದಡ ಸೇರಿಸುವಲ್ಲಿ ವಿಫಲರಾದರು. ಬೇರ್‌ಸ್ಟೊ 55 ರನ್‌ ಹೊಡೆದರು. ಪ್ರಸಿದ್ಧ್ ಕೃಷ್ಣ 2 ವಿಕೆಟ್‌ ಕಿತ್ತರು.

ಕೆಕೆಆರ್‌ ಪರ ಎಡಗೈ ಆಟಗಾರ ರಾಣಾ 56 ಎಸೆತಗಳಿಂದ ಸರ್ವಾಧಿಕ 80 ರನ್‌ ಬಾರಿಸಿದರು (9 ಬೌಂಡರಿ, 4 ಸಿಕ್ಸರ್‌). ಎರಡನೇ ವಿಕೆಟಿಗೆ ರಾಣಾ-ತ್ರಿಪಾಠಿ ಜೋಡಿ 50 ಎಸೆತಗಳಿಂದ 93 ರನ್‌ ಪೇರಿಸಿತು. ತ್ರಿಪಾಠಿ ಗಳಿಕೆ 29 ಎಸೆತಗಳಿಂದ 53 ರನ್‌ (5 ಫೋರ್‌, 2 ಸಿಕ್ಸರ್‌). ಕೊನೆಯ ಹಂತದಲ್ಲಿ ದಿನೇಶ್‌ ಕಾರ್ತಿಕ್‌ ಮಿಂಚಿನ ಆಟವಾಡಿ 9 ಎಸೆತಗಳಿಂದ ಅಜೇಯ 22 ರನ್‌ ಹೊಡೆದರು.

ಸ್ಫೋಟಕ ಆರಂಭ
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕೆಕೆಆರ್‌ಗೆ ರಾಣಾ-ಗಿಲ್‌ ಸ್ಫೋಟಕ ಆರಂಭ ಒದಗಿಸಿದರು. ಪವರ್‌ ಪ್ಲೇ ಅವಧಿಯನ್ನು ಸಂಪೂ ರ್ಣವಾಗಿ ತಮ್ಮ ಬ್ಯಾಟಿಂಗಿಗೆ ಬಳಸಿಕೊಂಡ ಈ ಜೋಡಿ 6 ಓವರ್‌ಗಳಲ್ಲಿ ಭರ್ತಿ 50 ರನ್‌ ಪೇರಿಸಿತು.

ಪವರ್‌ ಪ್ಲೇ ಮುಗಿದೊಡನೆ ದಾಳಿಗಿಳಿದ ರಶೀದ್‌ ಖಾನ್‌ ತಮ್ಮ ಮೊದಲ ಓವರ್‌ನಲ್ಲೇ ಹೈದರಾಬಾದ್‌ಗೆ ಮೊದಲ ಯಶಸ್ಸು ತಂದಿತ್ತರು. ಸ್ಕೋರ್‌ 53 ರನ್‌ ಆದಾಗ 15 ರನ್‌ ಮಾಡಿದ ಗಿಲ್‌ ಬೌಲ್ಡ್‌ ಆದರು. ಅನಂತರ ಕ್ರೀಸ್‌ ಇಳಿದ ರಾಹುಲ್‌ ತ್ರಿಪಾಠಿ ಕೂಡ ಮುನ್ನುಗ್ಗಿ ಬೀಸತೊಡಗಿದರು.

10 ಓವರ್‌ ಮುಕ್ತಾಯಕ್ಕೆ ಒಂದಕ್ಕೆ 83 ರನ್‌ ಬಾರಿಸಿದ ಕೆಕೆಆರ್‌ ದೊಡ್ಡ ಮೊತ್ತದ ಸೂಚನೆ ನೀಡಿತು. ಆಗ ರಾಣಾ ಅವರ ಅರ್ಧ ಶತಕ ಕೂಡ ಪೂರ್ತಿಗೊಂಡಿತು. ವಿಜಯ್‌ ಶಂಕರ್‌ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ರಾಣಾ ಫಿಫ್ಟಿ ಪೂರೈಸಿದರು.

ಸ್ಕೋರ್‌ ಪಟ್ಟಿ

ಕೋಲ್ಕತಾ ನೈಟ್‌ರೈಡರ್
ನಿತೀಶ್‌ ರಾಣ ಸಿ ಶಂಕರ್‌ ಬಿ ನಬಿ 80
ಶುಭಮನ್‌ ಗಿಲ್‌ ಬಿ ರಶೀದ್‌ 15
ರಾಹುಲ್‌ ತಿಪಾಠಿ ಸಿ ಸಾಹಾ ಬಿ ನಟರಾಜನ್‌ 53
ಆ್ಯಂಡ್ರೆ ರಸೆಲ್‌ ಸಿ ಪಾಂಡೆ ಬಿ ರಶೀದ್‌ 5
ಇಯಾನ್‌ ಮಾರ್ಗನ್‌ ಸಿ ಸಮದ್‌ ಬಿ ನಬಿ 2
ದಿನೇಶ್‌ ಕಾರ್ತಿಕ್‌ ಔಟಾಗದೆ 22
ಶಕಿಬ್‌ ಅಲ್‌ ಹಸನ್‌ ಸಿ ಸಮದ್‌ ಬಿ ಭುವನೇಶ್ವರ್‌ 3
ಇತರ 7
ಒಟ್ಟು (6 ವಿಕೆಟಿಗೆ) 187
ವಿಕೆಟ್‌ ಪತನ: 1-53, 2-146, 3-157, 4-160, 5-160, 6-187.
ಬೌಲಿಂಗ್‌;
ಭುವನೇಶ್ವರ್‌ ಕುಮಾರ್‌ 4-0-45-1
ಸಂದೀಪ್‌ ಶರ್ಮ 3-0-35-0
ಟಿ. ನಟರಾಜನ್‌ 4-0-37-1
ಮೊಹಮ್ಮದ್‌ ನಬಿ 4-0-32-2
ರಶೀದ್‌ ಖಾನ್‌ 4-0-24-2
ವಿಜಯ್‌ ಶಂಕರ್‌ 1-0-14-0

ಹೈದರಾಬಾದ್‌
ವೃದ್ಧಿಮಾನ್‌ ಸಾಹಾ ಬಿ ಶಕಿಬ್‌ 7
ಡೇವಿಡ್‌ ವಾರ್ನರ್‌ ಸಿ ಕಾರ್ತಿಕ್‌ ಬಿ ಪ್ರಸಿದ್ಧ 3
ಮನೀಷ್‌ ಪಾಂಡೆ ಔಟಾಗದೆ 61
ಜಾನಿ ಬೇರ್‌ಸ್ಟೊ ಸಿ ರಾಣ ಬಿ ಕಮಿನ್ಸ್‌ 55
ಮೊಹಮ್ಮದ್‌ ನಬಿ ಸಿ ಮಾರ್ಗನ್‌ ಬಿ ಪ್ರಸಿದ್ಧ 14
ವಿಜಯ್‌ ಶಂಕರ್‌ ಸಿ ಮಾರ್ಗನ್‌ ಬಿ ರಸೆಲ್‌ 11
ಅಬ್ದುಲ್‌ ಸಮದ್‌ ಔಟಾಗದೆ 19
ಇತರ 7
ಒಟ್ಟು (5 ವಿಕೆಟಿಗೆ) 177
ವಿಕೆಟ್‌ ಪತನ: 1-10, 2-10, 3-102, 4-131, 5-150
ಬೌಲಿಂಗ್‌;
ಹರ್ಭಜನ್‌ ಸಿಂಗ್‌ 1-0-8-0
ಪ್ರಸಿದ್ಧ ಕೃಷ್ಣ 4-0-35-2
ಶಕಿಬ್‌ ಅಲ್‌ ಹಸನ್‌ 4-0-34-1
ಪಾಟ್‌ ಕಮಿನ್ಸ್‌ 4-0-30-1
ಆ್ಯಂಡ್ರೆ ರಸೆಲ್‌ 3-0-32-1
ವರುಣ್‌ ಚರ್ಕವರ್ತಿ 4-0-36-0

ಕ್ರೀಡೆ – Udayavani – ಉದಯವಾಣಿ
Read More