ಡೆಲ್ಲಿಗೆ ಸೂಪರ್ ಸಂಡೆ : ಹೈದರಾಬಾದ್‌ ವಿರುದ್ಧ ಗೆದ್ದು ದ್ವಿತೀಯ ಸ್ಥಾನಕ್ಕೆ ಏರಿದ ಡೆಲ್ಲಿ

ಚೆನ್ನೈ : ಡೆಲ್ಲಿ-ಹೈದರಾಬಾದ್‌ ನಡುವಿನ ರವಿವಾರದ ಪಂದ್ಯ ರೋಚಕ ಟೈ ಆಗುವುದರೊಂದಿಗೆ 14ನೇ ಐಪಿಎಲ್‌ ಮೊದಲ ಸೂಪರ್‌ ಓವರ್‌ ರೋಮಾಂಚನವನ್ನು ತೆರೆದಿರಿಸಿತು. ಇಲ್ಲಿ ಅದೃಷ್ಟದ ಬಲ ಪಡೆದ ಡೆಲ್ಲಿ ಜಯ ಸಾಧಿಸಿ ದ್ವಿತೀಯ ಸ್ಥಾನಕ್ಕೆ ಏರಿತು. ಈ ಫಲಿತಾಂಶದಿಂದ ಆರ್‌ಸಿಬಿ ಒಂದೇ ದಿನದಲ್ಲಿ 2 ಸ್ಥಾನ ಕುಸಿದು ಮೂರಕ್ಕೆ ಇಳಿಯಿತು. ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 4ಕ್ಕೆ 159 ರನ್‌ ಗಳಿಸಿದರೆ, ಹೈದರಾಬಾದ್‌ 7 ವಿಕೆಟ್‌ ನಷ್ಟಕ್ಕೆ 159 ರನ್‌ ಮಾಡಿತು. ಕೇನ್‌ ವಿಲಿಯಮ್ಸನ್‌ ಮತ್ತು ಕೊನೆಯ …

ಗವರ್ನರ್ ಕಪ್‌ ಬಾಕ್ಸಿಂಗ್‌ : ಅಮಿತ್‌ ಪಂಘಾಲ್‌ಗೆ ಕಂಚು

ಸೇಂಟ್‌ ಪೀಟರ್ಸ್‌ಬರ್ಗ್‌ (ರಶ್ಯ): ಒಲಿಂಪಿಕ್ಸ್‌ ಅರ್ಹತೆ ಪಡೆದಿರುವ ಅಮಿತ್‌ ಪಂಘಾಲ್‌ ಇಲ್ಲಿ ನಡೆಯುತ್ತಿರುವ “ಗವರ್ನರ್ ಕಪ್‌ ಬಾಕ್ಸಿಂಗ್‌ ಟೂರ್ನಿ’ಯಲ್ಲಿ ಕಂಚಿನ ಪದಕಕ್ಕೆ ಸಮಾಧಾನಪಟ್ಟಿದ್ದಾರೆ. 52 ಕೆ.ಜಿ. ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಅವರು ಉಜ್ಬೆಕಿಸ್ಥಾನದ ವಿಶ್ವ ಚಾಂಪಿಯನ್‌ ಹಾಗೂ ಒಲಿಂಪಿಕ್‌ ಚಾಂಪಿಯನ್‌ ಖ್ಯಾತಿಯ ಶಖೋಬಿದಿನ್‌ ಜೊರೋವ್‌ ವಿರುದ್ಧ 5-0 ಅಂತರದಿಂದ ಪರಾಭವಗೊಂಡರು. ಅಮಿತ್‌ ಪಂಘಾಲ್‌ ಈ ಕೂಟದ ಪದಕ ಸ್ಪರ್ಧೆಯಲ್ಲಿ ಉಳಿದಿದ್ದ ಏಕೈಕ ಭಾರತೀಯ ಬಾಕ್ಸರ್‌. ಆಶಿಷ್‌ ಕುಮಾರ್‌ (75 ಕೆ.ಜಿ.), ಸುಮಿತ್‌ ಸಂಗ್ವಾನ್‌ (81 ಕೆ.ಜಿ.) ಬೇಗನೇ …

ಜಡೇಜ ಬ್ಯಾಟಿಂಗ್ ಕಮಾಲ್; ಅಜೇಯ RCBಯನ್ನು ಮಣಿಸಿದ CSK, ಅಂಕಪಟ್ಟಿಯ ಅಗ್ರಸ್ಥಾನದಲ್ಲಿ ಚೆನ್ನೈ

ಮುಂಬೈ : ಒಂದರ ಹಿಂದೊಂದರಂತೆ ಸಿಕ್ಸರ್‌ ಸಿಡಿತ, ಓವರಿಗೆ 37 ರನ್‌ ಸೂರೆ, ಐಪಿಎಲ್‌ ದಾಖಲೆಯನ್ನು ಸರಿದೂಗಿಸಿದ ಸಾಧನೆ, ಬೌಲಿಂಗ್‌ನಲ್ಲೂ ಮಿಂಚು, 13ಕ್ಕೆ 3 ವಿಕೆಟ್‌ ಬೇಟೆ, ಮ್ಯಾಕ್ಸ್‌ವೆಲ್‌ ಹಾಗೂ ಎಬಿಡಿ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದ ಸಾಹಸ, ಡೈರೆಕ್ಟ್ ಹಿಟ್‌ ಮೂಲಕ ಕ್ರಿಸ್ಟಿಯನ್‌ ಅವರನ್ನು ರನೌಟ್‌ ಮಾಡಿದ ಪರಾಕ್ರಮ… ಇಂಥದೊಂದು ಫ‌ುಲ್‌ ಕ್ರಿಕೆಟ್‌ ಪ್ಯಾಕೇಜ್‌’ ಮೂಲಕ ಮೆರೆದಾಡಿದ ರವೀಂದ್ರ ಜಡೇಜ 14ನೇ ಐಪಿಎಲ್‌ನಲ್ಲಿ ಅಜೇಯವಾಗಿ ಮುನ್ನುಗ್ಗಿ ಬಂದಿದ್ದ ಆರ್‌ಸಿಬಿಗೆ ಮೊದಲ ಸೋಲಿನ ರುಚಿ ತೋರಿಸಿದ್ದಾರೆ. ಯಾರಿಂದಲೂ ಸೋಲಿಸಲಾಗದ ಕೊಹ್ಲಿ …

ಕಿಂಗ್ ಕೊಹ್ಲಿ ವರ್ಸಸ್ ಕೂಲ್ ಕ್ಯಾಪ್ಟನ್: ಟಾಸ್ ಗೆದ್ದ ಧೋನಿ ಬ್ಯಾಟಿಂಗ್ ಆಯ್ಕೆ

ಮುಂಬೈ: ಐಪಿಎಲ್ ನಲ್ಲಿಂದು ಎರಡು ಪಂದ್ಯ. ಮೊದಲ ಪಂದ್ಯದಲ್ಲಿ ಕೂಟದ ಅತ್ಯಂತ ಹೈವೋಲ್ಟೇಜ್ ಸೆಣಸಾಟ ನಡೆಯುತ್ತಿದೆ. ಕಿಂಗ್ ಕೊಹ್ಲಿ ಮತ್ತು ಕ್ಯಾಪ್ಟನ್ ಕೂಲ್ ರ ತಂಡಗಳ ನಡುವೆ ಮುಂಬೈನ ವಾಂಖೆಡೆ ಅಂಗಳದಲ್ಲಿ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ  ಸಿಎಸ್ ಕೆ ನಾಯಕ ಧೋನಿ ಮೊದಲು ಬ್ಯಾಟಿಂಗ್ ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ. ಆರ್ ಸಿಬಿ ತಂಡ ಇದುವರೆಗೆ ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಹಿಂದಿನ ಪಂದ್ಯದಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಗೆಲುವು …

ಪರಿಸ್ಥಿತಿಗೆ ತಕ್ಕಂತೆ ಆಡಲು ಕಲಿತಿದ್ದೇನೆ: ಗೆಲುವಿನ ಬಳಿಕ ಸಂಜು ಸ್ಯಾಮ್ಸನ್

ಮುಂಬೈ: ಈ ಬಾರಿಯ ಐಪಿಎಲ್ ನ 18ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಕೋಲ್ಕತ್ತಾ ನೈಟ್‍ ರೈಡರ್ಸ್ ವಿರುದ್ಧ ಆರು ವಿಕೆಟ್ ಜಯ ಸಾಧಿಸಿದೆ. ಸತತ ಸೋಲನುಭವಿಸಿದ್ದ ರಾಜಸ್ಥಾನ್ ತಂಡ ಮತ್ತೆ ಗೆಲುವಿನ ನಗೆ ಬೀರಿದರೆ, ಕೆಕೆಆರ್ ತಂಡ ನಾಲ್ಕನೇ ಸೋಲನುಭವಿಸಿದೆ. ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ 42 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಕಡಿಮೆ ಮೊತ್ತ ಬೆನ‍್ನಟ್ಟಿತ್ತಿದ್ದರೂ ಕಡೆಯವರೆಗೆ ಕ್ರೀಸ್ ನಲ್ಲಿದ್ದು ತಂಡವನ್ನು ಗೆಲ್ಲಿಸಿದರು. ಇದನ್ನೂ ಓದಿ:ಕೊಹ್ಲಿ- ಧೋನಿ ತಂಡಗಳ ಹೈ …

ಕೊಹ್ಲಿ- ಧೋನಿ ತಂಡಗಳ ಹೈ ವೋಲ್ಟೇಜ್ ಮ್ಯಾಚ್‌

ಮುಂಬಯಿ : ಹದಿನಾಲ್ಕನೇ ಐಪಿಎಲ್‌ನಲ್ಲಿ ಆರ್‌ಸಿಬಿ ಸಿಕ್ಕಾಪಟ್ಟೆ ಜೋಶ್‌ನಲ್ಲಿದೆ. ಎದುರಾಳಿಗಳನ್ನೆಲ್ಲ ಬಡಿದುರುಳಿಸುತ್ತ ತನ್ನ ಗೆಲುವಿನ ಓಟವನ್ನು ಸತತ 4 ಪಂದ್ಯಗಳಿಗೆ ವಿಸ್ತರಿಸಿದೆ. ರವಿವಾರ ಸಂಜೆ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಕೊಹ್ಲಿ ಪಡೆ ಕಣಕ್ಕಿಳಿಯಲಿದೆ. ಆರ್‌ಸಿಬಿ ಅಭಿಯಾನ ಐದನೇ ಪಂದ್ಯಕ್ಕೆ ವಿಸ್ತರಿಸುವುದೇ ಅಥವಾ ಚೆನ್ನೈ ಈ ಓಟಕ್ಕೆ ತಡೆಯೊಡ್ಡುವುದೇ ಎಂಬ ಕುತೂಹಲ ತೀವ್ರಗೊಂಡಿದೆ. ಇದು ಬ್ಯಾಟಿಂಗ್‌ ಟ್ರ್ಯಾಕ್‌ ವಾಂಖೇಡೆಯಲ್ಲಿ ಆರ್‌ಸಿಬಿ ಆಡುತ್ತಿರುವ ಎರಡನೇ ಪಂದ್ಯ. ಗುರುವಾರ ರಾಜಸ್ಥಾನ್‌ ವಿರುದ್ಧ ಪಡಿಕ್ಕಲ್‌-ಕೊಹ್ಲಿ ಇಬ್ಬರೇ ಸೇರಿಕೊಂಡು ರಾಜಸ್ಥಾನ್‌ …

IPL 2021 : KKR ತಂಡವನ್ನು ಮಣಿಸಿ ಕೊನೆಯ ಸ್ಥಾನದಿಂದ ಮೇಲೇರಿದ ರಾಜಸ್ಥಾನ

ಮುಂಬಯಿ : ಬ್ಯಾಟಿಂಗಿಗೆ ಸಹಕರಿಸುವ “ವಾಂಖೇಡೆ’ ಅಂಗಳದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡ ವನ್ನು ಸಾಮಾನ್ಯ ಮೊತ್ತಕ್ಕೆ ಕಟ್ಟಿಹಾಕಿದ ರಾಜಸ್ಥಾನ್‌ ರಾಯಲ್ಸ್‌ ಎರಡನೇ ವಿಜಯೋತ್ಸವ ಆಚರಿಸಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದ ಅವಮಾನದಿಂದ ಪಾರಾಗಿ ಆರಕ್ಕೇರಿದೆ. ಕೊನೆಯ ಸ್ಥಾನವೀಗ ಮಾರ್ಗನ್‌ ತಂಡದ್ದಾಗಿದೆ. ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ಗೆ ಗಳಿಸಲು ಸಾಧ್ಯವಾದದ್ದು 9 ವಿಕೆಟಿಗೆ ಕೇವಲ 133 ರನ್‌ ಮಾತ್ರ. ರಾಜಸ್ಥಾನ್‌ 18.5 ಓವರ್‌ಗಳಲ್ಲಿ 4 ವಿಕೆಟಿಗೆ 134 ರನ್‌ ಬಾರಿಸಿ ಗೆಲುವು ಸಾಧಿಸಿತು. ಚೇಸಿಂಗ್‌ ವೇಳೆ ರಾಜಸ್ಥಾನ್‌ …

ವಿಶ್ವಕಪ್‌-2022 ಅಂತಿಮ ಕ್ರಿಕೆಟ್‌ ನಿಲ್ದಾಣ : ನಿವೃತ್ತಿ ಸೂಚನೆ ನೀಡಿದ ಮಿಥಾಲಿ ರಾಜ್‌

ಹೊಸದಿಲ್ಲಿ : ಭಾರತದ ಆನುಭವಿ ಕ್ರಿಕೆಟ್‌ ಆಟಗಾರ್ತಿ, ಏಕದಿನ ತಂಡದ ನಾಯಕಿ ಮಿಥಾಲಿ ರಾಜ್‌ ನಿವೃತ್ತಿಯ ಮುನ್ಸೂಚನೆ ನೀಡಿದ್ದಾರೆ. ನ್ಯೂಜಿಲ್ಯಾಂಡ್‌ನ‌ಲ್ಲಿ ನಡೆಯುವ 2022ರ ಏಕದಿನ ವಿಶ್ವಕಪ್‌ ಟೂರ್ನಿ ಬಳಿಕ ನೇಪಥ್ಯಕ್ಕೆ ಸರಿಯುವ ಯೋಜನೆಯಲ್ಲಿದ್ದೇನೆ ಎಂದಿದ್ದಾರೆ. “21 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ನೇಪಥ್ಯಕ್ಕೆ ಸರಿಯುವ ಸಮಯ ಬಂದಿದೆ. 2022ರ ಏಕದಿನ ವಿಶ್ವಕಪ್‌ ನನ್ನ ಮುಂದಿರುವ ಅಂತಿಮ ನಿಲ್ದಾಣ’ ಎಂಬುದಾಗಿ 38 ವರ್ಷದ ಮಿಥಾಲಿ ಹೇಳಿದರು. ಬೋರಿಯ ಮಜುಂದಾರ್ ಮತ್ತು ಗೌತಮ್‌ ಭಟ್ಟಾಚಾರ್ಯ ಬರೆದ “1971: ದಿ ಬಿಗಿನಿಂಗ್‌ …

ಸೋಂಕಿನಿಂದ ಬಳಲುತ್ತಿರುವವರ ಜೀವ ಉಳಿಸಲು ಪ್ಲಾಸ್ಮಾ ದಾನ ಮಾಡಿ : ಸಚಿನ್‌ ಮನವಿ

ಮುಂಬಯಿ : ಲೆಜೆಂಡ್ರಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಶನಿವಾರ 48ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದ ಅರ್ಪಿಸುವ ಜತೆಗೆ ಕೊರೊನಾದಿಂದ ಗುಣಮುಖರಾದವರು ಸೋಂಕಿನಿಂದ ಬಳಲುತ್ತಿರುವವರ ಜೀವ ಉಳಿಸಲು ಪ್ಲಾಸ್ಮಾ ದಾನ ಮಾಡುವಂತೆ ಕರೆ ನೀಡಿದ್ದಾರೆ. “ವೈದ್ಯರು ನನಗೆ ನೀಡಿದ ಒಂದು ಸಂದೇಶವನ್ನು ಹಂಚಿಕೊಳ್ಳುತ್ತಿದ್ದೇನೆ. ಕಳೆದ ವರ್ಷ ನಾನು ಪ್ಲಾಸ್ಮಾ ಥೆರಪಿ ಕೇಂದ್ರವೊಂದನ್ನು ಉದ್ಘಾಟಿಸಿದ್ದೆ. ಸೂಕ್ತ ಸಮಯದಲ್ಲಿ ಪ್ಲಾಸ್ಮಾ ನೀಡಿದರೆ ರೋಗಿಗಳು ಬೇಗ ಗುಣ ಮುಖರಾಗುತ್ತಾರೆ ಎಂದು ಅಲ್ಲಿನ ವೈದ್ಯರು ನನಗೆ ಹೇಳಿದ್ದರು. …

ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕುಟುಂಬದ ಎಲ್ಲರಿಗೂ ಕೋವಿಡ್ ಪಾಸಿಟಿವ್!

ಚಿಕ್ಕಮಗಳೂರು: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಕುಟುಂಬದ ಎಲ್ಲರಿಗೂ ಕೋವಿಡ್ ಪಾಸಿಟಿವ್ ದೃಢವಾಗಿದೆ. ಚಿಕ್ಕಮಗಳೂರಿನ ಕಡೂರಿನ ವೇದ ಕೃಷ್ಣಮೂರ್ತಿ ಅವರ ತಾಯಿ ಕೋವಿಡ್ ಸೋಂಕಿನಿಂದಾಗಿ ಶುಕ್ರವಾರ ಮೃತಪಟ‍್ಟಿದ್ದರು. ಇದನ್ನೂ ಓದಿ:ಮಾಸ್ಕ್ ಧರಿಸದ ಉಡುಪಿ ಡಿಸಿ ಮೇಲೆ ಜನಾಕ್ರೋಶ : ಜಗದೀಶ್ ಕೊಟ್ಟ ಸ್ಪಷ್ಟನೆ ಏನು ಗೊತ್ತಾ? ಬೆಂಗಳೂರಿನಲ್ಲೇ ವೇದಾ ಕೃಷ್ಣಮೂರ್ತಿ ಕುಟುಂಬದವರಿಗೆ ಪಾಸಿಟಿವ್ ಬಂದಿತ್ತು. ವೇದಾ ಅವರ ತಂದೆ, ಅಣ್ಣ-ಅತ್ತಿಗೆ, ಅಕ್ಕನಿಗೂ ಕೋವಿಡ್ ಸೋಂಕು ದೃಢವಾಗಿತ್ತು. ಕುಟುಂಬದವರಿಗೆ ಸೋಂಕು ತಗುಲಿದ್ದರೂ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ …