ಸಚಿನ್ ಸ್ಪೆಷಲ್: ಇವು ತೆಂಡೂಲ್ಕರ್ ರ ಐದು ಮಾಸ್ಟರ್ ಕ್ಲಾಸ್ ಏಕದಿನ ಇನ್ನಿಂಗ್ಸ್ ಗಳು

ಕ್ರಿಕೆಟ್ ದೇವರು, ಕ್ರಿಕೆಟ್ ದಂತಕಥೆ, ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಚಿಗುರು ಮೀಸೆಯ ಹುಡುಗನಾಗಿ ಕ್ರಿಕೆಟ್ ಅಂಗಳಕ್ಕೆ ಕಾಲಿಟ‍್ಟ ಸಚಿನ್ ರಮೇಶ್ ತೆಂಡೂಲ್ಕರ್ ಎರಡು ದಶಕಗಳ ಕಾಲ ವಿಶ್ವಕ್ರಿಕೆಟ್ ನ ದೊರೆಯಾಗಿ ಮೆರೆದವರು. ಮುಂಬೈಕರ್ ನ 48ನೇ ಬರ್ತ್ ಡೇ ಗಾಗಿ ಅವರು ಆಡಿದ ಐದು ಮಾಸ್ಟರ್ ಕ್ಲಾಸ್ ಏಕದಿನ ಇನ್ನಿಂಗ್ಸ್ ಗಳ ವಿವರಣೆ ಇಲ್ಲಿದೆ. ಆಸೀಸ್ ವಿರುದ್ಧ 143 ರನ್- 1998 ಡೆಸರ್ಟ್ ಸ್ಟಾರ್ಮ್ ಇನ್ನಿಂಗ್ಸ್ ಎಂದು ಪ್ರಸಿದ್ದಿ ಪಡೆದ …

ರಾಜಸ್ಥಾನ್‌ ರಾಯಲ್ಸ್‌ ಗೆ ಆಘಾತ : ಈ ಬಾರಿಯ IPLನಿಂದ ಜೋಫ್ರಾ ಆರ್ಚರ್ ಹೊರಗೆ

ನವದೆಹಲಿ : ಬಿಗ್‌ ಹಿಟ್ಟರ್‌ ಗಳನ್ನು ಒಳಗೊಂಡೂ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ವಿಫ‌ಲವಾಗುತ್ತಿರುವ ರಾಜಸ್ಥಾನ್‌ ರಾಯಲ್ಸ್‌ ಮತ್ತು ಕೋಲ್ಕತಾ ನೈಟ್‌ ರೈಡರ್ ಇಂದು (ಶನಿವಾರ) ಐಪಿಎಲ್‌ ಮುಖಾಮುಖೀಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಈ ಸಂದರ್ಭದಲ್ಲಿ ಸತತ ಸೋಲುಂಡಿರುವ ರಾಜಸ್ಥಾನ ರಾಯಲ್ಸ್ ​ಗೆ ಮತ್ತೊಂದು ಆಘಾತ ಎದುರಾಗಿದೆ. ಐಪಿಎಲ್​ ಟೂರ್ನಿಯಿಂದ ವೇಗಿ ಬೌಲರ್ ಜೋಫ್ರಾ ಆರ್ಚರ್ ಔಟ್ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಇಂಗ್ಲೆಂಡ್​ ಕ್ರಿಕೆಟ್ ಮಂಡಳಿ  ಜೋಫ್ರಾ ಆರ್ಚರ್​ ರಾಜಸ್ಥಾನ ರಾಯಲ್ಸ್​ ಟೀಮ್ ನಲ್ಲಿ …

ಬಾರ್ಸಿಲೋನಾ ಓಪನ್‌’ ಟೆನಿಸ್ : ಕ್ವಾರ್ಟರ್‌ ಫೈನಲ್‌ಗೆ ರಫೆಲ್‌ ನಡಾಲ್‌

ಬಾರ್ಸಿಲೋನಾ : ಜಪಾನಿನ ಕೀ ನಿಶಿಕೊರಿ ಅವರನ್ನು ಮಣಿಸಿದ ಸ್ಪೇನಿನ ರಫೆಲ್‌ ನಡಾಲ್‌ “ಬಾರ್ಸಿಲೋನಾ ಓಪನ್‌’ ಟೆನಿಸ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಇಲ್ಲಿ 11 ಸಲ ಚಾಂಪಿಯನ್‌ ಆಗಿ ಮೂಡಿಬಂದಿರುವ ಅಗ್ರ ಶ್ರೇಯಾಂಕದ ರಫೆಲ್‌ ನಡಾಲ್‌ 6-0, 2-6, 6-2 ಅಂತರದಿಂದ ನಿಶಿಕೊರಿ ಅವರನ್ನು ಹಿಮ್ಮೆಟ್ಟಿಸಿದರು. ನಡಾಲ್‌ ಮೊದಲ ಪಂದ್ಯದಲ್ಲಿ ಬೆಲರೂಸ್‌ನ 111ನೇ ರ್‍ಯಾಂಕಿಂಗ್‌ ಆಟಗಾರ ಇಲ್ಯಾ ಇವಾಷ್ಕ ವಿರುದ್ಧ ಜಯ ಸಾಧಿಸಿದ್ದರು. ರಫೆಲ್‌ ನಡಾಲ್‌ ಅವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಬ್ರಿಟನ್ನಿನ ಕ್ಯಾಮರಾನ್‌ ನೊರೀ. …

ರಾಜಸ್ಥಾನ್‌-ಕೋಲ್ಕತಾ: ಸೋತವರ ಸೆಣಸಾಟ

ಮುಂಬಯಿ: ಬಿಗ್‌ ಹಿಟ್ಟರ್‌ಗಳನ್ನು ಒಳಗೊಂಡೂ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ವಿಫ‌ಲವಾಗುತ್ತಿರುವ ರಾಜಸ್ಥಾನ್‌ ರಾಯಲ್ಸ್‌ ಮತ್ತು ಕೋಲ್ಕತಾ ನೈಟ್‌ರೈಡರ್ ಶನಿವಾರದ ಐಪಿಎಲ್‌ ಮುಖಾಮುಖೀಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಒಂದು ತಂಡ ಸೋಲಿನ ಸುಳಿಯಿಂದ ಹೊರಬರುವ ಕಾರಣ ಈ ಕದನ ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ. ರಾಜಸ್ಥಾನ್‌ ಮತ್ತು ಕೆಕೆಆರ್‌ ಒಂದೇ ದೋಣಿಯಲ್ಲಿ ಪಯಣಿಸುವ ತಂಡಗಳಾಗಿವೆ. ಎರಡೂ ತಂಡಗಳು 4 ಪಂದ್ಯಗಳನ್ನಾಡಿದ್ದು, ಮೂರರಲ್ಲಿ ಮುಗ್ಗರಿಸಿವೆ. ಒಂದನ್ನಷ್ಟೇ ಗೆದ್ದಿವೆ. ಹೀಗಾಗಿ ಎರಡೂ ತಂಡಗಳ ಮುಂದಿನ ಹಂತದ ಪ್ರಯಾಣಕ್ಕೆ ಇನ್ನಷ್ಟು ಗೆಲುವು ಅಗತ್ಯವಿದೆ. …

ಕೊಹ್ಲಿಯಿಂದಾಗಿ ಬ್ಯಾಟಿಂಗ್‌ ಸುಲಭವಾಯಿತು: ಪಡಿಕ್ಕಲ್‌

ಮುಂಬಯಿ : ಐಪಿಎಲ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ ದೇವದತ್ತ ಪಡಿಕ್ಕಲ್‌ ಆರ್‌ಸಿಬಿ ಅಭಿಮಾನಿಗಳ ಪಾಲಿನ “ಬಿಗ್‌ ಹೀರೋ’ ಆಗಿದ್ದಾರೆ. ಸದ್ಯದಲ್ಲೇ ಇವರು ಯಾವುದಾದರೊಂದು ಮಾದರಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಸುನೀಲ್‌ ಗಾವಸ್ಕರ್‌ ಅವರ ಪ್ರಶಂಸೆಗೂ ಪಾತ್ರರಾಗಿದ್ದಾರೆ. 20ರ ಹರೆಯದ ಪಡಿಕ್ಕಲ್‌ ಗುರುವಾರದ ರಾಜಸ್ಥಾನ್‌ ರಾಯಲ್ಸ್‌ ಎದುರಿನ ಪಂದ್ಯದಲ್ಲಿ ಅಜೇಯ 101 ರನ್‌ ಬಾರಿಸುವ ಜತೆಗೆ ಕೊಹ್ಲಿಯೊಂದಿಗೆ ಮೊದಲ ವಿಕೆಟಿಗೆ 16.3 ಓವರ್‌ಗಳಲ್ಲಿ 181 ರನ್‌ ಪೇರಿಸುವಲ್ಲಿ ನೆರವಾದರು. ಆರ್‌ಸಿಬಿಗೆ 10 ವಿಕೆಟ್‌ಗಳ ಭರ್ಜರಿ ಜಯ ತಂದಿತ್ತರು. ರಾಜಸ್ಥಾನ್‌ …

ಟಿ20: ಪಾಕ್‌ ತಂಡವನ್ನು 19 ರನ್ನುಗಳಿಂದ ಮಣಿಸಿ ಹೊಸ ಇತಿಹಾಸ ಬರೆದ ಜಿಂಬಾಬ್ವೆ

ಹರಾರೆ : ಶುಕ್ರವಾರದ ದ್ವಿತೀಯ ಟಿ20 ಪಂದ್ಯದಲ್ಲಿ ಪಾಕಿಸ್ಥಾನವನ್ನು 19 ರನ್ನುಗಳಿಂದ ಮಣಿಸುವ ಮೂಲಕ ಜಿಂಬಾಬ್ವೆ ಹೊಸ ಇತಿಹಾಸವೊಂದನ್ನು ಬರೆದಿದೆ. ಇದು ಪಾಕ್‌ ವಿರುದ್ಧ ಜಿಂಬಾಬ್ವೆ ಸಾಧಿಸಿದ ಮೊದಲ ಟಿ20 ಜಯವಾಗಿದೆ. “ಹರಾರೆ ನ್ಪೋರ್ಟ್ಸ್ ಕ್ಲಬ್‌’ನಲ್ಲಿ ನಡೆದ ಈ ಪಂದ್ಯ ಸಣ್ಣ ಮೊತ್ತದ ಮೇಲಾಟವಾಗಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಜಿಂಬಾಬ್ವೆ ಗಳಿಸಿದ್ದು 9 ವಿಕೆಟಿಗೆ 118 ರನ್‌ ಮಾತ್ರ. ಇದನ್ನು ಚೇಸ್‌ ಮಾಡುವಲ್ಲಿ ಎಡವಿದ ಪಾಕಿಸ್ಥಾನ 19.5 ಓವರ್‌ಗಳಲ್ಲಿ 99 ರನ್ನಿಗೆ ಆಲೌಟ್‌ ಆಯಿತು. ಮಧ್ಯಮ ವೇಗಿ …

IPL 2021: ಮುಂಬೈಗೆ ಸೋಲಿನ ಪಂಚ್‌ ಕೊಟ್ಟ ಪಂಜಾಬ್‌

ಚೆನ್ನೈ: ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಪಡೆಯನ್ನು 9 ವಿಕೆಟ್‌ಗಳಿಂದ ಉರುಳಿಸುವ ಮೂಲಕ ಪಂಜಾಬ್‌ ಕಿಂಗ್ಸ್‌ ಗೆಲುವಿನ ಟ್ರ್ಯಾಕ್‌ ಏರುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ನಡೆದ ಸಣ್ಣ ಮೊತ್ತದ ಸೆಣಸಾಟದಲ್ಲಿ ಪಂಜಾಬ್‌ ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿ 5 ಪಂದ್ಯಗಳಲ್ಲಿ ಎರಡನೇ ಜಯ ಸಾಧಿಸಿತು. ಮುಂಬೈ 5 ಪಂದ್ಯಗಳಲ್ಲಿ ಮೂರನೇ ಸೋಲುಂಡಿತು. ಬ್ಯಾಟಿಂಗಿಗೆ ಇಳಿಸಲ್ಪಟ್ಟ ಮುಂಬೈಗೆ ಗಳಿಸಲು ಸಾಧ್ಯವಾದದ್ದು 6ಕ್ಕೆ 131 ರನ್‌ ಮಾತ್ರ. ಪಂಜಾಬ್‌ 17.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 132 ರನ್‌ ಬಾರಿಸಿತು. ಚೇಸಿಂಗ್‌ ಹಾದಿಯಲ್ಲಿ …

ಗೆಲುವಿನ ಹುಡುಕಾಟದಲ್ಲಿ ಪಂಜಾಬ್‌

ಚೆನ್ನೈ: ಸತತ ಸೋಲಿನಿಂದ ಕಂಗೆಟ್ಟಿರುವ ರಾಹುಲ್‌ ಸಾರಥ್ಯದ ಪಂಜಾಬ್‌ ಕಿಂಗ್ಸ್‌ ಮತ್ತು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಶುಕ್ರವಾರ ಚೆನ್ನೈಯಲ್ಲಿ ಮಹತ್ವದ ಪಂದ್ಯವನ್ನು ಆಡಲಿವೆ. ಈಗಾಗಲೇ ಆಡಿದ 4 ಪಂದ್ಯಗಳಲ್ಲಿ ಆರಂಭಿಕ ಗೆಲುವಿನ ಬಳಿಕ ಹ್ಯಾಟ್ರಿಕ್‌ ಸೋಲಿಗೆ ತುತ್ತಾಗಿರುವ ಪಂಜಾಬ್‌ ಗೆಲುವಿನ ಹಳಿ ಏರಲೇಬೇಕಾದ ಒತ್ತಡದಲ್ಲಿದೆ. ಇನ್ನೊಂದೆಡೆ ಮುಂಬೈ ಕಳೆದ ಪಂದ್ಯದಲ್ಲಿ ಡೆಲ್ಲಿಗೆ ಶರಣಾಗಿದ್ದು, ಮರಳಿ ಗೆಲುವಿನ ಮುಖ ಕಾಣಲು ಗರಿಷ್ಠ ಪ್ರಯತ್ನ ಮಾಡಬೇಕಿದೆ. ಈ ಎಲ್ಲ ಸೋಲುಗಳಿಗೆ ಒಂದೇ ಕಾರಣ, ಅದು ತಂಡಗಳ ಬ್ಯಾಟಿಂಗ್‌ ವೈಫ‌ಲ್ಯ. …

ಮಾರ್ಗನ್‌ಗೆ ಬಿತ್ತು 12 ಲಕ್ಷ ರೂ. ದಂಡ

ಮುಂಬಯಿ: ಐಪಿಎಲ್‌ನಲ್ಲಿ ಸತತ ಎರಡನೇ ದಿನ “ದಂಡ’ ಪ್ರಯೋಗ ನಡೆದಿದೆ. ಬುಧವಾರ ಇದಕ್ಕೆ ಸಿಲುಕಿದವರು ಕೆಕೆಆರ್‌ ನಾಯಕ ಇಯಾನ್‌ ಮಾರ್ಗನ್‌. ಚೆನ್ನೈಎದುರಿನ ಪಂದ್ಯದಲ್ಲಿ ಓವರ್‌ ಗತಿ ಕಾಯ್ದುಕೊಳ್ಳಲು ವಿಫ‌ಲವಾದ ಕಾರಣ ಐಪಿಎಲ್‌ ನಿಯಮಾವಳಿಯಂತೆ ಮಾರ್ಗನ್‌ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಯಿತು. ಇದರಿಂದ ಪ್ರಸಕ್ತ ಋತುವಿನಲ್ಲಿ ಮೂವರು ನಾಯಕರಿಗೆ ದಂಡದ ಬರೆ ಬಿದ್ದಂತಾಯಿತು. ಉಳಿದಿಬ್ಬರೆಂದರೆ ಮಹೇಂದ್ರ ಸಿಂಗ್‌ ಧೋನಿ ಮತ್ತು ರೋಹಿತ್‌ ಶರ್ಮ. ಎರಡನೇ ಸಲ ಈ ನಾಯಕರಿಂದ ಈ ತಪ್ಪು ಪುನರಾವರ್ತನೆಗೊಂಡರೆ ದಂಡದ ಮೊತ್ತ …

ಪಡಿಕ್ಕಲ್‌ ಸೆಂಚುರಿ: ಆರ್‌ಸಿಬಿ 4ನೇ ಜಯಭೇರಿ

ಮುಂಬಯಿ: ಎಡಗೈ ಆಟಗಾರ ದೇವದತ್ತ ಪಡಿಕ್ಕಲ್‌ ಅವರ ಅತ್ಯಾಕರ್ಷಕ ಸೆಂಚುರಿ, ಅವರು ನಾಯಕ ವಿರಾಟ್‌ ಕೊಹ್ಲಿ ಜತೆ ನಡೆಸಿದ ಅಜೇಯ ಜತೆಯಾಟದ ಸಾಹಸದಿಂದ ರಾಯಲ್‌ ಚಾಲೆಂಜರ್ ಬೆಂಗಳೂರು ತನ್ನ 200ನೇ ಐಪಿಎಲ್‌ ಪಂದ್ಯದಲ್ಲಿ ಭರ್ಜರಿ ಜಯಭೇರಿ ಮೊಳಗಿಸಿದೆ. ಗುರುವಾರದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಪ್ರಸಕ್ತ ಐಪಿಎಲ್‌ನ ಎಲ್ಲ 4 ಪಂದ್ಯಗಳನ್ನು ಗೆದ್ದು ಮೆರೆದಾಡಿದೆ. “ವಾಂಖೇಡೆ’ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ಆರಂಭಿಕ ಕುಸಿತಕ್ಕೆ ಸಿಲುಕಿಯೂ ಚೇತರಿಸಿಕೊಂಡು  9 ವಿಕೆಟಿಗೆ …