-
ವಿಜಯ್ ಹಜಾರೆ ಟ್ರೋಫಿ- ಅಂತಿಮ ಪಂದ್ಯದಲ್ಲಿ ಸೋಲುಂಡರು ಪ್ರೀ ಕ್ವಾರ್ಟರ್ ಪ್ರವೇಶಿಸಿದ ಕರ್ನಾಟಕ
ವಿಜಯ್ ಹಜಾರೆ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸೋತರೂ ತಂಡ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಕರ್ನಾಟಕ ತಂಡವು ಬೆಂಗಾಲ್ ವಿರುದ್ದದ ಪಂದ್ಯದಲ್ಲಿ 4 ವಿಕೆಟ್ಗಳಿಂದ ಸೋಲುಂಡಿತು. ಆದ್ರೂ, ಎಲೈಟ್ ಗ್ರೂಪ್-ಬಿ ನಲ್ಲಿ 12 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿರುವ ಪರಿಣಾಮ ಕರ್ನಾಟಕ ತಂಡವು ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 35 ರನ್ ಆಗುವಷ್ಟರಲ್ಲಿ ರವಿಕುಮಾರ್ ಸಮರ್ಥ್, ಸಿದ್ಧಾರ್ಥ್ ಔಟಾದ್ರು. […]
-
ಉಪನಾಯಕನ ರೇಸ್ನಲ್ಲಿ ರಿಷಭ್, ಅಯ್ಯರ್.. ಕನ್ನಡಿಗನಿಗೆ ಅನ್ಯಾಯ ಆಗುತ್ತಾ..?
ಸೌತ್ ಆಫ್ರಿಕಾ ಪ್ರವಾಸಕ್ಕೆ ಕೊಹ್ಲಿ-ರೋಹಿತ್ ಮುನಿಸು ಒಂದೆಡೆಯಾದ್ರೆ, ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಉಪನಾಯಕನ ಆಯ್ಕೆಯ ಚಿಂತೆ ಮತ್ತೊಂದೆಡೆ. ಹಾಗಾಗಿ ಯಾರನ್ನ ಎರಡೂ ಸರಣಿಗಳಿಗೆ ಉಪನಾಯಕನನ್ನ ಆಯ್ಕೆ ಮಾಡಲಾಗುತ್ತೆ ಎಂಬ ಪ್ರಶ್ನೆ ಉದ್ಭವವಾಗಿದೆ. ಅದರಲ್ಲೂ ಈತನ ಹೆಸರಂತೂ ಮುಂಚೂಣಿಯಲ್ಲಿದೆ. ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ತಂಡ ಪ್ರಕಟವಾಗಿದ್ದೂ ಆಯ್ತು. ಇಂದು ಅದೇ ತಂಡ ಹರಿಣಗಳ ನಾಡಿಗೆ ಫ್ಲೈಟ್ ಹತ್ತಿದ್ದೂ ಆಯ್ತು. ಆದ್ರೆ ಮೂರು ಟೆಸ್ಟ್ಗಳ ಬಳಿಕ ಶುರುವಾಗೋ ಏಕದಿನ ಸರಣಿಗೆ ತಂಡವನ್ನ ಪ್ರಕಟಿಸೋ ಸದ್ದೇ ಇಲ್ಲವಾಗಿದೆ. ವಿಜಯ್ […]
-
ಸುಳ್ಳು ಹೇಳಿದ್ದು ಯಾರು..? ಗಂಗೂಲಿನಾ? ವಿರಾಟ್ ಕೊಹ್ಲಿನಾ..?
ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಮನಸ್ಥಾಪ ಉಂಟಾಗಿದೆ ಅನ್ನೋದು ಸಾಬೀತಾಗಿದೆ. ಈ ಹಿಂದೆ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಅಂತಾ ಎದ್ದಿದ್ದ ಎಲ್ಲಾ ಊಹಾಪೋಹಗಳು ಸತ್ಯ ಅನ್ನೋದು ನಿನ್ನೆ ಪ್ರೂವ್ ಆಗಿದೆ. ಅದಕ್ಕೆ ಕಾರಣ ಕಿಂಗ್ ವಿರಾಟ್ ಕೊಹ್ಲಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ.. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ […]
-
‘ಇನ್ನೂ 5 ವರ್ಷ ಕೊಹ್ಲಿ ಕ್ಯಾಪ್ಟನ್ ಆಗಿರಲಿ’
ಟೀಮ್ ಇಂಡಿಯಾ ಕಂಡ ಅದ್ಭುತ ನಾಯಕ ವಿರಾಟ್ ಕೊಹ್ಲಿ ಎಂದು ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ಮಾತಾಡಿದ ಎಮ್.ಎಸ್.ಕೆ ಪ್ರಸಾದ್, ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ತಂಡವನ್ನ ಮುನ್ನಡೆಸಿದ ರೀತಿಯನ್ನ ನೋಡಿದ್ರೆ ಅದ್ಭುತ. ಅವರಿಗೆ ಸಿಕ್ಕ ಎರಡು ಐಸಿಸಿ ಟ್ರೋಫಿಗಳಲ್ಲಿ ಒಂದರಲ್ಲಿ ತಂಡವನ್ನ ಫೈನಲ್‌ಗೆ ಕೊಂಡೊಯ್ದಿದ್ದಾರೆ ಎಂದರು. ಇನ್ನೊಂದರಲ್ಲಿ ದುರದೃಷ್ಟವಶಾತ್ ಸೆಮಿಫೈನಲ್‌ನಲ್ಲಿ ಸೋತಿದ್ದೇವೆ. ಪ್ರಸ್ತುತ ಕೊಹ್ಲಿ ಟೆಸ್ಟ್ ಫಾರ್ಮೆಟ್‌ನಲ್ಲಿ ತಂಡವನ್ನ ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. 33 ವರ್ಷದ ಕೊಹ್ಲಿ ಮುಂದಿನ 5 ವರ್ಷಗಳ […]
-
ಎದೆ ಮೇಲೆ ರಜನಿ ಟ್ಯಾಟೂ ಹಾಕಿಸಿಕೊಂದು ತಲೈವಾಗೆ ವಿಶ್ ಮಾಡಿದ ಹರ್ಭಜನ್ ಸಿಂಗ್
ತಮಿಳಿನ ಸೂಪರ್ಸ್ಟಾರ್ ರಜನಿಕಾಂತ್ಗೆ 71ನೇ ಹುಟ್ಟುಹಬ್ಬ. ಸೂಪರ್ ಸ್ಟಾರ್ ತಲೈವಾಗೆ ಅಭಿಮಾನಿಗಳು ಮಾತ್ರವಲ್ಲ ಅನೇಕ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಈಗ ಟೀಂ ಇಂಡಿಯಾದ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ರಜನಿಗೆ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಹೌದು, ಹರ್ಭಜನ್ ಸಿಂಗ್ ತಮ್ಮ ಎದೆ ಮೇಲೆ ರಜನಿ ಟ್ಯಾಟೂ ಹಾಕಿಸಿಕೊಂಡು ವಿಶೇಷವಾಗಿ ವಿಶ್ ಮಾಡಿದ್ದಾರೆ. ತನ್ನ ಇನ್ಸ್ಟಾಗ್ರಾಂನಲ್ಲಿ ಈ ಫೋಟೋ ಭಜ್ಜಿ ಪೋಸ್ಟ್ ಮಾಡಿದ್ದು, ಭಾರೀ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. News […]
-
ರೋಹಿತ್-ರಾಹುಲ್ಗೆ ಕಾಡುತ್ತಿದೆ ಬಹುದೊಡ್ಡ ಚಿಂತೆ; ಈ ಮೂವರಲ್ಲಿ ಯಾರಿಗೆ ‘ಆ’ ಸ್ಥಾನ?
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಗೆ ಭಾರತ ತಂಡ ಪ್ರಕಟಿಸಲು ಅಂತಿಮ ಹಂತದ ಸಿದ್ದತೆ ನಡೆಯುತ್ತಿದೆ. ಬ್ಯಾಕ್ ಅಪ್ ಓಪನರ್ ಆಗಿ ಯಾರನ್ನ ಆಯ್ಕೆ ಮಾಡಬೇಕು ಅನ್ನೋ ಗೊಂದಲಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪ್ರಮುಖವಾಗಿ ಮೂವರು ಸ್ಥಾನಕ್ಕಾಗಿ ಪೈಪೋಟಿ ನಡೆಸ್ತಿದ್ದು, ಯಾರು ಮೇಲುಗೈ ಸಾಧಿಸ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಂಡ ಪ್ರಕಟಣೆ ಆಯ್ಕೆ ಸಮಿತಿಗೆ ತಲೆನೋವಾಗಿದೆ. ಕೇವಲ ಸೆಲೆಕ್ಷನ್ ಕಮಿಟಿ ಮಾತ್ರವಲ್ಲದೆ, ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ಗೂ […]
-
ಕನ್ನಡಿಗ ರಾಬಿನ್ ಉತ್ತಪ್ಪ ಮೇಲೆ RCB ಕಣ್ಣು?
ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ರಾಬಿನ್ ಉತ್ತಪ್ಪ ಅವರನ್ನು ರಿಟೈನ್ ಮಾಡಿಕೊಂಡಿಲ್ಲ. ಹೀಗಾಗಿ ಉತ್ತಮ ಈ ಬಾರಿ ಐಪಿಎಲ್ ಹರಾಜಿಗೆ ಲಭ್ಯವಾಗಲಿದ್ದಾರೆ. ಆರ್ಸಿಬಿ ಕಣ್ಣು ರಾಬಿನ್ ಉತ್ತಮ ಮೇಲಿದೆ ಎಂದು ಮೂಲಗಳು ಹೇಳುತ್ತಿವೆ. ಈ ಬಾರಿ ಹರಾಜಿನಲ್ಲಿ ಉತ್ತಪ್ಪ ಅವರನ್ನು ಆರ್ಸಿಬಿ ಖರೀದಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 2008ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಐಪಿಎಲ್ ಕರಿಯರ್ ಶುರು ಮಾಡಿದರು ಉತ್ತಪ್ಪ. ತಮ್ಮ ಇಷ್ಟು ವರ್ಷಗಳ ಕ್ರಿಕೆಟ್ ಜೀವನದಲ್ಲಿ ಆರ್ಸಿಬಿ, ಕೆಕೆಆರ್, ಸಿಎಸ್ಕೆ ಸೇರಿದಂತೆ ಹಲವು ತಂಡಗಳ ಪರವಾಗಿ […]
-
ವಿಜಯ್ ಹಜಾರೆಯಲ್ಲಿ ಯುವ ಆಟಗಾರರ ಅಬ್ಬರ -ಏಕದಿನ ತಂಡದಲ್ಲಿ ಸ್ಥಾನಕ್ಕಾಗಿ ಭಾರೀ ಪೈಪೋಟಿ
ಸೌತ್ ಆಫ್ರಿಕಾ ಎದುರಿನ ಏಕದಿನ ತಂಡದಲ್ಲಿ ಸ್ಥಾನ ಪಡೆಯೋದು ಅನುಭವಿಗಳ ಪಾಲಿಗೆ ಸುಲಭವಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ಮಿಂಚ್ತಾ ಇರೋ ಈ ಯಂಗ್ಸ್ಟರ್ಗಳು ಹಿರಯ ಆಟಗಾರರಿಗೆ ಟಫ್ ಫೈಟ್ ನೀಡಲಿದ್ದಾರೆ. ಯಾವೆಲ್ಲಾ ಆಟಗಾರರು ತಂಡಕ್ಕೆ ಆಯ್ಕೆಯಾಗೋ ರೇಸ್ನಲ್ಲಿದ್ದಾರೆ. ಇಲ್ಲಿದೆ ನೋಡಿ ಡಿಟೇಲ್ಸ್.. ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನ ಪ್ರಕಟಿಸಿದ ಟೀಮ್ ಇಂಡಿಯಾ ಆಯ್ಕೆ ಸಮಿತಿ, ಏಕದಿನ ತಂಡದ ಆಯ್ಕೆಯನ್ನ ಮುಂದೂಡಿದೆ. ಇದಕ್ಕೆ ಸ್ಪಷ್ಟ ಕಾರಣವನ್ನೂ ಸೆಲೆಕ್ಷನ್ ಪ್ಯಾನಲ್ ತಿಳಿಸಿದ್ದು, ವಿಜಯ್ ಹಜಾರೆ ಟೂರ್ನಿಯ ಪ್ರದರ್ಶವನ್ನ ಗಣನೆಗೆ […]
-
ಆಟಗಾರರ ಆಯ್ಕೆಗೆ ಫ್ರಾಂಚೈಸಿಗಳ ಸಿದ್ಧತೆ -ಪ್ಲೇಯರ್ಸ್ ಆಟದ ಮೇಲೆ ಟ್ಯಾಲೆಂಟ್ ಸ್ಕೌಟ್ ಕಣ್ಣು
14 ಆವೃತ್ತಿಗಳ ಐಪಿಎಲ್ ಸಕ್ಸಸ್ಫುಲ್ ಕಂಡಿದೆ. ಆದರೆ ಈ 14 ಸೀಸನ್ಗಳೇ ಒಂದು ಲೆಕ್ಕವಾದ್ರೆ, 15ನೇ ಆವೃತ್ತಿಯ ಶ್ರೀಮಂತ ಲೀಗ್ ಮತ್ತೊಂದು ಲೆಕ್ಕವಾಗಿರಲಿದೆ. ಯಾಕಂದರೆ ಹರಾಜಿಗೆ ಇನ್ನೂ ಒಂದು ತಿಂಗಳಿರೋವಾಗಲೇ, ಫ್ರಾಂಚೈಸಿಗಳು ನಡೆಸ್ತಿರೋ ವಿಶೇಷ ಅಧ್ಯಯನ ಅದಕ್ಕೆ ಸಾಕ್ಷಿಯಾಗ್ತಿದೆ. ಏನದು..? ಬನ್ನಿ ನೋಡೋಣ..! ವಿಜಯ್ ಹಜಾರೆ, ಬಿಗ್ಬ್ಯಾಷ್ ಲೀಗ್, ಶ್ರೀಲಂಕಾ ಪ್ರೀಮಿಯರ್ ಲೀಗ್… ಹೀಗೆ ಹಲವು ಟೂರ್ನಿಗಳು ಚಾಲ್ತಿಯಲ್ಲಿವೆ. ಆದರೆ ಈ ಲೀಗ್ಗಳ ಮೇಲೆ IPL ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಮೆಗಾ ಹರಾಜಿಗೆ ಒಂದು ತಿಂಗಳಿದೆ. ಅದಾಗಲೇ ಫ್ರಾಂಚೈಸಿಗಳು […]
-
ಕ್ಯಾಪ್ಟನ್ ಆಗೋಕೆ ಷರತ್ತು ವಿಧಿಸಿದ್ರಾ ರೋಹಿತ್.. ಮುಂಬೈಕರ್ ಮಾತಿಗೆ ಮಣಿದ್ರಾ ಗಂಗೂಲಿ, ಜಯ್ ಶಾ?
ರೋಹಿತ್ ಶರ್ಮಾ, ಏಕದಿನ ಮತ್ತು ಟಿ20 ಕ್ರಿಕೆಟ್ನ ನೂತನ ನಾಯಕ. ಆದರೆ ಈ ಹುದ್ದಗೇರುವುದಕ್ಕೂ ಮುನ್ನ ರೋಹಿತ್, ಬಿಸಿಸಿಐ ಮುಂದೆ ದೊಡ್ಡ ಷರತ್ತನ್ನ ವಿಧಿಸಿದ್ರು. ಇದಕ್ಕೆ ಬಿಸಿಸಿಐ ಉತ್ತರ ನೀಡಿದ್ದೇನು..? ಇಷ್ಟಕ್ಕೂ ರೋಹಿತ್ ವಿಧಿಸಿದ ಷರತ್ತುಗಳೇನು..? ಬನ್ನಿ ನೋಡೋಣ.. ಟೀಮ್ ಇಂಡಿಯಾದಲ್ಲಿ ನಾಯಕತ್ವ ಬದಲಾವಣೆ ಪರ್ವ ಅಂತ್ಯ ಕಂಡಿದೆ. ರೋಹಿತ್ ಶರ್ಮಾ ಟಿ20 ಬಳಿಕ, ಏಕದಿನ ತಂಡಕ್ಕೂ ಸಾರಥಿಯಾಗಿ ನೇಮಕಗೊಂಡಿದ್ದಾರೆ. ಟಿ20ಯಲ್ಲಿ ನಾಯಕನಾಗಿ ಯಶಸ್ಸು ಕಂಡ ಬೆನ್ನಲ್ಲೇ ರೋಹಿತ್, ಏಕದಿನಕ್ಕೂ ಕ್ಯಾಪ್ಟನ್ ಮಾಡಲಾಗಿದೆ. ಆದರಿದು ಬಿಸಿಸಿಐ ತೆಗೆದುಕೊಂಡ […]
-
ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಗೆ ಧೋನಿ ಕೊಟ್ಟ ಮಾರ್ಕ್ಸ್ ಎಷ್ಟು? ವೈರಲ್ ಆಯ್ತು ಹಳೇ ವಿಡಿಯೋ
ಇತ್ತೀಚೆಗಷ್ಟೇ ಟೀಂ ಇಂಡಿಯಾ ಟಿ20 ಕ್ಯಾಪ್ಟನ್ ಸ್ಥಾನಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದರು. ಬಳಿಕ ರೋಹಿತ್ ಶರ್ಮಾ ಅವರನ್ನು ಟೀಂ ಇಂಡಿಯಾ ನಾಯಕರನ್ನಾಗಿ ಆಯ್ಕೆ ಮಾಡಲಾಯ್ತು. ಇದಾದ ನಂತರ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿ ನ್ಯೂಜಿಲೆಂಡ್ ವಿರುದ್ಧದ ಟಿ20 ಟೂರ್ನಿ ಮತ್ತು ಟೆಸ್ಟ್ನಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಹೀಗಾಗಿ ಈಗ ವಿರಾಟ್ ಕೊಹ್ಲಿಗೆ ಒನ್ ಡೇ ಕ್ರಿಕೆಟ್ ಕ್ಯಾಪ್ಟನ್ ಸ್ಥಾನದಿಂದ ಕೊಕ್ ನೀಡಿ ರೋಹಿತ್ ಶರ್ಮಾರನ್ನು ಆಯ್ಕೆ ಮಾಡಲಾಗಿದೆ. ಇನ್ನು, ವಿರಾಟ್ ಕೊಹ್ಲಿ ಅವರನ್ನು ಟೀಮ್ ಇಂಡಿಯಾ […]
-
T20, ಏಕದಿನ ವಿಶ್ವಕಪ್ ಗೆಲ್ಲಲು ರೆಡಿಯಾಯ್ತು ಪ್ಲಾನ್- ರೋಹಿತ್ ಲೀಡರ್ಶಿಪ್ ಫಿಲಾಸಫಿ ಮೇಲೆ ಎಲ್ಲರ ಕಣ್ಣು
ಟೀಮ್ ಇಂಡಿಯಾ ನೂತನ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ, ಮುಂಬರುವ ಐಸಿಸಿ ಟೂರ್ನಿಗಳತ್ತ ಚಿತ್ತ ಹರಿಸಿದ್ದಾರೆ. ನಾಯಕನಾಗಿ ಆಯ್ಕೆಯಾಗಿ ವಾರವೂ ಕಳೆದಿಲ್ಲ. ಆಗಲೇ ಮುಂಬೈಕರ್, ತಮ್ಮ ಫ್ಯೂಚರ್ ಪ್ಲಾನ್ಗಳ ಬಗ್ಗೆ, ಮಾತನಾಡಿದ್ದಾರೆ. ಹಾಗಾದ್ರೆ ರೋಹಿತ್, ವಿಷನ್ ಏನು..? ಬನ್ನಿ ನೋಡೋಣ.. 2022ರ ಟಿ-ಟ್ವೆಂಟಿ ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್ ಗೆಲ್ಲೋದೇ, ನನ್ನ ಗುರಿ. ಯೆಸ್, ಈ ಮಾತನ್ನ ಹೇಳಿದ್ದು, ಟೀಮ್ ಇಂಡಿಯಾ ವೈಟ್ಬಾಲ್ ಕ್ರಿಕೆಟ್ನ ನೂತನ ನಾಯಕ, ರೋಹಿತ್ ಶರ್ಮಾ..! ನಾಯಕನಾಗಿ ಮುಂಬೈಕರ್, ತಮ್ಮ […]
-
ಉಪನಾಯಕನಾಗಲು ರಾಹುಲ್, ಪಂತ್ ನಡುವೆ ಫೈಟ್- ಕನ್ನಡಿಗನಿಗೆ ಸಿಗುತ್ತಾ ಪಟ್ಟ?
ಸೀಮಿತ ಓವರ್ಗಳ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಈ ಹಿಂದೆ ಟಿ20 ತಂಡದ ನಾಯಕರಾಗಿದ್ದ ರೋಹಿತ್ರನ್ನು ಇದೀಗ ಏಕದಿನ ತಂಡಕ್ಕೂ ಕ್ಯಾಪ್ಟನ್ ಮಾಡಲಾಗಿದೆ. ಕೊಹ್ಲಿ ಟೆಸ್ಟ್ ತಂಡದ ನಾಯಕರಾಗಿ ಮಾತ್ರ ಮುಂದುವರೆಯಲಿದ್ದಾರೆ. ಆದ್ರೆ ಏಕದಿನ ತಂಡದ ವೈಸ್ ಕ್ಯಾಪ್ಟನ್ ಯಾರು ಅನ್ನೋದಕ್ಕೆ ಉತ್ತರ ಹುಡುಕುತ್ತಿದೆ ಬಿಸಿಸಿಐ. ಅದರಲ್ಲೂ ಇಬ್ಬರ ನಡುವೆ ಪೈಪೋಟಿ ನಡೀತಿದೆ. ದಕ್ಷಿಣ ಆಫ್ರಿಕಾ ಸರಣಿಯೊಂದಿಗೆ ರೋಹಿತ್ ಶರ್ಮಾ, ಏಕದಿನ ತಂಡದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ನಾಯಕರಾಗಿದ್ದ ಸಂದರ್ಭದಲ್ಲಿ ರೋಹಿತ್ ಶರ್ಮಾ, […]
-
ಕೊಹ್ಲಿಯಿಂದ ಬಲವಂತವಾಗಿ ನಾಯಕತ್ವ ಕಿತ್ತುಕೊಂಡ ಬಿಸಿಸಿಐ..?
ಟೀಮ್ ಇಂಡಿಯಾ ಏಕದಿನ ನಾಯಕತ್ವವನ್ನು ವಿರಾಟ್ ಕೊಹ್ಲಿಯಿಂದ, ಬಲವಂತವಾಗಿ ಕಿತ್ತುಕೊಳ್ಳಲಾಗಿದೆ. ಸೀಮಿತ ಓವರ್ಗಳ ನಾಯಕತ್ವದಿಂದ ವಿರಾಟ್ ಕೊಹ್ಲಿ ಅವರನ್ನು ಕೆಳಗಿಳಿಸಿ ಟೆಸ್ಟ್ ಕ್ರಿಕೆಟ್ನ ಜವಾಬ್ದಾರಿ ಮಾತ್ರ ವಹಿಸಲಾಗಿದೆ. ಆ ಮೂಲಕ ಟಿ20 ಕ್ರಿಕೆಟ್ ಬಳಿಕ ಏಕದಿನ ನಾಯಕತ್ವವನ್ನೂ ರೋಹಿತ್ ಶರ್ಮಾಗೆ ನೀಡಲಾಗಿದೆ. ಸದ್ಯ ಬಂದಿರುವ ಮೂಲಗಳ ಪ್ರಕಾರ, ಏಕದಿನ ನಾಯತಕ್ವದಿಂದ ಕೆಳಗಿಳಿಯುವಂತೆ ಬಿಸಿಸಿಐ ಸೂಚಿಸಿತ್ತು. ಕ್ಯಾಪ್ಟನ್ಸಿ ತೊರೆಯುವಂತೆ 48 ಗಂಟೆ ಅಂದರೆ ಎರಡು ದಿನ ಕಾಲಾವಕಾಶ ನೀಡಿತ್ತು. ನೀವಾಗಿಯೇ ನಾಯಕತ್ವ ತ್ಯಜಿಸುವ ಕುರಿತು ಘೋಷಿಸಬೇಕು ಎಂದು ಬಿಸಿಸಿಐ […]
-
ವೈರಲ್ ಅಯ್ತು ಕತ್ರಿನಾ ವೆಡ್ಡಿಂಗ್ ಕಾರ್ಡ್; ಅತಿಥಿಗಳಿಗೆ ಹಾಕಿದ್ದು ಬರೀ ಕಂಡೀಷನ್ಸ್ ಅಲ್ಲ, ಮತ್ತೇನು?
ಬಾಲಿವುಡ್ ಸೆಲೆಬ್ರಿಟಿ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ವೆಲ್ಕಮ್ ಕಾರ್ಡ್ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ಡಿ. 9 ರಂದು ವಿಕ್ಕಿ ಕತ್ರಿನಾ ವಿವಾಹ ರಾಜಸ್ಥಾನದ ಸಿಕ್ಸ್ ಸೆನ್ಸ್ ಹೋಟೆಲ್ನಲ್ಲಿ ನಡೆಯಲಿದ್ದು, ವಿವಾಹಪೂರ್ವ ಕಾರ್ಯಗಳು ಆರಂಭ ಆಗಿವೆ. ಮದುವೆ ನಡೆಯುವ ಸ್ಥಳಕ್ಕೆ ಅತಿಥಿಗಳು ಆಗಮಿಸುತ್ತಿದ್ದಾರೆ. ಮದುವೆ ಸ್ಥಳಕ್ಕೆ ಆಗಮಿಸಿದ ಅತಿಥಿಗಳಿಗೆ ವೆಲ್ ಕಾರ್ಡ್ ನೀಡುವ ಮೂಲಕ ಅವರನ್ನು ಮದುವೆ ಮನೆಗೆ ಸ್ವಾಗತಿಸಲಾಯ್ತು. ಅತಿಥಿಗಳಿಗೆ ನೀಡಲಾದ ಈ ವೆಲ್ಕಮ್ ಕಾರ್ಡ್ನಲ್ಲಿ ಮದುವೆ […]
-
ಮೊದಲಿನಂತಿಲ್ಲ ಇಶಾಂತ್ ಬೌಲಿಂಗ್ನಲ್ಲಿದ್ದ ಧಮ್ -ರೇಸ್ನಲ್ಲಿ ಆವೇಶ್, ಉಮೇಶ್, ಪ್ರಸಿದ್ಧ್ ಕೃಷ್ಣ..
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸಮರ ಮುಗೀತು. ಇನ್ನೇನಿದ್ದರೂ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಕಡೆ ಗಮನ. ಈ ಟೆಸ್ಟ್ ಸರಣಿಗೆ ಯಾವೆಲ್ಲಾ ಆಟಗಾರರು ಆಯ್ಕೆ ಆಗ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಆದರೆ ಈ ಆಟಗಾರನಿಗೆ, ತಂಡದಲ್ಲಿ ಸ್ಥಾನವೇ ಇಲ್ಲ ಎಂದು ಹೇಳಲಾಗ್ತಿದೆ. ಯಾರು ಆ ಆಟಗಾರ..? ಬನ್ನಿ ನೋಡೋಣ.. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನ ಭಾರತ ಗೆದ್ದು ಬೀಗಿದೆ. ಇದೀಗ ಕೊಹ್ಲಿ ಬಾಯ್ಸ್ ಚಿತ್ತ, ಸೌತ್ ಆಫ್ರಿಕಾ ಪ್ರವಾಸದ ಮೇಲೆ.! ಇದೇ ವಾರದಲ್ಲಿ ಆಫ್ರಿಕಾ ಸರಣಿಗೆ, […]
-
ಅಂತಿಮ ಘಟ್ಟ ತಲುಪಿದ ಟೆಸ್ಟ್ ಪಂದ್ಯ; ಭಾರತ ಹುಲಿಗಳ ವಿಕೆಟ್ ಶಿಕಾರಿ ಹೇಗಿದೆ..?
ಇಂಡೋ-ಕಿವೀಸ್ ನಡುವಿನ ಮುಂಬೈ ಟೆಸ್ಟ್ ಪಂದ್ಯ ನಿರ್ಣಾಯಕ ಘಟ್ಟ ತಲುಪಿದೆ. 3ನೇ ದಿನದಾಟದಲ್ಲಿ ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡಿದ ಟೀಮ್ ಇಂಡಿಯಾ ಪಂದ್ಯ ಮೇಲೆ ಬಿಗಿ ಹಿಡಿತ ಸಾಧಿಸಿದೆ. 3ನೇ ದಿನದಾಟದ ಹೈಲೆಟ್ಸ್.. ಇಲ್ಲಿದೆ. ಅರ್ಧಶತಕ ಸಿಡಿಸಿದ ಮಯಾಂಕ್, 47 ರನ್ಗಳಿಸಿದ ಪೂಜಾರಮೊದಲ ಸೆಷನ್ ಅಂತ್ಯಕ್ಕೆ ಟೀಮ್ ಇಂಡಿಯಾ 142/2 62 ರನ್ಗಳೊಂದಿಗೆ 3ನೇ ದಿನದಾಟ ಆರಂಭಿಸಿದ್ದ ಭಾರತ, ಆರಂಭದಲ್ಲಿ ಪ್ರಾಬಲ್ಯ ಮೆರೆಯಿತು. ಮಯಾಂಕ್ ಅಗರ್ವಾಲ್ ಅರ್ಧಶತಕ ಸಿಡಿಸಿ ಮಿಂಚಿದ್ರೆ, ಎಚ್ಚರಿಕೆಯ ಆಟವಾಡಿದ ಪೂಜಾರ 47 […]
-
ಪ್ರವಾಸಿ ನ್ಯೂಜಿಲೆಂಡ್ ಪಡೆಗೆ 540 ರನ್ಗಳ ಸವಾಲಿನ ಟಾರ್ಗೆಟ್..!
ಮುಂಬೈನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್ನಲ್ಲಿ 7 ವಿಕೆಟ್ ನಷ್ಟಕ್ಕೆ 276 ರನ್ಗಳಿಸಿರುವ ಟೀಮ್ ಇಂಡಿಯಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇದರೊಂದಿಗೆ ಪ್ರವಾಸಿ ನ್ಯೂಜಿಲೆಂಡ್ ಪಡೆಗೆ 540 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ. 2 ವಿಕೆಟ್ ನಷ್ಟಕ್ಕೆ 142 ರನ್ಗಳೊಂದಿಗೆ 3ನೇ ದಿನದಾಟದ 2ನೇ ಸೆಷನ್ ಆರಂಭಿಸಿದ ಟೀಮ್ ಇಂಡಿಯಾ ಸೆಷನ್ ಅಂತ್ಯಕ್ಕೆ 276 ರನ್ಗಳಿಸಿತು. ಸೆಷನ್ ಆರಂಭದಲ್ಲಿ ಉತ್ತಮ ಜೊತೆಯಾಟವಾಡಿದ ನಾಯಕ ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದ್ರು. […]
-
ವೆಟ್ಟೋರಿ, ಆ್ಯಂಡಿ ಫ್ಲವರ್ ಮೇಲೆ ಕಣ್ಣು; IPL ‘ದುಬಾರಿ ಟೀಂ’ಗೆ ಇವರಿಬ್ಬರ ಮೇಲೆ ಒಲವೇಕೆ..?
ಐಪಿಎಲ್ ಸೀಸನ್-15ರ ಅತಿ ದುಬಾರಿ ಟೀಮ್ ಲಖನೌ.. ಈಗಾಗಲೇ ಡ್ರಾಫ್ಟ್ ಸಿಸ್ಟಮ್ ಅಡಿ ಸ್ಟಾರ್ ಆಟಗಾರರನ್ನ ಮಣೆಹಾಕಲು ಕಸರತ್ತು ನಡೆಸ್ತಿದೆ. ಒಂದೆಡೆ ಬಲಿಷ್ಠ ತಂಡ ಕಟ್ಟುವ ಲೆಕ್ಕಚಾರದ ನಡುವೆ, ತರೆಮರೆಯಲ್ಲಿ ಸ್ಟ್ರಾಟರ್ಜಿ ರೂಪಿಸೋ ಮಾಸ್ಟರ್ಗಳನ್ನ ಕರೆತರೋಕೆ ಮುಂದಾಗಿದೆ. ಇದಕ್ಕಾಗಿ ಇಬ್ಬರು ಸ್ಟಾರ್ ಕೋಚ್ಗಳ ಮೇಲೆ ಕಣ್ಣಿಟ್ಟಿದೆ. ಅದ್ಯಾರ ಮೇಲೆ ಅಂತಿರಾ..? ಐಪಿಎಲ್ ಹಳೆ ಫ್ರಾಂಚೈಸಿಗಳ ರಿಟೆನ್ಶನ್ ಟೆನ್ಶನ್, ಮುಗಿದಿದೆ. ಈಗ ಐಪಿಎಲ್ನ ಹೊಸ ತಂಡಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಸ್ಟಾರ್ ಆಟಗಾರರ ಮೇಲೆ ಚಿತ್ತ ಹರಿಸಿರುವ ಫ್ರಾಂಚೈಸಿ, […]
-
ಮುಂಬೈ ಟೆಸ್ಟ್ DAY 02- ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ325 ರನ್ಗಳಿಗೆ ಆಲೌಟ್
ಮುಂಬೈನ ಟೆಸ್ಟ್ನ ಮೊದಲ ಇನ್ನಿಂಗ್ಸ್ ಟೀಮ್ ಇಂಡಿಯಾ 325 ರನ್ ಗಳಿಗೆ ಆಲೌಟ್ ಆಗಿದೆ. 4 ವಿಕೆಟ್ 221 ರನ್ನೊಂದಿಗೆ 2ನೇ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ವೃದ್ದಿಮಾನ್ ಸಾಹ, ಅಶ್ವಿನ್ ವಿಕೆಟ್ ಕಳೆದುಕೊಂಡಿತ್ತು. ಇದರೊಂದಿಗೆ 224 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮಯಾಂಕ್-ಅಕ್ಷರ್, 7ನೇ ವಿಕೆಟ್ಗೆ 67 ರನ್ಗಳ ಜೊತೆಯಾಟವಾಡಿ ತಂಡಕ್ಕೆ ನೆರವಾದರು.. ಆದ್ರೆ, ಈ ವೇಳೆ ದ್ವಿಶತಕದ ಭರವಸೆ ಮೂಡಿಸಿದ್ದ ಮಯಾಂಕ್, 150 ರನ್ ಪೂರೈಕೆ ಬೆನ್ನಲ್ಲೇ […]
-
ಒಮಿಕ್ರಾನ್ ಭೀತಿ; ಸೌತ್ ಆಫ್ರಿಕಾ ಪ್ರವಾಸದ ಟಿ20 ಸರಣಿ ಕಡಿತ
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿಗದಿಯಾಗಿದ್ದ ಟಿ20 ಸರಣಿಯನ್ನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ದೀರ್ಘ ಕಾಲದ ಚರ್ಚೆ ಬಳಿಕ ಈ ನಿರ್ಧಾರಕ್ಕೆ ಬಂದಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ ಶಾ ತಿಳಿಸಿದ್ದಾರೆ. ನ್ಯೂಜಿಲೆಂಡ್ ಟೆಸ್ಟ್ ಸರಣಿ ಟೀಮ್ ಇಂಡಿಯಾ, ಸೌತ್ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿಯನ್ನ ಮಾತ್ರ ಆಡಲಿದೆ ಎಂದು ಜಯ್ ಶಾ ಸ್ಪಷ್ಟಪಡಿಸಿದ್ದಾರೆ. ನಾಲ್ಕು ಪಂದ್ಯಗಳ ಟಿ20 ಸರಣಿಯನ್ನ ಕೆಲ ದಿನಗಳ ಬಳಿಕ ಆಯೋಜಿಸಲು ಬಿಸಿಸಿಐ ಮತ್ತು […]
-
‘ಗೊಂದಲದಲ್ಲಿ ಆಡೋದು ಇಷ್ಟವಿಲ್ಲ, BCCI ಒಂದು ನಿರ್ಧಾರಕ್ಕೆ ಬರಲಿದೆ’- ಕೊಹ್ಲಿ ಹಿಂಗ್ಯಾಕಂದ್ರು?
ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಒಂದು ನಿರ್ಧಾರಕ್ಕೆ ಬರಲಿದೆ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಈ ಸಂಬಂಧ ಮಾತಾಡಿದ ವಿರಾಟ್, ಬಿಸಿಸಿಐ ಸಾಕಷ್ಟು ಯೋಜನೆಗಳು ಹಮ್ಮಿಕೊಂಡಿದೆ. ಈ ಬಗ್ಗೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ಮಾತುಕತೆ ನಡೆಸುತ್ತಿದ್ದಾರೆ. ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ಯಾವುದೇ ಕಾರಣಕ್ಕೂ ಗೊಂದಲಮಯ ಸನ್ನಿವೇಶದಲ್ಲಿ ಇರೋಕೆ ನಾವ್ಯಾರು ಬಯಸೋದಿಲ್ಲ. ಮುಂದಿನ ದಿನಗಳಲ್ಲಿ ಮಂಡಳಿ ತನ್ನ ನಿರ್ಧಾರ ನಮಗೆ ತಿಳಿಸಲಿದೆ. […]
-
ಮುಂಬೈ ಟೆಸ್ಟ್ DAY 1 : ಸಂಕಷ್ಟದಲ್ಲಿರುವ ಟೀಮ್ ಇಂಡಿಯಾಕ್ಕೆ ಮಯಾಂಕ್ ಆಸರೆ
ಮುಂಬೈನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಮಳೆಯಾಟದ ಕಾರಣ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್, ಶುಭ್ಮನ್ ಗಿಲ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ಗೆ 80 ರನ್ಗಳ ಭದ್ರ ಅಡಿಪಾಯ ಹಾಕಿ ಬಿಗ್ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದರು. ಆದ್ರೆ, ಈ ವೇಳೆ 44 ರನ್ ಗಳಿಸಿ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಶುಭ್ಮನ್, ಅಜಾಜ್ ಪಟೇಲ್ […]
-
ವಾಂಖೆಡೆ ಟೆಸ್ಟ್ ಆರಂಭಕ್ಕೆ ಕೌಂಟ್ಡೌನ್ -ಮಯಾಂಕ್, ಸಾಹ ಪ್ಲೇಯಿಂಗ್-XIನಿಂದ ಔಟ್..?
ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ಗೆ ವಿರಾಟ್ ಕೊಹ್ಲಿ ಆಗಮನದಿಂದ ಟೀಮ್ ಇಂಡಿಯಾದ ಬಲ ಹೆಚ್ಚಿದೆ. ಅದರ ಜೊತೆಗೆ ಪ್ಲೇಯಿಂಗ್ ಇಲೆವೆನ್ ಆಯ್ಕೆಯೂ ತಲೆ ನೋವಾಗಿದೆ. ಹಾಗಾದ್ರೆ ಇಂದಿನಿಂದ ಆರಂಭವಾಗಲಿರೋ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಆಗೋ ಬದಲಾವಣೆಗಳೇನು.? ಇಲ್ಲಿದೆ ಡಿಟೇಲ್ಸ್ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡರೂ, ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಿದ್ದಂತೂ ಸುಳ್ಳಲ್ಲ. ಅದರಲ್ಲೂ ಅನುಭವಿ ಬ್ಯಾಟ್ಸ್ಮನ್ಗಳ ವೈಫಲ್ಯ ತಂಡಕ್ಕೆ ಹಿನ್ನಡೆಯಾಗಿತ್ತು. ಇದೀಗ ವಿರಾಟ್ ಕೊಹ್ಲಿ ಆಗಮನದಿಂದ ಬ್ಯಾಟಿಂಗ್ ಆರ್ಡರ್ಗೆ ಬಲ ಬಂದಿದ್ರೂ, ಪ್ಲೇಯಿಂಗ್ ಇಲೆವೆನ್ನಲ್ಲಿ […]
-
IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ | IPL 20222: Daniel Vettori Backs Glenn Maxwell to Become Next RCB Captain
1/5 ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ತಂಡ ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ಅದರಂತೆ ಮುಂದಿನ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ಪರ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಆಡುವುದು ಖಚಿತ. ಆದರೆ ಆರ್ಸಿಬಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದೇ ಈಗ ದೊಡ್ಡ ಪ್ರಶ್ನೆ. 2/5 Daniel Vettori 3/5 ಡೇನಿಯಲ್ ವೆಟ್ಟೋರಿ ಪ್ರಕಾರ, ಪ್ರತಿ ತಂಡಗಳು ನಾಯಕನಾಗುವ ಆಟಗಾರರನ್ನೇ ಉಳಿಸಿಕೊಂಡಿದೆ. ಹೀಗಾಗಿ ಉಳಿಸಿಕೊಂಡಿರುವ ಆಟಗಾರರಿಂದಲೇ ಆರ್ಸಿಬಿ ಕೂಡ ನಾಯಕನನ್ನು ಆಯ್ಕೆ […]
-
IPL 2022 Auction: ಮೆಗಾ ಹರಾಜಿನಲ್ಲಿ ಮಾಜಿ ಆರ್ಸಿಬಿ ಆಟಗಾರರನ್ನು ಖರೀದಿಸುವ ಪ್ಲಾನ್ನಲ್ಲಿದೆ ಹೈದರಾಬಾದ್ | IPL 2022 Auction Sunrisers Hyderabad targeted these players
1/6 ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ 2022 ಕ್ಕೆ 3 ಆಟಗಾರರನ್ನು ಉಳಿಸಿಕೊಂಡಿದೆ. ಅವರಲ್ಲಿ ಒಬ್ಬರು ಕೇನ್ ವಿಲಿಯಮ್ಸನ್. ಅವರು ನಾಯಕತ್ವವಹಿಸಿಕೊಳ್ಳುವುದು ಫಿಕ್ಸ್. ಜೊತೆಗೆ ಬಲಿಷ್ಠ ತಂಡ ಕಟ್ಟಲು ಹೈದರಾಬಾದ್ ಮುಂದಾಗಿದೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ SRH ತಂಡ ಯಾವ ಆಟಗಾರರನ್ನು ಖರೀದಿಸಲು ಮುಂದಾಗಬಹುದು ಎಂಬುದನ್ನು ನೋಡೋಣ. 2/6 ಶ್ರೇಯಸ್ ಅಯ್ಯರ್: IPL 2022 ರ ಹರಾಜಿನಲ್ಲಿ, ಇದು ಪ್ರತಿ ತಂಡವು ಗಮನಹರಿಸುವ ಹೆಸರಾಗಿರುತ್ತದೆ. SRH ನಲ್ಲಿ ಅಯ್ಯರ್ ಅವರನ್ನು ಖರೀದಿಸುವ ಚಡಪಡಿಕೆಯು ಅವರ ಬ್ಯಾಟಿಂಗ್ ಅನ್ನು […]