Categories
Tech

2024ರಲ್ಲಿ ಚಂದ್ರನ ಅಂಗಳಕ್ಕೆ ಮೊದಲ ಮಹಿಳೆ, ಬಿಳಿಯೇತರ ವ್ಯಕ್ತಿಯನ್ನು ಕಳಿಸಲಿರುವ ನಾಸಾ!

ವಾಷಿಂಗ್ ಟನ್: ಚಂದ್ರ ಹಾಗೂ ಮಂಗಳನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ತಯಾರಾಗಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 2024ಕ್ಕೆ ಮೊದಲ ಬಾರಿಗೆ ಚಂದ್ರನ ಮೇಲೆ ಮಹಿಳೆಯನ್ನು ಹಾಗೂ ಓರ್ವ ಬಿಳಿಯೇತರ ವ್ಯಕ್ತಿಯನ್ನು ಕಳಿಸುವ ಯೋಜನೆಯನ್ನು ರೂಪಿಸಿದೆ. 
 
ಇದಕ್ಕಾಗಿ ನಾಸಾ ಆರ್ಟೆಮಿಸ್-III ಪ್ರೋಗ್ರಾಂನ್ನು ರೂಪಿಸಿದ್ದು, 2024 ರಲ್ಲಿ ಇದಕ್ಕೆ ಚಾಲನೆ ನೀಡಲಾಗುತ್ತದೆ. ಜೋ ಬೈಡನ್-ಕಮಲಾ ಹ್ಯಾರಿಸ್ ಆಡಳಿತ ಸರ್ಕಾರದ 2022 ನೇ ಆರ್ಥಿಕ ವರ್ಷದ ಆದ್ಯತೆಗಳನ್ನು ಮಂಡಿಸಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. 

"ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಊಹಿಸಲು, ಚಂದ್ರ, ಮಂಗಳನ ಮೇಲ್ಮೈ ನಲ್ಲಿ ಹೆಚ್ಚಿನ ಅಧ್ಯಯನ ನಡೆಸುವುದಕ್ಕೆ ಸಹಕಾರಿಯಾಗುವಂತೆ ಅನುದಾನ, ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬೈಡನ್ ಆಡಳಿತ ಕೆಲಸ ಮಾಡುತ್ತಿದೆ" ಎಂದು ನಾಸಾ ಮುಖ್ಯಸ್ಥರು ತಿಳಿಸಿದ್ದಾರೆ.

ಚಂದ್ರನ ಮೇಲೆ ಇದೇ ಮೊದಲ ಬಾರಿಗೆ ಮಹಿಳೆ ಒಬ್ಬರು ಹೋಗುತ್ತಿದ್ದರೆ, ಬಿಳಿಯೇತರ ವ್ಯಕ್ತಿ ಸಹ ಇದೇ ಮೊದಲ ಬಾರಿಗೆ ಚಂದ್ರ ಮೇಲೆ ಇಳಿಯಲಿದ್ದಾರೆ. ನಾಸಾಗೆ ಈ ಯೋಜನೆಗಾಗಿ ಬೈಡನ್ ಆಡಳಿತ 24.7 ಬಿಲಿಯನ್ ಡಾಲರ್ ನಷ್ಟು ಅನುದಾನ ಲಭ್ಯವಾಗಲಿದೆ ಎಂದು ನಾಸಾ ಮುಖ್ಯಸ್ಥ ಸ್ಟೀವ್ ಜುರ್​​ಝ್ಯ ಮಾಹಿತಿ ನೀಡಿದ್ದಾರೆ. 

Source: Kannadaprabha – ವಿಜ್ಞಾನ-ತಂತ್ರಜ್ಞಾನ – https://www.kannadaprabha.com/science-technology/
Read More

Categories
Tech

ಶವೋಮಿಯ ‘Mi Band 6’ ಸ್ಮಾರ್ಟ್ ವಾಚ್ : ಇದರ ವಿಶೇಷತೆ ಏನು ?  

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ಶವೋಮಿ ಇದೀಗ ಮತ್ತೊಂದು ಹೊಸ ಪ್ರಾಡಕ್ಟ್ ಪರಿಚಯಿಸಿದೆ. ಶವೋಮಿ ಇದೀಗ ಲೆಟೆಸ್ಟ್ ಫೀಚರ್ ಹೊಂದಿರುವ ಎಂಐ ಸ್ಮಾರ್ಟ್ ಬ್ಯಾಂಡ್ 6 ( ಸ್ಮಾರ್ಟ್ ವಾಚ್ ) ಸಿದ್ಧಪಡಿಸಿದೆ. ಮಾರ್ಚ್ 29 ರಂದು ಚೀನಾದಲ್ಲಿ ಸ್ಮಾರ್ಟ್ ಬ್ಯಾಂಡ್ 6 ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಏಪ್ರಿಲ್ ಮೊದಲ ವಾರದ ಅವಧಿಯಲ್ಲಿ ಭಾರತದ ಮಾರುಕಟ್ಟೆಗೂ ಸ್ಮಾರ್ಟ್ ಬ್ಯಾಂಡ್ 6 ಆಗಮಿಸುವ ಸಾಧ್ಯತೆ ಇದೆ.

ಎಂಐ ಸ್ಮಾರ್ಟ್ ಬ್ಯಾಂಡ್ 6 ವಿಶೇಷತೆ ಏನು ?

ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್‍ ಗಳ ಸ್ಟಾರ್ಟ್ ವಾಚ್‍ ಗಳು ಲಭ್ಯ ಇವೆ. ಆದರೆ, ಎಂಐ ಪರಿಚಯಿಸಿರುವ ಸ್ಮಾರ್ಟ್ ಬ್ಯಾಂಡ್ ಇವೆಲ್ಲವುಗಳಿಗಿಂತ ವಿಭಿನ್ನವಾಗಿದೆ ಎಂದು ಶವೋಮಿ ಹೇಳಿಕೊಂಡಿದೆ.

ಈ ಬ್ಯಾಂಡ್ ಫಿಟ್‌ನೆಸ್ ಟ್ರ್ಯಾಕರ್ ಹೊಸ ವೈಶಿಷ್ಟ್ಯಗಳು ಮತ್ತು ಅಪ್ಡೇಟ್ ಗಳನ್ನು ಒಳಗೊಂಡಿದೆ. ಎಂಐ ಬ್ಯಾಂಡ್ ಫಿಟ್ ಆ್ಯಪ್ ಹೊಂದಿದೆ. ಇದು ವಾಚ್ ಧರಿಸಿದ ವ್ಯಕ್ತಿಯ ನಿದ್ದೆ ಸಮಯದಲ್ಲಿಯ ಉಸಿರಾಟದ ಏರಿಳಿತ ಹಾಗೂ ಅದರ ಸಂಖ್ಯೆಯನ್ನು ತಿಳಿಸಲಿದೆ. ಅಂದರೆ ನಿದ್ರಾವಸ್ಥೆಯಲ್ಲಿ ನೀವು ನಿಮಿಷಕ್ಕೆ ಎಷ್ಟು ಬಾರಿ ಉಸಿರಾಡುತ್ತೀರಿ ಎನ್ನುವ ಮಾಹಿತಿ ಸಂಗ್ರಹಿಸಲಿದೆ. ಅದೇ ರೀತಿ ನಿಮ್ಮ ಹೃದಯ ಬಡಿತದ ದರವನ್ನು ತಿಳಿಸಲಿದೆ. ಈ ವಾಚ್‍ನಲ್ಲಿ ಬ್ಯಾಂಡ್ 5 ರಂತೆ ಮ್ಯಾಗ್ನೆಟಿಕ್ ಚಾರ್ಜಿಂಗ್ ಕೇಬಲ್ ಇರಲಿದೆ .

ಇದು ಉತ್ತಮ ಟ್ರ್ಯಾಕಿಂಗ್ ಸೌಲಭ್ಯವನ್ನು ಹೊಂದಿದೆ. ಮತ್ತೊಂದು ವಿಶೇಷವೆಂದರೆ Mi Band 6 ರಲ್ಲಿ SOP 2 ಮಾನಿಟರಿಂಗ್ ಒಳಗೊಂಡಿದೆ.

ಬೆಲೆ ಎಷ್ಟು ?

ಇನ್ನು ಚೀನಾದಲ್ಲಿ ಎಂಐ ಬ್ಯಾಂಡ್ 6 ಬೆಲೆ 2500 ರೂ. ಇದೆ. ಭಾರತದಲ್ಲಿ ಇದರ ಬೆಲೆ ಎಷ್ಟಿರಬಹುದು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

 

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

Categories
Tech

ಸೋನಿ ಎಕ್ಸ್‌ ಪೀರಿಯಾ ಏಪ್ರಿಲ್ 14ಕ್ಕೆ ಬಿಡುಗಡೆ ..!?

ನವ ದೆಹಲಿ :  ಜಪಾನಿನ ಬಹುರಾಷ್ಟ್ರೀಯ ಕಂಪನಿಗಳಲ್ಲೊಂದಾದ ಸೋನಿ ಕಾರ್ಪೊರೇಷನ್ ತನ್ನ ಹೊಸ ಮಾದರಿಯ ಎಕ್ಸ್‌ ಪೀರಿಯಾ ಫೋನ್ ಅನ್ನು ಈ ಬರುವ ಏಪ್ರಿಲ್ 14 ರಂದು ಬಿಡುಗಡೆ ಮಾಡಲು ಯೋಜನೆ ಮಾಡುತ್ತಿದೆ ಎಂಬ ಮಾಹಿತಿಯನ್ನು ವರದಿಯೊಂದು ತಿಳಿಸಿದೆ.

ಸೋನಿ ತನ್ನ ಮುಂಬರುವ ಎಕ್ಸ್‌ ಪೀರಿಯಾ ಈವೆಂಟ್ ನ್ನು ಏಪ್ರಿಲ್ 14 ರಂದು  ನಡೆಯಲಿದೆ ಎಂದು ಘೋಷಿಸಿದೆ. ಎಕ್ಸ್‌ಪೀರಿಯಾ ಯೂಟ್ಯೂಬ್ ಚಾನೆಲ್‌ ನ ಈ ಸುದ್ದಿಯನ್ನು ಪಡೆಯಲಾಗಿದೆ, ದಿ ವರ್ಜ್ ತಿಳಿಸಿದೆ.

ಓದಿ : ಈಶ್ವರಪ್ಪರನ್ನು ಉಚ್ಚಾಟಿಸಿ ಇಲ್ಲವೇ ನೀವು ರಾಜೀನಾಮೆ ನೀಡಿ: ಸಿಎಂ ಗೆ ಡಿಕೆ ಶಿವಕುಮಾರ್ ಸವಾಲು

ಎಕ್ಸ್‌ ಪೀರಿಯಾ 5 ಮತ್ತು 10 ರ ಹೊಸ ಮಾದರಿಗಳನ್ನು  ಕೂಡ ಬಿಡುಗಡೆ ಮಾಡಬಹುದುದು ಎಂಬ ವದಂತಿಗಳಿವೆ ಎಂದು ದಿ ವರ್ಜ್ ವರದಿಯಲ್ಲಿ ಮಾಡಿದೆ.

ಇನ್ನು,  1 III ಪೆರಿಸ್ಕೋಪ್ ಜೂಮ್ ಲೆನ್ಸ್ ಅನ್ನು ಹೊಂದಿರುತ್ತದೆ ಎಂದು ವರದಿಗಳು ಹೇಳುತ್ತವೆ, ಸ್ನಾಪ್‌ಡ್ರಾ ಗನ್ 888, 12 ಜಿಬಿ ಮೆಮೊರಿ, 5 ಜಿ ಮತ್ತು 4 ಕೆ 120 ಹೆಚ್ ಡಿ ಸ್ಕ್ರೀನ್ ನನ್ನು ಹೊಂದಿದೆ.

ಹೊಸ ಮಾದರಿಯು 5.5 ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ವದಂತಿಗಳು ಇವೆ ಎಂದು ವರದಿ ತಿಳಿಸಿದೆ.

ಓದಿ : ಕೋವಿಡ್ ಸೋಂಕು ಹೆಚ್ಚಳ; ಮಧ್ಯಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿ

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

Categories
Tech

ವಾಟ್ಸಪ್‍ನಿಂದ ಶೀಘ್ರದಲ್ಲೇ ಹೊಸ ಫೀಚರ್ !  

ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಪ್ ಇದೀಗ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ವಾಟ್ಸಪ್ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ ನೀಡುವತ್ತ ವಾಟ್ಸಪ್ ಕಾರ್ಯೋನ್ಮುಖವಾಗಿದೆ.

ಫೇಸ್‍ಬುಕ್ ಒಡೆತನದ ವಾಟ್ಸಪ್ ಇದೀಗ ಚಾಟ್ ಬಾಕ್ಸ್ ಥೀಮ್ ಕಲರ್ ಬದಲಾಯಿಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆಯಂತೆ. ವರದಿಗಳು ಹೇಳುವಂತೆ ಬಳಕೆದಾರರು ತಮಗೆ ಇಷ್ಟವಾದ ಬಣ್ಣವನ್ನು ವಾಟ್ಸಪ್ ಚಾಟ್ ಬಾಕ್ಸ್ ಥೀಮ್ ಗೆ ಅನ್ವಯಿಸಬಹುದು. ಈ ಹೊಸ ಫೀಚರ್ ಮೇಲೆ ವಾಟ್ಸಪ್ ವರ್ಕ್ ಮಾಡುತ್ತಿದ್ದು, ಇದು ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ. ಆದರೆ, ಈ ಬಗ್ಗೆ ವಾಟ್ಸಪ್‍ನಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಈಗಾಗಲೇ ವಾಟ್ಸಪ್‍ನಲ್ಲಿ ವಾಯ್ಸ್ ಫೀಚರ್‍ ಇದೆ. ಮತ್ತೊಂದು ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ಇದರ ವೇಗ ನಿಯಂತ್ರಿಸುವ ಅವಕಾಶವನ್ನು ಬಳಕೆದಾರರಿಗೆ ನೀಡಲಿದೆಯಂತೆ. ಕೆಲ ದಿನಗಳ ಹಿಂದೆಯಷ್ಟೇ ವಾಟ್ಸಪ್ ಡೆಸ್ಕ್ ಟಾಪ್ ಮೇಲೆಯೂ ಆಡಿಯೋ ಹಾಗೂ ವಿಡಿಯೋ ಕಾಲ್ ಸೌಲಭ್ಯ ಒದಗಿಸಿದೆ.

ಇನ್ನು ಗೌಪ್ಯತಾ ನಿಯಮ ವಿಚಾರವಾಗಿ ವಾಟ್ಸಪ್ ಅಧಿಕ ಸಂಖ್ಯೆಯಲ್ಲಿ ತನ್ನ ಬಳಕೆದಾರರನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ಹೊಸ ಫೀಚರ್‍ ಗಳತ್ತ ವಾಟ್ಸಪ್ ಮುಂದಡಿಯಿಟ್ಟಿದೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

Categories
Tech

ಇದು ನಾಸಾದ ನೂತನ ತಂತ್ರಜ್ಞಾನ… ಗಾಳಿ ಇಲ್ಲದ ಟೈರುಗಳು…ಬಳಸುವಿರೇನು?

ನಾಸಾದ ಸುದ್ದಿ ಪುಟಗಳನ್ನು ತಿರುವಿ ಹಾಕುತ್ತಿದ್ದಾಗ ಹೊಸ ಮಾದರಿಯ ಟೈರುಗಳ ಬಗೆಗಿನ ಮಾಹಿತಿ ಇನ್ನೊಮ್ಮೆ ಕಣ್ಣರಳಿಸಿ ನೋಡುವಂತೆ ವಿಶೇಷವಾಗಿ ಸೆಳೆಯಿತು. ಅದುವೇ “ಸೂಪರ್ ಎಲಾಸ್ಟಿಕ್ ಟೈರ್”. ((SUPER ELASTIC TYRE). ರಚನೆಯಲ್ಲಿ ರಬ್ಬರ್ ಬಳಕೆ ಇಲ್ಲ. ಒಳಗೆ ಟ್ಯೂಬ್ ಇಲ್ಲ. ಗಾಳಿಯೂ ಬೇಕಿಲ್ಲ. ಪಂಚರ್ ಎಂದಿಗೂ ಸಾಧ್ಯವಿಲ್ಲ…! ಬರೀ ತಂತಿಗಳಿಂದ ಮಾಡಿರುವ ಟೈರುಗಳಿವು. ಆದರೆ ಸಾಮಾನ್ಯ ತಂತಿಗಳಲ್ಲ. ಜನಸಾಮಾನ್ಯರು ಕಂಡು ಕೇಳರಿಯದ ಐಂದ್ರಜಾಲದ ತಂತಿಗಳು…! ಇವು ವಿಶೇಷವಾಗಿ ಚಂದಿರ ಮತ್ತು ಮಂಗಳಗ್ರಹದಲ್ಲಿನ ಓಡಾಟಕ್ಕೆಂದೇ ರಚಿಸಲಾಗಿರುವ ಅತ್ಯುನ್ನತ ಬಗೆಯ ಉತ್ಕೃಷ್ಟ ತಂತ್ರಜ್ಞಾನ ಅಡಗಿರುವ ಭವಿಷ್ಯದ ಗಾಲಿಗಳು.

ಅನ್ಯಗ್ರಹದಲ್ಲಿ ಚಲಿಸಲು ಹೆದ್ದಾರಿಗಳಾಗಲೀ, ರಸ್ತೆಗಳಾಗಲೀ… ಅಲ್ಲಿಲ್ಲ…! ಕೊನೆಗೆ ಸಮತಟ್ಟಾದ ನೆಲವಾದರೂ ಸಹ ಸಿಗುವುದು ಅನುಮಾನ. ಅಲ್ಲಿರುವುದು ಬಂಡೆ, ಕಲ್ಲು, ಮಣ್ಣು, ಮರಳು, ತಗ್ಗು, ದಿನ್ನೆಗಳ ಮಿಶ್ರಣವಿರುವ ಭೂಪ್ರದೇಶ. ಜೊತೆಗೆ ವಿಪರೀತ ಹವಾಮಾನ ವೈಪರಿತ್ಯ. ಆಕಸ್ಮಿಕವಾಗಿ ಚೂಪಾದ ವಸ್ತು ತಾಗಿ ಪಂಚರ್ ಆದರೆ ಮತ್ತೆ ತುಂಬಲು ಗಾಳಿ ಸಿಗುವುದೂ ಸಹ ಅನುಮಾನ..! ಓಡಾಟಕ್ಕೆ ವಾಹನ ಬಳಸಿದರೆ ಅಲ್ಲಿ ನಮ್ಮ ರಬ್ಬರ್ ಟೈರುಗಳನ್ನು ನಂಬಲು ಸಾಧ್ಯವೇ ಇಲ್ಲ. ಮತ್ತೆ..? ಹೊಸ ಬಗೆಯ ಅತ್ಯಂತ ವಿಶ್ವಾಸಾರ್ಹತೆಯ ಮತ್ತು ಆ ವಾತಾವರಣಕ್ಕೆ ಹೊಂದುವಂತಹ ಟೈರುಗಳು ಬೇಕು..!

ನಾಸಾದ “ಗ್ಲೆನ್ ಸಂಶೋಧನಾ ಕೇಂದ್ರ” ಮತ್ತು “ಗುಡ್ ಇಯರ್ ಟೈರ್ ಸಂಸ್ಥೆ” ಜಂಟಿಯಾಗಿ ದಶಕಗಳ ಅವಿರತ ಸಂಶೋಧನೆಯ ನಂತರ S.M.A (SHAPE MEMORY ALLOY) ವಸ್ತುಗಳನ್ನು ಉಪಯೋಗಿಸಿ ಈ ವಿಶಿಷ್ಟ ಮಾದರಿಯ “ಸೂಪರ್ ಎಲಾಸ್ಟಿಕ್” ಅಥವಾ (ಒಂದು ಬಗೆಯ) “ಸ್ಪ್ರಿಂಗ್” ಟೈರುಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಗಾಳಿಯ ಬದಲು “ಯಾಂತ್ರೀಕೃತ ಸ್ಪ್ರಿಂಗ್” ಗಳ ಪ್ರಯೋಗವಾಗಿಲ್ಲ. ಬದಲಿಗೆ ಸ್ಪ್ರಿಂಗ್ ನಂತೆ ತಕ್ಕಮಟ್ಟಿಗೆ ವರ್ತಿಸಬಲ್ಲ SMA ಮಾದರಿಯ ನಿಕ್ಕೆಲ್   ಟೈಟಾನಿಯಮ್ (NiTi) ಮಿಶ್ರಲೋಹದ ತಂತಿಗಳನ್ನು ಉಪಯೋಗಿಸಿದ್ದಾರೆ.

ಏನೀ SHAPE MEMORY ALLOY (SMA)?

S.M.A – ಜೀವ ಇಲ್ಲ ಆದರೆ ಜೀವಿಗಳನ್ನು ಮೀರಿಸುವಂತಹ ನೆನಪಿನ ಶಕ್ತಿಯಿದೆ. ಆಡಿಸಿ, ಬೀಳಿಸಿ, ಬಗ್ಗಿಸಿ, ಏನೇ ಮಾಡಿ, ಎಷ್ಟೇ ವಿರೂಪಗೊಳಿಸಿ   ಉಹೂಂ…!   ತಮ್ಮತನವನ್ನು ಬಿಡಲಾರವು. ಆದರೆ ಮೊಂಡುತನವಿಲ್ಲ…ಅಸಾಧಾರಣ ಸಹನೆ ಇದೆ. ಯಾವ ಪರಿಸ್ಥಿತಿಗೆ ಬೇಕಾದರೂ ಹೊಂದಿಕೊಳ್ಳಬಲ್ಲವು. ಒಮ್ಮೆ ಒಂದು ರೂಪ ನೀಡಿ ಹೀಗಿರುವಂತೆ ನಿರ್ದೇಶಿಸಿದರೆ ಮುಗಿಯಿತು. ನಂತರ ಅದೇ ವೇದ ವಾಕ್ಯ…! (ನಿರ್ದೇಶನ ಎಂದರೆ ನಿರ್ದಿಷ್ಟ ಉಷ್ಣಾಂಶದ ಮೂಲಕ ಅವುಗಳ ಹರಳಿನ ಸಂರಚನೆಯನ್ನು ( Crystal Structure) ಬದಲಿಸುವುದು ಎಂದು.) ನಂತರ ಎಷ್ಟೇ ಬಲ ಪ್ರಯೋಗಿಸಿ, ಹೇಗೆ ವಿರೂಪ ಗೊಳಿಸಿದರೂ, ಸ್ವಲ್ಪ ಶಾಖ ನೀಡಿದಾಕ್ಷಣ ಮತ್ತೆ ತಮ್ಮ ಮೂಲರೂಪಕ್ಕೆ (ನೆನೆಪಿಟ್ಟುಕೊಂಡಂತೆ) ಮರಳುವವು. ಅದಕ್ಕೆ ಇವುಗಳಿಗೆ ಈ ಹೆಸರು SHAPE MEMORY ALLOY.

ಸಾಮಾನ್ಯವಾಗಿ ಕಾಣುವ ಕಬ್ಬಿಣದ ತಂತಿಯನ್ನು ಬಲ ಪ್ರಯೋಗಿಸಿ ಒಮ್ಮೆ ಬಗ್ಗಿಸಿದರೆ ಅದು ತನ್ನ ಮೂಲರೂಪವನ್ನು ಕಳೆದುಕೊಂಡು ಹೊಸದಾದ ವಿರೂಪಗೊಂಡ ಸ್ಥಿತಿಯಲ್ಲಿಯೇ ಶಾಶ್ವತವಾಗಿ ಉಳಿಯುವುದು. ಆದರೆ S.M.A ಇದಕ್ಕೆ ತದ್ವಿರುದ್ಧ. ಮೂಲರೂಪಕ್ಕೆ ಮರಳುವ ಸಾಮರ್ಥ್ಯವೇ ಇವನ್ನು ವಿಭಿನ್ನವಾಗಿಸಿರುವುದು ಮತ್ತು ಲೆಕ್ಕವಿಲ್ಲದಷ್ಟು ಹೊಸ ತಂತ್ರಜ್ಞಾನಗಳಲ್ಲಿ ಬಳಸಲು ಸಹಕರಿಸುತ್ತಿರುವುದು. NiTi -  ಇದೇ ಪ್ರಬೇಧಕ್ಕೆ ಸೇರಿದ ಒಂದು ಅತ್ಯಂತ ಉಪಯುಕ್ತ ವಸ್ತು.

“ಸೂಪರ್ ಎಲಾಸ್ಟಿಕ್ ಟೈರ್” ನ ವಿಶೇಷತೆ, ವಿಭಿನ್ನತೆ ಇರುವುದು ಎರಡು ಸಂಗತಿಗಳಲ್ಲಿ. ಮೊದಲನೆಯದು ಉಪಯೋಗಿಸಿರುವ ತಂತಿ NiTi ಬಗೆಯ ಮಿಶ್ರಲೋಹದ್ದು ಮತ್ತು ಮೂಲರೂಪಕ್ಕೆ ಸಾಮಾನ್ಯ ವಾತಾವರಣದ ಉಷ್ಣಾಂಶದಲ್ಲೂ (23   25 ಡಿಗ್ರಿ ಸೆಲ್ಷಿಯಸ್) ಸಹ ವಿರೂಪ ಸ್ಥಿತಿಯಿಂದ ಮೂಲರೂಪಕ್ಕೆ ತನ್ನಿಂತಾನೆ ಹಿಂದಿರುಗಲು ಸಾಧ್ಯ.

ಎರಡನೆಯದು ವಿನ್ಯಾಸ ಚಕ್ರದ ರಿಮ್ ಗೆ ಸುಮ್ಮನೆ ತಂತಿಗಳನ್ನು ಅಳವಡಿಸುವುದಿಲ್ಲ. ಒಂದಿಂಚಿನಲ್ಲಿ ಎಷ್ಟು ತಂತಿಗಳಿರಬೇಕು ? ಎರಡು ತಂತಿಗಳ ನಡುವಿನ ಅಂತರ ಎಷ್ಟಿರಬೇಕು ? ಎರಡನ್ನು ಬೆಸೆಯುವಂತೆ ಸುರುಳಿ ಹೇಗೆ ಸುತ್ತಿರಬೇಕು ? ಎರಡು ಸುರುಳಿಗಳ ನಡುವಿನ ಅಂತರ ಎಷ್ಟಿರಬೇಕು ? ಹತ್ತು ಹಲವು ಸಂಗತಿಗಳು…. ಇದು ಇಂಜಿನಿಯರ್ ಗಳ ಕೆಲಸ. ಸೂಕ್ತ ಅಂಕಿ  ಸಂಖ್ಯೆಗಳಿಗೆ ತಲುಪಲು ನೂರಾರು ಪುಟಗಳ ಲೆಕ್ಕವಿರುತ್ತದೆ. ಮೊದಲ ಬಗೆಯ ತಂತಿಗಾಲಿಯ ವಿನ್ಯಾಸವನ್ನು ಮುಗಿಸುವಷ್ಟರಲ್ಲಿ ತಂತ್ರಜ್ಞರು ದಶಕಗಳನ್ನೇ ಕಳೆದಿದ್ದಾರೆ. ಪುರಸ್ಕಾರ ಎಂಬಂತೆ 2019ರಲ್ಲಿ ಪೇಟೆಂಟ್ ಗಳೂ ಸಹ ದೊರೆತಿವೆ.

ತಗ್ಗು ದಿನ್ನೆಯ ಮೇಲೆ ಚಲಿಸಿದಾಗ, ತಂತಿಗಳು ವಿರೂಪ ಗೊಳ್ಳುವವು ಮತ್ತು ಕ್ಷಣ ಮಾತ್ರವೂ ತಡವಿಲ್ಲದೆ ಮೂಲರೂಪಕ್ಕೆ ಹಿಂದಿರುಗುವವು. ಹೆಚ್ಚಿನ ಒತ್ತಡ ಮತ್ತು ಎಳೆತವನ್ನು ಸಹಸಬಲ್ಲುವಾದ್ದರಿಂದ ಈ ಹೆಸರು “ಸೂಪರ್ ಎಲಾಸ್ಟಿಕ್ ಟೈರ್”. ಟನ್ ಗಟ್ಟಲೆ ಭಾರವನ್ನು ಹೊರಬಲ್ಲವು ಮತ್ತು ಭವಿಷ್ಯದ ರೋವರ್ ಯೋಜನೆಗಳಿಗೆ ಈ ಬಗೆಯ ಚಕ್ರಗಳನ್ನೇ ಬಳಸುಲು ಯೋಚಿಸಲಾಗಿದೆ. ಎಲ್ಲಿ ಬೇಕಾದರೂ ಅಡ್ಡಿಯಿಲ್ಲದೆ ಚಲಿಸಬಲ್ಲವು   ಸಾಮಾನ್ಯ ಟೈರುಗಳಿಗಿಂತ ಹೆಚ್ಚು ಸಕ್ಷಮ. ಬೆಲೆ ಕೊಂಚ ದುಬಾರಿ..ಅಷ್ಟೆ!

” ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತ,

ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡಿ,

ಕೆಲವಂ ಸಜ್ಜನಸಂಗದಿಂದಂ ಅರಿಯಲ್ ಸರ್ವಜ್ಞನಪ್ಪಂ ನರಂ”

ಸೋಮೇಶ್ವರ ಶತಕ

ಪ್ರಸ್ತುತ ಸುದ್ದಿಯಲ್ಲಿರಲು ಕಾರಣ ನಾಸಾದವರು ಈ ಬಗೆಯ ಹಲವು ತಂತ್ರಜ್ಞಾನವನ್ನು ಇತರರಿಗೆ (ಷರತ್ತು ಬದ್ದ ನಿಯಮಗಳೊಂದಿಗೆ) ನೀಡಲು ಮುಂದಾಗಿದ್ದಾರೆ. ಹೊಸದಾಗಿ ಮತ್ತೆ ನಾವು ಸಂಶೋಧನೆ ಮಾಡುವುದರ ಅಗತ್ಯವಿಲ್ಲ. ಬದಲಾಗಿ ಅವರ ಪರಿಶ್ರಮದ ಎಲ್ಲಾ ಸಂಶೋಧನಾ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವುದರಿಂದ ಪರವಾನಗಿ ಪಡೆದು ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಳ್ಳಬಹುದು. ಇದು ಉಚಿತ ಕಾರ್ಯ ಅಲ್ಲವೇ?

ಬಾಹ್ಯಾಕಾಶದಲ್ಲಿ ಎರಡನೆ ಅವಕಾಶ ಇರುವುದಿಲ್ಲ. ಒಂದು ಬಾರಿ ತೊಂದರೆಗೆ ಸಿಲುಕಿದರೆ ಮತ್ತೆ ಹೋಗಿ ರಿಪೇರಿ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ಅನ್ಯಗ್ರಹಕ್ಕೆಂದು ರಚಿತವಾಗಿರುವ “ಸೂಪರ್ ಎಲಾಸ್ಟಿಕ್ ಟೈರ್” ತಂತ್ರಜ್ಞಾನ ಅತ್ಯಂತ ವಿಶ್ವಾಸಾರ್ಹ..! ಮತ್ತು ಚಿಂತೆಯಿಲ್ಲದೆ ಭೂಮಿಯಲ್ಲಿ ವಾಹನದ ಗಾಲಿಗಳಾಗಿಯೂ ಸಹ ಬಳಸಬಹುದು.

ಒಮ್ಮೆ ಯೋಚಿಸಿ ದಿನನಿತ್ಯ ಎಷ್ಟು ವಾಹನಗಳು, ಎಷ್ಟು ಗಾಲಿಗಳು ಬಿಕರಿಯಾಗುತ್ತವೆ. ಹೆದ್ದಾರಿ ಸಂಚಾರಕ್ಕೆ ಒಂದು, ಕೆಸರು ಮಾರ್ಗಕ್ಕೆ ಒಂದು, ಗುಡ್ಡ ಗಾಡು ಪ್ರದೇಶಕ್ಕೆ ಇನ್ನೊಂದು, ಮರುಭೂಮಿಗೆ ಸಂಚಾರಕ್ಕೆ ಮತ್ತೊಂದು…..ಬಗೆ ಬಗೆಯ ಗಾಲಿಗಳು ಬೇಕು. ಎಲ್ಲಾ ಅಗತ್ಯಗಳನ್ನು ಒಂದೇ ಬಗೆಯ ಗಾಲಿ ಈ “ಸೂಪರ್ ಎಲಾಸ್ಟಿಕ್ ಟೈರ್” ಪೂರೈಸಬಲ್ಲುದು…! ನಮ್ಮ ಸಾಮಾನ್ಯ ಕಾರು ಎಲ್ಲೆಡೆಯೂ ಸಂಚರಿಸಬಲ್ಲುದು. ಸ್ಟಾರ್ಟ್ ಅಪ್ ಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ದೊಡ್ಡ ಮಾರುಕಟ್ಟೆ ಲಭ್ಯವಿದೆ…! ಪ್ರಯತ್ನಿಸ ಬಹುದಲ್ಲವೇ..!

ಬಾಹ್ಯಾಕಾಶ ಯೋಜನೆಗಳು ಸಾವಿರಾರು ಕೋಟಿಯನ್ನು ಬೇಡುವಂತಹವು, ದಶಕಗಳ ಸಂಶೋಧನೆಯನ್ನು ಒಳಗೊಂಡಿರುವಂತಹವು. ಕೇವಲ ಅನ್ಯಗ್ರಹಗಳಿಗೆ ಸೀಮಿತವಾಗದೆ, ಭೂಮಿಯಲ್ಲೂ ಜನಜೀವನ ಸುಧಾರಿಸಲು ಸಹಕರಿಸುವಂತಾಗುತ್ತಿರುವುದು ಸಂತಸದ ಮತ್ತು ಸಮಾಧಾನದ ಸಂಗತಿ ಅಲ್ಲವೇ..!

*ಜಲಸುತ

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

Categories
Tech

ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಒನ್‌ ಪ್ಲಸ್ 9 ಪ್ರೊ..! ವಿಶೇಷತೆಗಳೇನು..?

 ನವ ದೆಹಲಿ : ಒನ್‌ ಪ್ಲಸ್ 9 ಪ್ರೊ ಈಗ ಭಾರತದ ,ರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಒನ್‌ ಪ್ಲಸ್ 9, ಒನ್‌ ಪ್ಲಸ್ 9 ಆರ್, ಮತ್ತು ಒನ್‌ ಪ್ಲಸ್ ವಾಚ್ ಜೊತೆಗೆ ಇತ್ತೀಚಿನ ಒನ್‌ ಪ್ಲಸ್ ಫ್ಲ್ಯಾಗ್‌ ಶಿಪ್ ಅನ್ನು ಕಳೆದ ವಾರ ಬಿಡುಗಡೆ ಮಾಡಲಾಗಿತ್ತು.

ಒನ್‌ ಪ್ಲಸ್ 9 ಪ್ರೊ 8 ಜಿಬಿ ಮತ್ತು 12 ಜಿಬಿ ರ್ಯಾಮ್ ಆಯ್ಕೆಗಳಲ್ಲಿ ಲಭ್ಯವಿದೆ. ಮತ್ತು ಮಾರ್ನಿಂಗ್ ಮಿಸ್ಟ್, ಪೈನ್ ಗ್ರೀನ್ ಮತ್ತು ಸ್ಟೆಲ್ಲಾರ್ ಬ್ಲ್ಯಾಕ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 SoC ಯೊಂದಿಗೆ ಲಭ್ಯವಿದೆ ಮತ್ತು ಡೈನಾಮಿಕ್ ರಿಫ್ರೆಶ್ ರೇಟ್ ಗಳನ್ನು ನೀಡುವ ಸ್ಮಾರ್ಟ್ 120Hz ವೈಶಿಷ್ಟ್ಯದೊಂದಿಗೆ  AMOLED ಡಿಸ್ಪ್ಲೇ ಹೊಂದಿದೆ. ಒನ್‌ ಪ್ಲಸ್ 9 ಪ್ರೊ ಕ್ವಾಡ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ.

ಓದಿ : ಉ.ಕನ್ನಡ ಕರಾವಳಿಯ ಬಲ ಹೆಚ್ಚಿಸಿದ ಎರಡು ಫಾಸ್ಟ್ ಪಟ್ರೋಲ್ ಹಡಗುಗಳು

ಭಾರತದಲ್ಲಿ ಒನ್‌ ಪ್ಲಸ್ 9 ಪ್ರೊ ಬೆಲೆ, ಲಭ್ಯತೆ, ಆಫರ್ ಗಳೆನು..?

ಭಾರತದಲ್ಲಿ ಒನ್‌ ಪ್ಲಸ್ 9 ಪ್ರೊ 8 ಜಿಬಿ ರ್ಯಾಮ್ + 128 ಜಿಬಿ ಸ್ಟೋರೇಜ್  64,999 ರೂ ಆಗಿದೆ. 12 ಜಿಬಿ ರ್ಯಾಮ್ + 256 ಜಿಬಿ ಸ್ಟೋರೇಜ್  69,999 ರೂ. ನಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಗಳು ಅಮೆಜಾನ್ ಮತ್ತು  OnePlus.in ಮೂಲಕ ಲಭ್ಯವಿದೆ. ಇನ್ನು, ಒನ್‌ ಪ್ಲಸ್ ಎಕ್ಸ್ ‌ಕ್ಲೂಸಿವ್ ಆಫ್‌ ಲೈನ್ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ.

ಒನ್‌ ಪ್ಲಸ್ 9 ಪ್ರೊ ವಿಶೇಷತೆಗಳೆನು..?

ಡ್ಯುಯಲ್-ಸಿಮ್ (ನ್ಯಾನೊ) ಒನ್‌ ಪ್ಲಸ್ 9 ಪ್ರೊ  6.7-ಇಂಚಿನ ಕ್ಯೂ ಎಚ್‌ ಡಿ + (1,440×3,216 ಪಿಕ್ಸೆಲ್‌ಗಳು) ಫ್ಲೂಯಿಡ್ ಡಿಸ್ಪ್ಲೇ 2.0 ಅಮೋಲೆಡ್ ಡಿಸ್ಪ್ಲೇ ಯನ್ನು ಸ್ಮಾರ್ಟ್ 120 ಹೆಚ್ ಡಿ ವೈಶಿಷ್ಟ್ಯದೊಂದಿಗೆ 1Hz ನಡುವಿನ ರಿಫ್ರೆಶ್ ರೇಟ್ ನ್ನು ಕ್ರಿಯಾತ್ಮಕವಾಗಿ ಬದಲಾಯಿಸುತ್ತದೆ. ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 SoC ಅನ್ನು ಹೊಂದಿದೆ, ಜೊತೆಗೆ 12GB ವರೆಗೆ LPDDR 5 RAM ಅನ್ನು ಹೊಂದಿದೆ.

ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಇದ್ದು, 48 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 789 ಪ್ರೈಮರಿ ಸೆನ್ಸಾರ್ F / 1.8 ಲೆನ್ಸ್ ಹೊಂದಿದೆ, 50 ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್ 766 ಸೆಕೆಂಡರಿ ಸೆನ್ಸಾರ್‌ ನೊಂದಿಗೆ ಅಳವಡಿಸಲಾಗಿದೆ, ಇದು ಅಲ್ಟ್ರಾ-ವೈಡ್-ಆಂಗಲ್ F/ 2.2 ಫ್ರೀ ಫಾರ್ಮ್ ಲೆನ್ಸ್ ಅನ್ನು ಹೊಂದಿದೆ. ಕ್ಯಾಮೆರಾ ಸೆಟಪ್ 8 ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರ್ ಮತ್ತು 2 ಮೆಗಾಪಿಕ್ಸೆಲ್ ಮೋನೊಕ್ರೋಮ್ ಸೆನ್ಸಾರ್ ನನ್ನು ಸಹ ಹೊಂದಿದೆ. ಇನ್ನು, ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ  ಸಹ ಒಳಗೊಂಡಿದೆ.

ಒನ್‌ ಪ್ಲಸ್ 9 ಪ್ರೊ 128 ಜಿಬಿ ಮತ್ತು 256 ಜಿಬಿ ಯು ಎಫ್‌ ಎಸ್ 3.1 ಸ್ಟೋರೇಜ್ ಆಯ್ಕೆಗಳೊಂದಿಗೆ ಬರುತ್ತದೆ. ಫೋನ್ 5 ಜಿ, 4 ಜಿ ಎಲ್ ಟಿ ಇ, ವೈ-ಫೈ 6, ಬ್ಲೂಟೂತ್ ವಿ 5.2, ಜಿಪಿಎಸ್ / ಎ-ಜಿಪಿಎಸ್, ಎನ್ ಎಫ್ ಸಿ, ಮತ್ತು ಕನೆಕ್ಟಿವಿಟಿ ಮುಂಭಾಗದಲ್ಲಿ ಯುಎಸ್ ಬಿ  ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ಇದು ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ನನ್ನು ಒಳಗೊಂಡಿದೆ.  4,500mha ಬ್ಯಾಟರಿಯನ್ನು ಹೊಂದಿ ನೋಡಲು ಅತ್ಯಾಕರ್ಷಕವಾಗಿದೆ.

ಓದಿ : ಕರ್ತವ್ಯ ಲೋಪದ ಹಿನ್ನೆಲೆ: ತಿಕೋಟಾ ಮೊರಾರ್ಜಿ ವಸತಿ ಶಾಲೆ ಪ್ರಾಚಾರ್ಯೆ, ವಾರ್ಡನ್ ಗೆ ನೋಟಿಸ್

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

Categories
Tech

ಕೌಶಲ್ಯ ಅಗತ್ಯವಿರುವ ಆನ್‌ಲೈನ್‌ ಗೇಮಿಂಗ್‌ ಜೂಜಾಟವಲ್ಲ

ಆನ್‌ಲೈನ್‌ ಗೇಮಿಂಗ್‌ ಭಾರತದಲ್ಲಿ  ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ  ಒಂದಾಗಿದೆ. 4ಜಿಯೊಂದಿಗೆ ಹೆಚ್ಚಿನ ಬ್ಯಾಂಡ್‌ ವಿಡ್ತ್ ನಿಂದ ಉತ್ತೇಜಿಸಲ್ಪಟ್ಟಿದೆ ಮತ್ತು ಸ್ಮಾರ್ಟ್‌ಫೋನ್‌ ಕುಶಾಗ್ರಮತಿಯಿಂದ ಮುನ್ನಡೆಯುತ್ತಿದೆ. ಬಹುಪಾಲು ಭಾರತೀಯರು ಸಾಮಾನ್ಯವಾಗಿ ತಮ್ಮ ಸಾಧನದಲ್ಲಿ ಪ್ರತಿದಿನ ಒಂದು ಗಂಟೆಗೂ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

ಉನ್ನತ (ಒಟಿಟಿ)ಮನರಂಜನಾ ಪ್ಲಾಟ್‌ಫಾರ್ಮ್ ಗಳಲ್ಲಿ  ಇತರರಿಗಾಗಿ ಖರ್ಚು ಮಾಡಿದ ಸಮಯ ಸರಾಸರಿ 45 ನಿಮಿಷಗಳಿಗಿಂತ ಹೆಚ್ಚಿನದು, ಆನ್‌ಲೈನ್‌ ಜಾಗದಲ್ಲಿ  ಒಬ್ಬರು ಆರಿಸಿಕೊಳ್ಳಬಹುದಾದ ಹೆಚ್ಚಿನ ಸಂಖ್ಯೆಯ ಆಟಗಳಿವೆ, ಅವಕಾಶದ ಆಟಗಳಲ್ಲಿ “ಅವಕಾಶ’  ಮತ್ತು “ಕೌಶಲ್ಯ’ದ ಡೈಸ್‌ ಪಾತ್ರವನ್ನು ನಿರ್ವಹಿಸುವುದು ಅಥವಾ ಕಾರ್ಡ್‌ ಸೆಳೆಯುವುದು ಮತ್ತು ಉಳಿದವುಗಳನ್ನು  ಅವರ ಅಥವಾ ಅವಳ ಅದೃಷ್ಟಕ್ಕೆ ಬಿಡುವುದು ಅವರು ನಗದು ಬಹುಮಾನವನ್ನು  ಗೆಲ್ಲುತ್ತಾರೋ ಇಲ್ಲವೋ ಎಂಬುದನ್ನು ನಿರ್ಧರಿಸಲು ಎಲ್ಲರೂ ಮಾಡಬೇಕಾಗಿರುವುದು ಪ್ರಯತ್ನವಷ್ಟೇ.

ಆಟದಲ್ಲಿ  ಯಾವುದೇ ಕೌಶಲ್ಯ, ತಂತ್ರ ಅಥವಾ ಪ್ರತಿಭೆಯ ಒಳಗೊಳ್ಳುವಿಕೆ ಇಲ್ಲ, ಇದು ವ್ಯಕ್ತಿಯು ಆಟದಲ್ಲಿ  ಗೆಲ್ಲುತ್ತಾನೆಯೇ ಇಲ್ಲವೋ ಎಂಬುದನ್ನು ನಿರ್ಧರಿಸುತ್ತದೆ, ಈ ಆಟಗಳು ಆಟಗಾರರಿಗೆ “ಅವಕಾಶ”ದ ಆಯ್ಕೆಯನ್ನು ನೀಡುತ್ತವೆ, ಅಲ್ಲಿ ಅವರು ತ್ವರಿತ ಲಾಭವನ್ನು ನೀಡುವ ಬಗ್ಗೆ ಜೂಜಾಟ ನಡೆಸುತ್ತಾರೆ. ಆದ್ದರಿಂದ ಇಲ್ಲಿ  ಉದ್ಭವಿಸುವ ಪ್ರಶ್ನೆ  ಏನೆಂದರೆ ಈ ವರ್ಗದ ಆಟಗಳು ಆನ್‌ಲೈನ್‌ ಗೇಮಿಂಗ್‌ ಆಗಿ ಅರ್ಹತೆ ಪಡೆಯುತ್ತವೆಯೇ?  ಆಟವು ಕೌಶಲ್ಯವನ್ನು ಒಳಗೊಂಡಿಲ್ಲದಿದ್ದರೆ, ಅದು ಆಟವಾಗಿ ಅರ್ಹತೆ ಪಡೆಯಬಾರದು ಎಂದು ಸಾಮಾನ್ಯರು ಸುಲಭವಾಗಿ ಹೇಳಬಹುದು.

ಆದ್ದರಿಂದ ಕೌಶಲ್ಯದ ಆಟ ಮತ್ತು ಅವಕಾಶದ ಆಟದ ನಡುವಿನ ಮೂಲ ವ್ಯತ್ಯಾಸವೇನು?

  • ಕೌಶಲ್ಯದ ಆಟಗಳು ಯಶಸ್ಸನ್ನು ಮುಖ್ಯವಾಗಿ ಆಟಗಾರನ ಉನ್ನತ ಜ್ಞಾನ ತರಬೇತಿ, ಗಮನ, ಅನುಭವ ಮತ್ತು ಮನೋಭಾವದ ಮೇಲೆ ಅವಲಂಬಿತವಾಗಿರುವ ಆಟಗಳನ್ನು  ಉಲ್ಲೇಖೀಸುತ್ತದೆ.
  • ಕೌಶಲ್ಯವು ಆಟದಲ್ಲಿ ಅವಕಾಶದ ಅಂಶಗಳಲ್ಲಿ  ಪ್ರಾಬಲ್ಯ ಹೊಂದಿದ್ದರೆ, ಅದನ್ನು ಕೌಶಲ್ಯದ ಆಟವೆಂದು ಪರಿಗಣಿಸಲಾಗುತ್ತದೆ  ಮತ್ತು ಪ್ರತಿಯಾಗಿ
  • ತರಬೇತಿ, ಚುರುಕುತನ, ಮೆಮೊರಿ ಮತ್ತು ಕಾರ್ಯತಂತ್ರದಂತಹ ಕೌಶಲ್ಯಗಳನ್ನು ಒಳಗೊಂಡಿರುವ ಆಟಗಳು ಜೂಜಾಟವಲ್ಲ. ಕೌಶಲ್ಯದ ಆಟಗಳಿಗೆ ಉತ್ತಮ ಜ್ಞಾನ, ತರಬೇತಿ, ಗಮನ, ಅನುಭವ, ಆಟಗಾರನ ಚಾತುರ್ಯದ ಅಗತ್ಯವಿರುತ್ತದೆ. ಆದರೆ ಅವಕಾಶದ ಆಟಗಳಿಗೆ ಅದೃಷ್ಟದ ಅವಕಾಶ ಬೇಕು.

ಭಾರತದಲ್ಲಿ  ಬೆಟ್ಟಿಂಗ್‌ ಮತ್ತು ಜೂಜಾಟದ ಕಾನೂನುಗಳನ್ನು  ರಾಜ್ಯಗಳು ಪ್ರತ್ಯೇಕವಾಗಿ ನಿಯಂತ್ರಿಸುತ್ತವೆ. ಈ ಕಾನೂನುಗಳು ಸಾರ್ವಜನಿಕ ಜೂಜಿನ ಕಾಯ್ದೆ, 1867ರ ನಿಬಂಧನೆಗಳನ್ನು ಆಧರಿಸಿವೆ. ಇದು ಪ್ರಾಚೀನವಾಗಿದೆ. ಅದಾಗ್ಯೂ, ಈ ಕಾನೂನುಗಳ ವಿಶಾಲ ಪರಿಣಾಮಗಳನ್ನು  ಗಮನಿಸಿದರೆ ಅವು ಆನ್‌ಲೈನ್‌ ಗೇಮಿಂಗ್‌ ಮತ್ತು ಇ-ಕ್ರೀಡೆಗಳನ್ನು ಸಹ ಒಳಗೊಂಡಿರುತ್ತದೆ. ಮತ್ತು ಇದು ಅದರ ಅನುಷ್ಠಾನದಲ್ಲಿ ಒಟ್ಟಾರೆ ಗೊಂದಲ ಮತ್ತು ಅನಿಯಂತ್ರಿತತೆಗೆ ಕಾರಣವಾಗಿದೆ ಮತ್ತು  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಏಕರೂಪದ ನೀತಿಯಿಲ್ಲದೆ ನಿಬಂಧನೆಗಳನ್ನು  ವ್ಯಾಖ್ಯಾನಿಸಿವೆ.

ದೇಶದ ಹಲವು ರಾಜ್ಯಗಳು ಇದು ಕೌಶಲ್ಯ ಅಥವಾ ಅವಕಾಶ ಎಂಬುದನ್ನು ಲೆಕ್ಕಿಸದೆ ಆನ್‌ಲೈನ್‌ ಗೇಮಿಂಗ್‌ ಮೇಲೆ ನಿಷೇಧವನ್ನು ಹೇರಿದೆ. ಇದನ್ನು ಅನೇಕ ಉತ್ತಮ ನಡೆಯೆಂದು ಪರಿಗಣಿಸಲಾಗುತ್ತದೆ. ಆನ್‌ಲೈನ್‌ ಗೇಮಿಂಗ್‌ಗಾಗಿ ಸ್ಪಷ್ಟ ಮತ್ತು ಅನುಕೂಲಕರ ಕೇಂದ್ರ ನೀತಿಯ ಸನ್ನಿಹಿತ ಅಗತ್ಯವನ್ನು  ಇದು ಗಮನಕ್ಕೆ ತರುತ್ತದೆ, ಅದು ಅವಕಾಶದ ಆಟಗಳಿಂದ ಕೌಶಲ್ಯ ಗೇಮಿಂಗ್‌ ಅನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ ಮತ್ತು  ಗುರುತಿಸುತ್ತದೆ. ಆನ್‌ಲೈನ್‌ ಗೇಮಿಂಗ್‌ನ ವ್ಯಾಪ್ತಿ ಮತ್ತು ಕಾನೂನುಬದ್ಧತೆಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವ ಕೇಂದ್ರ ನಿಯಂತ್ರಕ ಚೌಕಟ್ಟಿನ ಕೆಲಸವು ಸಮಯದ ಅಗತ್ಯವಾಗಿದೆ.

ವರದಿಯ ಪ್ರಕಾರ, ಇ- ಕ್ರೀಡೆ ಎಲ್ಲಾ ಆನ್‌ಲೈನ್‌ ಗೇಮಿಂಗ್‌ ಬಳಕೆದಾರರಲ್ಲಿ ಸುಮಾರು 4% ರಷ್ಟು ಮತ್ತು ಹಣಕಾಸು ವರ್ಷದಲ್ಲಿ  2020ರ ಒಟ್ಟಾರೆ ಆನ್‌ಲೈನ್‌ ಗೇಮಿಂಗ್‌ ಮಾರುಕಟ್ಟೆಯಿಂದ ಒಟ್ಟು ಆದಾಯದ 9% ಕ್ಕಿಂತ ಹೆಚ್ಚು. ಇತ್ತೀಚೆಗೆ, ಭಾರತೀಯ ಇ- ಕ್ರೀಡೆ ಮಾರುಕಟ್ಟೆಯಲ್ಲಿ  ವಿದೇಶಿ ಸಂಬಂಧಗಳು ಹೊಸ ಭಾರತೀಯ ಪ್ಲಾಟ್‌ಫಾರ್ಮ್ಗಳನ್ನು ಅವಮಾನಗೊಳಿಸಿವೆ. ಈ ಆಟಗಳು ವಿಕಸನಗೊಂಡಿವೆ. ಮತ್ತು  ತಮ್ಮನ್ನು ತಾವು ಪ್ರತ್ಯೇಕಗೊಳಿಸಿಕೊಂಡಿವೆ. ವಿರಾಮ ಚಟುವಟಿಕೆಗಾಗಿ ಪ್ರಾರಂಭವಾದದ್ದು  ಇಂದು ಕ್ರೀಡೆಯ ಮತ್ತೊಂದು ಆಯಾಮವಾಗಿದೆ.  ಇ-ನ್ಪೋರ್ಟ್ಸ್ ಇಂಟರ್ನೆಟ್‌ ಪ್ಲಾಟ್‌ಫಾರ್ಮ್ಗಳಲ್ಲಿ  ಆಡಲಾಗುತ್ತದೆ. ವ್ಯಕ್ತಿಗಳು ಮತ್ತು ತಂಡಗಳಾಗಿ ಸ್ಪರ್ಧಿಸುತ್ತವೆ. ಭಾರತದಲ್ಲಿ  ಸುಮಾರು 17-20 ಮಿಲಿಯನ್‌ ಇ-ನ್ಪೋರ್ಟ್ಸ್  ಆಟಗಾರರಿದ್ದಾರೆ ಎಂದು ಅಂದಾಜಿಸಲಾಗಿದೆ. ಆನ್‌ಲೈನ್‌ ಗೇಮಿಂಗ್‌ ಜಾಗದಲ್ಲಿ  ಸುಮಾರು 885 ಮಿಲಿಯನ್‌ ಡಾಲರ್‌ ಮೌಲ್ಯದ 400 ಸ್ಟಾರ್ಟ್‌ ಅಪ್‌ಗಳಿವೆ ಮತ್ತು ಇವುಗಳಲ್ಲಿ  71 ಕರ್ನಾಟಕದಲ್ಲಿ  ನೋಂದಾಯಿಸಲಾಗಿದೆ. ಆನ್‌ಲೈನ್‌ ಗೇಮಿಂಗ್‌ ಮಾರುಕಟ್ಟೆಗೆ ಬೇಕಾಗಿರುವ ಸಾಫ್ಟ್ ವೇರ್‌ ವೇಗವಾಗಿ ಬೆಳೆಯುತ್ತಿರುವ ಕಾರಣ, ಮುಂಬರುವ ಹಣಕಾಸು ವರ್ಷದಲ್ಲಿ  40,000 ಹೊಸ ನೇರ ಉದ್ಯೋಗಗಳನ್ನು  ಸೃಷ್ಟಿಸುವ ನಿರೀಕ್ಷೆಯಿದೆ.

ಉದ್ಯಮದ ದೃಷ್ಟಿಯಿಂದ ಆನ್‌ಲೈನ್‌ ಗೇಮಿಂಗ್‌ ದೇಶದಲ್ಲಿ  ಭಾರೀ ಸಾಮರ್ಥ್ಯ ಹೊಂದಿರುವ ಸೂರ್ಯರಶ್ಮಿಯಂತೆ ಬೆಳಗುತ್ತಿರುವ ವಲಯವಾಗಿದೆ. ವಿಶೇಷವಾಗಿ ಕರ್ನಾಟಕದಲ್ಲಿ  ರಾಜ್ಯದ ಅಗಾಧವಾದ ಐಟಿ ಪರಾಕ್ರಮ ಮತ್ತು ರಾಜ್ಯದಿಂದ ಹೊರಹೊಮ್ಮುತ್ತಿರುವ ಹೆಚ್ಚಿನ ಸಂಖ್ಯೆಯ ಸ್ಟಾರ್ಟ್‌ – ಅಪ್‌ಗಳನ್ನು ನೀಡಲಾಗಿದೆ. ಆನ್‌ಲೈನ್‌ ಗೇಮಿಂಗ್‌ ಬ್ಯುಸಿನೆಸ್‌ನಲ್ಲಿನ ದೇಶೀಯ ಮತ್ತು ಕಡಲಾಚೆಯ ಸಂಸ್ಥೆಗಳಿಗೆ ಅಭಿವೃದ್ಧಿಯ ಅವಕಾಶಗಳನ್ನು ಉತ್ತೇಜಿಸುತ್ತದೆ.

ಇದನ್ನೂ ಓದಿ:ಅಪಾಯಕಾರಿ ತ್ಯಾಜ್ಯ ವಿಲೇವಾರಿಗೆ ಬ್ರೇಕ್ ಹಾಕಲು  ‘ಇ- ಮ್ಯಾನಿಫೆಸ್ಟ್’  ಸೂತ್ರ.. ಏನಿದು?

ಕೌಶಲ್ಯ ಆಧಾರಿತ ಆಟಗಳನ್ನು  ಕಾನೂನುಬದ್ಧವೆಂದು ಪರಿಗಣಿಸಬೇಕು ಮತ್ತು ಎಲ್ಲಾ  ಪ್ಲಾಟ್‌ಫಾರ್ಮ್ಗಳಲ್ಲಿ   ಅನುಮತಿಸಬೇಕಾಗುತ್ತದೆ. ಗೇಮಿಂಗ್‌ ಕೇವಲ ಆನ್‌ಲೈನ್‌ ಸೈಟ್‌ ಅನ್ನು ರಚಿಸುವ ಡೆವಲಪರ್‌ ಮತ್ತು ಜನರು ಬಂದು ಆಟಗಳಲ್ಲಿ  ಭಾಗವಹಿಸುವ ಬಗ್ಗೆ ಮಾತ್ರವಲ್ಲ. ಇದು ಈ ಮಾಧ್ಯಮಕ್ಕಾಗಿ ಈ ಉದ್ಯಮದ ಸುತ್ತಲೂ ಅಭಿವೃದ್ಧಿಪಡಿಸುವ ಬೃಹತ್‌ ಮೇಲಾಧಾರ ವ್ಯವಸ್ಥೆಯನ್ನು  ಹೊಂದಿದೆ.   ಉತ್ಪನ್ನವನ್ನು ಸಿದ್ಧಪಡಿಸುವ ಪ್ರಕಾಶಕರು ಇದ್ದಾರೆ, ಅಂತಹ ಹಲವಾರು ಸೃಷ್ಟಿಕರ್ತರು ತಮ್ಮ ಉತ್ಪನ್ನಗಳನ್ನು ಹೋಸ್ಟ್‌ ಮಾಡಲು ಅವರಿಗೆ ಸಹಾಯ ಮಾಡುವ ಸೇವಾ ವೇದಿಕೆಗಳಿವೆ ಮತ್ತು ಅವರು ಆದಾಯ ಮತ್ತು ಉಲ್ಬಣಗಳನ್ನು ಹಂಚಿಕೊಳ್ಳಲು ಒಂದು ವಿಧಾನವನ್ನು ರೂಪಿಸುತ್ತಾರೆ.

ಕೋಡಿಂಗ್‌ನಲ್ಲಿ  ತೊಡಗಿರುವ ಹಲವಾರು  ಡೆವಲಪರ್‌ಗಳೊಂದಿಗೆ ಪ್ರಕಾಶಕರು ಸ್ವತಃ ಕೆಲಸ ಮಾಡುತ್ತಾರೆ. ಅಂತಹ ಉತ್ಪನ್ನಗಳಿಗೆ ಕೌಶಲ್ಯ ಮತ್ತು ಪರೀಕ್ಷೆ ನಡೆಸಬೇಕಿದೆ. ಈ ಡೆವಲಪರ್‌ಗಳು, ಪ್ರಕಾಶಕರು ಮತ್ತು ಪ್ಲಾಟ್‌ ಫಾರ್ಮ್ಗಳ ಮೂಲಕ ನಂತರ ಮೊಬೈಲ್‌ ಮತ್ತು ಟೆಲಿಕಾಂ ಸೇವೆಗಳ ವಿತರಣಾ ಚಾನಲ್‌ಗ‌ಳ ಮೂಲಕ ಆದಾಯವನ್ನು  ಹೆಚ್ಚಿಸುತ್ತದೆ. ಆದ್ದರಿಂದ ಆನ್‌ಲೈನ್‌ ಗೇಮಿಂಗ್‌ನ ಬೆಳವಣಿಗೆಯು ಹಲವಾರು ಸಹ -ಸಂಬಂಧಿತ ಕ್ಷೇತ್ರಗಳ ಮೇಲೆ ಕ್ಯಾಸ್ಕೇಡಿಂಗ್‌ ಪರಿಣಾಮವನ್ನು ಬೀರುತ್ತದೆ. ಅಂದಾಜುಗಳ ಪ್ರಕಾರ ಆನ್‌ಲೈನ್‌ ಗೇಮಿಂಗ್‌ ಉದ್ಯಮದ ಬೆಳವಣಿಗೆಯು 2025ರ ವೇಳೆಗೆ ಸುಮಾರು 2 ಬಿಲಿಯನ್‌ ಡಾಲರ್‌ಗಳನ್ನು ತಲುಪುವ ನಿರೀಕ್ಷೆಯಿದೆ. ಆದ್ದರಿಂದ ಆನ್‌ಲೈನ್‌ ಉದ್ಯಮವು ಗಮನಾರ್ಹ ಉದ್ಯೋಗ ಸೃಷ್ಟಿಕರ್ತವಾಗಿದೆ. ಆನ್‌ಲೈನ್‌ ಗೇಮಿಂಗ್‌ ನೀತಿಯೊಂದಿಗೆ ಕರ್ನಾಟಕದಲ್ಲಿ ಗ್ರಹಿಕೆ ಸರಿಯಾಗಿದೆ ಮತ್ತು ಜೂಜಾಟ ಮತ್ತು  ಕೌಶಲ್ಯ ಆಧಾರಿತ ಗೇಮಿಂಗ್‌ ನಡುವೆ ಸ್ಪಷ್ಟ ವ್ಯತ್ಯಾಸವನ್ನು ಕಂಡು ಹಿಡಿಯುವುದು ಕಡ್ಡಾಯವಾಗಿದೆ.

ಪ್ರಕರಣದ ಕಾನೂನಿನ ಮೂಲಕ ನ್ಯಾಯಾಂಗವು ಈ ವಿಷಯದ ಬಗ್ಗೆ ಸ್ಪಷ್ಟತೆಯನ್ನು ನೀಡಲು ಪ್ರಯತ್ನಿಸುತ್ತದೆ. ಇದರಲ್ಲಿ  ದೊಡ್ಡ ಅನಿಶ್ಚಿತತೆ ಇದೆ ಮತ್ತು ಆದ್ದರಿಂದ ಆನ್‌ಲೈನ್‌ ಕೌಶಲ್ಯ ಗೇಮಿಂಗ್‌ ಉದ್ಯಮವನ್ನು ನಿಯಂತ್ರಿಸುವ ಅವಶ್ಯಕತೆಯಿದೆ.  ಆನ್‌ಲೈನ್‌ ನುರಿತ ಗೇಮಿಂಗ್‌ ಮತ್ತು ಜೂಜಾಟ ಮತ್ತು ಬೆಟ್ಟಿಂಗ್‌ ನಡುವೆ ಬಹಳ ವ್ಯತ್ಯಾಸವಿದೆ.  ಪ್ರಗತಿಪರ ರಾಜ್ಯ ಸರಕಾರದ ನೀತಿಯು ಆನ್‌ಲೈನ್‌ ಗೇಮಿಂಗ್‌ ಕಂಪನಿಗಳ ಬೆಳವಣಿಗೆಗೆ ಪ್ರೋತ್ಸಾಹವನ್ನು  ನೀಡುತ್ತದೆ ಮತ್ತು ಕರ್ನಾಟಕದ ಐಟಿ ಲ್ಯಾಂಡ್‌ಸ್ಕೇಪ್‌ಗೆ ಹೊಸ ಆಯಾಯವನ್ನು ತರುತ್ತದೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

Categories
Tech

ಸ್ಯಾಮ್‌ ಸಂಗ್ ಗ್ಯಾಲಕ್ಸಿ  ‍F02, ಗ್ಯಾಲಕ್ಸಿ F12 ಬಿಡುಗಡೆಗೆ ಡೇಟ್ ಫಿಕ್ಸ್..!

ನವ ದೆಹಲಿ : ಸ್ಯಾಮ್‌ ಸಂಗ್ ಗ್ಯಾಲಕ್ಸಿ  ‍F02 ಮತ್ತು ಗ್ಯಾಲಕ್ಸಿ F12 ಏಪ್ರಿಲ್ 5 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿ ‌ತಿಳಿಸಿದೆ.

ಸ್ಯಾಮ್‌ ಸಂಗ್ ಗ್ಯಾಲಕ್ಸಿ F02 ಮತ್ತು ಗ್ಯಾಲಕ್ಸಿ F12 ಎರಡೂ ವಾಟರ್‌ ಡ್ರಾಪ್ ಡಿಸೈನ್ ಹೊಂದಿರುವ ಡಿಸ್ಪ್ಲೇ ಯೊಂದಿಗೆ ಲಭ್ಯವಾಗಲಿವೆ. ಗ್ಯಾಲಕ್ಸಿ  ‍F12 ಸಹ 90Hz ಡಿಸ್ಪ್ಲೇ ಮತ್ತು ಕ್ವಾಡ್ ರಿಯರ್ ಕ್ಯಾಮೆರಾಗಳೊಂದಿಗೆ ಅತ್ಯಾಕರ್ಷಕ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಮತ್ತೊಂದೆಡೆ, ಗ್ಯಾಲಕ್ಸಿ ‍F02  ಟ್ರೆಡಿಷನಲ್ 60 ಹೆಚ್ ಡಿ ಡಿಸ್ಪ್ಲೇ ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ಓದಿ : ಭರ್ಜರಿ ಖರೀದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 390 ಅಂಕ ಏರಿಕೆ, 14,804ಕ್ಕೆ ತಲುಪಿದ ನಿಫ್ಟಿ

ಏಪ್ರಿಲ್ 5 ರಂದು ಸ್ಯಾಮ್‌ ಸಂಗ್ ಗ್ಯಾಲಕ್ಸಿ F02 ಮತ್ತು ಗ್ಯಾಲಕ್ಸಿ F12 ಎರಡೂ ಸ್ಮಾರ್ಟ್ ಫೋನ್ ಗಳು ಭಾರತದಲ್ಲಿ ಮಧ್ಯಾಹ್ನ 12 ಗಂಟೆಗೆ ಬಿಡುಗಡೆಗೊಳ್ಳಲಿದೆ ಎಂದು ವರದಿಯಾಗಿದೆ.

ಸ್ಯಾಮ್‌ ಸಂಗ್ ಗ್ಯಾಲಕ್ಸಿ ‍F02 ವಿಶೇಷತೆಗಳೇನು..?

ಸ್ಯಾಮ್‌ ಸಂಗ್ ಗ್ಯಾಲಕ್ಸಿ F02 ಗಳು 6.5-ಇಂಚಿನ ಎಚ್‌ ಡಿ + ಇನ್ಫಿನಿಟಿ-ವಿ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 450 SoC ನಿಂದ ನಿಯಂತ್ರಿಸಲ್ಪಡುತ್ತದೆ. ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಸಹ ಒಳಗೊಂಡಿದೆ, ಇದನ್ನು 13 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಸೌಲಭ್ಯವನ್ನು ಹೊಂದಿದೆ. ಇದಲ್ಲದೆ, 5,000mAh ಬ್ಯಾಟರಿಯನ್ನು ಹೊಂದಿ ಅಕರ್ಷಕವಾಗಿದೆ.

ಸ್ಯಾಮ್‌ ಸಂಗ್ ಗ್ಯಾಲಕ್ಸಿ ‍F12 ವಿಶೇಷತೆಗಳೇನು..?

ಸ್ಯಾಮ್‌ ಸಂಗ್ ಗ್ಯಾಲಕ್ಸಿ ‍F12 90 ಹೆಚ್ ಡಿ ರಿಫ್ರೆಶ್ ರೇಟ್ ನೊಂದಿಗೆ 6.5-ಇಂಚಿನ ಎಚ್‌ ಡಿ + ಇನ್ಫಿನಿಟಿ-ವಿ ಡಿಸ್ಪ್ಲೇಯನ್ನು ಹೊಂದಿದೆ ಮತ್ತು 48 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ನೊಂದಿಗೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಗ್ಯಾಲಕ್ಸಿ F12 ಯು ಎಸ್ ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಅನ್ನು ಸಹ ಹೊಂದಿದೆ. ಇದಲ್ಲದೆ, ಫೋನ್ ಎಕ್ಸಿನೋಸ್ 850 SoC ಮತ್ತು 6,000mAh ಬ್ಯಾಟರಿಯಿಂದ ಕೂಡಿದೆ.

ಓದಿ : ಈಶ್ವರಪ್ಪ ದೂರು ಪ್ರಕರಣ: ಸಿಎಂ ಬಿಎಸ್ ವೈ ಬೆನ್ನಿಗೆ ನಿಂತ ಬಿಜೆಪಿ ಸಚಿವರು, ಶಾಸಕರು!

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

Categories
Tech

ಭಾರತದಲ್ಲಿ ಬಿಡುಗಡೆಗೊಂಡಿದೆ ಸ್ಯಾಮ್‌ ಸಂಗ್ ಗ್ಯಾಲಕ್ಸಿ s20 FE 5ಜಿ..! ವಿಶೇಷತೆಗಳೇನು..?

ನವ ದೆಹಲಿ :  ಸ್ಯಾಮ್‌ ಸಂಗ್ ಗ್ಯಾಲಕ್ಸಿ s20 FE 5ಜಿ ಅನ್ನು ಮಾರ್ಚ್ 31 ರ ಬುಧವಾರ ಭಾರತದಲ್ಲಿ ಬಿಡುಗಡೆಗೊಂಡಿದೆ.

ಸ್ಯಾಮ್‌ ಸಂಗ್ ಗ್ಯಾಲಕ್ಸಿ s 20 FE ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಯುಎಸ್‌ ನಲ್ಲಿ 4 ಜಿ ಮತ್ತು 5 ಜಿ ಎರಡೂ ಮಾಡೆಲ್ ಗಳಲ್ಲಿ ಬಿಡುಗಡೆ ಮಾಡಿತ್ತು, ಆದರೆ ಅದರ 4 ಜಿ ಮಾಡೆಲ್ ನ್ನು ಮಾತ್ರ ಮುಂದಿನ ಅಕ್ಟೋಬರ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದರ ಮೂಲಕ ಪರಿಚಯಿಸಲಾಗಿತ್ತು.

ಫೋನ್‌ ನ 5 ಜಿ ಮಾಡೆಲ್ Exynos 990 ಚಿಪ್ ಅನ್ನು ಒಳಗೊಂಡಿರುವ 4 ಜಿ ಮಾಡೆಲ್ ಗಿಂತ ಭಿನ್ನವಾಗಿ ಸ್ನಾಪ್‌ ಡ್ರಾಗನ್ 865 SoC ನಿಂದ ನಿಯಂತ್ರಿಸಲ್ಪಡುತ್ತದೆ.

ಭಾರತದಲ್ಲಿ ಸ್ಯಾಮ್‌ ಸಂಗ್ ಗ್ಯಾಲಕ್ಸಿ S20 FE5 ಜಿ ಬೆಲೆ, ಲಭ್ಯತೆ, ಕೊಡುಗೆಗಳು :

ಸ್ಯಾಮ್‌ ಸಂಗ್ ಗ್ಯಾಲಕ್ಸಿ S 20 FE 5 ಜಿ ಸಿಂಗಲ್ 8 ಜಿಬಿ ರಾಮ್ + 128 ಜಿಬಿ ಸ್ಟೋರೇಜ್ ಮಾಡೆಲ್ ಗೆ 55,999 ರೂ. ಆದರೆ ಈ ಫೋನ್ ಅನ್ನು ಭಾರತದಲ್ಲಿ ರೂ. 47,999ಗೆ ಆಫರ್ ನಲ್ಲಿ ನೀಡುತ್ತಿದೆ. ಸ್ಯಾಮ್‌ ಸಂಗ್ ಗ್ಯಾಲಕ್ಸಿ S 20 FE 4 ಜಿ ಬೆಲೆ ರೂ. 8ಜಿಬಿ  RAM ಮತ್ತು  ಸ್ಟೋರೇಜ್ ಮಾಡೆಲ್ ಗೆ 44,999 ರೂ. ಆಗಿದೆ.

ಇನ್ನು, ಸ್ಯಾಮ್‌ ಸಂಗ್ ಗ್ಯಾಲಕ್ಸಿ S 20 FE 5 ಜಿ ಯ ಆನ್‌ ಲೈನ್ ಆದರೆ ಸ್ಯಾಮ್‌ ಸಂಗ್ ಇಂಡಿಯಾ ಆನ್‌ ಲೈನ್ ಸ್ಟೋರ್, ಅಮೆಜಾನ್ ಮತ್ತು ಕಂಪನಿಯ ಸ್ವಂತ ಮತ್ತು ಪಾಲುದಾರ ಆಫ್‌ ಲೈನ್ ಸ್ಟೋರ್ ಗಳಲ್ಲೂ ಫೋನ್ ಖರೀದಿಗೆ ಲಭ್ಯವಿರುತ್ತದೆ ಎಂದು ಸ್ಯಾಮ್‌ ಸಂಗ್ ಹೇಳಿದೆ. ಸ್ಯಾಮ್‌ ಸಂಗ್ ಗ್ಯಾಲಕ್ಸಿ S 20 FE 5ಜಿ ಕ್ಲೌಡ್ ಲ್ಯಾವೆಂಡರ್, ಕ್ಲೌಡ್ ಮಿಂಟ್ ಮತ್ತು ಕ್ಲೌಡ್ ನೇವಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಸ್ಯಾಮ್‌ ಸಂಗ್ ಗ್ಯಾಲಕ್ಸಿ ಎಸ್ 20 ಎಫ್‌ಇ 5 ಜಿ ವಿಶೇಷತೆಗಳು  :

ಸ್ಯಾಮ್‌ ಸಂಗ್ ಗ್ಯಾಲಕ್ಸಿ S 20 FE 5 ಜಿ 6.5 ಇಂಚಿನ  ಫುಲ್ ಎಚ್‌ಡಿ + (1,080×2,400 ಪಿಕ್ಸೆಲ್‌ಗಳು) ಸೂಪರ್ ಅಮೋಲೆಡ್ ಇನ್ಫಿನಿಟಿ ಒ ಡಿಸ್ಪ್ಲೇ ಯನ್ನು ಹೊಂದಿದೆ.

ಸ್ಯಾಮ್‌ ಸಂಗ್ ಗ್ಯಾಲಕ್ಸಿ ಎಸ್ 20 ಎಫ್‌ಇ 5 ಜಿ ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 865 ಎಸ್‌ಒಸಿ ಯಿಂದ ನಿಯಂತ್ರಿಸಲ್ಪಡುತ್ತದೆ, ಇದು 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ನನ್ನು ಹಾಗೂ IP 68 ಡಸ್ಟ್ ಹಾಗೂ ವಾಟರ್  ರೆಸಿಸ್ಟೆಂಟ್ ನ್ನು ಸಹ ಹೊಂದಿದೆ.

ಸ್ಯಾಮ್‌ ಸಂಗ್ ಗ್ಯಾಲಕ್ಸಿ S 20 FE 5 ಜಿ ಮಾಡೆಲ್ ಅದರ 4 ಜಿ ಮಾಡೆಲ್ ನಂತೆಯೇ ಬ್ಯಾಕ್ ಆ್ಯಂಡ್ ಫ್ರಂಟ್ ಕ್ಯಾಮೆರಾಗಳನ್ನು ಹೊಂದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಎಫ್ / 1.8 ವೈಡ್-ಆಂಗಲ್ ಲೆನ್ಸ್ ಹೊಂದಿರುವ 12 ಮೆಗಾಪಿಕ್ಸೆಲ್ ಪ್ರೈಮೆರಿ ಸೆನ್ಸಾರ್, ಅಲ್ಟ್ರಾ-ವೈಡ್-ಆಂಗಲ್ ಎಫ್ / 2.2 ಲೆನ್ಸ್ ಹೊಂದಿರುವ 12 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಮತ್ತು 8 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಇದು 30x ಸ್ಪೇಸ್ ಜೂಮ್ ಅನ್ನು ಸಹ ಹೊಂದಿದೆ. ಫೋನ್ ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಎಫ್ / 2.0 ಲೆನ್ಸ್,  4,500mAh ಬ್ಯಾಟರಿಯನ್ನು ಹೊಂದಿದ್ದು ಅತ್ಯಾಕರ್ಷಕವಾಗಿದೆ.

ಓದಿ :   8 ಭಾಷೆಗಳಿಗೆ ಯು ಟರ್ನ್ ಚಿತ್ರ ರೀಮೇಕ್‌ ದಾಖಲೆ!

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

Categories
Tech

ಭಾರತಕ್ಕೆ ಲಗ್ಗೆ ಇಟ್ಟಿದೆ Poco X3 Pro..! ಆಫರ್ ಏನಿದೆ..?

ನವ ದೆಹಲಿ : Poco X 3 Pro ಭಾರತದಲ್ಲಿ ಬಿಡುಗಡೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ ದೇಶಕ್ಕೆ ಲಗ್ಗೆ ಇಟ್ಟ  ಸ್ಟ್ಯಾಂಡರ್ಡ್ Poco X 3 ಗೆ ಅಪ್‌ ಗ್ರೇಡ್ ಆವೃತ್ತಿಯಾಗಿ ಹೊಸ Poco  ಫೋನ್ ಬಿಡುಗಡೆಯಾಗಿದೆ. Poco X 3 Pro ಅನ್ನು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 860 SoC ನಿಂದ ನಿಯಂತ್ರಿಸಲಾಗಿದೆ.

ಓದಿ : ಸಿಡಿ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ: ಯಾವುದೇ ಕ್ಷಣದಲ್ಲೂ ಯುವತಿ ಕೋರ್ಟ್ ಮುಂದೆ ಹಾಜರು?

ಸ್ನಾಪ್ಡ್ರಾಗನ್ ಚಿಪ್ಸೆಟ್ ಜೊತೆಗೆ, Poco X 3 Pro ಕ್ವಾಡ್ ರಿಯರ್ ಕ್ಯಾಮೆರಾಗಳು ಮತ್ತು 120 ಹೆಚ್ ಡಿ ಡಿಸ್ಪ್ಲೇ ಹೊಂದಿದೆ . ಪೊಕೊ ಫೋನ್ 256GB ವರೆಗೆ ಆನ್‌ ಬೋರ್ಡ್ ಸ್ಟೋರೆಜ್ ಸೌಲಭ್ಯವನ್ನು ಕೂಡ ಹೊಂದಿದೆ. Poco X 3 Pro ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್ 62, ರಿಯಲ್ ಮಿ ಎಕ್ಸ್ 7, ಮತ್ತು ವಿವೊ ವಿ 20 2021 ಗಳಿಗೆ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಪೊಕೊ ಎಕ್ಸ್ 3 ಪ್ರೊ ಬೆಲೆ, ಲಾಂಚ್ ಆಫರ್  ಏನಿದೆ..?

ಭಾರತದಲ್ಲಿ Poco X 3 Pro  6 ಜಿಬಿ ರ್ಯಾಮ್ + 128 ಜಿಬಿ ಸ್ಟೋರೇಜ್ ಮಾದರಿಗೆ 18,999 ರೂ., 8ಜಿಬಿ ರ್ಯಾಮ್ + 128 ಜಿಬಿ ಸ್ಟೋರೇಜ್ ಮಾದರಿಗೆ ರೂ. 20,999 ಆಗಿದೆ. ಇನ್ನು, ಏಪ್ರಿಲ್ 6 ರ ಮಧ್ಯಾಹ್ನ 12 ರಿಂದ (ಮಧ್ಯಾಹ್ನ) ಫ್ಲಿಪ್ಕಾರ್ಟ್ ಮೂಲಕ ಖರೀದಿಸಲು ಲಭ್ಯವಿರುತ್ತದೆ.

Poco X 3 Pro ನಲ್ಲಿ ಲಾಂಚ್ ಆಫರ್ 10 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಇಎಂಐ ವಹಿವಾಟಿನ ಮೂಲಕ ಖರೀದಿಸುವ ಗ್ರಾಹಕರಿಗೆ 1,000 ರೂ. ಉಳಿತಾಯ ಮಾಡಬಹುದಾಗಿದೆ.

ಓದಿ : ಸಿಡಿ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ: ಯಾವುದೇ ಕ್ಷಣದಲ್ಲೂ ಯುವತಿ ಕೋರ್ಟ್ ಮುಂದೆ ಹಾಜರು?

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More