ನವದೆಹಲಿ: ಕ್ಯಾಬಿನೆಟ್​ನ ನೇಮಕಾತಿ ಸಮಿತಿ ಇಂದು ಕೇಂದ್ರ ತನಿಖಾ ದಳ (CBI)ಗೆ ನೂತನ ನಿರ್ದೇಶಕರನ್ನ ನೇಮಕ ಮಾಡಿದೆ. ಐಪಿಎಸ್​ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನ 2 ವರ್ಷಗಳ ಕಾಲಾವಧಿಗೆ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಸುಬೋಧ್ ಕುಮಾರ್ 1985 ರ ಮಾಹಾರಾಷ್ಟ್ರ ಕೇಡರ್​ನ ಐಪಿಎಸ್​ ಅಧಿಕಾರಿ.

ಸುಬೋಧ್ ಕುಮಾರ್ ಈ ಹಿಂದೆ ಮುಂಬೈ ಪೊಲೀಸ್ ಕಮಿಷನರ್ ಆಗಿ ಮಹಾರಾಷ್ಟ್ರದ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಸಿಐಎಸ್​ಎಫ್​ನ ಡೈರಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

The post CBIಗೆ ನೂತನ ನಿರ್ದೇಶಕರಾಗಿ ಸುಬೋಧ್ ಕುಮಾರ್ ಜೈಸ್ವಾಲ್ ನೇಮಕ appeared first on News First Kannada.

Source: newsfirstlive.com

Source link