ನವದೆಹಲಿ: CBSE 12ನೇ ತರಗತಿಯ 20 ವಿಷಯಗಳ ಮೇಲೆ ಮಾತ್ರ ಬೋರ್ಡ್​ ಎಕ್ಸಾಂ ನಡೆಯುವ ನಿರೀಕ್ಷೆ ಮಾಡಲಾಗಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಮಂಗಳವಾರ ಪ್ರಕಟವಾಗಲಿದೆ. ಮೂಲಗಳ ಪ್ರಕಾರ, ವಿದ್ಯಾರ್ಥಿಗಳಿಗೆ ಅಬ್ಜೆಕ್ಟೀವ್ ಟೈಪ್ ಕ್ವಶ್ಚನ್​ಗಳನ್ನ ಕೇಳಲು ತೀರ್ಮಾನಿಸಲಾಗಿದೆ. ಅಲ್ಲದೇ ಪರೀಕ್ಷೆಗಳನ್ನ ಹೋಂ ಸೆಂಟರ್​​ಗಳಲ್ಲಿಯೇ ಮಾಡಲು ಚಿಂತಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಇವತ್ತಿನ ಸಭೆಯಲ್ಲಿ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಸಚಿವರು, ಶಿಕ್ಷಣ ಸೆಕ್ರೆಟರಿಸ್, ಸ್ಟೇಟ್​ ಎಕ್ಸಾಮಿನೇಷನ್ ಬೋರ್ಡ್​ನ ಮುಖ್ಯಸ್ಥರು ಹಾಗೂ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಕೂಡ ಹಾಜರಾಗಿದ್ದರು. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 14 ರಂದು CBSE ಬೋರ್ಡ್​​ 10 ಮತ್ತು 12 ನೇ ತರಗತಿಯ ಪರೀಕ್ಷೆಗಳನ್ನ ಪೋಸ್ಟ್​ಪೋನ್ಡ್​ ಮಾಡಿತ್ತು. ಸದ್ಯ ಕೇಂದ್ರ ನಾಯಕರಿಂದ ಮತ್ತೊಂದು ಸುತ್ತಿನ ಸಭೆ ನಡೆಯುತ್ತಿದ್ದು ಮತ್ತಷ್ಟು ಬದಲಾವಣೆಗಳಾಗುವ ಸಾಧ್ಯತೆಗಳಿವೆ.

The post CBSE 12ನೇ ತರಗತಿಯ 20 ವಿಷಯಗಳಿಗೆ ಮಾತ್ರ ಪರೀಕ್ಷೆ? ಮಂಗಳವಾರ ಅಂತಿಮ ನಿರ್ಧಾರ appeared first on News First Kannada.

Source: newsfirstlive.com

Source link